ಅಂದು ಅವಮಾನ ಮಾಡಿದವರ ಮುಂದೆಯೇ ಹೀರೋ ಆದ ನಟ ರಘುವೀರ್.! ಇವರ ಬದುಕಿನ ಕಹಿ ಘಟನೆ ನೋಡಿದರೆ ಕಣ್ಣೀರು ಬರುತ್ತೆ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಮ್ಮ ಚಂದನವನದ ಕಲಾವಿದರಿಗೆ ಜಾತಿ, ಧರ್ಮ, ಬಣ್ಣ, ಅಂತಸ್ತು ಇದು ಯಾವುದೂ ಕೂಡ ಮುಖ್ಯವಾಗುವುದಿಲ್ಲ. ಅವನಲ್ಲಿರುವ ಕಲೆ, ಪ್ರತಿಭೆ ಅಷ್ಟೇ ಮುಖ್ಯವಾಗಿರುತ್ತದೆ. ತನ್ನ ಗ್ಲಾಮರ್, ಹೈಟ್, ವೈಟ್ ಎಲ್ಲವೂ ಸೆಕೆಂಡರಿ ಪ್ರಾಮುಖ್ಯತೆ ಆಗುತ್ತದೆ ಎಂದು ತೋರಿಸಿಕೊಟ್ಟ ಕಲಾವಿದರಲ್ಲಿ ನಟ ರಘುವೀರ್ ಕೂಡ ಒಬ್ಬರಾಗಿದ್ದರು. ಇಂದು ಅವರು ನಮ್ಮ ನಡುವೆ ಇಲ್ಲದಿದ್ದರೂ ಅವರು ನಟಿಸಿದಂತ ಸಿನೆಮಾಗಳು ಮಾತ್ರ ಇನ್ನೂ ಜೀವಂತ.

ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೂ ಅವರಿಗೆ ತನೊಬ್ಬ ನಟ ಆಗಬೇಕು ಎಂಬ ಹಠ ಚಿಕ್ಕ ವಯಸ್ಸಿನಲ್ಲೇ ಇತ್ತು. ನಟ ರಘುವೀರ್ ಅವರಿಗೆ ಎಲ್ಲವೂ ಇತ್ತು ಆದರೂ ಅವರು ದು@ರಂ@ತ ಬದುಕು ನಡೆಸಿದರು. ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಿದರು. ನಟ ರಘುವೀರ್ ಅವರ ತಂದೆ ಅತೀ ದೊಡ್ಡ ಶ್ರೀಮಂತರು. ಆ ಕಾಲದಲ್ಲಿಯೇ ಬೆಂಗಳೂರಿನ ಬಹುತೇಕ ಕಟ್ಟಡಗಳನ್ನು ಕಂಟ್ರಾಕ್ಟ್ ತೆಗೆದುಕೊಂಡು ಕಟ್ಟಿಸಿದವರು ಇವರೆ.

ಇಷ್ಟೆಲ್ಲ ಇದ್ದರೂ ರಘುವೀರ್ ಅವರನ್ನು ಮಾತ್ರ ಸಿನೆಮಾ ರಂಗದಲ್ಲಿ ದು@ರಂ@ತ ನಾಯಕ ಎಂದು ಎಲ್ಲರೂ ಯಾಕೆ ಕರೆಯುತ್ತಾರೆ ಎಂದು ಇದುವರೆಗೂ ತಿಳಿದಿಲ್ಲ. ರಘುವೀರ್ ಅವರು ಸಿನೆಮಾ ರಂಗಕ್ಕೆ ಬರಲು ಮುಖ್ಯ ಕಾರಣ ನಮ್ಮ ಅಂಬರೀಷ್ ಅಣ್ಣ ಅವರು ಆಗ ಅಂಬರೀಷ್ ಅವರು ಹೀರೊ ಆಗಿ ಮಿಂಚುತ್ತಿದ್ದ ಕಾಲ. ಅವರನ್ನು ನೋಡಿ ತಾನು ಸಹ ಸಿನೆಮಾ ರಂಗದಲ್ಲಿ ಒಳ್ಳೇ ಹೆಸರು ಮಾಡಬೇಕು, ಒಳ್ಳೆಯ ಕಲಾವಿದ ಆಗಬೇಕು ಎಂದು ಬಹು ದೊಡ್ಡ ಕನಸನ್ನು ಇಟ್ಟುಕೊಂಡವರು.

ಅಷ್ಟೇ ಅಲ್ಲದೇ ಹೀರೊ ಆಗಿ ಕೂಡ ತೆರೆಯ ಮೇಲೆ ಮಿಂಚಿದರು. ಇಂದಿಗೂ ಅವರ ಅಭಿನಯದ ಸಿನೆಮಾದ ಹಾಡುಗಳ ಮೂಲಕ ಅಭಿಮಾನಿಗಳ ಹೃದಯದದಲ್ಲಿ ನೆಲೆನಿದ್ದಾರೆ. ತಂದೆಯ ವಿರೋಧದ ನಡುವೆಯೂ ರಘುವೀರ್ ಅವರು ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಮಗನ ಮೇಲಿನ ಪ್ರೀತಿಯಿಂದ ರಘುವೀರ್ ತಂದೆಯೇ ಅವರ ಸಿನೆಮಾವನ್ನು ನಿರ್ಮಾಣ ಮಾಡಿದರು.

ಈ ಸಿನೆಮಾ ಬಹಳ ದೊಡ್ಡ ಸೋಲನ್ನು ಕಂಡಿತು. ಹಾಕಿದ ಬಂಡವಾಳ ಕೂಡ ವಾಪಸ್ಸು ಬರಲೇ ಇಲ್ಲ. ರಘುವೀರ್ ಅವರನ್ನು ಯಾರೂ ಮಾತಾಡಿಸಲು ಮುಂದೆ ಬರಲೇ ಇಲ್ಲ. ಈ ಸಿನೆಮಾ ನಂತರ ರಘುವೀರ್ ಅವರು ಅಭಿನಯದ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ನಟಿಸಿದರು ಈ ಚಿತ್ರ ಎಸ್ ನಾರಾಯಣ್ ಅವರು ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದಲ್ಲಿ ಅಭಿನಯಿಸಿದ ರಘುವೀರ್ ಅವರಿಗೆ ಅತೀ ದೊಡ್ಡ ಯಶಸ್ಸು ದೊರಕಿತು ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು. ಈ ಚಿತ್ರದ ಹಾಡುಗಳು ಇಂದಿಗೂ ಸಿನಿರಸಿಕರ ಅಚ್ಚು ಮೆಚ್ಚಿನ ಹಾಡಾಗಿದೆ.

ಇಷ್ಟಾದರೂ ಈ ಸಿನೆಮಾವನ್ನು ವಿತರಣೆ ಮಾಡುವುದಕ್ಕೆ ಯಾರೊಬ್ಬರೂ ಮುಂದೆ ಬರಲೇ ಇಲ್ಲ. ನಟ ರಘುವೀರ್ ಅವರು ಕಪ್ಪಾಗಿದ್ದರೆ. ಅವರ ಸಿನೆಮಾವನ್ನು ಯಾರೂ ನೋಡುವುದಿಲ್ಲ ಈ ಸಿನೆಮಾ ಸಹ ಮಕಾಡೆ ಮಲಗಿದೆ ಎಂದು ಸ್ಯಾಂಡಲ್ವುಡ್ ನಲ್ಲಿ ಯಾರೂ ಸಹ ವಿತರಣೆ ಮಾಡಲು ಮುಂದೆ ಬರಲಿಲ್ಲ.

ಆ ಸಮಯದಲ್ಲಿ ನಟ ರಘುವೀರ್ ಅವರ ಸಹಾಯಕ್ಕೆ ನಿಂತವರು ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕೋಟಿ ರಾಮು ಅವರು. ರಾಮು ಅವರು ಈ ಸಿನೆಮಾವನ್ನು ಖರೀದಿ ಮಾಡಿ ಕೆಲ ಏರಿಯಾಗಳಲ್ಲಿ ಹಂಚಿಕೆ ಮಾಡಿದ್ದರು. ಇನ್ನು ಕೆಲವು ಏರಿಯಾಗಳಲ್ಲಿ ಸ್ವತಃ ರಘುವೀರ್ ಅವರೇ ಹಂಚಿಕೆ ಮಾಡಿದ್ದರು ಈ ಸಿನೆಮಾ ಅವರು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಲಾಭವನ್ನೇ ತಂದುಕೊಟ್ಟಿತು.

ಚೈತ್ರದ ಪ್ರೇಮಾಂಜಲಿ ನಂತರ ಬಂದಿದ್ದ ಸಿನೆಮಾವೇ ಶೃಂಗಾರ ಕಾವ್ಯ. ಈ ಚಿತ್ರದಲ್ಲಿ ರಘುವೀರ್ ಹಾಗೂ ಸಿಂದು ನಟಿಸಿದ್ದರು. ಈ ವೇಳೆ ನಟ ರಘುವೀರ್ ಹಾಗೂ ಹಾಗೂ ಸಿಂದು ನಡುವೆ ಪ್ರೀತಿ ಎಂಬ ಮೊಳಕೆ ಒಡೆದು ತಂದೆಯ ಮಾತನ್ನು ಕೇಳದೆ ದಿಕ್ಕರಿಸಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತನ್ನ ಮನೆಯನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾತೋಡಾಗಿದರು.

ನಟಿ ಸಿಂದು ಅವರಿಗೆ ಉಬ್ಬಸ ಸಮಸ್ಸೆ ಇತ್ತು ಈ ಸಮಸ್ಸೆಯಿಂದಗಿಯೇ ಅವರು 2003 ರಲ್ಲಿ ಇಹಲೋಕ ತ್ಯಜಿಸಿದರು ಇದಾದ ಬಳಿಕ ನಟ ರಾಘವೀರ್ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು. ನಂತರ ತಂದೆ ಮಾತಿಗೆ ಬೆಲೆಕೊಟ್ಟು ಅತ್ತೆ ಮಗಳು ಗೌರಿ ಅವರನ್ನು ಮದುವೆಯಾದರು. ನಂತರ ಅವರ 49 ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ಅವರು ತನ್ನ ಅಭಿಮಾನಿಗಳುನ್ನು ಬಿಟ್ಟು ಇಹಲೋಕ ತ್ಯಜಿಸಿದರು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದಾರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *