ನಮ್ಮ ಕನ್ನಡ ಚಿತ್ರರಂಗದಲ್ಲಿ ಇರುವಂತಹ ಯಶಸ್ವಿ ನಟ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರನ್ನು ನೋಡಿದಾಗ ನಾವು ಎಷ್ಟೊಂದು ಸುಲಭವಾಗಿ ಈ ಸಾಧನೆ ಮಾಡಿದ್ದಾರೆ ಎನ್ನುವುದಾಗಿ ಎಂದುಕೊಳ್ಳುತ್ತೇವೆ. ಆದರೆ ಆ ಸ್ಥಾನಕ್ಕೆ ಬರುವ ಮೊದಲು ಅವರು ಕೊಟ್ಟಿರುವಂತಹ ಕಷ್ಟವನ್ನು ನಾವು ಗಮನಿಸಿರುವುದಿಲ್ಲ. ಇಂದಿನ ವಿಚಾರದಲ್ಲಿ ನಾವು ಇಡೀ ಭಾರತೀಯ ಚಿತ್ರರಂಗವೇ ಹಿಂದಿರುಗಿ ನೋಡಿ ರುವಂತಹ ಸಂಗೀತ ನಿರ್ದೇಶಕರಾಗಿರುವಂತಹ ಹೇಳಲು ಹೊರಟಿದ್ದೇವೆ.
ಹೌದು ನಾವು ಮಾತನಾಡಲು ಹೊರಟಿರುವುದು ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾಗಿರುವ ರವಿ ಬಸ್ರೂರು ರವರ ಕುರಿತಂತೆ. ರವಿ ಬಸ್ರೂರು ಮೂಲತಹ ಕುಂದಾಪುರದ ಬಸ್ರೂರುರಿನವರು. ಚಿಕ್ಕಂದಿನಿಂದಲೂ ಕೂಡ ಸಂಗೀತದ ಕುರಿತಂತೆ ವಿಶೇಷವಾದ ಆಸಕ್ತಿ ಬೆಳೆಸಿಕೊಂಡು ಬಂದವರು. ಒಮ್ಮೆ ಸಿನಿಮಾದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಆಸೆ ಇಟ್ಟುಕೊಂಡು ಮುಂಬೈಗೆ ಹೋಗಿ ಆ ಸಂದರ್ಭದಲ್ಲಿ ಬ್ಲಾ’ಸ್ಟ್ ಆಗಿದ್ದ ಕಾರಣದಿಂದಾಗಿ ತಮ್ಮ ಹಾರ್ಮೋನಿ ಹಾಗು ತಬಲಗಳನ್ನು ಪೋಲಿಸರಿಂದ ಒಡೆಸಿಕೊಂಡು ಅಳುತ್ತಾ ಬಂದವರು. ಮನೆಯ ಪರಿಸ್ಥಿತಿ ಕೂಡ ಅಷ್ಟೊಂದು ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ.
ಮನೆಯಲ್ಲಿ ಅಣ್ಣ ಲಕ್ಷಾಂತರ ರೂಪಾಯಿ ಸಾಲ ಇದೆ ಅದನ್ನು ತೀರಿಸುವ ಕುರಿತಂತೆ ಯೋಚನೆ ಮಾಡು ಸಿನಿಮಾ ಎಲ್ಲಾ ಆಮೇಲೆ ನೋಡಬಹುದು ಎನ್ನುವುದಾಗಿ ಹೇಳುತ್ತಾರೆ. ಆಗ ಕಿಡ್ನಿ ಬೇಕಾಗಿದೆ ಕೊಟ್ಟವರಿಗೆ ಎರಡುವರೆ ಲಕ್ಷ ರೂಪಾಯಿ ಸಿಗುತ್ತದೆ ಎನ್ನುವ ವಿಚಾರದ ಕುರಿತಂತೆ ರವಿ ಬಸ್ರೂರು ಅವರಿಗೆ ತಿಳಿದುಬರುತ್ತದೆ. ಆಗ ಆ ನಂಬರಿಗೆ ಕರೆ ಮಾಡಿ ನಾನು ಕಿಡ್ನಿ ನೀಡುತ್ತೇನೆ ನನಗೆ ಹಣ ನೀಡಿ ಎಂಬುದಾಗಿ ಕೂಡ ಹೇಳಿದ್ದರಂತೆ. ಆದರೆ ಅಲ್ಲಿಗೆ ಹೋದ ನಂತರ ತಾನು ಮಾಡುತ್ತಿರುವುದು ತಪ್ಪು ಇರುವುದಾಗಿ ಅವರಿಗೆ ತಿಳಿದುಬರುತ್ತದೆ. ನಂತರ ಕೂಡಲೇ ಅಲ್ಲಿಂದ ಎದ್ದು ಬಿದ್ದು ಎನ್ನುವಂತೆ ಓಡಿಹೋಗುತ್ತಾರೆ.
ಇದಾದ ನಂತರ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಕಾಲಿಡುತ್ತಾರೆ. ಮೊದಮೊದಲಿಗೆ ಹಲವಾರು ಸಿನಿಮಾಗಳಲ್ಲಿ ಸಂಗೀತ ನಿರ್ದೇಶನ ಮಾಡಿದ್ದರು ಕೂಡ ಯಾವುದೂ ಕೂಡ ಹೇಳಿಕೊಳ್ಳುವಷ್ಟು ಮಟ್ಟಿಗೆ ಯಶಸ್ಸು ಸಿಗುವುದಿಲ್ಲ. ಆದರೆ ಪ್ರಶಾಂತ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಉಗ್ರಂ ಚಿತ್ರ ಕೇವಲ ಭರವಿ ಬಸ್ರೂರು ಮಾತ್ರವಲ್ಲದೆ ಅದರಲ್ಲಿ ಭಾಗಿಯಾಗಿದ್ದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರ ಜೀವನವನ್ನೇ ಬದಲಾಯಿಸಿಬಿಟ್ಟಿತು.
ಅದಾದನಂತರ ರವಿ ಬಸ್ರೂರು ನಿಮಗೆಲ್ಲ ತಿಳಿದಿರುವಂತೆ ಹಲವಾರು ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಕೆಜಿಎಫ್ ಚಾಪ್ಟರ್ 1 ಚಿತ್ರದ ಮೂಲಕ ಈಗಾಗಲೇ ಇಡೀ ಭಾರತವೇ ತಿರುಗಿ ನೋಡುವಂತಹ ಸಂಗೀತವನ್ನು ನೀಡಿದ್ದಾರೆ. ಇನ್ನು ಇದೇ ಏಪ್ರಿಲ್ 14ರಂದು ಚಾಪ್ಟರ್ 2 ಬಿಡುಗಡೆಯಾಗುತ್ತಿದ್ದು ಈ ಚಿತ್ರದ ಮೂಲಕ ರವಿ ಬಸ್ರೂರು ರವರು ತಮ್ಮ ಹಾಗೂ ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಎಂಬುದಾಗಿ ಹಾರೈಸೋಣ.