ಅಂದು ಕುಚುಕು ಗೆಳೆಯ ವಿಷ್ಣುವರ್ಧನ್ ಅವರ ಮದುವೆಯಲ್ಲಿ ಗಲಾಟೆ ಮಾಡಲು ಬಂದಾಗ, ಅಂಬರೀಷ್ ಅವರು ಕೊಟ್ಟ ಒಂದೇ ಒಂದು ಲುಕ್ ಗೆ ಏನಾಗಿತ್ತು ಗೊತ್ತಾ.? ಅಷ್ಟಕ್ಕೂ ಆಗಿದ್ದೇನು ನೋಡಿ.

ಸುದ್ದಿ

ಪ್ರೀತಿಯ ವೀಕ್ಷಕರೆ, ಚಂದನವನದಲ್ಲಿ ಖಡಕ್ ಡೈಲಾಗ್ ಹೇಳುತ್ತಲೇ ಎದುರಾಳಿಗಳ ಎದೆ ನಡುಗಿಸಿದ ಯಂಗ್ ಮ್ಯಾನ್ ಆಗಿ ತೆರೆಯಮೇಲೆ ಅಬ್ಬರಿಸಿದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ನಟನೆ ಅದೆಷ್ಟೋ ನಟರ ನಿದ್ದೆ ಕೆಡಿಸಿದ್ದು ಎಲ್ಲರಿಗೂ ಗೊತ್ತು. ಹಾಗೆ ಕರ್ನಾಟಕಕದ ಮೂಲೆ ಮೂಲೆಯಲ್ಲೂ ಅವರಿಗೆ ಅದೆಷ್ಟೋ ಹುಡುಗಿಯರು ಇವರ ಹಿಂದೆ ಬಿದ್ದಿದ್ದು ಉಂಟು.

ಆದ್ರೆ, ಯಾರಿಗೂ ತಲೆಕೆಡಿಸಿಕೊಳ್ಳದೆ, ನಟಿ ಭಾರತಿ ಅವರಿಗೆ ಮನಸ್ಸು ಕೊಟ್ಟ ‘ಹೃದಯದವಂತ’ ವಿಷ್ಣುವರ್ಧನ್. ಇಷ್ಟೊಂದು ಖ್ಯಾತಿ ಪಡೆದ ವಿಷ್ಣುವರ್ಧನ್ ಅವರು ಮೊದಲು ಭಾರತಿ ಮೇಡಂ ಅವರನ್ನು ಎಲ್ಲಿ, ಯಾಕೆ ಭೇಟಿ ಯಾದರು ಅವರ ಮದುವೆ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ ಬನ್ನಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ..

ನಟಿ ಭಾರತಿ ಅವರುಮೊಟ್ಟ ಮೊದಲ ಬಾರಿಗೆ ವಿಷ್ಣುವರ್ಧನ್ ಅವರನ್ನ ನೋಡಿದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ. ಅವರೇ ನನ್ನ ಮೀಟ್ ಮಾಡೋಕೆ ಬಂದಿದ್ದರು. ಅವತ್ತು “ನಾಗರಹಾವು” ನೂರು ದಿನದ ಸಂಭ್ರಮ ಇತ್ತು. ಅದು ಅಭಿಮಾನವೋ, ಪ್ರೀತಿಯೋ.. ನನಗೆ ಗೊತ್ತಿಲ್ಲ. ನನಗೆ ಆಹ್ವಾನ ನೀಡಲು ಅವರು ಬಂದಿದ್ದರು” ಭಾರತಿ ದೂರದ ಬೆಟ್ಟ ಚಿತ್ರಿಕಾರಣ ನಡೆಯುತ್ತಿತ್ತು. ವಿಷ್ಣು ಬಂದು ‘ಮೇಡಂ’ ಅಂತ ಮಾತನಾಡಿಸಿದ್ರು.

ನೂರು ದಿನದ ಸಂಭ್ರಮಾಚರಣೆಗೆ ಭಾಗಿಯಾಗಲು ನನಗೆ ಆಹ್ವಾನ ನೀಡಿದರು. ನಾನು ಚಿತ್ರಿಕಾರಣ ಮುಗಿಸಿಕೊಂಡು ಹೋದೆ. ಆಮೇಲೆ ‘ಮನೆ ಬೆಳಗಿದ ಸೊಸೆ’ ಚಿತ್ರಕ್ಕೆ ನನ್ನ ಜೊತೆ ಅವರನ್ನು ಹಾಕಿಕೊಂಡರು. ಅಲ್ಲಿಂದ ನಮ್ಮ ಪಯಣ ಶುರು ಆಯ್ತು”. ಚಿತ್ರದ ಹಾಡಲ್ಲೇ ನಮ್ಮಿಬ್ಬರ ಪ್ರೀತಿ ಅರಳಿತ್ತು. ಹೆತ್ತ ತಂದೆ-ತಾಯಿ ಅನುಮತಿ ಇಲ್ಲದೇ ಯಾವುದೂ ನಡೆಯಲ್ಲ ಅಂತ ವಿಷ್ಣು ಅವರಿಗೂ ಗೊತ್ತಿತ್ತು. ಇದನ್ನ ತಿಳಿದುಕೊಂಡ ಅವರು ನನ್ನ ತಂದೆ ತಾಯಿ ಜೊತೆಗೆ ತುಂಬಾ ಕ್ಲೋಸ್ ಆಗಿದ್ದರು.

ಅಂದಿನ ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಚಂದುಳ್ಳಿ ಚಲುವೆ ನಟಿ ಭಾರತಿ ಕೂಡ ಡಾ. ವಿಷ್ಣುವರ್ಧನ್ ಅವರ ಪ್ರೀತಿಗೆ ಮನಸೋತಿದ್ದರು. ಹಿರಿಯರ ಅನುಮತಿ ಪಡೆದ ವಿಷ್ಣುವರ್ಧನ್ ಹಾಗೂ ಭಾರತಿ ಫೆಬ್ರವರಿ 27, 1975 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಇದು ಸಾಮಾನ್ಯ ಮದುವೆ ಅಂತ ನಡೆಯದೆ ದೊಡ್ಡದೊಂದು ಟ್ವಿಸ್ಟ್ ಸಾಹಸ ಸಿಂಹನೀನಾಗಿ ಕಾದಿತ್ತು. ವಿಷ್ಣುವರ್ಧನ್ ಹಾಗೂ ಭಾರತಿ ಅವರ ಅವಿಸ್ಮರಣೀಯ ದಿನಕ್ಕೆ ತಾವೂ ಸಾಕ್ಷಿಯಾಗಬೇಕು. ಎಂದು ಬಯಸಿದ ಅದೆಷ್ಟೋ ಜನ ಮದುವೆ ಮಂಟಪಕ್ಕೆ ಕಡೆ ಮುಖ ಮಾಡಿದ್ರು.

ಇದೇ ಕಾರಣಕ್ಕೆ, ಡಾ. ವಿಷ್ಣುವರ್ಧನ್ ಹಾಗೂ ಭಾರತಿ ಅವರ ಮದುವೆ ‘ಗಲಾಟೆ ಮದುವೆ’ ಯಾಗಿ ಮಾರ್ಪಟ್ಟಿತು. ಅಭಿಮಾನಿಗಳ ನೆಚ್ಚಿನ ನಟ ನಟಿಯರ ಮದುವೆಗೆ ಜನ ಸಾಗರವೇ ಹರಿದುಬಂದಿತ್ತು. ಅಷ್ಟು ಜನರನ್ನು ನಿಭಾಯಿಸಲು ಯಾರಿಂದಲೂ ಸಾಧ್ಯ ಆಗಿಲ್ಲ. ಮದುವೆ ಮನೆಗೆ ಹಾಕಲಾಗಿದ್ದ ಗೇಟ್ ನ ಒಡೆದು ಹಾಕಿದ ಜನ ಏಕ ಏಕಿ ಒಳಗೆ ನುಗ್ಗಿದರು. ಸಲದಕ್ಕೆ, ವಿಷ್ಣುವರ್ಧನ್ ಅವರಿಗೆ ವಿಶ್ ಮಾಡುವ ನೆಪದಲ್ಲಿ ಅವರ ಉಂಗುರವನ್ನೇ ದೋಚಿಕೊಂಡು ಹೋಗಿದ್ದರು.

ಮದುವೆ ದಿನ ನವ ದಂಪತಿಗಳು ಅಂದರೆ ವಿಷ್ಣುವರ್ಧನ್ ಹಾಗೂ ಭಾರತಿ ಅವರಿಗೆ ಊಟ ಕೂಡ ಸಿಗಲಿಲ್ಲವಂತೆ. ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಮಾತನಾಡಿದ್ದು ಅವರ ಮದುವೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆ ಸಾಕಷ್ಟು ಬೇಸರಕ್ಕೆ ಕಾರಣವಾಗಿದೆ ಎಂಬ ಸತ್ಯ ಹೊರಹಕಿದ್ದಾರೆ. ಮದುವೆ ದಿನ ವಿಷ್ಣುವರ್ಧನ್ ಕುಚುಕು ಗೆಳೆಯ ರೆಬಲ್ ಸ್ಟಾರ್ ಅಂಬರೀಶ್ ಕೈಯಲ್ಲೂ ಕೂಡ ಜನರನ್ನು ತಡೆಯೋಕ್ಕೆ ಆಗಲಿಲ್ಲ.

ಅದೆಷ್ಟು ಜನ ಸೇರಿದ್ರು ಅಂದರೆ ವಿಷ್ಣುವರ್ಧನ್ ಅವರಿಗೆ ಕೈ ಕುಲುಕಲು ಬಂದವರು ಅವರ ಉಂಗುರವನ್ನೇ ಕಿತ್ತುಕೊಂಡು ಹೋದರು, ಎಲ್ಲಾ ತರಹದ ಜನ ಬಂದಿದ್ದರು ಆವತ್ತು. ಅಂದು ನಮ್ಮಿಬ್ಬರನ್ನು ಅಶೋಕ ಹೋಟೆಲ್ ಗೆ ಕರೆದುಕೊಂಡು ಹೋಗಲು ಅಂಬರೀಶ್ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಅವರಿಲ್ಲದಿದ್ದರೆ ತುಂಬಾ ಕಷ್ಟವಾಗುತಿತ್ತು ಎಂದು ಭಾರತಿ ವಿಷ್ಣುವರ್ಧನ್ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ನಲ್ಲಿ ತಮ್ಮ ಮದುವೆಯ ನೋವಿನ ಸ್ಟೋರಿ ಹೇಳಿಕೊಂಡಿದ್ದರು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *