ಚಂದನವನದ ಖ್ಯಾತ ನಟ ತಮ್ಮ ಅಭಿನಯದಿಂದ ಸಾಕಷ್ಟು ಜನಪ್ರಿಯತೆ ಹೊಂದಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿರಂಜೀವಿ ಸರ್ಜಾ ನಮ್ಮಿಂದ ದೂರ ಆಗಿ ಎರಡು ವರ್ಷಗಳೇ ಕಳೆದಿದೆ. ಆದರೆ ನಟ ಚಿರು ಸರ್ಜಾ ಅವರ ಸಾಕಷ್ಟು ನೆನಪುಗಳು ಮಾತ್ರ ನಮ್ಮ ಕಣ್ಣ ಮುಂದೆ ಇನ್ನು ಕೂಡ ಇದೇ ಎನ್ನುತ್ತಾರೆ ಕುಟುಂಬದವರು ಹಾಗೂ ಅಭಿಮಾನಿಗಳು. ಮೊನ್ನೆ ತಾನೇ ಚಿರು ಅವರು ನಮ್ಮಿಂದ ಅಗಲಿದ ದಿನ. ಮೊನ್ನೆ ಚಿರು ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬದ ಸೇರಿ ಚಿರು ಸರ್ಜಾ ಸಮಾಧಿಗೆ ಪೂಜೆ ಮಾಡಿದ್ದಾರೆ.
ಈ ವೇಳೆ ಚಿರು ತಂದೆ ತಾಯಿ, ತಮ್ಮ ಧ್ರುವ, ಅರ್ಜುನ್ ಸರ್ಜಾ ಕುಟುಂಬ ಹಾಗೂ ಪತ್ನಿ ಮೇಘನಾ ರಾಜ್, ಮಗ ರಾಯನ್ ಸರ್ಜಾ ಹಾಗೂ ಚಿರು ಅವರ ಅತ್ತೆ ಮಾವ ಹಾಗೂ ಸ್ನೇಹಿತರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಚಿರು ಸರ್ಜಾ ಮಗ ರಾಯನ್ ಸರ್ಜಾ ಅಪ್ಪನ ಫೋಟೋ ಮುಂದೆ ನಿಂತು ಅಪ್ಪ ಅಪ್ಪ ಎಂದು ಹೇಳಿದ್ದು ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿಮಗೆ ಗೊತ್ತಿರುವ ಹಾಗೇ ಅರ್ಜುನ್ ಸರ್ಜಾ ಅವರು ಚಿರಂಜೀವಿ ಸರ್ಜಾ ಅವರಿಗೆ ಸ್ವಂತ ಮಾವ ಆಗಬೇಕು ತನ್ನ ಮಾವನಿಂದಲೇ ಚಿರು ಹಾಗೂ ಧ್ರುವ ನಟರಾಗಿ ಹೊರಹೋಮ್ಮಿದ್ದು. ಚಿರು ಪುಣ್ಯ ಸ್ಮರಣೆದಿನ ಮಾವ ಅರ್ಜುನ್ ಸರ್ಜಾ ಚಿರುವಿನ ನೆನಪು ಮಾಡಿಕೊಂಡಿದ್ದು ಮತ್ತೆ ಕಣ್ಣೀರು ಹಾಕಿದ್ದಾರೆ. ಇನ್ನು ಅದೇ ಸಮಯದಲ್ಲಿ ಚಿರುಗೆ ಅಂದು ನಾನು ಬೆಲ್ಟ್ ನಲ್ಲಿ ಹೊಡೆದ ವಿಷಯವನ್ನು ಮಾಧ್ಯಮದರ ಮುಂದೆ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ ನಟ ಅರ್ಜುನ್ ಸರ್ಜಾ.
ಹಾಗಾದರೆ ಅರ್ಜುನ್ ಸರ್ಜಾ ಅಂದು ಚಿರಂಜೀವಿ ಸರ್ಜಾ ಅವರಿಗೆ ಬೆಲ್ಟ್ ನಲ್ಲಿ ಹೊಡೆದಿದ್ದು ಯಾಕೆ ಮತ್ತು ಚಿರು ಮಾಡಿದ ತಪ್ಪಾದರೂ ಏನು ಅನ್ನುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಕನ್ನಡದ ಬಹುಬೇಡಿಕೆಯ ನಟ ಚಿರಂಜೀವಿ ಸರ್ಜಾ ಎಲ್ಲರನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿದ್ದಾರೆ.
ಅವರು ಅಗಲಿ ಎರಡು ವರ್ಷ ಕಳೆದಿದೆ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬ ಇಬ್ಬರು ಸೇರಿ ಚಿರು ಸಮಾಧಿಗೆ ಪೂಜೆ ಮಾಡಿದ್ದರು. ಇದೇ ಸಮಯದಲ್ಲಿ ಮಾಧ್ಯಮ ಮುಂದೆ ಮಾತಾಡಿದ ಅರ್ಜುನ್ ಸರ್ಜಾ ಚಿರು ಬಗ್ಗೆ ಮಾತನಾಡಿ ಭಾವುಕರಾದರು.
ಚಿರು ಚಿಕ್ಕವನಿದ್ದಾಗ ನಾನೇ ಅವನನ್ನ ಸ್ಕೋಲ್ ಗೆ ಬಿಟ್ಟು ಬರುತ್ತಿದ್ದೆ ಮತ್ತು ಅವನನ್ನು ಆಕ್ಟಿಂಗ್ ಸ್ಕೋಲ್ ಗೂ ಕಳುಹಿಸಿದ್ದೆ ಎಂದು ಹೇಳಿದ ಅರ್ಜುನ್ ಸರ್ಜಾ ಅವರು ಅಂದು ಅವನು ಸಿ ಗ ರೇ ಟ್ ಸೇದಿದಾಗ ನಾನು ಅವನಿಗೆ ಬೆಲ್ಟ್ ನಲ್ಲಿ ಚನ್ನಾಗಿ ಹೊಡೆದಿದ್ದೆ ಎಂದು ಅರ್ಜುನ್ ಸರ್ಜಾ ಹೇಳಿದ್ದರು.
ಚಿರು ನನಗೆ ತುಂಬಾ ಆತ್ಮೀಯ ಅವನು ಅಂದ್ರೆ ನನಗೆ ತುಂಬಾ ಪ್ರೀತಿ ಚಿರು ಇಲ್ಲ ಅನ್ನೋ ನೋವು ನನಗೆ ಇಂದಿಗೂ ಕೂಡ ಅಡಗಿಸಿಕೊಳ್ಳಲು ನನಗೆ ತುಂಬಾ ಕಷ್ಟವಾಗುತ್ತಿದೆ. ಎಂದು ಚಿರು ಅವರನ್ನು ನೆನೆದು ಅರ್ಜುನ್ ಸರ್ಜಾ ಭಾವುಕರಾದರು. ಚಿರು ಅಲ್ಲಿಂದಲೇ ಇವನ್ನೆಲ್ಲ ನೋಡುತ್ತಾಲೆ ಇರುತ್ತಾನೆ.
ನಾವು ಚಿರುನನ್ನು ನೆನಪು ಮಾಡಿಕೊಳ್ಳದ ದಿನವೇ ಇಲ್ಲ, ಯಾವ ಕೆಲಸ ಮಾಡಿದರು ನಮಗೆ ಮೊದಲು ಚಿರು ನೆನಪಾಗುತ್ತಾನೆ, ನಿನ್ನ ನೆನಪುಗಳು ಯಾವಾಗಲು ನಮ್ಮ ಮನದಲ್ಲಿ ಇರುತ್ತದೆ ಎಂದು ಹೇಳಿದರು ನಟ ಅರ್ಜುನ್ ಸರ್ಜಾ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..