ಅಂದು ನಿಜಕ್ಕೂ ದೊಡ್ಮನೆ ಯಲ್ಲಿ ಆಸ್ತಿಯ ವಿಚಾರಕ್ಕೆ ಜಗಳ ನಡೆದಿತ್ತಾ? ಕೊನೆಗೂ ನಿಜಾಂಶ ಬಾಯ್ಬಿಟ್ಟ ಶಿವಣ್ಣ ಹೇಳಿದ್ದೇನು ನೋಡಿ.!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಚಂದನವನದಲ್ಲಿ ದೊಡ್ಡ ಸ್ಟಾರ್ ನಟರ ದಿಗ್ಗಜರಲ್ಲಿ ಒಬ್ಬರಾದ ಕನ್ನಡ ಸಿನೆಮಾ ರಂಗಕ್ಕೆ ಅಣ್ಣನಾಗಿರುವ ಅಭಿಮಾನಿಗಳನ್ನು ದೇವರೆಂದು ಕರೆಯುವ ಇವರು ಯಾರೆಂಬುವುದು ನಿಮಗೆಲ್ಲರಿಗೂ ಗೊತ್ತೇ ಇದೆ ಅವರೇ ಇವರು ಕನ್ನಡ ಸಿನೆಮಾರಂಗದಲ್ಲಿ ಅಚ್ಚಳಿಯದೆ ಉಳಿಯುವ ಹೆಸರು ಎಂದರೆ ಅದು ನಮ್ಮ ಡಾ.ರಾಜ್ ಕುಮಾರ್ ಅವರ ಹೆಸರು ಇನ್ನೂ ಕೂಡ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಹೆಸರು ಇವರದ್ದು.

ಈಗಿನ ಯುವ ಪೀಳಿಗೆಯ ಎಲ್ಲರಿಗೂ ಕನ್ನಡ ಕರ್ನಾಟಕ ಎಂದ ತಕ್ಷಣ ನೆನಪಾಗುವುದು ಅಣ್ಣಾವ್ರು. ಇನ್ನೂ ಅಣ್ಣಾವ್ರು ಸಿನೆಮಾದಿಂದ ಇಡೀ ವಿಶ್ವವೇ ಕರ್ನಾಟಕದ ಕಡೆ ತಿರುಗಿ ನೋಡುವ ಹಾಗೆ ಮಾಡಿದ್ದರು. ಅಣ್ಣಾವ್ರು ಇಡೀ ಕುಟುಂಬವೇ ತಮ್ಮ ಜೀವನವನ್ನು ಕಲಾಸೇವೆಗಾಗಿ ಮೂಡಿಪಾಗಿಟ್ಟಿದ್ದರೆ. ಅಣ್ಣಾವ್ರು ನಂತರ ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮತ್ತು ಪುನೀತ್ ರಾಜ್ ಕುಮಾರ್, ಇನ್ನೂ ಅಣ್ಣಾವ್ರು ಮೊಮ್ಮಕ್ಕಳು ಎಲ್ಲರಲ್ಲೂ ಅದೇ ಕಲಾದೇವಿ ಅವರಿಸಿಕೊಂಡಿದ್ದಾರೆ.

ದೊಡ್ಮನೆಯ ಮೂವರು ಕುಡಿಗಳು ಶಿವಣ್ಣ, ರಾಘಣ್ಣ, ಅಪ್ಪು ಈ ಮೂವರನ್ನು ನೋಡುವುದೇ ಸಂತೋಷ ಎನ್ನುವ ಹಾಗಿತ್ತು, ಆದರೆ ಈಗ ಅಪ್ಪು ಅವರಿಲ್ಲ, ಆ ನೋವು ಎಲ್ಲರಲ್ಲೂ ಇದೆ. ಜೊತೆಗೆ ದೊಡ್ಮನೆಯ ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳು, ಪೂರ್ಣಿಮಾ ರಾಮ್ ಕುಮಾರ್ ಅವರು ಮತ್ತು ಲಕ್ಷ್ಮಿ ಅವರು. ಈ ಒಡಹುಟ್ಟಿದವರ ನಡುವೆ ಬಹಳಷ್ಟು ಹೊಂದಾಣಿಕೆ ಇದೆ. ಆದರೆ ಹಲವು ಬಾರಿ ದೊಡ್ಮನೆ ಕುಡಿಗಳ ವಿಚಾರದಲ್ಲಿ ಗಾಸಿಪ್ ಗಳು ಕೇಳಿ ಬಂದಿವೆ.

ಹೌದು ಅಣ್ಣಾವ್ರ ಮೂವರು ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ಜಗಳವಾಗಿತ್ತು, ಮನಸ್ತಾಪವಾಗಿತ್ತು ಎಂದು ಆಗಾಗ ಸುದ್ದಿಗಳು ಸಹ ಕೇಳಿರುತ್ತೇವೆ. ಆ ಎಲ್ಲಾ ವಿಚಾರಗಳಿಗೂ ಸ್ವತಃ ಶಿವಣ್ಣ, ಉತ್ತರ ಕೊಟ್ಟಿದ್ದಾರೆ. ಅಣ್ಣಾವ್ರಗೆ ಇದ್ದ ಬೇಡಿಕೆ, ಅವರ ಒಳ್ಳೆಯತನ ಇದೆಲ್ಲದರ ಬಗ್ಗೆ ಹೇಳುವ ಎರಡು ಮಾತುಗಳಿಲ್ಲ. ಇನ್ನೂ ಅಣ್ಣಾವ್ರು ಮಕ್ಕಳು ಸಹ ಅದೇ ರೀತಿ. ಆದರೆ ಅಣ್ಣಾವ್ರು ಮೂವರು ಮಕ್ಕಳು ಸಹ ಜೊತೆಯಾಗಿ ಒಟ್ಟಿಗೆ ವಾಸ ಮಾಡುತ್ತಿಲ್ಲ,ಎಲ್ಲರೂ ಬೇರೆ ಬೇರೆ ಇದ್ದಾರೆ.

ಈ ವಿಚಾರದ ಬಗ್ಗೆ ಆಗಾಗ ಚರ್ಚೆ ಆಗುತ್ತಿತ್ತು.ಆಸ್ತಿ ವಿಚಾರದಲ್ಲಿ ಇವರ ನಡುವೆ ಒಬ್ಬರಿಗೊಬ್ಬರ ನಡುವೆ ಮುನಿಸು ಇದೆ ಎನ್ನಲಾಗುತ್ತಿದೆ. ಆದರೆ ಇದೆಲ್ಲವೂ ಸುಳ್ಳಿನ ವಿಚಾರ ಆಗಿದೆ, ಅಣ್ಣಾವ್ರ ಹೇಗೆ ಹಣ, ಆಸ್ತಿ ಗಳಿಸಿದ್ದಾರೊ ಅದೇ ರೀತಿ ಅಣ್ಣಾವ್ರ ಮಕ್ಕಳು ಸಹ ಆಸ್ತಿ ಗಳಿಸಿದ್ದಾರೆ. ಇಂದಿಗೂ ಅಣ್ಣ ತಮ್ಮಂದಿರ ನಡುವೆ ಎಂದಿಗೂ ಆಸ್ತಿ ವಿಚಾರಕ್ಕೆ ಯಾವ ತೊಂದರೆಯು ಆಗಿಲ್ಲ, ಇದರ ಬಗ್ಗೆ ಸ್ವತಃ ಶಿವಣ್ಣ ಅವರು ಡಿಕೆಡಿ ವೇದಿಕೆಯ ಮೇಲೆ ಮಾತನಾಡಿ ” ಆಸ್ತಿ ವಿಚಾರಕ್ಕೆ ನಮ್ಮ ಮೂವರ ನಡುವೆ ಯಾವುದೇ ಜಗಳ ಆಗಿಲ್ಲ. ಕೆಲವರು ಆ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.

ಆಸ್ತಿ ವಿಚಾರಕ್ಕೆ ಜಗಳ ಮಾಡಬೇಕು ಅಂತ ಇದುವರೆಗೂ ನಮಗೆ ಅನ್ನಿಸಲೇ ಇಲ್ಲ.”ಎಂದು ಎಲ್ಲಾ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದರೆ ಶಿವಣ್ಣ. ಈ ವಿಚಾರ ಹೇಳುವಾಗ ಶಿವಣ್ಣ ಭಾವುಕರಾಗಿದ್ದು ನೀವು ನೋಡಿರಬಹುದು.ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *