ಅಂದು ಬಿಎಂಟಿಸಿ ಬಸ್ಸನಲ್ಲಿ ಕಂಡಕ್ಟರ್ ಆಗಿದ್ದ ರಜನಿಕಾಂತ್ ಸಿನಿಮಾ ಪ್ರಪಂಚಕ್ಕೆ ಬಂದಿದ್ದು ಹೇಗೆ ಗೊತ್ತಾ.? ನೋಡಿ ರಜನಿಕಾಂತ್ ಅವರ ಬಗ್ಗೆ ಯಾರಿಗೂ ಗೊತ್ತಿರದ ಆಶ್ಚರ್ಯಕರ ವಿಷಯ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಎಲ್ಲರೂ ಅಂದುಕೊಳ್ಳುತ್ತಾರೆ ನಾವು ಸಾಮಾನ್ಯವಾದ ಕುಟುಂಬದಲ್ಲಿ ಜನಿಸಿದ್ದೇವೆ, ಬಡತನದ ಕುಟುಂಬದಲ್ಲಿ ಹುಟ್ಟಿದ್ದೇನೆ, ಚಿಕ್ಕ ಪುಟ್ಟ ಕೆಲಸವನ್ನು ಮಾಡುತ್ತಿದ್ದೇವೆ, ಹೀಗೆ ಇದ್ದರೆ ಮುಂದೊಂದು ದಿನ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಸಾಧನೆ ಎಂಬುದು ಕೇವಲ ಶ್ರೀಮಂತರ ಪಾಲು ಮತ್ತು ಹಣ ಇದ್ದವರಿಗೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಅಂದುಕೊಂಡಿರುತ್ತಾರೆ ಆದರೆ ಸಾಮಾನ್ಯ ವ್ಯಕ್ತಿಯು ಕೂಡ ಸೂಪರ್ ಸ್ಟಾರ್ ಆಗಿ ಇಡೀ ಚಲನಚಿತ್ರರಂಗದಲ್ಲಿ ತಮ್ಮ ಚಾಪನ್ನು ಮೂಡಿಸಿದ ರಜನಿಕಾಂತ್ ಅವರನ್ನು ನೋಡಿದರೆ ಎಲ್ಲರಿಗೂ ತಿಳಿಯುತ್ತದೆ.

ಸಾಮಾನ್ಯವಾದ ಪೊಲೀಸ್ ಕಾನ್ಸ್ಟೇಬಲ್ ವ್ಯಕ್ತಿಯ ಮಗ ಅಥವಾ ಬಿಎಂಟಿಸಿ ಬಸ್ಸಲ್ಲಿ ಕಂಡಕ್ಟರ್ ಆಗಿದ್ದ ವ್ಯಕ್ತಿ ಈಗ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವುದು ಸಾಮಾನ್ಯವಾದ ವಿಷಯವಲ್ಲ. ಆ ಕಾಲದಲ್ಲಿಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದವರು ರಜನಿಕಾಂತ್. ಕೇವಲ ಒಂದು ಭಾಷೆಗೆ ಸೀಮಿತವಾಗದೆ ರಜನಿಕಾಂತ್ ಅವರು ಬಾಲಿವುಡ್ ಅಲ್ಲೂ ಸಿನಿಮಾ ವನ್ನು ಮಾಡಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

ಕರ್ನಾಟಕದಿಂದ ವಲಸೆ ಹೋಗಿದ್ದ ರಜನಿಕಾಂತ್ ಅವರನ್ನು ತಮಿಳು ಚಲನಚಿತ್ರದಲ್ಲಿ ಏಕೆ ಬೆಳಸಬೇಕು ಎಂದು ಅವರ ವಿರುದ್ಧ ಕಮಲ್ ಹಾಸನ್ ಅವರನ್ನು ತಂದು ನಿಲ್ಲಿಸುತ್ತಾರೆ, ಆದರೆ ಈ ಕಾಳಗದಲ್ಲಿ ಗೆದ್ದಿದ್ದು ಮಾತ್ರ ರಜನಿಕಾಂತ್ ಎಂದರೆ ತಪ್ಪಾಗಲಾರದು. ರಜನಿಕಾಂತ್ ಅವರು ಇಂದಿಗೂ ತಮ್ಮ ಹಳೆಯ ನೆನಪುಗಳನ್ನು ಮರೆತಿಲ್ಲ ಅದಕ್ಕೆ ಉತ್ತಮ ಉದಾಹರಣೆಯೆಂದರೆ ಕರ್ನಾಟಕಕ್ಕೆ ಬಂದಾಗ ಅವರು ಕನ್ನಡದಲ್ಲಿ ಮಾತನಾಡುತ್ತಾರೆ.

ರಜನಿಕಾಂತ್ ಅವರು ಬೆಂಗಳೂರಿನಲ್ಲಿರುವ ಒಂದು ಹುಡುಗಿಯನ್ನು ಆ ಕಾಲದಲ್ಲಿ ಪ್ರೀತಿಸಿದ್ದರು ಹಾಗೂ ಆ ಹುಡುಗಿಯಿಂದಲೇ ರಜನಿಕಾಂತ್ ಅವರು ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ತಪ್ಪಾಗಲಾರದು. ಇತ್ತೀಚಿಗೆ ರಜನಿಕಾಂತ್ ಅವರು ಒಂದು ಸಂದರ್ಶನದಲ್ಲಿ ನನ್ನ ಬಳಿ ಕೋಟಿ ಕೋಟಿ ಹಣವಿದೆ, ಗೆಲುವಿದೆ ಆದರೆ ಜೀವನದಲ್ಲಿ ಸ್ವಲ್ಪಮಟ್ಟಿಗಾದರೂ ಸುಖ, ಶಾಂತಿ, ನೆಮ್ಮದಿ ಎಂಬುದು ನನಗೆ ಸಿಗಲಿಲ್ಲ ಎಂದು ಹೇಳಿದ್ದರು.

ರಜನಿಕಾಂತ್ ಅವರು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಕೂಲಿ ಕೆಲಸವನ್ನು ಮಾಡಿದ್ದರು. ತದನಂತರ ಬಿಎಂಟಿಸಿ ಬಸ್ಸಲ್ಲಿ ಕಂಡಕ್ಟರ್ ಆಗಿಯೂ ಕಾರ್ಯವನ್ನು ನಿರ್ವಹಿಸಿದ್ದರು. ಇದರ ಮಧ್ಯೆ ರಜನಿಕಾಂತ್ ಅವರಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಂದರೆ ನಾಟಕದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆದ್ದರಿಂದ ನಾಟಕಗಳಲ್ಲಿಯೂ ಕೂಡ ರಜನಿಕಾಂತ್ ಅವರು ಅಭಿನಯ ಮಾಡುತ್ತಿರುತ್ತಾರೆ.

ಹೀಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಜನಿಕಾಂತ್ ಅವರಿಗೆ ನಿರ್ಮಲ ಎಂಬ ಹುಡುಗಿಯ ಪರಿಚಯವಾಗಿ ಇಬ್ಬರ ನಡುವೆ ಒಂದು ಉತ್ತಮ ಬಾಂಧವ್ಯ ಮೂಡುತ್ತದೆ. ಒಂದು ದಿನ ರಜನಿಕಾಂತ್ ಅವರು ತಮ್ಮ ನಾಟಕವನ್ನು ತೋರಿಸಲು ನಿರ್ಮಲ ಅವರನ್ನು ಕರೆದುಕೊಂಡು ಹೋಗುತ್ತಾರೆ. ನಾಟಕದಲ್ಲಿ ರಜನಿಕಾಂತ್ ಅವರ ಅಭಿನಯವನ್ನು ನೋಡಿ ತುಂಬಾ ಇಷ್ಟಪಟ್ಟು ನಿರ್ಮಲ ಅವರು ಸಿನಿಮಾ ಇಂಡಸ್ಟ್ರಿಗೆ ಬರಲು ರಜನಿಕಾಂತ್ ಅವರಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಾರೆ.


Leave a Reply

Your email address will not be published. Required fields are marked *