ಅಂದು ಸುದೀಪ್ ಇಲ್ಲ ಅಂದಿದ್ದರೆ ಇಂದು ನಾನು ಬದುಕುತ್ತಾನೆ ಇರಲಿಲ್ಲ ಎಂದು ಕಣ್ಣೀರು ಹಾಕಿದ ನಟ ರವಿಶಂಕರ್! ಅಷ್ಟಕ್ಕೂ ರವಿಶಂಕರ್ ಬದುಕಲ್ಲಿ ಆಗಿದ್ದೇನು ಗೊತ್ತಾ.? ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಿಮಗೆಲ್ಲರಿಗೂ ಕಂಚಿನ ಕಂಠದ ನಟ ರವಿಶಂಕರ್ ಗೊತ್ತಿರಬೇಕು ಅಲ್ಲವೇ, ಅದ್ಭುತ ಕಲಾವಿದ ವಾಯ್ಸ್ ಓವರ್ ಡಬ್ಬಿಂಗ್ ಆರ್ಟಿಸ್ಟ್, ಅಸಿಸ್ಟೆಂಟ್ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್, ಹಲವಾರು ಸಿನೆಮಾದಲ್ಲಿ ವಿಲನ್ ಆಗಿ ಕಾಮಿಡಿ ಪಾತ್ರದಲ್ಲಿ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕಿಂತ ಮುಂಚೆ ರವಿಶಂಕರ್ ಅವರ ಬದುಕು ಹೇಗಿತ್ತು ಎಂಬುದನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೂ ಸಾಧವಿಲ್ಲ. ಹೌದು ನಟ ರವಿಶಂಕರ್ ಅವರು ಮೂಲತಃ ತೆಲುಗು ನವರು ಇವರ ತಂದೆ ತಾಯಿ ಇಬ್ಬರು ಕೂಡ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗೂ ಇವರ ಅಣ್ಣ ಸಾಯಿಕುಮಾರ್ ತಮ್ಮ ಅಯ್ಯಪ್ಪ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಒಂದು ಕಾಲದಲ್ಲಿ ಸಾಯಿಕುಮಾರ್ ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಯಲ್ಲಿ ನಟಿಸಿ ಸಾಕಷ್ಟು ಅವಕಾಶಗಳನ್ನೂ ಗಿಟ್ಟಿಸಿಕೊಂಡಿದ್ದಾರೆ. ಆದರೆ ನಟ ರವಿಶಂಕರ್ ಅವರು ಮೊಟ್ಟಮೊದಲ ಬಾರಿಗೆ 1986ರಲ್ಲಿ ನಾಯಕ ನಟರಾಗಿ ಕಾಣಿಸಿಕೊಂಡರು ಕೂಡ ಇವರಿಗೆ ಅದೃಷ್ಟ ಎಂಬುದು ಕೈಹಿಡಿಯಲಿಲ್ಲ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗ ಇವರನ್ನು ನಟನಾಗಿ ಬೆಳೆಯುವುದಕ್ಕೆ ಬಿಡಲಿಲ್ಲ ಅದ್ಬುತ ಕಂಠವನ್ನು ಹೊಂದಿದ್ದ ಕಾರಣ ಇವರನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ನೇಮಕ ಮಾಡಿಕೊಳ್ಳಿಕುತ್ತಾರೆ.

ಇಲ್ಲಿಯವರೆಗೂ ಕೂಡ ನಟ ರವಿಶಂಕರ್ ಅವರು ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಸಿನೆಮಾಗಳಿಗೆ ವಾಯ್ಸ್ ಡಬ್ಬಿಂಗ್ ಮಾಡಿ ಕೊಟ್ಟಿದ್ದಾರೆ. ಪ್ರಕಾಶ್ ರಾಜ್, ಸೋನು ಸೂದ್, ದೇವರಾಜ್, ಚರಣ್ ರಾಜ್ ಹೀಗೆ ಕನ್ನಡದ ನಟರು ತಮಿಳು, ತೆಲುಗು, ಮಲಯಾಳಂನಲ್ಲಿ ನಟನೆ ಮಾಡಿದವರಿಗೆ ವಾಯ್ಸ್ ಡಬ್ಬಿಂಗ್ ಮಾಡಿಕೊಡುತ್ತಿದ್ದ ಏಕೈಕ ನಟ ಅಂದರೆ ಅದು ನಮ್ಮ ಅರ್ಮುಗಮ್ ರವಿಶಂಕರ್ ಅವರು ಮಾತ್ರ.

ನಮ್ಮ ಸ್ಯಾಂಡಲ್ವುಡ್ ನಲ್ಲಿ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಗ್ಗೆ ಹೇಳುವ ಎರಡು ಮಾತಿಲ್ಲ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕೊಟ್ಟು ಅವರಿಗೆ ಆಸರೆಯಾಗುವುದೇ ಇವರ ಮೂಲ ಉದ್ದೇಶ. ಈ ಕಾರಣಕ್ಕಾಗಿ ಕಿಚ್ಚ ಸುದೀಪ್ ಅವರ ಚಿತ್ರದಲ್ಲಿ ಬಹುತೇಕ ಹೊಸಬರೇ ಇರುತ್ತಾರೆ ತಮಿಲಿನಲ್ಲಿ ಸೂಪರ್ ಹಿಟ್ ಸಿನೆಮಾ ಆಗಿದ್ದ ಸಿಂಗಂ ಸಿನೆಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಬೇಕು ಅಂತ ಸುದೀಪ್ ಅಂದುಕೊಳ್ಳುತ್ತಾರೆ. ಆ ಸಮಯದಲ್ಲಿ ತಮಿಳಿನಲ್ಲಿ ಪ್ರಕಾಶ್ ರಾಜ್ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಆ ಪಾತ್ರಕ್ಕೆ ಹೊಸ ಪ್ರತಿಭೆಯನ್ನು ಕರೆತರಬೇಕು ಎಂಬುದನ್ನು ಕಿಚ್ಚ ಸುದೀಪ್ ಅವರ ಆಶಾಯವಾಗಿರುತ್ತದೆ. ಹಾಗಾಗಿ ಹೊಸ ವಿಲನ್ ಹುಡುಕುವಂತಹ ಕೆಲಸದಲ್ಲಿ ನಿರತರಾಗುತ್ತಾರೆ.

ಆ ಸಮಯದಲ್ಲಿ ಸುದೀಪ್ ಅವರ ಕಣ್ಣಿಗೆ ಬಿದ್ದಂತಹ ನಟ ಅಂದರೆ ಅದು ರವಿಶಂಕರ್ ಅರುಂಧತಿ ಎಂಬ ಸಿನೆಮಾದಲ್ಲಿ ನಟ ಸೋನು ಸೂದ್ ಅವರಿಗೆ ವಾಯ್ಸ್ ಓವರ್ ನೀಡಿದ್ದರು ಇವರ ಧ್ವನಿಗೆ ಮಾರು ಹೋದಂತಹ ಸುದೀಪ್ ಅವರು ಹೇಗಾದರೂ ಮಾಡಿ ಅದ್ಭುತ ನಟನನ್ನೇ ಕನ್ನಡಕ್ಕೆ ಪರಿಚಯಿಸಬೇಕು ಅವರಿಗೆ ವಿಲನ್ ಪಾತ್ರದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅಂದುಕೊಳ್ಳುತ್ತಾರೆ. ನಂತರ ಕಿಚ್ಚ ಸುದೀಪ್ ರವಿಶಂಕರ್ ಗೆ ಕರೆ ಮಾಡಿ ನಮ್ಮ ಚಿತ್ರದಲ್ಲಿ ಒಂದು ಪಾತ್ರದಲ್ಲಿ ನೀವು ನಟನೆ ಮಾಡಬೇಕು ಅಂತ ಹೇಳುತ್ತಾರೆ. ಆ ಸಮಯದಲ್ಲಿ ರವಿಶಂಕರ್ ಅವರು ಒಪ್ಪಿಕೊಳ್ಳುತ್ತಾರೆ ಈ ಸಿನೆಮಾದಲ್ಲಿ ರವಿಶಂಕರ್ ಹೇಗೆ ನಟನೆ ಮಾಡಿದರು ಅಂದರೆ ಅದನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

ಹೌದು ಕೆಂಪೇಗೌಡ ಸಿನೆಮಾದಲ್ಲಿ ಸಿಕ್ಕಾ ಯಶಸ್ಸಿನಿಂದಾಗಿ ಇಂದು ರವಿಶಂಕರ್ ಅವರು ಅದ್ಭುತ ಕಲಾವಿದನಾಗಿ ಹೊರಹೋಮ್ಮಿದ್ದಾರೆ ಈಗಂತೂ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ ಒಂದು ಕಾಲದಲ್ಲಿ ಅವಕಾಶ ಇಲ್ಲದೆ ಮೂಲೆ ಗುಂಪಾಗಿದ್ದಂತಹ ರವಿಶಂಕರ್ ಅವರಿಗಾಗಿ ಇದೀಗ ನಿರ್ಮಾಪಕರು ಹಾಗೂ ನಿರ್ದೇಶಕರು ಅವರ ಡೇಟ್ಸ್ ಗಾಗಿ ಕಾದು ಕುಳಿತಿದ್ದಾರೆ. ಅಷ್ಟರ ಮಟ್ಟಿಗೆ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ನಮ್ಮ ಕರ್ನಾಟಕದಲ್ಲಿ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಎಷ್ಟು ಪ್ರಖ್ಯಾತಿಯನ್ನೂ ಪಡೆಯುತ್ತಿದೆಯೋ ಅಷ್ಟೇ ಪ್ರಖ್ಯಾತಿಯನ್ನು ತೆಲುಗಿನ ಅಲಿತೋ ಎಂಬ ಕಾರ್ಯಕ್ರಮ ಅಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ ಕಳೆದ ವಾರವಷ್ಟೇ ನಟ ರವಿಶಂಕರ್ ಅಲಿತೋ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ನಟ ರವಿಶಂಕರ್ ಕೊಟ್ಟ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈ’ರಲ್ ಅಗಿದ್ದು ಕನ್ನಡಿಗರ ಹೃದಯವಂತಿಕೆ ಎಷ್ಟು ಎದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೌದು ಈ ಒಂದು ಕಾರ್ಯಕ್ರಮಕ್ಕೆ ಭಾಗವಹಿಸಿದಂತಹ ರವಿಶಂಕರ್ ಅವರು ತೆಲುಗು ಚಿತ್ರರಂಗ ನನ್ನ ಯೌವನವನ್ನು ಹಾಳು ಮಾಡಿತು ಅಷ್ಟೇ ಅಲ್ಲದೆ ನನ್ನ ಬದುಕನ್ನೇ ನಾಶ ಮಾಡಿತು ಎಂದು ಹೇಳಿದರು ಕೂಡ ತಪ್ಪಾಗಲಾರದು. ಆ ಸಮಯದಲ್ಲಿ ನನಗೆ ಬದುಕನ್ನು ಕಟ್ಟಿಕೊಟ್ಟಿದ್ದು ನನಗೆ ಅನ್ನ ನೀರು ಇದಕ್ಕೆ ಸೂರು ನೀಡಿದ್ದು ಎಲ್ಲವೂ ಕನ್ನಡ ಚಿತ್ರರಂಗ. ಮುಖ್ಯವಾಗಿ ಸುದೀಪ್ ಅವರು ಒಬ್ಬರು ಇಲ್ಲ ಅಂದಿದ್ದಾರೆ ಇಂದು ನಾನು ಈ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಇರಲಿಲ್ಲ ಎಂದು ಕನ್ನಡ ಅಭಿಮಾನವನ್ನು ಹೊರಹಾಕಿದ್ದಾರೆ.

ನಿಜಕ್ಕೂ ನಾವು ಇಲ್ಲಿ ಎರಡು ವಿಚಾರವನ್ನು ವ್ಯಕ್ತಪಡಿಸಲೇಬೇಕು ಒಂದು ರವಿಶಂಕರ್ ಅವರು ನಮ್ಮ ಕನ್ನಡದ ಮೇಲೆ ಇಟ್ಟಿರುವಂತಹ ಭಾಷಭಿಮಾನವನ್ನು. ಇನ್ನೊಂದು ಕಿಚ್ಚಿ ಸುದೀಪ್ ಅವರು ಮಾಡಿದಂತಹ ಸಹಾಯವನ್ನು ಇಂದು ರವಿಶಂಕರ್ ತಮ್ಮ ಜೀವನದಲ್ಲಿ ಏನೇ ಯಶಸ್ಸು ಸಾಧಿಸುತ್ತಿದ್ದರು ಅದಕ್ಕೆಲ್ಲ ಮೂಲ ಕಾರಣ ಕಿಚ್ಚ ಸುದೀಪ್ ಅವರೇ ಎಂದುದನ್ನು ನಾವು ಹೆಮ್ಮೆಯಿಂದ ಹೇಳಬಹುದು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *