ಅಣ್ಣಾವ್ರಿಗೆ ಅವಮಾನ ಮಾಡಿದ್ರ ಮಿನುಗು ತಾರೆ ಕಲ್ಪನಾ? ನಟಿ ಕಲ್ಪನಾ ಅವರ ದುರಂಕಾರದ ಮಾತು ಕೇಳಿ ಬಿಚ್ಚಿ ಬಿದ್ದ ಚಿತ್ರರಂಗ ನೋಡಿ.

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಅಂದಿನ ಕಾಲದಲ್ಲಿ ಚಂದನವನದಲ್ಲಿ ಸಿನೆಮಾ ಪ್ರಿಯರಿಗೆ ರಸದೌತನ ನೀಡಿದ್ದ ಮಿನುಗು ತಾರೆ ಕಲ್ಪನಾ ಅವರು ಡಾ. ರಾಜ್ ಕುಮಾರ್ ಅವರಿಗೆ ಅವಮಾನ ಮಾಡಿದ್ರು ಎಂಬ ಸುದ್ಧಿ ಅಂದು ಸ್ಯಾಂಡಲ್ವುಡ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆ ಸಮಯದಲ್ಲಿ ನಟಿ ಕಲ್ಪನಾ ಅವರು ರಾಜ್ ಕುಮಾರ್ ಅವರಿಗೆ ಮಾಡಿದ ಅವಮಾನದಿಂದ ಅವರಿಗೆ ಮುಕುವಾಯಿತಾ ಎಂಬ ಮಾತು ಕೂಡ ಹಲವರಿಂದ ಕೇಳಿ ಬರುತ್ತಿತ್ತು. ನಟಿ ಕಲ್ಪನಾ ಅವರು ನಿಜವಾಗಿಯೂ ಅಣ್ಣವ್ರಿಗೆ ಅವಮಾನ ಮಾಡಿದ್ರಾ ಅಥವಾ ಇದೆಲ್ಲಾ ಸುಳ್ಳೋ ಎಂಬ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ಬನ್ನಿ.

ಅಂದಿನ ಫೇಮಸ್ ನಟಿ ಮಿನುಗು ತಾರೆ ಕಲ್ಪನಾ ಅವರು ರಾಜ್ ಕುಮಾರ್ ಅವರ ಜೊತೆ 19 ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಕಲ್ಪನಾ ಅವರ ಅಭಿನಯವನ್ನು ಕಂಡ ಡಾ. ರಾಜ್ ಕುಮಾರ್ ಅವರು ಅವರ ಎರಡು ಕನಸು ಸಿನೆಮಾದ ಶೋಟಿಂಗ್ ಸಮಯದಲ್ಲಿ ಕಲ್ಪನಾ ಅವರು ತಮ್ಮ ನಟನೆಯಲ್ಲಿ ಕಲಾ ಸರಸ್ವತಿಯನ್ನು ತಮ್ಮ ಮೇಲೆ ಎಳೆದು ಕೊಂಡಿದ್ದರು, ಕಲ್ಪನಾ ಅವರು ತಮ್ಮ ಪತಿಯನ್ನು ಅಂದರೆ ಡಾ. ರಾಜ್ ಕುಮಾರ್ ಅವರನ್ನು ಬೈಯುವ ಒಂದು ದೃಶ್ಯದ ಸನ್ನಿವೇಶದಲ್ಲಿ ನಟನೆ ಎಂಬ ಪರಕಾಯ ಪ್ರವೇಶ ಮಾಡಿದ್ದರು ಎಂದು ಡಾ. ರಾಜ್ ಕುಮಾರ್ ಅವರೇ ಹಲವಾರು ಬಾರಿ ಹೇಳಿಕೊಂಡಿದ್ದರು.

ಇನ್ನೂ ಎರಡು ಕನಸು ಚಿತ್ರದ ಒಂದು ದೃಶ್ಯದ ಶೋಟಿಂಗ್ ಸಮಯದಲ್ಲಿ ನಟಿ ಕಲ್ಪನಾ ಅವರು ಅವರು ನೆಲದ ಮೇಲೆ ಕುಸಿದು ಅಳುತ್ತಿರುವುದನ್ನು ಕಂಡು ನಿರ್ದೇಶಕರು ಅವರನ್ನು ಎದ್ದೇಳಿಸಲು ಹೋದಾಗ ಅಣ್ಣಾವ್ರು ನಿರ್ದೇಶಕರನ್ನು ತಡೆದು ಕಲ್ಪನಾ ಅವರು ಮೈ ಮಾಲೆ ಸರಸ್ವತಿ ಬಂದಿದ್ದಳೆ ಎಂದು ಹೇಳಿ ಎರಡು ಕೈಯನ್ನು ಕಲ್ಪನಾ ಅವರಿಗೆ ಮುಗಿಯುತ್ತಾರೆ.

ಆ ಸಮಯದಲ್ಲಿ ಕಲ್ಪನಾ ಅವರು ನೀವು ಏಕೆ ಕೈಯೆತ್ತಿ ಮುಗಿಯುತ್ತೀರಾ ಎಂದು ಕೇಳಿದಾಗ ರಾಜ್ ಕುಮಾರ್ ಅವರು ನಾನು ಕೈ ಮುಗಿದಿರುವುದು ನಿನಗಲ್ಲ ನಿನ್ನ ಒಳಗೆ ಇರುವ ಕಲಾ ಸರಸ್ವತಿಗೆ ಎಂದು ಅಣ್ಣಾವ್ರು ಹೇಳುತ್ತಾರೆ.

ಹೀಗಿದ್ದ ಕಲ್ಪನಾ ಅವರು ಡಾ. ರಾಜ್ ಕುಮಾರ್ ಅವರಿಗೆ ಅವಮಾನ ಮಾಡಿದ್ದಾರೆ ಎಂಬುದು ತುಂಬಾ ಅಚ್ಚರಿಯ ವಿಷಯ ಆದರೆ ಕೆಲವೊಂದು ಮೂಲಗಳ ಪ್ರಕಾರ ಅಣ್ಣಾವ್ರು ಮತ್ತು ನಟಿ ಕಲ್ಪನಾ ಅವರು ಜೊತೆಯಾಗಿ ಅಭಿಯಿಸುತ್ತಿದ್ದ ಒಂದು ಚಿತ್ರದ ಶೋಟಿಂಗ್ ಸಮಯದಲ್ಲಿ ಕಲ್ಪನಾ ಅವರು ಚಿತ್ರಿಕಾರಣಕ್ಕೆ ತಡವಾಗಿ ಬರುತ್ತಾರೆ, ಆಗ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ನಟಿ ಕಲ್ಪನಾ ಅವರಿಗೆ ಬೈಯಲು ಶುರು ಮಾಡುತ್ತಾರೆ ಆಗ ಕಲ್ಪನಾ ಅವರಿಗೆ ಕೋಪ ಬಂದು ನನ್ನಂತ ದೊಡ್ಡ ಸ್ಟಾರ್ ನಟಿ ಬೇಕೆಂದರೆ ನೀವೆಲ್ಲರೂ ಕಾಯಲೇ ಬೇಕು ಎಂದು ಚಿತ್ರತಂಡಕ್ಕೆ ಹೇಳುತ್ತಾರೆ ಈ ವಿಷಯ ದೊಡ್ಡ ಸುದ್ದಿಯಾಗುತ್ತದೆ.

ಮಿನುಗು ತಾರೆ ಕಲ್ಪನಾ ಅವರು ಮಾತಾಡಿದ್ದು ನಿರ್ದೇಶಕ ಹಾಗೂ ನಿರ್ಮಾಪಕ ಬಗ್ಗೆ, ಆದರೆ ಅಲ್ಲಿದ್ದ ಕೆಲವೊಂದು ಜನರು ಈ ಸುದ್ದಿಯನ್ನು ಬೇರೆ ರೀತಿಯಲ್ಲೇ ಚಿತ್ರರಂಗದ ತುಂಬಾ ಹರಿದುಬಿಡುತ್ತಾರೆ. ಅದು ಯಾವ ರೀತಿಯಲ್ಲಿ ಎಂದರೆ ಸ್ಟಾರ್ ನಟಿ ಎಂದ ಮೇಲೆ ಯಾವ ನಟರಾದರು ಕಾಯಲೇ ಬೇಕು ಎಂದು ಹೇಳಿದರು ಎಂಬ ಸುದ್ದಿನ್ನು ಹರಿದು ಬಿಡುತ್ತಾರೆ.

ಈ ಸುದ್ದಿ ಇಡೀ ಚಿತ್ರರಂಗ, ಅಭಿಮಾನಿಗಳ ಬಳಿ ಕಡಗಿಚ್ಚಿನಂತೆ ಹರಾಡಲು ಶುರುವಾಯಿತೊ ಅವತ್ತಿಂದ ನಟಿ ಕಲ್ಪನಾ ಅವರನ್ನು ನಿರ್ಮಾಪಕರು ಹಾಗೂ ನಿರ್ದೇಶಕರು ಕಲ್ಪನಾ ಅವರನ್ನು ಸಿನೆಮಾಗಳಿಗೆ ನಾಯಕಿಯಗಿ ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಏಕೆಂದರೆ ಡಾ. ರಾಜ್ ಕುಮಾರ್ ಅವರಿಗೆ ಅವಮಾನವಾಗಿದೆ ಎಂದರೆ ಆ ಸಿನೆಮಾವನ್ನು ಜನರು ನೋಡುವುದಿಲ್ಲ ಆದ್ದರಿಂದ ನಮಗೆ ನಷ್ಟವಾಗುತ್ತದೆ ಎಂದು ಕಲ್ಪನಾ ಅವರನ್ನು ಸಿನೆಮಾಗಳಿಗೆ ಹಾಕಿಕೊಳ್ಳುದನ್ನು ನಿಲ್ಲಿಸುತ್ತಾರೆ.

ನೀವೇ ಹೇಳಿ ನಟಿ ಕಲ್ಪನಾ ಅವರದ್ದು ತಪ್ಪಾ ಅಥವಾ ಚಿತ್ರತಂಡದವರ ತಪ್ಪಾ.? ಎಂಬುದನ್ನು ನಿಮ್ಮ ತಪ್ಪದೇ ಕಾಮೆಂಟ್ ಮೂಲಕ ನಮಗೆ ತಿಳಿಸಿ.


Leave a Reply

Your email address will not be published. Required fields are marked *