ಅಣ್ಣಾವ್ರು ಮಕ್ಕಳ ದೇವರ ಭಕ್ತಿ ಕಂಡು ಭಗವಂತನೇ ಫಿದಾ!! ಅಬ್ಬಬ್ಬಾ ಅಪ್ಪು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೇಗೆ ತಯಾರಿ ನಡೆಸುತ್ತಿದ್ದರು ನೋಡಿ!!

ಸುದ್ದಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ದೇವರೆಂದ ವರ ನಟ ಡಾ. ರಾಜಕುಮಾರ್ ಅವರು ತಮ್ಮ ಅಭಿನಯದ ಮೂಲಕವೇ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ದಾಖಲೆಯನ್ನು ನಿರ್ಮಿಸಿ ಕನ್ನಡ ಸಿನಿಮಾ ರಂಗವನ್ನು ಬೇರೊಂದು ಲೋಕಕ್ಕೆ ತೆಗೆದುಕೊಂಡು ಹೋದವರು ನಮ್ಮ ಅಣ್ಣಾವ್ರು. ನಮ್ಮ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಕೊಡುಗೆ ಅಪಾರ ಅದನ್ನು ವರ್ಣಿಸಲು ಪದಗಳೇ ಸಾಲಲ್ಲ.
ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ದಂಪತಿಗಳು ತಮ್ಮ ಅಭೂತಪೂರ್ವ ಚಿತ್ರಗಳೊಂದಿಗೆ ಸಿನಿಮಾಗಳೊಂದಿಗೆ ಮೂರು ಮುತ್ತುಗಳಂತಹ ರಾಘಣ್ಣ, ಶಿವಣ್ಣ, ಹಾಗೂ ಅಪ್ಪು ಎಂಬ ಈ ಮೂರು ಮಹಾನ್ ಪ್ರತಿಭೆಯನ್ನು ನಮ್ಮ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅದರಂತೆ ಈ ಮೂರು ನಟರು ಕೂಡ ತಮ್ಮದೇ ಆದ ವಿಶಿಷ್ಟ ಸಿನಿ ಜರ್ನಿಯಲ್ಲಿ ಅಭಿನಯಿಸಿ ಕೋಟ್ಯಂತರ ಅಭಿಮಾನಿಗಳ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಅಣ್ಣಾವ್ರು ಈ ಮುತ್ತುಗಳು ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೋಗುವಾಗ ಹೇಗೆಲ್ಲ ಸಿದ್ಧತೆ ನಡೆಸಿದ್ದರು ಎಂಬ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೀವು ಕೂಡ ಅಣ್ಣಾವ್ರು ಕುಟುಂಬ ದೇವರ ಮೇಲೆ ಇಟ್ಟಿರುವ ಭಕ್ತಿ ಎಂಥದ್ದು ಎಂಬುದನ್ನು ನೋಡಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಅಣ್ಣಾವ್ರು ಕೇವಲ ಅವರು ತಮ್ಮ ನಟನೆಯ ಮೂಲಕ ಮೇರುನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿಲ್ಲ, ಬದಲಿಗೆ ತಮ್ಮ ನಡವಳಿಕೆಯ ಮೂಲಕ ಬಂಗಾರದ ಮನುಷ್ಯ ಎನಿಸಿಕೊಂಡರು. ಡಾ. ರಾಜಕುಮಾರ್ ಅವರ ಸರಳತೆ ಅವರ ಸಜ್ಜನಿಕೆಗೆ ಕನ್ನಡಿಗರಿಗೆ ಸ್ಫೂರ್ತಿದಾಯಕವಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ಡಾ. ರಾಜಕುಮಾರ್ ಅವರು ಅಭಿಮಾನಿಗಳನ್ನು ದೇವರೆಂದು ಕರೆದು ದೇವತಾ ಮನುಷ್ಯರಾದರೆ, ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜಕುಮಾರ್ ಇವರನ್ನು ಅಭಿಮಾನಿಗಳೇ ದೇವರಂತೆ ಪೂಜಿಸುತ್ತಿರುವ ಹಲವಾರು ಉದಾಹರಣೆ ನೀವು ಕಣ್ಣಾರೆ ನೋಡಬಹುದು.

ಇನ್ನು ಸರಳತೆಗೆ ಇನ್ನೊಂದು ಹೆಸರೇ ನಮ್ಮ ಶಿವಣ್ಣ ಎಂದು ಹೇಳಿಕೊಂಡು ಜನರಿಗಾಗಿ ಹೋರಾಡುವ ಅದೆಷ್ಟೋ ಅವರ ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳನ್ನು ಪ್ರತಿಯೊಬ್ಬರನ್ನು ಪ್ರೀತಿಯಿಂದ ಸಹನೆಯಿಂದ ಮಾತನಾಡಿಸುವ ಗುಣ ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರದ್ದು. ನಮ್ಮ ಶಿವಣ್ಣ ಎಲ್ಲಿಗಾದರೂ ಪಯಣ ಮಾಡಬೇಕಾದ್ರೆ ರಸ್ತೆಯ ಅಕ್ಕ ಪಕ್ಕದಲ್ಲಿ ಸಣ್ಣ ಪುಟ್ಟ ಅಂಗಡಿಯಲ್ಲಿ ಟೀ ಕುಡಿಯುತ್ತಿರುವುದನ್ನು ಕಂಡು ಅವರ ಅಭಿಮಾನಿಗಳು ಅವರನ್ನು ನೋಡಿ ಮನಸೋತು ಹೋಗಿದ್ದಾರೆ. ಅಷ್ಟರ ಮಟ್ಟಿಗೆ ಸಿಂಪ್ಲಿಸಿಟಿಯನ್ನು ಹೊಂದಿದವರು ನಮ್ಮ ಶಿವಣ್ಣ, ರಾಜ್ ಕುಟುಂಬದವರು ಅಪ್ಪಟ ಅಯ್ಯಪ್ಪ ಸ್ವಾಮಿಯ ಭಕ್ತರೆಂದರೆ ತಪ್ಪಾಗಲಾರದು.

ಅದೊಂದು ಕಾಲದಲ್ಲಿ ರಾಜಕುಮಾರ್, ಅಮಿತಾಬಚ್ಚನ್, ರಜನಿಕಾಂತ್, ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರ ಬಳಗವೆ ಅಯ್ಯಪ್ಪ ಸ್ವಾಮಿ ಶಬರಿಮಲೆಗೆ ತೆರಳುತ್ತಿದ್ದರು. ಇನ್ನು ತಮ್ಮ ತಂದೆಯೊಂದಿಗೆ ನಮ್ಮ ಪ್ರೀತಿಯ ಪುನೀತ್ ರಾಜ್ ಕುಮಾರ್ ಕೂಡ ಅಯ್ಯಪ್ಪ ಸ್ವಾಮಿಗೆ ಅವರು ಭಕ್ತರಾಗಿದ್ದಾರೆ ಕಾರಣ ಪ್ರತಿವರ್ಷವೂ ತನ್ನ ಅಣ್ಣಂದಿರೊಂದಿಗೆ ಶಬರಿಮಲೆಗೆ ತಪ್ಪದೆ ತೆರಳುತ್ತಿದ್ದರು.
ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ನೀವು ಕೂಡ ಅಣ್ಣಾವ್ರು ಮನೆಯ ಭಕ್ತಿ ಹೇಗಿದೆ ಎಂಬುದನ್ನು ನೋಡಬಹುದಾಗಿದೆ. ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *