ಅಣ್ಣಾವ್ರ ಅವರ ಜೊತೆ ಕ್ರೀಜಿಸ್ಟಾರ್ ರವಿಚಂದ್ರನ್ ನಟಿಸಲಿಲ್ಲ ಯಾಕೆ ಗೊತ್ತಾ.? ಅಸಲಿ ವಿಷಯ ಗೊತ್ತಾದ್ರೆ ನಿಜಕ್ಕೂ ಕಣ್ಣೀರು ಹಾಕ್ತಿರಾ.! ನೋಡಿ

ಸುದ್ದಿ

ಸ್ಯಾಂಡಲ್ವುಡ್ ನ ಅದ್ದೂರಿ ನಿರ್ಮಾಪಕ, ನಿರ್ದೇಶಕ, ನಟ ಅಂದರೆ ಒನ್ ಅಂಡ್ ಓನ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾತ್ರ ರವಿಚಂದ್ರನ್ ಅವರು ಕಂಡ ಕನಸನ್ನು ನನಸು ಮಾಡಿಕೊಳ್ಳದೆ ಹಾಗೆ ಇದ್ದವರಲ್ಲ, ಹೀಗಿರುವ ರವಿಚಂದ್ರನ್ ಅವರು ಕೂಡ ಒಂದೇ ಒಂದು ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದೆ ಇಂದಿಗೂ ಮನಸ್ಸಿನಲ್ಲಿ ಕೊರಗುತ್ತಿದ್ದಾರೆ ಎಂದರು ತಪ್ಪಾಗಲ್ಲ. ನಟ ರವಿಚಂದ್ರನ್ ಅವರ ಮನಸ್ಸಲ್ಲಿ ಕಾಡುತ್ತಿರುವ ಆ ದೊಡ್ಡ ಕೊರಗು ಏನಪ್ಪಾ ಅಂದರೆ ಡಾ. ರಾಜ್ ಕುಮಾರ್ ಅವರ ಜೊತೆ ನಟನೆ ಮಾಡದಿರುವ ನೋವು ಇಂದಿಗೂ ಅವರನ್ನ ಕಾಡುತ್ತಿದೆ.

ಅಣ್ಣಾವ್ರ ಜೊತೆ ನಟಿಸಬೇಕು ಎಂದು ಪ್ರತಿಯೊಬ್ಬ ನಟ ನಟಿಯರಿಗೂ ಆಸೆ ಇದ್ದೆ ಇರುತ್ತದೆ. ಏಕೆಂದರೆ ಆ ಮಹಾನ್ ವ್ಯಕ್ತಿತ್ವ ಅಣ್ಣಾವ್ರದಾಗಿತ್ತು. ಹಾಗೆ ನೋಡಿದರೆ ರವಿಚಂದ್ರನ್ ಅವರು ಬೇರೆ ಎಲ್ಲಾ ಕಲಾವಿದರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ವಿಷ್ಣುವರ್ಧನ್ ಅವರ ಜೊತೆ ಪ್ರೇಮಲೋಕ ಸಿನೆಮಾದಿಂದ ಹಿಡಿದು ಸಾಹುಕಾರ ಸಿನೆಮಾದವರೆಗೂ ಹಲವಾರು ಸಿನೆಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಅದೇ ರೀತಿ ರೆಬಲ್ ಸ್ಟಾರ್ ಅಂಬರೀಶ್, ಶಂಕರ್ ನಾಗ್, ಶ್ರೀನಾಥ್, ಅನಂತ್ ನಾಗ್ ಹೀಗೆ ಎಲ್ಲರ ಜೊತೆಯೂ ತೆರೆಯನ್ನು ಹಂಚಿಕೊಂಡಿದ್ದರು ನಟ ರವಿಚಂದ್ರನ್. ಹೀಗೆ ಎಲ್ಲಾ ಸ್ಟಾರ್ ಕಲಾವಿದರ ಜೊತೆ ಅಭಿನಯಿಸಿದ್ದರು ರಾಜ್ ಕುಮಾರ್ ಅವರ ಜೊತೆ ಅಭಿಯಿಸುವ ಅದೃಷ್ಟ ಮಾತ್ರ ಅವರಿಗೆ ಒದಗಿ ಬರಲಿಲ್ಲ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಿನೆಮಾಕ್ಷೇತ್ರದಲ್ಲಿ ಗುರುತಿಸಿಕೊಂಡ ನಂತರ ರವಿಚಂದ್ರನ್ ಅವರು ರಾಜ್ ಕುಮಾರ್ ಜೊತೆ ತೆರೆಯನ್ನು ಹಂಚಿಕೊಳ್ಳಲಿಲ್ಲ ಎಂಬುವುದೇ ನಮ್ಮೆಲ್ಲರ ಬೇಸದರ ಸಂಗತಿ.

ಈಶ್ವರಿ ಪ್ರೊಡಕ್ಷನ್ ಸಂಸ್ಥೆಯಲ್ಲಿ ಡಾ. ರಾಜ್ ಕುಮಾರ್ ಅವರು ಹಲವರು ಸಿನೆಮಾ ಮಾಡಿದ್ದು ಇದಕ್ಕೆ ಉತ್ತಮ ಉದಾಹರಣೆ ಎಂದರೆ ನಾ ನಿನ್ನ ಮರೆಯಲಾರೆ ಚಿತ್ರ. ರವಿಚಂದ್ರನ್ ಅವರು ನಿರ್ದೇಶನ ಮಾಡಿದ ಸಿನೆಮಾವನ್ನು ರಾಜ್ ಕುಮಾರ್ ಅವರು ಇಷ್ಟಪಟ್ಟಿದ್ದು ಇದೆ ಹಾಗೂ ಅವರ ಬೆನ್ನು ತಟ್ಟಿದ್ದು ಉಂಟು ಆದರೆ ಇವರಿಬ್ಬರೂ ಒಟ್ಟಿಗೆ ನಟಿಸಲು ಅವಕಾಶ ಮಾತ್ರ ಒದಗಿ ಬಂದಿರಲಿಲ್ಲ.

ಕ್ರೀಜಿ ಸ್ಟಾರ್ ರವಿಚಂದ್ರನ್ ಅವರು ಸಿನೆಮಾ ರಂಗಕ್ಕೆ ಬಂದಾಗ ರಾಜ್ ಕುಮಾರ್ ಅವರು ಯಶಸ್ಸಿನ ಉತ್ತುಂಗದಲ್ಲಿ ಇದ್ದರು ಹಾಗೂ ರವಿಚಂದ್ರನ್ ಅವರು ಸೂಕ್ತವಾದ ಕಥೆಯನ್ನು ಡಾ. ರಾಜ್ ಕುಮಾರ್ ಅವರಿಗೆ ಹುಡುಕುವಲ್ಲಿ ಎಡವಿದ್ದರು, ಇದರ ಜೊತೆಗೆ ಆ ಸಮಯದಲ್ಲಿ ರವಿಚಂದ್ರನ್ ಅವರು ಪ್ರೇಮಲೋಕ, ರಣಧೀರ, ಹಳ್ಳಿ ಮೇಷ್ಟ್ರು, ನಂತಹ ಸೂಪರ್ ಹಿಟ್ ಸಿನೆಮಾಗಳನ್ನು ಮಾಡುತ್ತಿದ್ದರಿಂದ ಹಾಗೂ ಅಲ್ಲಿ ರಾಜ್ ಕುಮಾರ್ ಅವರಿಗೆ ಸರಿಹೊಂದುವ ಪಾತ್ರ ಇಲ್ಲದೆ ಇದ್ದ ಕಾರಣ ಇವರಿಬ್ಬರನ್ನು ದೊಡ್ಡ ಪರದೆಯ ಮೇಲೆ ಸಿನೆಮಾರಸಿಕರಿಗೆ ಒಟ್ಟಿಗೆ ನೋಡಲು ಸಾಧ್ಯವಾಗಲೇ ಇಲ್ಲ ನಿಜಕ್ಕೂ ಇದು ಬೇಸರದ ಸಂಗತಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *