ಕರ್ನಾಟಕದ ನೆಚ್ಚಿನ ಮಗನಾದ ನಮ್ಮ ಪ್ರೀತಿಯ ಅಪ್ಪು, ಪುನೀತ್ ರಾಜ್ಕುಮಾರ್ ಅವರು ನಮ್ಮನೆಲ್ಲ ಬಿಟ್ಟು ಅವರು ಬರೇ ನೆನಪಾಗಿ ಹಾಗೂ ಅವರ ಮಾಡಿದ ಒಳ್ಳೆಯ ವಿಚಾರ ಮಾತ್ರ ಉಳಿದಿದೆ. ದೈಹಿಕವಾಗಿ ಮಾತ್ರ ಪುನೀತ್ ನಮ್ಮ ಜೊತೆ ಇಲ್ಲ ಎನ್ನುವುದು ಅಭಿಮಾನಿಗಳಿಗೆ ಬಿಟ್ಟರೆ ಪ್ರತಿದಿನ ಅವರನ್ನು ದೇವರಂತೆ ಅವರ ಇಷ್ಟ ಪಡುವ ಅಭಿಮಾನಿಗಳು ಪೂಜಿಸುತ್ತಾರೆ. ಎಲ್ಲಿ ನೋಡಿದರು ಪುನೀತ್ ಅವರ ಅಗಲಿಕೆ ಈಗಲೂ ಕೂಡ ಮರೆಯಲಾಗುತ್ತಿಲ್ಲ.
ಪುನೀತ್ ನಮ್ಮನೆಲ್ಲ ಬಿಟ್ಟು ಕೆಲವು ತಿಂಗಳು ಗಳು ಕಳೆದು ಹೋಯಿತು ಏನು ಮಾಡೋದು ಹೇಳಿ ಹುಟ್ಟಿದ ಮಸೂಷ್ಯ ಒಂದಲ್ಲ ಒಂದಿನ ಹೋಗಲೇ ಬೇಕು ಆದ್ರೆ ಇದ್ರೆ ಅಪ್ಪು ಅಂತೆ ಬಾಳಬೇಕು ಅವಾಗ ದೇವರು ನಮಗೆ ಸರ್ಗದ ಬಾಗಿಲು ತೆಗೆಯುತ್ತಾನೆ. ಸಾಕಷ್ಟು ಜನರಿಗೆ ದೇವರಂತೆ ಇದ್ದ ಅಪ್ಪು ಅವರನ್ನು ನಮ್ಮಿಂದ ದೂರ ಮಾಡಿಬಿಟ್ಟ ಆ ದೇವರು ಎಂದು ಕುಟುಂಬದವರು ಮತ್ತು ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಾಘಣ್ಣ ಅವರು ಒಂದು ಸಂದರ್ಶನದ ವೇಳೆಯಲ್ಲಿ ನಮ್ಮ ಮನೆ ಒಂದೇ ಇತ್ತು ಎರಡು ಮನೆ ಮಾಡಿದ್ದು ಯಾಕೆ ಗೊತ್ತಾ.? ಎಂದು ಹೇಳಿದ್ದಾರೆ ಯಾಕೆ ಗೊತ್ತಾ ನೋಡೋಣ ಬನ್ನಿ.
ನಿಜ ಪುನೀತ್ ರಾಜಕುಮಾರ್ ಅವರ ಬಗ್ಗೆ ರಾಘಣ್ಣ ಅವರು ಸಾಕಷ್ಟು ಸಂದರ್ಶನದಲ್ಲಿ ಹೇಳಿದ್ದಾರೆ ಕೆಲವು ವಿಷಯಗಳು ಸಹಾ ಹೇಳಿದ್ದಾರೆ. ಈ ಮುಂಚೆ ನಮ್ಮ ದೊಡ್ಡಮನೆ ಒಂದೇ ಇತ್ತು ಆದರೆ ಬೇರೆ ಬೇರೆ ಅಂದ್ರೆ ಎರಡು ಮನೆ ಮಾಡಿದ್ದು ನಮ್ಮ ಅಮ್ಮನವರು. ನಾನು ಹೋದಮೇಲೆ ಬೇರೆ ಬೇರೆ ಆದರೂ ಎಂದು ಜನ ಅಂತಾರೆ ಹಾಗಾಗಿ ಈಗಲೇ ಎರಡು ಮನೆ ಮಾಡಿಕೊಳ್ಳಿ ಎಂದು ಅಮ್ಮ ಹೇಳಿ ಮಾಡಿಸಿದ್ದಾರು. ಹಾಗೆ ನಿನ್ನ ಎಡ ಬದಿ ನನ್ನ ಕೊನೆ ಕಂದನ ಹಾಕುವೆ, ನಿನ್ನ ತಮ್ಮನನ್ನು ಚನ್ನಾಗಿ ನೋಡಿಕೋ ಎಂದು ನನ್ನ ಕೈಗೆ ಕೊಟ್ಟಿದ್ದರು.
ಆದರೆ ನನ್ನ ಕೈಯಲ್ಲಿ ಅದನ್ನು ಉಳಿಸಿಕೊಳ್ಳಲು ಆಗಲಿಲ್ಲ ಅದಕ್ಕೆ ಅಪ್ಪುನ ಅವರ ಪಕ್ಕದಲ್ಲಿಯೇ ಮಲಗಿಸಿ ಬಿಟ್ಟೆ ಇದು ನನಗೆ ತುಂಬಾ ಕಾಡುತ್ತದೆ ಎಂದರು. ನನ್ನ ತಮ್ಮ ಅಂದು ಬಂದು ಗಂಧದ ಗುಡಿ ಟೀಸರ್ ತೋರಿಸಿ ಹೇಗಿದೆ ರಾಘಣ್ಣ ಎಂದು ಕೇಳಿದ್ದಾರಂತೆ. ಆಗ ರಾಘಣ್ಣ ಅವರು ನಮ್ಮ ತಂದೆ ಒಂದು ಮಾತು ಹೇಳಿದ್ದರು ಹಾಗೆ ಗಂಧದಗುಡಿ ಬಗ್ಗೆ ಮಾತನಾಡಿ ಎಲ್ಲ ಕಾಡಿನ ಜೀವಿಗಳು ಮನುಷ್ಯ ನಿಗೆ ಕೇಳಿದ್ದವಂತೆ.
ಈ ಭೂಮಿ ನಿನ್ನ ಒಬ್ಬನಾದಲ್ಲ, ಎಲ್ಲರಿಗೂ ಸೇರಿದ್ದು, ಇದನ್ನು ನಾಶ ಮಾಡಬೇಡಿ ಎಂದು ಹೇಳಿದವಂತೆ ಹಾಗೆ ಮಾತನಾಡುತ್ತ. ಗಂಧದಗುಡಿ ಚಿತ್ರದ ಬಗ್ಗೆ ಮಾತನಾಡಿ ರಾಘಣ್ಣ ಅಪ್ಪು ಬಗ್ಗೆ ಹೇಳಿ ಅಪ್ಪು ಈ ಚಿತ್ರದ ಬಗ್ಗೆ ಅವನು ಹಣದ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಕೇವಲ ಪ್ರಾಣಿಗಳಿಗಾಗಿ ಹಾಗೂ ಅರಣ್ಯದ ವಿಚಾರವಾಗಿ ಮಾಡಿದ್ದ.
ದೇವರಿಗೆ ಯಾಕೆ ಅಷ್ಟು ಕೋಪ ಗೊತ್ತಿಲ್ಲ ನೀನು ಎಲ್ಲವನ್ನು ಮಾಡಿದೆ ಇನ್ನು ನನ್ನ ಬಾಲಿ ಬಂದು ಬಿಡು ಸಾಕು ಎಂದು ಆ ದೇವರು ಕರೆದುಕೊಂಡು ಅವನನ್ನ ಅವನ ಬಳಿ ಕರೆದುಕೊಂಡು ಬಿಟ್ಟ ಎಂದು ಮಾತನಾಡಿ ರಾಘಣ್ಣ ಭಾವುಕರಾದರು.
ಪುನೀತ್ ರಾಜಕುಮಾರ್ ಅವರು ಅರಣ್ಯದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದರು ಹಾಗೆ ತಾವು ಜನಿಸಿದ ಊರಾದ ಚಾಮರಾಜನಗರ ಅರಣ್ಯ ವಲಯದ ಬ್ರಾಂಡ್ ಅಂಬಾಸಿಡರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಅಭಿಮಾನಿಗಳಲ್ಲಿ ಅರಣ್ಯದ ಬಗ್ಗೆ ವನ್ಯಜೀವಿಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸಿ ವನ್ಯಜೀವಿ ರಕ್ಷಣೆ ಬಗ್ಗೆ ಮತ್ತು ಅರಣ್ಯ ಸಂರಕ್ಷಣೆ ಬಗ್ಗೆ ಒಲವು ಬರುವಂತೆ ಪ್ರೇರಣೆ ನೀಡಿದ್ದರಂತೆ.
ಹೀಗೆ ವನ್ಯಜೀವಿ ಮತ್ತು ಅರಣ್ಯದ ಸಂರಕ್ಷಣೆ ಮೇಲೆ ಆಸಕ್ತಿ ಹೊಂದಿದ್ದ ಪುನೀತ್ ರಾಜಕುಮಾರ್ ಅವರಿಗಾಗಿ ಅಭಿಮಾನಿಗಳು ಪುನೀತ್ ಅವರ ನೆನಪಿನಲ್ಲಿ “500 ಸಸಿಗಳನ್ನು” ನೆಟ್ಟು ಅವರಿಗೆ “ಗೌರವ ಸಮರ್ಪಣೆ” ನೀಡಿದ್ದಾರೆ ಮತ್ತು ಬೇರೆ ಬೇರೆ ಊರುಗಳಲ್ಲಿ ಅವರ ಅಭಿಮಾನಿಗಳು ಈ ತರಹದ ಬೇರೆ ಬೇರೆ ಕಾರ್ಯಕ್ರಮ ಗಳನ್ನು ಮಾಡುತ್ತಿದ್ದಾರೆ. ಏನೇ ಆಗಲಿ ಪುನೀತ್ ರಾಜಕುಮಾರ್ ಬಗ್ಗೆ ಅವರ ಮೇಲೆ ಕರ್ನಾಟಕದ ಜನತೆ ಹಾಗೂ ಅಭಿಮಾನ ದೊಡ್ಡದು ಪುನೀತ್ ರಾಜಕುಮಾರ್ ಅವರು ಇದ್ದರು ಇಂತಹ ಕಾರ್ಯಗಳನ್ನು ಮಾಡುತಿದ್ದರು.
ಈಗ ಆ ಜವಾಬ್ದಾರಿಯನ್ನು ಅಪ್ಪು ಕುಟುಂಬದವರು ಹಾಗೂ ಅಭಿಮಾನಿಗಳು ಹೊತ್ತು ಸಾಗುತ್ತಿದ್ದಾರೆ. ಇದೇ ರೀತಿಯ ಅನೇಕ ಸಾಮಾಜದಲ್ಲಿ ಒಳಿತಾಗುವ ಕಾರ್ಯಗಳು ನಡೆಯುತ್ತಿದೆ ಇದು ಹೀಗೆ ಮುಂದುವರಿಯಲಿ ಎಂದು ನಾವೆಲ್ಲರೂ ಪರ್ಥಿಸೋಣ. ಈ ಮಾಹಿತಿಯನ್ನು ತಪ್ಪದೆ ಓದಿ ಶೇರ್ ಮಾಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು