ಅಣ್ಣಾವ್ರ ಹುಟ್ಟು ಹಬ್ಬದ ದಿನದಂದು ವಿಶೇಷವಾದ ಕೆಲಸವನ್ನು ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅದೇನು ನೋಡಿ..!?

ಸುದ್ದಿ

ಪ್ರೀತಿಯ ಓದುಗರೇ ಮೊನ್ನೆ ನಮ್ಮ ಡಾ. ರಾಜಕುಮಾರ್ ಅಣ್ಣಾವ್ರು ಹುಟ್ಟುಹಬ್ಬದ ಪುಣ್ಯ ದಿನ! ಅವರ ಹುಟ್ಟುಹಬ್ಬದ ದಂದು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಣ್ಣಾವ್ರ ಹೆಡ್ ಫೋನ್ ಹಾಕಿಕೊಂಡು, ಅಣ್ಣಾವ್ರು ಒಂದು ಸುಂದರ ಹಾಡನ್ನು ಹಾಡಿ ಅದನ್ನು ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳು ತಿದ್ದರು.

ಆದರೆ ಈ ವರ್ಷ ನಮ್ಮ ಪುನೀತ್ ರಾಜಕುಮಾರ್ ನಮ್ಮ ಜೊತಗೆ ಇಲ್ಲ ಅಪ್ಪು ನಮ್ಮನ್ನು ಆಗಲಿ ಸುಮಾರು 6 ತಿಂಗಳೇ ಕಳೆಯುತ್ತಿದೆ. ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವತ್ತು ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಣ್ಣಾವ್ರ ಹುಟ್ಟುಹಬ್ಬದ ದಿನದಂದು ಒಂದು ಅದ್ಭುತ ಹಾಗೂ ವಿಶೇಷವಾದ ಕೆಲಸ ಮಾಡಿದ್ದಾರೆ.

ನಿಜ! ಅಶ್ವಿನಿ ಅವರಿಗೆ ಅಣ್ಣಾವ್ರು ಅಂದ್ರೆ ಮಾವ ಅಂದ್ರೆ ತುಂಬಾ ಗೌರವ ಹಾಗೂ ಪ್ರೀತಿ. ಅವರು ಇದ್ದಾಗ ಕೂಡ ಅಣ್ಣಾವ್ರುನ್ನು ಬಹಳ ಚನ್ನಾಗಿ ನೋಡಿಕೊಂಡಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಇವತ್ತು ಮಾವನವರ ಸ್ಮಾರಕ ಕಕ್ಕೆ ಭೇಟಿ ಕೊಟ್ಟು, ಅಲ್ಲಿ ಪೂಜೆ ಸಲ್ಲಿಸಿ ನಂತರ ಪ್ರೀತಿಯ ಪತಿ ಅಪ್ಪು ಸ್ಮರಕಕ್ಕೆ ಕೂಡ ಪೂಜೆ ಸಲ್ಲಿಸಿದರು.ನಂತರ ಅಶ್ವಿನಿ ಮಾಡಿದ್ದೇನು ಗೊತ್ತು.?

ನಂತರ ಅಶ್ವಿನಿ ಅವರು ರಾಮನಗರದ ಹತ್ತಿರ ಇರುವ ಒಂದು ಅನಾಥಶ್ರಮಕ್ಕೆ ಭೇಟಿ ಕೊಟ್ಟಿದ್ದು, ಅಣ್ಣಾವ್ರು ಹಾಗೂ ಅಪ್ಪು ಅವರ ಹೆಸರಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅನಾಥರಿಗೆ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಬೆಳೆ, ಹಾಗೂ ಊಟಕ್ಕೆ ಬೇಕಾಗುವ ಪದಾರ್ಥ ಗಳು ಹಾಗೂ ಹೊಸ ಬಟ್ಟೆಗಳು ಹಾಗೂ ಹಬ್ಬದ ಅಡುಗೆಯನ್ನು ಮಾಡಿಸಿ ಅವರಿಗೆಲ್ಲ ಊಟವನ್ನು ಹಾಕಿಸಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು.

ಇದರ ಜೊತೆಗೆ ಅಪ್ಪು ಅವರು ಯಾವಾಗಲೂ ಹಾಡುತ್ತಿದ್ದ ಅಣ್ಣಾವ್ರು ಹಾಡನ್ನು ಪಿ ಆರ್ ಕೆ ಸಂಸ್ಥೆಯ ಯೌಟ್ಯೂಬ್ ಚಾನಲ್ ನಲ್ಲಿ ಅಶ್ವಿನಿ ಅವರು ಬಿಡುಗಡೆ ಮಾಡಿದ್ದು. ಆ ಹಾಡನ್ನು ಅಶ್ವಿನಿ ಅವರು ಅಪ್ಪು ಹಾಗೂ ಅಣ್ಣಾವ್ರು ರಿಗೆ ಅರ್ಪಣೆ ಮಾಡಿದರು. ಅಶ್ವಿನಿ ಪುನೀತ್ ರಾಜಕುಮಾರ್ ಮಾಡಿರುವ ಈ ಒಳ್ಳೆಯ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆಗಳು ಕೇಳುಬರುತ್ತಿದ್ದು ಕರ್ನಾಟಕ ಜನರು ಅವರನ್ನು ದೊಡ್ಮನೆ ತಕ್ಕ ಸೊಸೆ ಅಂತ ಹೊಗಳಿದ್ದಾರೆ. ಈ ವಿಷಯ ಅವರ ಆಪ್ತ ವಲಯದಿಂದ ನಮಗೆ ತಿಳಿದು ಬಂತು.

ಸಾಧ್ಯ ಅಶ್ವಿನಿ ಅವರು ಪಿ. ಆರ್. ಕೆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಅಪ್ಪು ಆಸೆ ಅಂತೆಯೇ ಹೊಸಬರಿಗೆ ಅಶ್ವಿನಿ ಅವರು ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಾಲ್ಕು ಹೊಸ ಸಿನಿಮಾದ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದ್ದು, ಈ ಚಿತ್ರಗಳ ಶೋಟಿಂಗ್ ನಡೆಯುತ್ತಿದೆ.

ಇದರ ಜೊತೆಗೆ ಅಶ್ವಿನಿ ಅವರು ತಿಂಗಳಿಗೆ ಒಮ್ಮೆಯಾದರೂ ಪುನೀತ್ ರಾಜಕುಮಾರ್ ಅವರ ಇಷ್ಟವಾದ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ಕೊಟ್ಟು, ಅಲ್ಲಿರುವ ವಿದ್ಯಾರ್ಥಿಗಳ ಜೊತೆ ಅಶ್ವಿನಿ ಅವರು ಕಾಲ ಕಳೆಯುತ್ತಾರೆ. ಅಶ್ವಿನಿ ಅವರು ಮುಂಚೆ ಯಿಂದ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಿಂದ ಸ್ವಲ್ಪ ದೂರವೇ ಇರುತಿದ್ದರು. ಅದೇ ರೀತಿ ಅಪ್ಪು ಅವರ ಅಗಲಿಕೆಯ ನಂತರ ಕೂಡ ಅಶ್ವಿನಿ ಅವರು ಯಲ್ಲಾ ತರಹದ ಮೀಡಿಯಾ ಗಳಿಂದ ದೂರ ಉಳಿದಿದ್ದರೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಈ ಒಳ್ಳೆ ಕೆಲಸಕ್ಕೆ ನಮ್ಮ ಕೋಟಿ ನಮನಗಳು. ಇದೇ ತರ ನಿಮ್ಮ ಕೆಲಸಗಳು ಮುಂದುವರಿಯಲಿ ಆ ದೇವರು ನಿಮಗೆ ಆಯುಷ್ಯ, ಆರೋಗ್ಯ್, ಸಕಲ ಸಂಪತ್ತು ಕೊಟ್ಟು ಕಾಪಾಡಲಿ ಎಂದು ದೇವರಲ್ಲ ಬೇಡಿಕೊಳ್ಳುತ್ತೇವೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *