ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಯಿಸ್ ಅವರ ಮುದ್ದಿನ ಮಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಮೇಘನಾ ರಾಜ್ ಅವರ ಸಿನಿ ಪಯಣ ಶುರುವಾಗಿದ್ದು ಮಲಯಾಳಂ ಚಿತ್ರದ ಮೂಲಕ ನಂತರ ಕನ್ನಡದಲ್ಲಿ ಯಶ್ ಅವರ ಜೊತೆ ರಾಜಾಹುಲಿ ಚಿತ್ರದಲ್ಲಿ ನಟಿಸಿ ಬಹುಬೇಡಿಕೆಯ ನಟಿ ಯಾಗಿ ಹೊರಹೋಮ್ಮಿದರು. ನಟಿ ಮೇಘನಾ ರಾಜ್ ಅವರು ಚಿರು ಸರ್ಜಾ ಅವರನ್ನು ಮದುವೆಯಾದ ಬಳಿಕ ಚಿತ್ರರಂಗದಿಂದ ಸ್ವಲ್ಪ ಮಟ್ಟಿಗೆ ದೂರಾನೇ ಸರಿದರು.
ಅಷ್ಟೇ ಅಲ್ಲದೇ ಚಿರು ಅಗಲಿದಾಗ ಆ ನೋವಿನಿಂದ ಮೇಘನಾ ರಾಜ್ ಅವರು ಸಂಪೂರ್ಣ ಎಲ್ಲರಿಂದಲೂ ದೂರ ಉಳಿದು ಬಿಟ್ಟಿದ್ದರು. ಮೇಘನಾ ರಾಜ್ ಚಿರು ಅವರನ್ನು ಇಷ್ಟ ಪಟ್ಟು ಮದುವೆಯಾಗಿ ಕೇವಲ ಎರಡು ವರ್ಷ ತುಂಬೋ ಮುಂಚೆ ಚಿರು ಅವರನ್ನು ಕಳೆದುಕೊಂಡರು. ಪ್ರೀತಿಸಿ ಮದುವೆಯಾದ ಈ ಜೋಡಿಗಳು ಜೊತೆಗೆ ಇವರಿಬ್ಬರ ಸಂಬಂಧ 12 ವರ್ಷ ಹಾಗೂ ಇವರ ದಾಂಪತ್ಯ ಜೀವನವನ್ನು ಒಟ್ಟಿಗೆ ಸವಿಯಲು ಇವರಿಗೆ ದೇವರು ದಾರಿಮಾಡಿಕೊಡಲಿಲ್ಲ. ಇಷ್ಟು ಬೇಗ ಮೇಘನಾ ರಾಜ್ ಅವರಿಗೆ ಇಂತಹ ಸ್ಥಿತಿ ಬರುತ್ತದೆ ಎಂದು ಯಾರು ಊಹಿಸಿರಲಿಲ್ಲ. ನಿಜಕ್ಕೂ ಬೇಸರದಾ ಸಂಗತಿ.
ಚಿರು ಅಗಲಿಕೆಯ ಸಮಯದಲ್ಲಿ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಚಿರು ಕುಟುಂಬದ ಕುಡಿ ಬೆಳೆಯುತ್ತಿತ್ತು. ಈ ಸಂತೋಷದ ಸುದ್ಧಿ ಕೇಳೋಕ್ಕೆ ಚಿರುನೇ ಇಲ್ಲ ಅನ್ನುವ ನೋವು ಕೇಳಲು ಯಾರಿಂದಲೂ ಸಾಧ್ಯ ಇಲ್ಲ. ಇಂತಹ ಕಹಿ ಘಟನೆ ಆದಾಗ ಮೇಘನಾ ರಾಜ್ ಅವರ ಜೊತೆ ನಿಂತಿದ್ದು ಧೈರ್ಯ ತುಂಬಿದ್ದು ಇಡೀ ಸರ್ಜಾ ಕುಟುಂಬ ಹಾಗೂ ಧ್ರುವ ಸರ್ಜಾ.
ಧ್ರುವ ಸರ್ಜಾ ಅವರು ಅತ್ತಿಗೆಯ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು. ಅಣ್ಣನ ಹೆಂಡತಿಯ ಗರ್ಭಿಣಿ ಸಂದರ್ಭದಲ್ಲಿ ಯಾವುದೇ ಕುಂದು ಕೊರತೆ ಬಾರದಂತೆ ಧ್ರುವ ನೋಡಿಕೊಳ್ಳುತ್ತಿದ್ದರು. ಅಮ್ಮನ ಮನೆ ಹಾಗೂ ಅತ್ತೆಯ ಮನೆಯವರು ಎಷ್ಟೇ ಸಮಾಧಾನ ಮಾಡಿದರು ಮೇಘನಾ ರಾಜ್ ಅವರ ಮುಖದಲ್ಲಿ ನಗು ಕಾಣಿಸಿದ್ದು ಮಗ ರಾಯನ್ ಸರ್ಜಾ ಹುಟ್ಟಿದ ಮೇಲೇನೆ ಈಗ ಮಗನ ಸಂತೋಷದಲ್ಲಿ ಫುಲ್ ಮುಳುಗಿ ಹೋಗಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಮೇಘನಾ ರಾಜ್ ಅವರು ಮಗನ ಆಗಮನದಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದಾರೆ. ಜೊತೆಗೆ ರಾಯನ್ ಮೇಘನಾ ರಾಜ್ ಮಾಡಲಿಗೆ ಬಂದ ಬಳಿಕ ಸಿನಿಮಾರಂಗಕ್ಕೆ ಬರಲು ಸಜ್ಜಗಿದ್ದಾರೆ. ಈಗ ಕೆಲವು ಸಿನಿಮಾಗಳನ್ನು ಒಪ್ಪಿ ಕೊಂಡಿದ್ದಾರೆ. ಜೊತೆಗೆ ಕಿರುತೆರೆಯಲ್ಲಿ ಬರುವ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕೆಲಸ ಮಾಡಿದ್ದಾರೆ. ಮೊದಲು ಬಾರಿಗೆ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕೆಲಸ ಮಾಡಿರೋದಕ್ಕೆ ತುಂಬಾ ಖುಷಿ ಇದೆ ಈ ಶೋ ಲೋಕೇಶ್ ಪ್ರೊಡಕ್ಷನ್ ತಂಡಕ್ಕೆ ಶುಭಾಶಯಗಳನನ್ನು ಕೊರಿದ್ದಾರೆ.
ಈ ಸುಂದರ ವೇದೇಕೆ ಮೇಲೆ ಮೊದಲ ಸಲ ಜಡ್ಜ್ ಆಗಿದ್ದೇನೆ. ಎಲ್ಲಾ ಸ್ಪರ್ಧಿಗಳಿಗೂ ಒಳ್ಳೆಯದಗಾಲಿ ಎಂದು ಹರಸಿ ಹಾರೈಸಿದ್ದಾರೆ. ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋಗೆ ಮುಖ್ಯ ಅತಿಯಾಗಿ ಬಂದ ಧ್ರುವ ಸರ್ಜಾ ಪೊಗರು ಹಾಡಿಗೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ನಂತರ ವೇದಿಕೆಯಲ್ಲಿ ಧ್ರುವ ಸರ್ಜಾ ಅತ್ತಿಗೆಯ ಬಗ್ಗೆ ಮಾತನಾಡಿ ನನ್ನ ತಾಯಿ ನಿನಗೆ ಎರಡನೇ ತಾಯಿ ಅಂತ ಪರಿಚಯ ಮಾಡಿ ಕೊಟ್ಟರು. ನನ್ನ ಅತ್ತಿಗೆಯ ಬಗ್ಗೆ ಬೆಳಬೇಕಂದ್ರೆ ಹೊರಗಡೆಯಿಂದ ತುಂಬಾ ಸ್ಟ್ರಾಂಗ್. ಬಟ್ ಒಳಗಡೆ ಅವರು ತುಂಬಾ ಭಾವನಾತ್ಮಕ ಎಂದಿದ್ದಾರೆ.
ಇನ್ನೊಂದೆಡೆ ಮೈದುನನ ಬಗ್ಗೆ ಮಾತನಾಡಿದ ಮೇಘನಾ ರಾಜ್ “ನಂಗಂತೂ ಧ್ರುವ ಮಗು ತರ” ತೋರಿಸಿಕೊಳ್ಳಲ್ಲ, ಆದರೆ ಮನಸ್ಸು ತುಂಬಾ ಪ್ರೀತಿ ಇಟ್ಟುಕೊಂಡಿರುತ್ತಾನೆ, ಅವನ ಹತ್ತಿರ ಯಾರು ಇರುತ್ತಾರೋ ಅವರಿಗೆ ಮಾತ್ರ ಧ್ರುವನ ಪ್ರೀತಿ ತಿಳಿಯುತ್ತೆ ಎಂದಿದ್ದಾರೆ ಮೇಘನಾ ರಾಜ್. ಸದ್ಯಕ್ಕೆ ಈ ಅತ್ತಿಗೆ ಮೈದುನನ ಈ ಎಮೋಷನಲ್ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋ ಈಗಾಗಲೇ ಮುಕ್ತಯ ಗೊಂಡಿದೆ ಪುನೀತ್ ರಾಜ್ ಕುಮಾರ್ ಅವರಿಗೆ ಡಾನ್ಸ್ ಡೆಡಿಕೆಟ್ ಮಾಡಿ ಅಪ್ಪು ಡಾನ್ಸ್ ಪೋಸ್ ಶೈಲಿಯಲ್ಲಿ ಟ್ರೋಫಿ ಡಿಸೈನ್ ಮಾಡಲಾಗಿದೆ. ಫಿನಾಲೆಗೆ ಬಂದಿರುವ ಎಲ್ಲಾ ಸ್ಪರ್ದಿಗಳಿಗೂ ಒಳ್ಳೇದಾಗ್ಲಿ ಎಂದರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು. ಈ ಡ್ಯಾನ್ಸ್ಯಿಂಗ್ ಶೋ ನಲ್ಲಿ ಅನ್ಮೋಲ್ ಮತ್ತು ಆದಿತ್ಯ ಶೋ ನ ವಿನ್ನರ್ ಆಗಿದ್ದಾರೆ. ಆದರ ಜೊತೆಗೆ ಬರೋಬ್ಬರಿ 5 ಲಕ್ಷ ರೂಪಾಯಿ ಬಹುಮಾನದ ಹಣ ದೊರಕಿದೆ. ಎರಡೇನೇ ಸ್ಥಾನದಲ್ಲಿ ನಿವೇದಿತಾ ಮತ್ತು ಆರಾಧ್ಯ ಹಾಗೂ ಮೂರನೇ ಸ್ಥಾನದಲ್ಲಿ ಚಂದನಾ ಮತ್ತು ಅಕ್ಷತಾ ಪಾಲಿಗೆ ಎರಡು ಲಕ್ಷ ಗೆದ್ದಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಆರತಿ ಮತ್ತು ಸಾಗರ್ ಐದನೇ ಸ್ಥಾನವನ್ನು ಅರ್ಜುನ್ ಹಾಗೂ ರಾಣಿ ಪಡೆದುಕೊಂಡಿದ್ದಾರೆ. ಈ ಡ್ಯಾನ್ಸ್ಯಿಂಗ್ ಚಾಂಪಿಯನ್ ಶೋ ಯಶಸ್ವಿಯಾಗಿ ಮುಕ್ತಾಯ ಗೊಂಡಿದೆ. ಈ ಶೋನಿಂದ ಅನೇಕ ಪ್ರತಿಭೆಗಳು ವೇದಿಕೆಯಲ್ಲಿ ಹುಟ್ಟಿಕೊಂಡಿದ್ದಾರೆ. ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಡ್ಯಾನ್ಸ್ಯಿಂಗ್ ಶೋ ನಾ ಕಾರ್ಯಕ್ರಮದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು