ಅದಿತಿ ಪ್ರಭುದೇವ ರವರ ಡ್ಯಾನ್ಸ್ ನೋಡಿ ಅವಕ್ಕಾದ ನಟಿ ಹರಿಪ್ರಿಯಾ..!?

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ನಟಿಯರು ಆಗಮಿಸಿ ತಮ್ಮ ನಟನೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂಥವರಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಉದಯೋನ್ಮುಖ ನಟಿಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಎಂದರೆ ಅದು ಅದಿತಿ ಪ್ರಭುದೇವ ಎಂದರೆ ತಪ್ಪಾಗಲಾರದು. ನಟಿ ಅದಿತಿ ಪ್ರಭುದೇವ ಕನ್ನಡ ಪ್ರೇಕ್ಷಕರಿಗೆ ಅತ್ಯಂತ ಹೆಚ್ಚು ಇಷ್ಟ ಆಗೋದೇ ಅವರ ಸಿಂಪ್ಲಿಸಿಟಿ ಯಿಂದಾಗಿ. ಕೆಲವು ನಟಿಯರಿಗೆ ಒಂದೆರಡು ಸಿನಿಮಾಗಳ ಯಶಸ್ಸು ಸಿಕ್ಕರೆ ಸಾಕು ತಲೆಯ ಮೇಲೆ ಕೊಂಬು ಬಂದಂತೆ ಮಾಡುತ್ತಾರೆ.

ಅದಿತಿ ಪ್ರಭುದೇವ ಎಷ್ಟೇ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದರೂ ಕೂಡ ತಮ್ಮಲ್ಲಿ ಕನ್ನಡತನದ ಸೊಗಡನ್ನು ಇನ್ನೂ ಕೂಡ ಬಿಟ್ಟಿಲ್ಲ. ಇಂದಿಗೂ ಪಕ್ಕ ಕನ್ನಡದ ಹುಡುಗಿಯಂತೆ ಕಾಣಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅದಿತಿ ಪ್ರಭುದೇವ ಅವರ ಸರಳತೆಯನ್ನು ವುದು ಎಲ್ಲರಿಗೂ ಇಷ್ಟವಾಗುತ್ತದೆ. ಅದಿತಿ ಪ್ರಭುದೇವ ರವರು ಗುಂಡನ ಹೆಂಡತಿಯನ್ನು ಧಾರವಾಹಿಯಿಂದ ತಮ್ಮ ನಟನೆಯ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ನಂತರ ಅವರಿಗೆ ದೊಡ್ಡಮಟ್ಟದ ಗೆಲುವನ್ನು ತಂದುಕೊಟ್ಟಂತಹ ಧಾರವಾಹಿ ಎಂದರೆ ಅದು ನಾಗಕನ್ನಿಕೆ ಧಾರವಾಹಿ. ಇದಾದ ನಂತರ ಹಲವಾರು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟಿಯನ್ನು ಹೆಗ್ಗಳಿಕೆಗೆ ಕೂಡ ಪಾತ್ರರಾಗುತ್ತಾರೆ. ಈಗಾಗಲೇ ಹತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಕೈಯಲ್ಲಿ ನಾಲ್ಕು ಸಿನಿಮಾಗಳಿವೆ.

ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಿತಿ ಪ್ರಭುದೇವ ರವರು ನೀರು ಕುಡಿದಷ್ಟೇ ಸುಲಭವಾಗಿ ಮಾಡುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶವಾಗಿದೆ. ಅದಿತಿ ಪ್ರಭುದೇವ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಯುಟ್ಯೂಬ್ ಚಾನೆಲ್ ಅನ್ನು ಕೂಡ ಪ್ರಾರಂಭಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅದಿತಿ ಪ್ರಭುದೇವ ರವರ ನಿಶ್ಚಿತಾರ್ಥ ಕೂಡ ನಡೆದಿದೆ. ಅದಿತಿ ಪ್ರಭುದೇವ ರವರು ಅತಿಶೀಘ್ರದಲ್ಲೇ ಮದುವೆ ಆಗುವ ಸಾಧ್ಯತೆಗಳಿದ್ದು ಮದುವೆ ನಂತರ ಕೂಡ ಚಿತ್ರರಂಗದಲ್ಲಿ ಮುಂದುವರೆಯ ವಂತಹ ಸೂಚನೆಗಳನ್ನು ನೀಡಿದ್ದಾರೆ. ನೀವು ನೋಡಿರಬಹುದು ಕೆಲವೊಮ್ಮೆ ನಟಿಯರು ಮದುವೆಯ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ಹಿಮ್ಮುಖ ರಾಗುತ್ತಾರೆ.

ಇತ್ತೀಚಿಗಷ್ಟೇ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಿರುವ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ನಿರೂಪಕ ಶೈನ್ ಶೆಟ್ಟಿ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹರಿಪ್ರಿಯಾ ಹಾಗೂ ಡ್ಯಾನ್ಸ್ ಮಾಸ್ಟರ್ ಹರ್ಷ ರವರ ಸಮ್ಮುಖದಲ್ಲಿ ಅದಿತಿ ಪ್ರಭುದೇವ ರವರು ಗ್ಲಾಮರಸ್ ಆಗಿ ಡ್ಯಾನ್ಸ್ ಮಾಡಿರುವ ಈ ವಿಡಿಯೋ ಈಗ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಈ ವೇದಿಕೆಯಲ್ಲಿ ಮಳೆಯ ಎಫೆಕ್ಟ್ ನಲ್ಲಿ ಅದಿತಿ ಪ್ರಭುದೇವ ರವರ ಡ್ಯಾನ್ಸ್ ಹರಿಪ್ರಿಯಾ ರವರ ಅಚ್ಚರಿಗೆ ಕಾರಣವಾಗಿದೆ. ಅಷ್ಟೊಂದು ಅದಿತಿ ಪ್ರಭುದೇವ ರವರ ಡ್ಯಾನ್ಸ್ ಅದ್ಭುತವಾಗಿ ಮೂಡಿ ಬಂದಿದೆ. ನಟಿ ಅದಿತಿ ಪ್ರಭುದೇವ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.


Leave a Reply

Your email address will not be published. Required fields are marked *