ಅಪ್ಪನನ್ನು ನೋಡಲು US ನಿಂದ ಮತ್ತೆ ಬಂದ ಮಗಳು.. ನೋವಿನಲ್ಲೇ ಕಣ್ಣೀರಿಡುತ್ತ 7ನೇ ತಿಂಗಳ ಪೂಜೆ ಮಾಡಿದ ಕುಟುಂಬ

ಸುದ್ದಿ

ಕರ್ನಾಟಕದ ಜನರ ಮನ ಹಾಗೂ ಮನಸ್ಸಲ್ಲಿ ಶಾಶ್ವತವಾಗಿ ಉಳಿದಿರುವ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರು ಆಗಲಿ ಇಂದಿಗೆ 7 ತಿಂಗಳು ಕಳೆದಿದೆ. ಈ ಕರಾಳ ಏಳು ತಿಂಗಳು ಕಳೆದರು. ಅಪ್ಪು ಕಣ್ಣು ಮುಚ್ಚಿ ಮಲಗಿರುವ ಸಮಾಧಿ ಬಳಿ ಅಭಿಮಾನಿಗಳು ಸಾಗರದಂತೆ ಹರಿದು ಬರುತ್ತಿದ್ದಾರೆ. ಬಂದು ದೇವರ ದರ್ಶನ್ ಪಡೆದುಕೊಂಡು ಹೋಗುತ್ತಿದ್ದಾರೆ.
ಇಂದು ನಮ್ಮ ಪ್ರೀತಿಯ ನಾಯಕ ನಟ ಕೋಟ್ಯಂತರ ಅಭಿಮಾನಿಗಳ ದೇವರು ಬಡವರ ಬಂದು ನಮ್ಮ ಅಪ್ಪು ಅವರನ್ನು ಕೆಳೆದುಕೊಂಡ ಅಪ್ಪು ಕುಟುಂಬ ಇಂದು ಕಂಠೀರವ ಸ್ಟುಡಿಯೋಗೆ ಆಗಮಿಸಿ, ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಇಂದು ರೆಬಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬ ಇರುವುದರಿಂದ, ಅಪ್ಪು ಅವರ ಸಮಾಧಿಯ ಸ್ವಲ್ಪ ದೂರದಲ್ಲೇ ಇರುವ ಅಂಬಿ ಸಮಾಧಿಗೂ ಹೋಗಿ ಹಿರಿಯ ನಟನಿಗೆ ನಮನ ಸಲ್ಲಿಸಿದ್ದಾರೆ.

ಪುನೀತ್ ರಾಜಕುಮಾರ್ ಅವರ ಅಗಲಿಕೆಯನ್ನು ಇಂದಿಗೂ ಅದಗಿಸಿಕೊಳ್ಳಲು ಅವರ ಕುಟುಂಬದವರಿಗಾಗಲಿ, ಅಭಿಮಾನಿಗಳಿಗಾಗಲಿ ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ನಿಮಗೆ ಗೊತ್ತಿರುವ ಹಾಗೇ ಅಪ್ಪು ಅವರ ಅಣ್ಣ ರಘುವೇಂದ್ರ ರಾಜಕುಮಾರ್ ಅವರು ಪ್ರತಿ ದಿನಾಲೂ ತನ್ನ ಒಡಹುಟ್ಟಿದ ತಮ್ಮನನ್ನು ನೆನಪಿಸಿಕೊಳ್ಳುತ್ತಾರೆ.
ಇಂದು ಪುನೀತ್ ಅವರ ವಿಶೇಷ ವಿಡಿಯೋ ವನ್ನು ಅಣ್ಣ ರಘುವೇಂದ್ರ ರಾಜ್ ಕುಮಾರ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲ ಶೇರ್ ಮಾಡಿಕೊಂಡಿದ್ದಾರೆ. ಎಂದೆಂದಿಗೂ ಅಪ್ಪು ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ. ನೀವು ಕೂಡ ನೋಡಬಹುದು.

ಇಂದು ಅಪ್ಪು ಅವರ 7ನೇ ತಿಂಗಳು ಕಾರ್ಯ ಹಾಗೂ ಅಂಬಿ ಕರುನಾಡ ಕರ್ಣ ಅಂಬರೀಷ್ ಅವರ ಹುಟ್ಟು ಹಬ್ಬ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದರಿಂದ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅಭಿಮಾನಿಗಳು ಹಾಗೂ ಅಂಭಿ ಅಭಿಮಾನಿಗಳು ಇಬ್ಬರು ಮಹಾನ್ ಕಲಾವಿದರ ಸಮಾಧಿಗೆ ಭೇಟಿ ಕೊಟ್ಟು ತಮ್ಮ ನೆಚ್ಚಿನ ನಾಯಕರ ಅಗಲುವಿಕೆಯ ನೋವನ್ನು ತೋಡಿಕೊಂಡಿದ್ದಾರೆ. ಇಂದು ಕಂಠೀರವ ಸ್ಟುಡಿಯೋದಲ್ಲಿ ಜನಸಾಗರವೆ ತುಂಬಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇಷ್ಟು ದಿನಗಳ ಕಾಲ ಪುನೀತ್ ರಾಜಕುಮಾರ್ ಪತ್ನಿ ಎಂದು ಗುರುತಿಸಿ ಕೊಂಡಿದ್ದರು. ಈಗ ಅವರು ತನ್ನದೇ ಆದ ಐಡೆಂಟಿಟಿ ಹೊಂದಿದ್ದಾರೆ. ಪುನೀತ್ ರಾಜಕುಮಾರ್ ಇಲ್ಲವಾದ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡುತ್ತಿರುವ ಕೆಲಸಗಳು, ಅವರು ನಡೆದುಕೊಳ್ಳುತ್ತಿರುವ ರೀತಿ ಅಪ್ಪು ಅಭಿಮಾನಿಗಳು ಹಾಗೂ ಕರ್ನಾಟಕದ ಜನತೆ ಮೆಚ್ಚಿಕೊಂಡಿದ್ದಾರೆ.

ಪುನೀತ್ ಅವರು ಇಲ್ಲವಾದ ಮೇಲೆ ಅಶ್ವಿನಿ ಅವರು ಕುಗ್ಗಲಿಲ್ಲ, ಮನಸ್ಸಿನಲ್ಲಿ ಎಷ್ಟೇ ದುಃಖ್ಖ ಇದ್ರಾವು, ಅದನ್ನು ಅವರು ಬಹಿರಂಗವಾಗಿ ಯಾರಲ್ಲೂ ತೊರ್ಪಡಿಸದೆ. ಅಪ್ಪು ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಯನ್ನೂ ಅಶ್ವಿನಿ ಅವರು ತೆಗೆದುಕೊಂಡರು. ಪಿ.ಆರ್. ಕೆ ಸಂಸ್ಥೆ ಯನ್ನೂ ಅಪ್ಪು ಅವರು ಬಹಳಷ್ಟು ಕನಸು ಹೊತ್ತು ಶುರು ಮಾಡಿದ ಸಂಸ್ಥೆ ಯುವ ಪ್ರತಿಭೆಗೆ ಅವಕಾಶ ಕೊಡಬೇಕು ಎಂಬುದನ್ನು ಬಹಳಷ್ಟು ಕನಸು ಕಂಡಿದ್ದರು ಅಪ್ಪು ಆ ಕನಸು ನನಸು ಮಾಡಲು ಅಶ್ವಿನಿ ಜವಾಬ್ದಾರಿ ಹೊತ್ತಿದ್ದಾರೆ.
ಈ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕು, ಹೊಸ ಸಿನಿಮಾಗಳನ್ನು ನಮ್ಮ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಡಬೇಕು ಎಂದು ಪುನೀತ್ ಅವರ ಕನಸಾಗಿತ್ತು. ಅಪ್ಪು ಅವರಿದ್ದಾಗ, ಅನೇಕ ಸಿನಿಮಾಗಳು ಆಡಿಯೋ ರೈಟ್ಸ್ ಪಡೆದು ಹೊಸಬರಿಗೆ ಅಪ್ಪು ಸಂಸ್ಥೆ ಸಪೋರ್ಟ್ ಮಾಡಿದ್ದರು ಹಾಗೆಯೇ ಕೆಲವು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದರು. ಅಪ್ಪು ಅವರಿಗೆ ದಿಡೀರ್ ಎಂದು ಆ ರೀತಿ ಆಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ.
ಅಪ್ಪು ಅವರು ದೂರವಾದಮೇಲೆ. ಅಶ್ವಿನಿ ಅವರು ಹೋದಮೇಲೆ, ಅಶ್ವಿನಿ ಅವರು ಪತಿಯ ಕನಸುಗಳನ್ನು ಈಡೇರಿಸುವತ್ತ ಅವರು ಹೆಜ್ಜೆ ಹಾಕುತ್ತಿದ್ದಾರೆ. ಹೊಸ ಚಿತ್ರಗಳ್ಳನ್ನು ನಿರ್ಮಾಣ ಮಾಡುತಿದ್ದರೆ. ಹಾಗೆಯೇ ಈಗಿರುವ ಸಿನಿಮಾಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಅಲ್ಲದೇ ಅಪ್ಪು ಅವರಿಗೆ ಬರುವ ಯಲ್ಲಾ ಅವಾರ್ಡ್ ಗಳನ್ನು ಅಶ್ವಿನಿ ಅವರು ಸ್ವೀಕರಿಸುತ್ತಿದ್ದಾರೆ.
ಇಂದು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಹಾಗೂ ಮುದ್ದಿನ ಮಕ್ಕಳು ದೃತಿ ಹಾಗೂ ವಂದಿತಾ ಅವರು ಇಂದು ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.


Leave a Reply

Your email address will not be published. Required fields are marked *