ಸರ್ಜಾ ಕುಟುಂಬದ ಮುದ್ದಿನ ಸೊಸೆ ಮೇಘನಾ ರಾಜ್ ಇಂದು ತನ್ನ ಮುದ್ದು ಮಗ ರಾಯನ್ ಜೊತೆ ಖುಷಿಯನ್ನು ಕಾಣುತ್ತಿದ್ದಾರೆ. ಅವರ ಕುಟುಂಬದಲ್ಲಿ ನಡೆದ ಆ ಒಂದು ಘಟನೆಯಿಂದ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ಮೇಘನಾ ರಾಜ್ ತನ್ನ ಪತಿಯನ್ನು ಕಳೆದುಕೊಂಡ ಕಹಿ ಘಟನೆಯನ್ನು ಮರೆತು ತನ್ನ ಮುದ್ದು ಮಗನಿಗಾಗಿ ಮತ್ತೆ ವೃತ್ತಿ ಜೀವನದ ಕಡೆಗೆ ಗಮನ ಹರಿಸಿದ್ದಾರೆ.
ಈಗಾಗಲೇ ನಟಿ ಮೇಘನಾ ರಾಜ್ ಅವರು ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅದಲ್ಲದೆ ಇತ್ತೀಚಿಗೆ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಗ್ರ್ಯಾಂಡ್ ಫೈನಲ್ ವೇದಿಕೆಯಲ್ಲಿ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಬಗ್ಗೆ ಮಾತನಾಡಿದ್ದು ಎಲ್ಲನ್ನು ಭಾವುಕರನ್ನಾಗಿ ಮಾಡಿದೆ.
ಅದಾದ ಬಳಿಕ ಜೂನ್ 7ಕ್ಕೆ ಚಿರು ದೂರವಾಗಿ ಎರಡು ವರ್ಷಗಳೇ ಕಳೆದಿದೆ. ಅದೇ ವೇಳೆ ಚಿರು ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬ ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇನ್ನು ಮೇಘನಾ ರಾಜ್ ಮಗ ರಾಯನ್ ಸರ್ಜಾ ನ ಸುಖ ಸಂತೋಷಕ್ಕೆ ಮತ್ತೆ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿ ಆಗಿದ್ದರೆ, ಅವರು ಎಷ್ಟೇ ಬ್ಯುಸಿ ಇದ್ದರು ಮಗನ ವಿಚಾರಕ್ಕೆ ಬಂದರೆ ಅವನ ಜೊತೆ ಸಮಯ ಕಳೆಯುತ್ತಾರೆ.
ಆಗಾಗ ಮಗನ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇನ್ನು ರಾಯನ್ ಅವರ ಹೊಸ ವಿಡಿಯೋ ಹಾಗೂ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನು ರಾಯನ್ ಸರ್ಜಾ ಕೂಡ ಅಪ್ಪ ಅಮ್ಮನ ಹಾಗೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ. ಅವನ ತೊದಲು ನುಡಿಯಿಂದ ಸಿಕ್ಕಾಪಟ್ಟೆ ಇಷ್ಟ ಆಗಿದ್ದಾನೆ.
ಇತ್ತೀಚಿಗೆ ಚಿರು ಹಾಗೂ ರಾಯನ್ ಸರ್ಜಾರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಚಿರು ಬಾಲ್ಯದ ಫೋಟೋ ಹಾಗೂ ರಾಯನ್ ಬಾಲ್ಯದ ಫೋಟೋಗೆ ಜೊತೆ ಗೂಡಿಸಿ ಅಭಿಮಾನಿಯೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋ ಅಪ್ಪ ಹಾಗೂ ಮಗ ಒಂದೇ ರೀತಿಯ ಲ್ಲಿ ಇದ್ದಾರೆ ಎನ್ನಲಾಗಿದೆ.
ಹೌದು ಚಿರು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಪ್ಯಾಂಟ್ ಶರ್ಟ್ ಕೋಟ್ ಹಾಗೂ ಸ್ಪೆಕ್ಸ್ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ. ಅದೇ ರೀತಿ ರಾಯನ್ ಕೂಡ ಸ್ಪೆಕ್ಸ್ ಹಾಕಿದ್ದಾನೆ. ಅಪ್ಪ ಮಗನ ಈ ಫೋಟೋ ಟ್ಯಾಗ್ ಮಾಡಿದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋ ನೋಡಿದ ಚಿರು ಅಭಿಮಾನಿಗಳು ಹಾಗೂ ಮೇಘನಾ ರಾಜ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಹೀಗಾಗಿ ರಾಯನ್ ಸರ್ಜಾ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಾರಿ ಓಡಾಡುತ್ತದೆ. ಇದೀಗ ಮೇಘನಾ ರಾಜ್ ಮಗನ ಇನ್ನೊಂದು ಮುದ್ದಾದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಯನ್ ಸರ್ಜಾ ಅಮ್ಮ ಎಂದು ಮುದ್ದಾಗಿ ಕರೆದಿದ್ದಾನೆ. ಮೇಘನಾ ರಾಜ್ ಕೂಡ ಮಗನಿಗೆ ಅಮ್ಮ ಎಂದು ಹೇಳಿಕೊಡುತ್ತಾರೆ.
View this post on Instagram
ಮೊದಲೆರಡು ಬಾರಿ ಅಮ್ಮ ಎಂದು ಕರೆಯುತ್ತಾನೆ. ಬಳಿಕ ಮತ್ತೊಮ್ಮೆ ಮೇಘನಾ ಅಮ್ಮ ಎಂದು ಹೇಳಿಕೊಡುತ್ತಾರೆ ಆದರೆ ರಾಯನ್ ಅಪ್ಪ ಎಂದು ಕರೆಯುತ್ತಾನೆ. ಈ ವಿಡಿಯೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ರಾಯನ್ ಅಪ್ಪ ಅಮ್ಮ ಎಂದು ಕರೆಯುವ ವಿಡಿಯೋ ಅಭಿಮಾನಿಗಳನ್ನು ಗಮನ ಸೆಳೆದಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.