ಅಪ್ಪನೇ ಇಲ್ಲ ಅಂತಾ ಹೇಳಿಕೊಳ್ಳುತ್ತಿದ್ದ ಆ್ಯಂಕರ್​​ ಅನುಶ್ರೀ ಬಾಳಿನಲ್ಲಿ ಬಿರುಗಾಳಿ. ಅನುಶ್ರೀ ಮುಚ್ಚಿಟ್ಟಿದ್ದ ಸತ್ಯ ಬಯಲು; ಅನುಶ್ರೀ ಅವರ ತಂದೆ ಯಾರು ಗೊತ್ತಾ..!?

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಿರೂಪಕಿ ಎಂದರೆ ಅದು ಅನುಶ್ರಿ ಅವರು. ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮವನ್ನು ತೆಗೆದುಕೊಳ್ಳಿ ಅಲ್ಲಿ ಅನುಶ್ರೀ ಅವರು ಖಂಡಿತವಾಗಿ ಇದ್ದೇ ಇರುತ್ತಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಅನುಶ್ರೀ ಅವರು ಕನ್ನಡ ಚಿತ್ರರಂಗದ ಸ್ಟಾರ್ ನಿರೂಪಕಿ ಎಂದು ಹೇಳಬಹುದಾಗಿದೆ. ಆದರೆ ಇಂದು ಅವರು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ನಿಜಕ್ಕೂ ಕೂಡ ಅದು ಅವರ ಪರಿಶ್ರಮದ ಫಲ ಎಂದು ಹೇಳಬಹುದಾಗಿದೆ.

ಅನುಶ್ರೀ ಅವರ ಕುರಿತಂತೆ ಹೇಳುವುದಾದರೆ ಈಗಾಗಲೇ ಅವರು ಹಲವಾರು ಕಿರುತೆರೆಯ ಕಾರ್ಯಕ್ರಮಗಳನ್ನು ಹಾಗೂ ಸಿನಿಮಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅನುಶ್ರೀ ಅವರ ಯುಟ್ಯೂಬ್ ಚಾನೆಲ್ ಕೂಡ ನೀವು ನೋಡಿರಬಹುದು. ಸಾಕಷ್ಟು ಬಡ ಕುಟುಂಬದಲ್ಲಿ ಜನಿಸಿ ಬೆಳೆದುಬಂದ ಅನುಶ್ರೀ ಅವರದು ನಿಜಕ್ಕೂ ಕೂಡ ಎಲ್ಲರಿಗೂ ಸ್ಪೂರ್ತಿ ಯಾದದ್ದು. ಇನ್ನು ಅನುಶ್ರೀ ಅವರ ವೈಯಕ್ತಿಕ ಜೀವನದ ಕುರಿತಂತೆ ಹೇಳುವುದಾದರೆ ಅನುಶ್ರೀ ಅವರಿಗೆ ತಾಯಿ ಹಾಗೂ ತಮ್ಮ ಇದ್ದಾರೆ. ಚಿಕ್ಕವಯಸ್ಸಿನಿಂದಲೂ ಕೂಡ ಅನುಶ್ರಿ ಅವರನ್ನು ಸಾಕಿ ಬೆಳೆಸಿದ್ದು ಅವರ ತಾಯಿ. ತಂದೆ

ಚಿಕ್ಕವಯಸ್ಸಿನಿಂದಲೇ ಅವರೆಲ್ಲರನ್ನು ಬಿಟ್ಟುಹೋಗಿದ್ದರು ಎಂಬುದಾಗಿ ತಿಳಿದುಬಂದಿತ್ತು. ನಂತರ ತನ್ನ ತಾಯಿ ಹಾಗೂ ತಮ್ಮನಿಗಾಗಿ ಅನುಶ್ರೀ ಅವರು ಬೆಂಗಳೂರಿಗೆ ಬಂದು ಯಾರ ಸಹಾಯವೂ ಇಲ್ಲದೆ ತಮ್ಮ ಸ್ವಂತ ಪರಿಶ್ರಮದ ಮೂಲಕ ಕೆಲಸವನ್ನು ಗಿಟ್ಟಿಸಿಕೊಂಡು ಈಗ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅದರಲ್ಲೂ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಂಡ ಮೇಲೆ ಅನುಶ್ರೀ ಅವರ ಅದೃಷ್ಟದ ಬದಲಾಯಿತು ಎಂದು ಹೇಳಬಹುದಾಗಿದೆ.

ಸದ್ಯಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಸೆಲೆಬ್ರಿಟಿಗಳ ಪರಿಚಯ ಹಾಗೂ ಸ್ನೇಹಸಂಬಂಧ ಅನುಶ್ರೀ ಅವರಿಗಿದೆ. ಇತ್ತೀಚಿಗೆ ತಮ್ಮ ಅಮ್ಮನಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆಯನ್ನು ಕೂಡ ಕಟ್ಟಿಸಿದರು. ತಮ್ಮನ ಜೀವನವನ್ನು ಸೆಟಲ್ ಮಾಡುವ ದೃಷ್ಟಿಯಲ್ಲಿ ಕೂಡ ಅನುಶ್ರೀ ಅವರು ಕಾರ್ಯಪ್ರವೃತ್ತರಾಗಿ ಯಶಸ್ವಿಯಾಗಿದ್ದಾರೆ. ಆದರೆ ಈಗ ಅನುಶ್ರೀ ಯವರ ಕುರಿತಂತೆ ಒಂದು ದೊಡ್ಡ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಅಥವಾ ಎಲ್ಲೇ ಇರಲಿ ಅನುಶ್ರೀ ಅವರು ತಮ್ಮ ತಾಯಿ ಕುರಿತಂತೆ ಮಾತ್ರ ಮಾತನಾಡಿದ್ದರು ತಂದೆಯ ಕುರಿತಂತೆ ಒಂದು ಅಕ್ಷರವನ್ನು ಕೂಡ ಮಾತನಾಡಿರಲಿಲ್ಲ. ಆದರೆ ಸದ್ಯಕ್ಕೆ ಅನುಶ್ರಿ ಅವರ ತಂದೆಯ ಕುರಿತಂತೆ ಸುದ್ದಿಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿವೆ.

ಹೌದು ಸಂಪತ್ ಕುಮಾರ್ ಎನ್ನುವವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಅವರು ಅನುಶ್ರೀ ಅವರನ್ನು ತಮ್ಮ ಮಗಳು ಎನ್ನುವುದಾಗಿ ಮಾಧ್ಯಮದ ಮುಂದೆ ಹೇಳಿಕೆಯನ್ನು ನೀಡಿದ್ದಾರೆ. ಇದು ಈಗ ಸಖತ್ ಸುದ್ದಿ ಮಾಡುತ್ತಿದ್ದು ಇಷ್ಟು ದಿನ ಅನುಶ್ರೀ ಅವರು ಮುಚ್ಚಿಟ್ಟಿದ್ದ ರಹಸ್ಯ ಈಗ ಹೊರಬಂದಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸಂಪತ್ ಕುಮಾರ್ ಎನ್ನುವವರು ಕೂಡ ಮಗಳೇ ನನಗೆ ನಿನ್ನ ಹಣ ಬೇಡ ನನ್ನನ್ನು ನೋಡಿಕೊಂಡು ಹೋಗುವ ಸಾಕು ಎಂಬುದಾಗಿ ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.


Leave a Reply

Your email address will not be published. Required fields are marked *