ಅಪ್ಪು ಅಗಲಿಕೆಯ ನಂತರ ಫಸ್ಟ್ ಟೈಮ್ ವೇದಿಕೆ ಮೇಲೆ ಮಾತಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್… ಭಾವುಕರಾಗಿ ಹೇಳಿದ್ದೇನು ನೋಡಿ

ಸುದ್ದಿ

ಕರ್ನಾಟಕರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ನೆನಪು ಮಾತ್ರ ಆದರೆ ಅದೆಷ್ಟು ಜನರಿಗೆ ಇವರು ಆದರ್ಶ್ ವ್ಯಕ್ತಿಆಗಿದ್ದಾರೆ. ಅಪ್ಪು ಅವರು ಮಾಡಿರುವ ಕೆಲಸ ಒಂದ ಎರಡ ಅದನ್ನು ಮರೆಯಲು ಸಾಧ್ಯವೇ ಇಲ್ಲ. ಇನ್ನು ಅಪ್ಪು ಅವರ ಧರ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಒಬ್ಬ ಧೈರ್ಯವಂತ ಮಹಿಳೆ ಎನ್ನುದರಲ್ಲಿ ಎರಡು ಮಾತಿಲ್ಲ.
ಪುನೀತ್ ರಾಜಕುಮಾರ್ ಅವರಿಂದ ದೂರವಾದ ಬಳಿಕ ಅಶ್ವಿನಿ ಅವರು ತಮ್ಮ ನೋವನ್ನು ಯಾರಿಗೂ ತೋರಿಸಲಾಗದೆ ಒಬ್ಬರೇ ಕಂಬನಿ ಸುರಿದಿದ್ದರೂ.ಅವರು ದೊಡ್ಮನೆ ಕುಟುಂಬದ ಕಿರಿಯ ಸೊಸೆಯಾಗಿ ಹಾಗೂ ಅಪ್ಪುವಿನ ಪ್ರೀತಿಯ ಮಾಡದಿಯಾಗಿ ಎಲ್ಲಾ ಅವರ ಕರ್ತವ್ಯವನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಅಶ್ವಿನಿ ಅವರು ಎಲ್ಲ ನೋವನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು ಯಾರಿಗೂ ಕಾಣದಂತೆ ಕಂಬನಿ ಸುರಿಸಿದ್ದರು.

ನವೆಂಬರ್ 16ರಂದು ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಶಿವಣ್ಣ ಹಾಗೂ ರಾಘಣ್ಣ ಕಣ್ಣೀರಿಟ್ಟರು, ಆ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಅಶ್ವಿನಿಯವರು ಕೂಡ ಕಣ್ಣೀರು ಹಾಕಿದ್ದರು. ಆ ಸಮಯದಲ್ಲಿ ನನ್ನ ನೋವು ಮತ್ತೊಬ್ಬರಿಗೆ ನೋವಾಗಬಾರದೆಂದು. ಕಾರ್ಯಕ್ರಮದಿಂದ ಮನವಿ ಮಾಡಿಕೊಂಡು ಮಗಳೊಂದಿಗೆ ಅಲ್ಲಿಂದ ಅಶ್ವಿನಿ ಅವರು ಅರ್ಧಕ್ಕೆ ಹೋರಟಬಿಟ್ಟರು. ಕರ್ನಾಟಕದ ಜನರು ಅಪ್ಪು ಮೇಲೆ ಇಟ್ಟಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಜನರ ಮುಂದೆ ತಮ್ಮ ನೋವನ್ನು ಅಕ್ಷರಗಳ ಮೂಲಕ ಹೊರ ಹಾಕಿದ್ದಾರೆ.
ಶ್ರೀ ಪುನೀತ್ ರಾಜಕುಮಾರ್ ಅವರ ಅಕಾಲಿಕ ಆಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ನೋವಿನ ವಿಷಯ. ನಿಮ್ಮ ನಿಸ್ಕಲ್ಮಷ ಪ್ರೀತಿಯಿಂದ ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ ನಿಮಗೆಲ್ಲರಿಗೂ ಅವರ ವಿದಾಯ ತಂದಿದ್ದ ನೋವು ಎಸ್ಟಿರಬಹುದು ನಮ್ಮಿಂದ ಊಹಿಸಲು ಸಾದ್ಯವಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ನೀವು ಎಲ್ಲಿಯೂ ನಿಮ್ಮ ಸಂಯಮ ಕಳೆದುಕೊಳ್ಳದೆ ಯಾವುದೇ ಘಟನೆಗಳು ನಡೆಯಲು ಬಿಡದೆ ಅವರಿಗೆ ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ.

ಅವರ ಚಿತ್ರಗಳ್ಳನ್ನು ಪ್ರೀತಿಸುವ ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ ಎಲ್ಲಾ ಕರ್ನಾಟಕದ ಜನರು ಹಾಗೂ ದೇಶ ವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸುಚಿಸುವುದು ಕಂಡಾಗ ನನ್ನ ಮನಸ್ಸು ಭಾರವಾಗುತ್ತದೆ.. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತ ಸಾವಿರರಾ ಸಂಖ್ಯೆಯಲ್ಲಿ ನಿಮ್ಮ ನೇತ್ರದನಕ್ಕೆ. ಮುಂದಾಗಿರುವುದು ನೋಡಿದಾಗ ನನ್ನ ಕಣ್ತುಂಬಿ ಬಂತು. ಅವರನ್ನು ನೀವು ಆದರ್ಶ್ವಾಗಿಟ್ಟುಕೊಂಡು ನೀವುಗಳು ಮಾಡುವ ಒಳ್ಳೇಯ ಕೆಲಸಗಳ ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಆತ್ಮವಿಶ್ವಾಸಕ್ಕೆ ಅವರೆಂದಿಗೂ ಜೀವಂತವಾಗಿರುತ್ತದೆ.
ಇಡೀ ವಿಶ್ವದಲ್ಲಿ ನಮ್ಮ ಶೋಕವನ್ನು ಹಂಚಿಕೊಂಡು ನಮ್ಮ ಬೆಂಬಲಕ್ಕೆ ನಿಂತ ಎಲ್ಲಾ ನನ್ನ ಪ್ರೀತಿಯ ಅಭಿಮಾನಿ ದೇವರುಗಳಿಗೆ ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ನನ್ನ ದೊಡ್ಡ ನಮಸ್ಕಾರಗಳು.. ಇಂತಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಎಂದು ಬರೆದುಕೊಂಡಿದ್ದಾರೆ.

ನನ್ನ ಪತಿಯು ಮಾಡೆಸಿಕೊಂಡು ಹೋಗುತ್ತಿದ್ದ ಪಿ. ಆರ್.ಕೆ ಪ್ರೊಡಕ್ಷನ್ ಜವಾಬ್ದಾರಿಯನ್ನು ತಾವು ವಹಿಸಿಕೊಂಡರು. ಅಪ್ಪುವಿನ ಸಾಕಷ್ಟು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು ಕೂಡ ಅವರು ಎಲ್ಲಿಯೂ ಕೂಡ ಮಾತನಾಡಿರಲಿಲ್ಲ. ಈ ಕಾರ್ಯಕ್ರಮದಲ್ಲಿಯೂ ಹಾಜರಿದ್ದರು ಪತಿಯ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳಲು ಅವರಿಗೆ ಆಗದೆಯೇ ಕಣ್ಣೀರು ಹಾಕಿದ್ದರು. ಆದರೆ ಅಪ್ಪು ಅಗಲಿಕೆಯ ನಂತರ ಮೊದಲು ಬಾರಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾತನಾಡಿದ್ದಾರೆ.
ಅಶ್ವಿನಿ ಅವರು ಮೊದಲಿಗೆ ಎಲ್ಲರಿಗೂ ನಮಸ್ಕಾರ, ಮುರುಗ ಮಠಕ್ಕೆ ಧನ್ಯವಾದಗಳು ತಿಳಿಸಿದ್ದಾರೆ ಅಶ್ವಿನಿ ಅವರು. ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆಯನ್ನು ನಮಗೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *