ಅಪ್ಪು ಅಗಲಿಕೆಯ ನಂತರ ಮೊದಲ ಬಾರಿಗೆ ಅಶ್ವಿನಿ ಮುಖದಲ್ಲಿ ನಗು ತರಿಸಿದ ದೊಡ್ಮನೆ ಕುಟುಂಬದವರು! ಆ ಸುಂದರ ಕ್ಷಣಗಳನ್ನು ನೋಡಿ

ಸುದ್ದಿ

ಕರ್ನಾಟಕದ ಮೆಚ್ಚಿನ ಮನೆತನವಾದ ದೊಡ್ಮನೆ ಕುಟುಂಬ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು ಅಣ್ಣವ್ರು ಕಿರಿಯ ಮಗನಾದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಕನ್ನಡ ಸಿನಿಮಾ ರಂಗವೇ ಬಡವಗಿದೆ, ಅವರ ಅಭಿಮಾನಿಗಳು ತಮ್ಮ ಪ್ರೀತಿಯ ದೇವರನ್ನು ಕಳೆದುಕೊಂಡು ಗುಡಿಗೆ ಹೋಗುದನ್ನೇ ಬಿಟ್ಟಿದ್ದಾರೆ. ಅಪ್ಪು ಅವರನ್ನು ಕಳೆದುಕೊಂಡು ಸರಿ ಸುಮಾರು 7 ತಿಂಗಳು ಕಳೆದಿದೆ. ಆದರೆ ಕುಟುಂಬದವರು ಮತ್ತು ಅಭಿಮಾನಿಗಳು ದುಃಖ ಈಗಲೂ ಸಹ ಕಡಿಮೆಯಾಗಿಲ್ಲ.
ಕರ್ನಾಟಕದ ಜನರು ಅಪ್ಪು ಇಲ್ಲ ಅನ್ನುವ ನೋವನ್ನು ಒಪ್ಪಿಕೊಳ್ಳಲು ಈಗಲೂ ಕಷ್ಟಪಡುತ್ತಿದ್ದಾರೆ. ನಮಗೆ ಇಷ್ಟು ನೋವು ಇರಬೇಕಾದರೆ ಇನ್ನು ಅವರ ಕುಟುಂಬದವರಿಗೆ ಇನ್ನು ಹೆಚ್ಚಾಗಿ ಇರುತ್ತದೆ. ಶಿವಣ್ಣ, ರಾಘಣ್ಣ, ಮತ್ತು ಇಡೀ ದೊಡ್ಮನೆ ಪುನೀತ್ ಇಲ್ಲ ಅನ್ನುವ ನೋವು ಇದೆ. ಅವರೆಲ್ಲರೂ ದುಃಖದಲ್ಲಿದ್ದಾರೆ. ಅದು ಅವರ ಅಣ್ಣನಾದ ಶಿವಣ್ಣ ಹಾಗೂ ರಾಘಣ್ಣ ಅವರನ್ನು ನೋಡಿದರೆ ಗೊತ್ತಾಗುತ್ತದೆ.

ಆದರೆ ಎಲ್ಲಕಿಂತ ಹೆಚ್ಚಾಗಿ ನೋವನ್ನು ಅನುಭವಿಸುತ್ತಿರುವುದು ಅಪ್ಪು ಅವರ ಪತ್ನಿ ಅಶ್ವಿನಿ ಮತ್ತು ಅವರ ಮಕ್ಕಳು. ಅದರಲ್ಲೂ ಪತ್ನಿ ಅಶ್ವಿನಿ ಅವರು ಮನಸ್ಸಿನಲ್ಲಿ ಮಾನಸಿಕವಾಗಿ ಅನುಭವಿಸುತ್ತಿರುವ ದುಃಖವನ್ನು ಯಾರಿಂದಲು ಅಂದಾಜು ಮಾಡಲು ಸಾಧ್ಯವಿಲ್ಲ. ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಅಶ್ವಿನಿ ಅವರ ಮನೆಯವರು ಈ ಮದುವೆಗೆ ಸಂಪೂರ್ಣ ಒಪ್ಪಿಗೆ ಕೊಡದಿದ್ದರೂ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕರ್ನಾಟಕ ರತ್ನ ಪುನೀತ್ ಅವರ ಮದುವೆ ಸುಮಾರು 22 ವರ್ಷಗಳ ಹಿಂದೆ ಅದ್ದೂರಿಯಾಗಿ ನಡೆದಿತ್ತು. ಪುನೀತ್ ಹಾಗೂ ಅಶ್ವಿನಿ ಅವರು ಸದಾ ಅನ್ಯೋನ್ಯವಾಗಿದ್ದ ಈ ಜೋಡಿ. ಬಹಳ ಸಂತೋಷದಿಂದ 21ವರ್ಷಗಳ ಕಾಲ ಅತ್ಯುತಮವಾದ ದಾಂಪತ್ಯ ಜೀವನ ನಡೆಸಿದ್ದಾರೆ. ಇವರಿಬ್ಬರ ಸಂಸಾರದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಗಾಸಿಪ್ ಕೂಡ ಕೇಳಿ ಬರಲಿಲ್ಲ. ಇವರಿಬ್ಬರು ನಡುವೆ ಇದುವರೆಗೂ ಒಮ್ಮೆ ಸಹ ಬಿನ್ನಾಭಿಪ್ರಾಯ ಕೇಳಿ ಬಂದಿಲ್ಲ.

ಅಷ್ಟು ಹೊಂದಿಕೊಂಡು ಇದ್ದ ಈ ಜೋಡಿ ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲು ಜೊತೆಯಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ಮತ್ತು ಅಶ್ವಿನಿ ಅವರು. ಇತ್ತೀಚಿಗೆ ಸಾಮಾನ್ಯವಾಗಿ ಸೇಲಾಬ್ರೇಟಿಗಳು ತಮ್ಮ ಹೆಂಡತಿಯನ್ನು ಸಿನೆಮಾ ಸಮಾರಂಭಕ್ಕೆ ಕರೆತರುವುದು ಅಪರೂಪ. ಆದರೆ ಅಪ್ಪು ಮತ್ತು ಅಶ್ವಿನಿ ಮಾತ್ರ ಯಾವಾಗಲು ಜೊತೆಯಾಗಿ ನಡೆಯುವ ಎಲ್ಲ ಕಾರ್ಯಕ್ರಮಕ್ಕೂ ಬರುತ್ತಿದ್ದರು.
ಇವರರಿಬ್ಬರ ಮುಖದಲ್ಲಿ ಯಾವಾಗಲು ಒಂದು ರೀತಿಯ ಮಂದಹಾಸ ಬೇರೆಯವರನ್ನು ನಗಿಸುವ ಸುಂದರವಾದ ನಿಸ್ಕಲ್ಮಷ ನಗು ಇರುತ್ತಿತ್ತು. ಇವರಿಬ್ಬರು ಸರಳಜೀವಿಗಳಗಿದ್ದರು. ಇವರಿಬ್ಬರ ಈ ಸರಳತೆ ನೋಡಿ ಅದೆಷ್ಟೋ ಜನ ಇದ್ದಾರೆ ಇವರ ಹಾಗೇ ಇರಬೇಕು ಅಂತ ಅಂದುಕೊಂಡಿದ್ದರು. ಹೀಗಿದ್ದಾಗ ಇದ್ದಕಿದ್ದ ಹಾಗೇ ಅಪ್ಪು ಅವರು ಬಿಟ್ಟು ಹೋದಾಗ ಅಶ್ವಿನಿ ಅವರ ಮನಸ್ಥಿತಿ ಹೇಗಿರುತ್ತದೆ ಎನ್ನುವದನ್ನು ನೀವು ಯೋಚನೆ ಮಾಡಲು ಸಹ ಕಷ್ಟವಾದುದ್ದು.

ಇಂತಹ ಕಷ್ಟದ ಸಮಯದಲ್ಲಿ ಅಶ್ವಿನಿ ಅವರ ಜೊತೆ ದೊಡ್ಮನೆ ಕುಟುಂಬ ಮತ್ತು ಕೋಟ್ಯಂತರ ಅಭಿಮಾನಿಗಳ ಸಪೋರ್ಟ್ ಇದೇ. ಅಪ್ಪು ಅವರು ದೈಹಿಕವಾಗಿ ಇಲ್ಲವಾದ ಆ ಕ್ಷಣದಿಂದಲೂ ಅಶ್ವಿನಿ ಅವರನ್ನು ಮುಖವನ್ನು ನೋಡಲಾಗುತ್ತಿಲ್ಲ, ಮೊದಲಿದ್ದ ಸಂತೋಷ, ನಗು ಅವರ ಮುಖದಲ್ಲಿ ಈಗ ಇಲ್ಲ. ಆ ನಗು ಮತ್ತೊಮ್ಮೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇದೀಗ ಆ ಕ್ಷಣ ಬಂದಿದೆ. ದೊಡ್ಮನೆ ಕುಟುಂಬ ಕೊನೆಗೂ ಅಶ್ವಿನಿ ಅವರ ಮುಖದಲ್ಲಿ ನಗುವನ್ನು ತರಿಸಿದೆ. ರಾಘಣ್ಣ, ಶಿವಣ್ಣ, ಅವರ ಕುಟುಂಬ ಹಾಗೂ ಇನ್ನು ಕೆಲವರೊಡನೆ ಅಶ್ವಿನಿ ಅವರು ಇರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಶ್ವಿನಿ ಅವರು, ವಂದಿತಾ ಪುನೀತ್ ರಾಜಕುಮಾರ್, ರಾಘಣ್ಣ, ಮಂಗಳಮ್ಮ ಅವರು, ಯುವರಾಜಕುಮಾರ್, ಹಾಗೂ ಕುಟುಂಬದ ಎಲ್ಲಾ ಸದಸ್ಯರು ಫೋಟೋದಲ್ಲಿ ನೀವು ನೋಡಬಹುದು. ಈ ಫೋಟೋದಲ್ಲಿ ಅಶ್ವಿನಿ ಅವರ ಮುಖದಲ್ಲಿ ಸಣ್ಣದಾದ ಒಂದು ನಗುವನ್ನು ನೀವು ಕಾಣಬಹುದು. ಅಶ್ವಿನಿ ಅವರ ಈ ನಗುಮುಖ ನೋಡಿ ತುಂಬಾ ಸಮಯ ಆಗಿತ್ತು. ಅಶ್ವಿನಿ ಅವರ ಈ ನಗುವನ್ನು ಕಂಡು ಅಭಿಮಾನಿಗಳು ಈ ನಗು ಸದಾ ನಿಮ್ಮ ಮುಖದಲ್ಲಿ ಕಾಣಲಿ ಎಂದು ಖುಷಿಪಟ್ಟಿದ್ದಾರೆ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *