ಅಪ್ಪು ಅಗಲಿಕೆ ನಂತರ ಮನೆಯಲ್ಲಿ ಅಶ್ವಿನಿ ಮೇಡಮ್ ಹೇಗಿರುತ್ತಾರೆ ಗೊತ್ತಾ…ಸತ್ಯ ಬಿಚ್ಚಿಟ್ಟ ಬಾಡಿಗಾರ್ಡ್ ಚಾಲಪತಿ

ಸುದ್ದಿ

ಕರುನಾಡ ರತ್ನ ಕನ್ನಡ ಚಿತ್ರರಂಗದ ನಮ್ಮೆಲ್ಲರ ಪ್ರೀತಿಯ ಅಪ್ಪು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲ ಬಿಟ್ಟೋಗಿ ಅದಾಗಲೇ ಕೆಲವು ತಿಂಗಳು ಕಳೆದಿದೆ. ಆದರೆ ಅಪ್ಪು ಅವರ ಮೇಲಿರುವ ಪ್ರೀತಿ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. ಅಪ್ಪು ಅವರಿಗೆ ಅಭಿಮಾನಿಗಳು ಅಂದೇ ಪ್ರಾಣ ಸೇಮ್ ಅವರು ಅಣ್ಣಾವ್ರು ತರಹನೆ. ಪುನೀತ್ ಹೋದಮೇಲೂ ಸಹಾ ಜನರು ಅವರಿಗೆ ಅಷ್ಟೇ ಪ್ರೀತಿಯನ್ನು ತೋರಿಸುತಿದ್ದಾರೆ.
ಅದಕ್ಕೆ ಸಾಕ್ಷಿ ಪುನೀತ್ ಹೋದಾ ಮೇಲು ಅವರ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ದಾಖಲೆಗಳು. ಈಗಾಗಲೇ ನಿಮಗೆ ಗೊತ್ತಿರಬೇಕು. ಅಪ್ಪು ಅವರ ಅಭಿಮಾನಿಗಳ ಬಗ್ಗೆ ನಿಮಗೆ ಹೇಳಬೇಕಿಲ್ಲ. ತಮ್ಮ ಮೆಚ್ಚಿನ ನಟನಿಗಾಗಿ ಅನೇಕ ರೀತಿಯ ಜನರು ಮೆಚ್ಚುವ ಕೆಲಸವನ್ನು ಮಾಡುತಿದ್ದರೆ. ಅವರ ಕುಟುಂಬ ಸಹ ಅವರ ಹಾದಿಯಲ್ಲೆ ಸಾಗುತ್ತಿದ್ದಾರೆ.

ಹಾಗೂ ಅವರು ಕುಟುಂಬದವರು ಪುನೀತ್ ಅವರು ಕಂಡಿದ್ದ ಎಲ್ಲಾ ಕನಸುಗಳನ್ನು ನನಸು ಮಾಡುವ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಅವರ ಪಿ. ಆರ್. ಕೆ ಸಂಸ್ಥೆಯ ಮೂಲಕ ಪತ್ನಿ ಅಶ್ವಿನಿ ಅವರು ಪ್ರೀತಿಯ ಪತಿ ಅಪ್ಪು ಅವರ ಕನಸಸಿನಂತೆ ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶಗಳನ್ನು ನೀಡಬೇಕೆಂದು ಒಳ್ಳೆಯ ಚಿತ್ರಗಳ್ಳನ್ನು ನೀಡಬೇಕೆಂದು ಅಪ್ಪು ಅಂದು ಕೊಂಡಿದ್ದಾರೆ.
ಆ ಕೆಲಸ ಅಶ್ವಿನಿ ಅವರು ಈಗ ಮುಂದುವರಿಸುತ್ತಿದ್ದಾರೆ. ಅಪ್ಪು ಅವರ ಪುಣ್ಯ ಸ್ಮರಣಿ ದಿನ ಇಡೀ ದೊಡ್ಮನೆ ಕುಟುಂಬ ಅಪ್ಪು ಅವರ ಸಮಾಧಿ ಬಳಿ ಬಂದು ಅವರಿಗೆ ಪೂಜೆ ಸಲ್ಲಿಸಿದರು. ಇನ್ನು ಆ ಸಮಯದಲ್ಲಿ ಅಪ್ಪು ಅವರ ಅಂಗಾರಕ್ಷಕ ಬಾಡಿಗಾರ್ಡ್ ಚಾಲಪತಿ ಅವರು ಮಾಧ್ಯಮದ ಮುಂದೆ ಮಾತನಾಡಿದ್ದು ಅಪ್ಪು ಪತ್ನಿ ಅಶ್ವಿನಿ ಅವರ ಬಗ್ಗೆ ಅನೇಕ ವಿಚಾರಗಳ್ಳನ್ನು ಶೇರ್ ಮಾಡಿಕೊಂಡರು.

ನಮ್ಮ ಬಾಸ್ ಇಲ್ಲ ಅಂತ ಅಂದುಕೊಳ್ಳೊಕ್ಕೆ ಸಾಧ್ಯನೇ ಇಲ್ಲ. ನಾನು ಅಂದುಕೊಳ್ಳೋಕೆ ಆಗುದೆಯಿಲ್ಲ. ಎಲ್ಲಾ ಕಡೆ ಹೋದಾಗ ಜನ ಕೊಡುವ ಪ್ರೀತಿ, ಪ್ರತಿ ಊರಿನಲ್ಲೂ ಅವರ ಫೋಟೋ ಅದನ್ನು ನೋಡಿ ಅವರಿಲ್ಲ ಅಂತ ಅಂದುಕೊಳ್ಳೊಕ್ಕೆ ಆಗಲ್ಲ. ಅದೇ ಬೇರೆಯವರ ವಿಚಾರದಲ್ಲಿ ಈ ಥರ ಘಟನೆ ನಡೆದು ಬಿಟ್ಟರೆ ಅವರ ಫೋಟೋ ನೋಡಿ ಅಯ್ಯೋ ಹೀಗಾಯಿತಾ ಅಂತ ನಾವು ಅಂದುಕೊಳ್ತೀವಿ ಅದರೆ ಈ ವಿಷಯದಲ್ಲಿ ಹಾಗೇ ಅಂದುಕೊಳ್ಳೊಕ್ಕೆ ಆಗೋದಿಲ್ಲ. ನಮ್ಮ ಯಜಮಾನ್ರು ಇಲ್ಲೇ ಇದ್ದಾರೆ. ಎಲ್ಲರಲ್ಲೂ ಇದ್ದಾರೆ ಕರ್ನಾಟಕದ ಜನರ ಮೂಲಕ ನಮ್ಮನ್ನು ಅವರು ನೋಡ್ತಾ ಇದ್ದಾರೆ.

ಈಗ ಅವರ ಮನೆಯಲ್ಲಿ ತುಂಬಾ ಚೇಂಜಸ್ ಅಗಿದ್ದು ಅಲ್ಲಿ ತುಂಬಾ ಮಿಸ್ ಮಾಡಿಕೊಳ್ತೀವಿ. ಮನೆಯಲ್ಲಿ ಇದ್ದಾಗ ಯಾವುದೇ ಸಂದರ್ಭದಲ್ಲಿ ಇದ್ದಾಗ ಯಜಮಾನ್ರು ಇದ್ದಿದ್ರೆ ಹೇಗಿರ್ತಿತ್ತು ಅವರು ಏನು ಮಾಡ್ತಾ ಇದ್ರೂ ಅಂತ ಯೋಚನೆ ಮಾಡ್ತೀವಿ. ಸಿನಿಮಾ ಸಮಾರಂಭಗಳಿಗೆ ಅಥವಾ ಕಾರ್ ನಲ್ಲಿ ಅವರ ಜೊತೆ ಜರ್ನಿ ಮಾಡುವಾಗ ನಮ್ಮ ಬಾಸ್ ಎಷ್ಟು ಚನ್ನಾಗಿ ಪ್ರೀತಿಯಿಂದ ನಮ್ಮ ಜೊತೆ ಮಾತಾಡತ್ತಾ ಇದ್ದರೂ ನಮ್ಮ ಜೊತೆ ತಮಾಷೆ ಮಾಡ್ತಾ ಇದ್ರೂ ಎನ್ನುತ್ತಾರೆ ಬಾಡಿಗಾರ್ಡ್ ಚಾಲಪತಿ ಯಾರಿಗೂ ಕೂಡ ಬೇಜಾರಾಗೋ ಹಾಗೇ ಅವರು ಇದು ವರೆಗೂ ನಡೆದುಕೊಂಡೆಯಿಲ್ಲ.

ಬೇರೆ ಊರಿಗೆ ಹೋದ್ರೆ ಅವರಿಗೆ ಎಲ್ಲಿ ಇಷ್ಟ ಆಗುತ್ತೆ ಅಲ್ಲಿ ಗಡಿ ನಿಲ್ಲಿಸಿ ಕಾಫಿ ತಿಂಡಿ ಊಟ ಮಾಡ್ತಾ ಇದ್ರು. ಅವರನ್ನು ಯಾರೇ ಮಾತಾಡಿಸಿದರು ಅವರನ್ನು ಪ್ರೀತಿಯಿಂದ ಸಂತೋಷದಿಂದ ಮಾತಾಡಿಸ್ತಾ ಇದ್ದರೂ ದೊಡ್ಡ ಹೋಟೆಲ್ ಅಥವಾ ಚಿಕ್ಕ ಹೋಟೆಲ್ ಅಂತ ಏನೂಇಲ್ಲ ಇಲ್ಲೇ ತಿನ್ನೋಣ ಅವರಿಗೆ ಒಳ್ಳೇದಾಗುತ್ತೆ ಅಂತ ಯಜಮಾನ್ರು ಹೇಳುತ್ತಿದ್ದರು. ಎಂದರು ಚಾಲಪತಿ.

ಅಶ್ವಿನಿ ಅಕ್ಕ ತುಂಬಾ ಮೌನವಾಗಿದ್ದು ಸುಮ್ನ್ ಇರ್ತಾರೆ ಅವರು ಸೈಲೆಂಟ್ ಆಗಿರ್ತಾರೆ. ಅವರು ಏನು ಮಾತಾಡೋಕ್ಕೆ ಹೋಗಲ್ಲ. ನಾವು ಅವರ ಮನೆ ಒಳಗೆ ಹೋಗಿ ಏನು ಮಾಡದೋಕೆ ಆಗಲ್ಲ. ನಾವು ಆಫೀಸ್ ನಲ್ಲಿ ಹೊರಗಡೆ ಇರ್ತೀವಿ. ಅಕ್ಕ ಏನಾದ್ರು ಹೊರಗಡೆ ಮಕ್ಕಳ ಜೊತೆ ಬಂದ್ರೆ ಅವರ ಜೊತೆಗೆ ಹೋಗ್ತಿವಿ ಅಷ್ಟೇ. ಅವರು ಒಳಗಡೆ ಏನು ಮಾಡತಾರೆ ಏನು ಯೋಚ್ನೆ ಮಾಡ್ತಾರೆ ಅಂತ ನಮಗೆ ಗೊತ್ತಾಗುದಿಲ್ಲ. ನಾವು ಅವರ ಹತ್ತಿರ ಏನಾಗಿದೆ ಅಂತ ಕೇಳೋಕ್ಕೂ ಆಗಲ್ಲ ಯಾಕೆಂದ್ರೆ ನಮಗೂ ಅರ್ಥ್ ಆಗುತ್ತೆ ಬಾಸ್ ಇಲ್ಲ ಅಂತ. ನಮಗೆ ಇಷ್ಟು ನೋವಾಗಿದೆ.
ಅವ್ರಿಗೆ ಇನ್ನೆಷ್ಟು ನೋವಾಗಿರುತ್ತೆ. ಅದುಕ್ಕೆ ಅವರನ್ನು ಮಾತಾಡಿಸಿ ಇನ್ನಷ್ಟು ನೋವು ಕೊಡಬರೇದೆಂದು ನಾವು ಸುಮ್ನೆ ಇರ್ತೀವಿ ಎಂದು ಚಾಲಪತಿ ಹೇಳಿದ್ದಾರೆ. ಇನ್ನು ಯಜಮಾನ್ರು ಹುಟ್ಟಿದ ದಿನ ಅವರ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯಯಿತು ಒಳ್ಳೆಯ ರೆಸ್ಪೋನ್ಸ್ ಪಡೆದು ಯಲ್ಲ ಕಡೆ ಒಳ್ಳೆ ಪ್ರದರ್ಶನ ಕಂಡಿತು. ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ದನ್ಯವಾದಗಳು.


Leave a Reply

Your email address will not be published. Required fields are marked *