ಪುನೀತ್ ರಾಜ್ ಕುಮಾರ್ ಅವರನ್ನು ನೆನೆದುಕೊಂಡರೆ ಒಂದು ಕ್ಷಣ ಕಣ್ಣಚೀನಲ್ಲಿ ನೀರು ಬರೋದು ನಿಜ. ಇನ್ನು ಎಷ್ಟೋ ಚಿತ್ರಗಳಲ್ಲಿ ನಟಿಸಿ, ಅದೆಷ್ಟೋ ಜನರ ಬಾಳಲ್ಲಿ ಬೆಳಕಾಗಬೇಕಿದ್ದ ನಮ್ಮ ಅಪ್ಪು ಕಣ್ಣಮರೆಯಾಗಿ ಹೋಗಿದ್ದಾರೆ. ಅಂದುಕೊಂಡಂತೆ ಆಗಿದ್ದಾರೆ ಇಸ್ಟೊತ್ತಿಗೆ ಅಪ್ಪು ಅಭಿನಯದ ದ್ವಿತ್ವ ಚಿತ್ರ ಶೋಟಿಂಗ್ ನಲ್ಲಿ ಭಾಗಿಯಾಗಬೇಕಿತ್ತು. ಸಿನೆಮಾದ ಟೈಟಲ್ ಕೂಡ ಲಾಂಚ್ ಮಾಡಿದ್ದು ಫಸ್ಟ್ ಲುಕ್ ಕೂಡ ಬಿಡುಗಡೆಯಗಿತ್ತು. ಸ್ಕ್ರಿಪ್ಟ್ ವರ್ಕ್ ಕೂಡ ಮುಗಿದಿದ್ದು ಅಪ್ಪು ಅವರು ಅಗಲುವ ಎರಡು ದಿನ ಮುಂಚೆ ಕಾಸ್ಟ್ಯೂಮ್ ಬಗ್ಗೆ ಚಿತ್ರದ ನಿರ್ದೇಶಕ ಪವನ್ ಕುಮಾರ್ ಜೊತೆ ಮಾತು ಆಡಿದ್ದರು. ಆದರೆ ವಿಧಿಯಾಟಕ್ಕೆ ಅಪ್ಪು ಮರುಗಾಲೆ ಬೇಕಾಯಿತು.
ಹೌದು ಅಪ್ಪು ಆಗಲುವಿಕೆಯ ಮುನ್ನ ಐದು ಚಿತ್ರಗಳನ್ನು ಒಪ್ಪಿಕೊಂಡಿದ್ದರು ಎನ್ನುತ್ತಿದ್ದಾರೆ. ಐದರಲ್ಲಿ ಮೊದಲನೆಯದು ದ್ವಿತ್ವ ನಂತರ ಅವರದ್ದೇ ಬ್ಯಾನರ್ ನಲ್ಲಿ ಚಿತ್ರದಲ್ಲ ಅವರು ನಟಿಸಬೇಕಿತ್ತು. ಇನ್ನು ಈ ಚಿತ್ರಕ್ಕೆ ಜೇಕಬ್ ವರ್ಗಿಸ್ ನಿರ್ದೇಶಕರಾಗಿದ್ದು ಸ್ವತಃ ಅಪ್ಪು ಅವರೇ ಈ ಚಿತ್ರದ ಕಥೆಯಲ್ಲಿ ಭಾಗಿಯಾಗಿದ್ದರು.ಇವುಗಳ ಹೊರತಾಗಿಯೂ ದಿನಕರ್ ತೂಗುದೀಪ್ ಸಂತೋಷ ಆನಂದ್ ರಾಮ್ ಜೊತೆಯೂ ಅಪ್ಪು ಅವರು ಒಂದೊಂದು ಚಿತ್ರದಲ್ಲಿ ಅಭಿನಯಮಾಡಬೇಕಿತ್ತು. ಆದರೆ ಅಷ್ಟರಲ್ಲೇ ಅಪ್ಪು ನಮ್ಮನೆಲ್ಲ ಬಿಟ್ಟು ಹೊರಟೆ ಬಿಟ್ಟರು.
ನಿರ್ದೇಶಕ ಜೇಕಬ್ ಅವರು ಪುನೀತ್ ರಾಜ್ ಕುಮಾರ್ ಇಲ್ಲದೆ ನನ್ನ ಕಥೆಯನ್ನು ಸಿನೆಮಾ ಮಾಡಲಾರೆ ಎಂದು ಹೇಳಿದ್ದಾರೆ. ಆದರೆ ಇನ್ನೇನು ಶುರುವಾಗಬೇಕಿದ್ದ ದ್ವಿತ್ವ ಸಿನೆಮಾ ಏನಾಗುತ್ತಿದೆ ಎನ್ನುವ ಚರ್ಚೆ ಸಿನಿ ರಸಿಕರಲ್ಲಿ ಶುರುವಾಗಿದೆ. ಅದಕ್ಕೆ ಉತ್ತರ ಸಿಗುವ ಕಾಲ ಬಂದಿದ್ದು ಇದೇ ಈ ಚಿತ್ರದಲ್ಲಿ ರಾಘಣ್ಣ ಅವರ ಮಗ ಯುವ ರಾಜ್ ಕುಮಾರ್ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ ಕೂಡ ಆಗಿದೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್ ನಟರಿಗೂ ಈ ಕಥೆಯ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗಿದೆ.
ಚಿತ್ರತಂಡ ಯಾವುದೇ ಕಾರಣಕ್ಕೂ ಈ ಸಿನೆಮಾ ನಿಲ್ಲುವುದಿಲ್ಲ ಎಂದಿದ್ದಾರೆ. ಕಥೆಗೆ ಹೊಂದುವ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಸಿನೆಮಾವನ್ನು ಮುಂದುವರಿಸುತ್ತೇವೆ. ಅಪ್ಪು ಅವರ ನೆನಪಿನಲ್ಲಿಯೇ ಈ ಚಿತ್ರ ಮಾಡುತ್ತೇವೆ ಎನ್ನುವ ಮೂಲಕ ಚಿತ್ರ ಆಗುವ ಕುರಿತು ಮುನ್ಸೂಚನೆ ನೀಡಿತ್ತು ಚಿತ್ರತಂಡ. ಆದರೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಹೊರ ಬಿದ್ದಿದೆ. ದ್ವಿತ್ವ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾವಾಗಿದ್ದು ಈ ಚಿತ್ರದಲ್ಲಿ ಅಪ್ಪು ಅವರನ್ನು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸದ್ಯದ ಮಾಹಿತಿಯ ಪ್ರಕಾರ ಈ ಚಿತ್ರದ 10% ಚಿತ್ರಿಕಾರಣ ಕೂಡ ಮಾಡಲಾಗಿದೆ ಎನ್ನಲಾಗಿದೆ. ಒಂದು ಮೂಲದ ಪ್ರಕಾರ 3D ರೆಂಡರಿಂಗ್ ತಂತ್ರಜ್ಞಾನವನ್ನು ಬಳಸಿ ದ್ವಿತ್ವ ಸಿನಿಮಾದಲ್ಲಿ ಅಪ್ಪು ಅವರನ್ನು ಮರುಸೃಷ್ಟಿ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಮಾಹಿತಿಯ ಕುರಿತು ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.