ನಮಸ್ತೆ ಪ್ರೀತಿಯ ವೀಕ್ಷಕರೆ, ಕರ್ನಾಟಕದ ಯುವರತ್ನ ಅಭಿಮಾನಿಗಳು ಆರಾಧ್ಯ ದೇವರು ಪುನೀತ್ ರಾಜ್ ಕುಮಾರ್ ಅವರು ಬರೇ ನಾಯಕ ನಟನಾಗಿ ಮಾತ್ರಅಲ್ಲದೆ, ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡವರು. ಅದೆಷ್ಟೋ ಜನರಿಗೆ ಆಸರೆಯಾಗಿರುವ ಅಪ್ಪು ಇನ್ನಿಲ್ಲ ಎನ್ನುವ ವಿಚಾರ ಕೇಳಿ ಅದೆಷ್ಟೋ ಜನರಿಗೆ ದೊಡ್ಮನೆ ಕುಟುಂಬ, ಅಭಿಮಾನಿಗಳು, ಚಿತ್ರರಂಗದ ಅನೇಕರಿಗೆ ಈ ಸುದ್ಧಿ ಶಾಕ್ ನೀಡಿತ್ತು, ಕನ್ನಡ ಮಾತ್ರವಲ್ಲದೇ ಪರಭಾಷಾ ನಟ ಹಾಗೂ ನಟಿಯರು ಅಪ್ಪು ಎಂದರೆ ಅಚ್ಚು ಮೆಚ್ಚು. ಅಪ್ಪು ಒಬ್ಬ ಸ್ಟಾರ್ ನಟ ಮಾತ್ರವಲ್ಲ, ಹೃದಯದವಂತ ಸರಳ ಸಜ್ಜನಿಕೆಯ ವ್ಯಕ್ತಿ ಕೂಡ.
ಹೌದು ಸ್ಟಾರ್ ನಟ ಎನ್ನುವ ಗತ್ತು ಅವರ ವ್ಯಕ್ತಿತ್ವದಲ್ಲಿಯೇ ತಿಳಿಯುತ್ತದೆ. ಇಂತಹ ಸಾಕಷ್ಟು ಸೆಲೆಬ್ರೇಟಿಗಳು ಇದ್ದಾರೆ, ಆದರೆ ಇಂತಹ ಸ್ಟಾರ್ ನಟರ ತವಿರುದ್ಧವಾಗಿದ್ದರೂ ಪುನೀತ್ ರಾಜ್ ಕುಮಾರ್. ಸ್ಯಾಂಡಲ್ವುಡ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳದವರಿಲ್ಲ. ಇವತ್ತಿಗೂ ಕೂಡ ಅಪ್ಪುವಿನ ನೆನಪಿನಲ್ಲಿಯೇ ದೊಡ್ಮನೆ ಕುಟುಂಬ ದಿನ ಕಳೆಯುತ್ತಿದೆ.
ಇನ್ನೂ ವೈಯಕ್ತಿಕ ಬದುಕಿನಲ್ಲಿ ಹಾಗೂ ಸಿನೆಮಾ ಬದುಕಿನಲ್ಲಿ ಯಾರೊಂದಿಗೂ ಮನಸ್ತಾಪ ಮಾಡಿಕೊಂಡವರಲ್ಲ. ಅಷ್ಟೇ ಅಲ್ಲದೇ, ಸಮಾಜ ಮುಖಿ ಕೆಲಸಗಳನ್ನು ಮಾಡಿದರೂ ಎಂದಿಗೂ ಪ್ರಚಾರವನ್ನು ಇಷ್ಟ ಪಟ್ಟವರಲ್ಲ. ಇವರು ಮಾಡುತ್ತಿದ್ದ ಕೆಲಸಗಳು ಬೆಳಕಿಗೆ ಬಂದಿದ್ದು ಅಪ್ಪು ಅಗಲಿದ ನಂತರವೇ ಎಂಬುದು ಮಾತ್ರ ಸತ್ಯ. ಅಪ್ಪು ಒಬ್ಬ ಸ್ಟಾರ್ ನಟ ಮಾತ್ರವಲ್ಲ, ಅದಕ್ಕಿಂತ ಮಿಗಿಲಾಗಿ ಹೃದಯವಂತ ವ್ಯಕ್ತಿ. ಯಾವುದೇ ಸ್ವಾರ್ಥವನ್ನು ಇಟ್ಟುಕೊಳ್ಳದೇ ಮಾಡಿದ ಸೇವೆಗಳಿಂದ ಅಪ್ಪು ಅವರನ್ನು ದೇವರ ಸ್ಥಾನದಲ್ಲಿಟ್ಟು ಅಭಿಮಾನಿಗಳು ಪೂಜಿಸುತ್ತಿದ್ದಾರೆ.
ಹೌದು ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಬಳಿ ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಅಪ್ಪು ಇಲ್ಲವಾದ ಬಳಿಕ ಪುನೀತ್ ಅವರ ಬಾಲ್ಯದ ಫೋಟೋಗಳು, ಸಿನೆಮಾದ ಹಾಡು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈ’ರಲ್ ಆಗುತ್ತಿದೆ. ಈ ಮೂಲಕ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ತನ್ನ ಪ್ರೀತಿಯ ಅಭಿಮಾನಿಗಳ ಜೊತೆಗೆ ಒಳ್ಳೆಯ ರೀತಿಯಲ್ಲಿ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು.
ತನ್ನ ಪತಿಯಂತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ಅಪ್ಪು ಅಭಿಮಾನಿಗಳ ಜೊತೆಗೆ ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಹಾಗಾದರೆ ಅಶ್ವಿನಿಯವರ ಯಾರ ಜೊತೆಗೆ ಹೇಗೆ ನಡೆದುಕೊಂಡಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ. ಈಗಾಗಲೇ ಪುನೀತ್ ಅವರ ಎಲ್ಲ ಜವಾಬ್ದಾರಿಗಳು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಅಶ್ವಿನಿ ಅವರು. ಇನ್ನು ಅಶ್ವಿನಿ ಅವರು ಅಪ್ಪು ಅವರ ಅಭಿಮಾನಿಗಳನ್ನು ಕೂಡ ಅಪ್ಪು ಅವರಂತೆ ಕಾಣುತ್ತಿದ್ದಾರೆ.
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಬಾರಿ ವೈ’ರಲ್ ಆಗಿತ್ತು. ಈ ವಿಡಿಯೋದಲ್ಲಿ ರಾಮನಗರ ಮೂಲದ ಲೋಕೇಶ್ ಅನ್ನುವವರು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಹೋಗಿ ಪುನೀತ್ ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿಯಾಗಿದ್ದಾರೆ. ಹೆಂಡತಿ ಹಾಗೂ ಮಗಳೊಂದಿಗೆ ಲೋಕೇಶ್ ಅವರು ಅಶ್ವಿನಿ ಅವರನ್ನು ಭೇಟಿ ಆಗಿದ್ದಾರೆ. ಬಿಡದಿಯಲ್ಲಿ ತಟ್ಟೆ ಇಡ್ಲಿ ಹೋಟೆಲ್ ಇಟ್ಟಿರುವ ಇವರು ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.
ಅಲ್ಲದೇ, ಅಪ್ಪು ಅವರೇ ಇವರಿಗೆ ಹೋಟೆಲ್ ಸ್ಥಾಪಿಸಲು ಸಹಾಯ ಮಾಡಿದ್ದರು. ಹೀಗಾಗಿ ಇದೀಗ, ಮುದ್ದಿನ ಮಗಳ ನಾಮಕರಣಕ್ಕೆ ಆಹ್ವಾನಿಸಲು ಅಪ್ಪು ಅವರ ಮನೆಗೆ ಹೋಗಿದ್ದಾರೆ. ಮನೆಗೆ ಬಂದ ಪುನೀತ್ ಅಭಿಮಾನಿಯ ಜೊತೆಗೆ ಸಮಯ ಕಳೆದು ಅಶ್ವಿನಿಯವರು, ಮಗುವಿನ ಯೋಗ ಕ್ಷೇಮ ವಿಚಾರಿಸಿ ಕುಟುಂಬದವರನ್ನು ಪ್ರೀತಿಯಿಂದ ಮಾತನಾಡಿಸಿ ಮಗುವಿಗೆ ವಿಷೇಶವಾದ ಉಡುಗೊರೆಯನ್ನು ಕೊಟ್ಟು ಕಳುಹಿಸಿದ್ದಾರೆ. ಆ ಸಮಯದಲ್ಲಿ ತೆಗೆದ ಫೋಟೋಗಳು ಈಗ ಎಲ್ಲಾಕಡೆ ವೈ’ರಲ್ ಆಗಿದೆ. ಕೆಳಗಿನ ವಿಡಿಯೋ ನೋಡಿ.