ಅಪ್ಪು ಅವರ ಕನಸಿನ ಶಕ್ತಿಧಾಮದ ಮಕ್ಕಳಿಗಾಗಿ ಅಪ್ಪು ಅಭಿಮಾನಿಯೊಬ್ಬರು ಮಾಡಿದ್ದೇನು ಗೊತ್ತಾ? ವಾವ್ ನಿಜಕ್ಕೂ ಶಾಕಿಂಗ್ ನೋಡಿ

ಸುದ್ದಿ

ಕರ್ನಾಟಕದ ಯುವರತ್ನ ಅಭಿಮಾನಿಗಳು ಆರಾಧ್ಯ ದೇವರುಆದಂತಹ ಪುನೀತ್ ರಾಜ್ ಕುಮಾರ್ ಅವರು ಬರೇ ನಾಯಕ ನಟನಾಗಿ ಮಾತ್ರಅಲ್ಲದೆ, ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡವರು. ಅದೆಷ್ಟೋ ಜನರಿಗೆ ಆಸರೆಯಾಗಿರುವ ಅಪ್ಪು ಇನ್ನಿಲ್ಲ ಎನ್ನುವ ವಿಚಾರ ಕೇಳಿ ಅದೆಷ್ಟೋ ಜನರಿಗೆ ದೊಡ್ಮನೆ ಕುಟುಂಬ, ಅಭಿಮಾನಿಗಳು, ಚಿತ್ರರಂಗದ ಅನೇಕರಿಗೆ ಈ ಸುದ್ಧಿ ಶಾಕ್ ನೀಡಿತ್ತು, ಕನ್ನಡ ಮಾತ್ರವಲ್ಲದೇ ಪರಭಾಷಾ ನಟ ಹಾಗೂ ನಟಿಯರು ಅಪ್ಪು ಎಂದರೆ ಅಚ್ಚು ಮೆಚ್ಚು. ಅಪ್ಪು ಒಬ್ಬ ಸ್ಟಾರ್ ನಟ ಮಾತ್ರವಲ್ಲ, ಹೃದಯದವಂತ ಸರಳ ಸಜ್ಜನಿಕೆಯ ವ್ಯಕ್ತಿ ಕೂಡ.

ಇನ್ನು ಸಾಕಷ್ಟು ಸಿನೆಮಾಗಳನ್ನು ಅಭಿನಯಿಸಬೇಕಿತ್ತು. ಅದಕ್ಕಿಂತ ಹೆಚ್ಚಾಗಿ ಬದುಕಿದ್ದಾಗ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್ ಎಲ್ಲಿಯೂ ಕೂಡ ಈ ಬಗ್ಗೆ ಹೇಳಿಕೊಳ್ಳಲೇ ಇಲ್ಲ ಪುನೀತ್ ರಾಜ್ ಕುಮಾರ್ ಅವರು ಸುಮಾರು 26ಕ್ಕೂ ಹೆಚ್ಚು ಅನಾಥಾಶ್ರಮ, 19 ಗೋಶಾಲೆ,16 ವೃದ್ಧಶ್ರಮಗಳನ್ನು ಪೋಷಣೆ ಮಾಡುತ್ತಿದ್ದರು.

ಮಾತ್ರವಲ್ಲದೇ ಸುಮಾರು 45ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಅದಕ್ಕಿಂತ ಮಿಗಿಲಾಗಿ ಶಕ್ತಿಧಾಮ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಡಾ. ರಾಜ್ ಕುಮಾರ್ ಅವರ ಕನಸಿನ ಶಕ್ತಿ ಧಾಮವಾಗಿತ್ತು. ಆದರೆ ಇದೀಗ ಅಪ್ಪು ಅಭಿಮಾನಿಯೊಬ್ಬರು ಶಕ್ತಿ ಧಾಮ ಮಕ್ಕಳಿಗಾಗಿ ಮಾಡಿದ ಕೆಲಸದ ಬಗ್ಗೆ ನೀವು ತಿಳಿದರೆ ಅಚ್ಚರಿಯಾಗುತ್ತೀರಿ.

ಅಪ್ಪು ಅವರು ಈ ಶಕ್ತಿಧಾಮದ ಬಗ್ಗೆ ಹೇಳುವುದಾದರೆ ಹೈ ಟೆಕ್ ತಂತ್ರಜ್ಞಾನದ ಸ್ಪರ್ಶ ಪಡೆದಿದೆ. ಉತ್ತಮವಾದ ಪರಿಸರದ ನಡುವೆ ಶಕ್ತಿಧಾಮದ ಸುಂದರ ಸುಸಜ್ಜಿತವಾದ ಕಟ್ಟಡವಿದೆ. ಮಕ್ಕಳಿಗೆ ಉತ್ತಮವಾದ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ನೀಡುವುದಕ್ಕಾಗಿ ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲಿಯ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಕೂಡ ಇದೆ.

ಮಕ್ಕಳು ಮಲಗುವ ಕೊಠಡಿಗಳಲ್ಲಿ ಕಾಟ್ ಗಳ ವ್ಯವಸ್ಥೆ ಒಂದೇ ರೀತಿಯ ಸಮವಸ್ತ್ರ ಮಕ್ಕಳಿಗೆ ನೀಡಲಾಗಿದೆ. ಅಷ್ಟೇ ಅಲ್ಲದೇ, ಮಕ್ಕಳ ಜೊತೆಗೆ ಮಹಿಳೆಯರಿಗೂ ಕೂಡ ಕೌಶಲ್ಯಗಳ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗವನ್ನು ಒದಗಿಸಲಾಗುತ್ತದೆ. ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಕುಂದು ಕೊರತೆಯಗದಂತೆ ಉತ್ತಮ ರೀತಿಯಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಿನಲ್ಲಿ ಹೈಟೆಕ್ ಶಕ್ತಿಧಾಮಕ್ಕೆ ಸಾಥ್ ನೀಡುತ್ತಿದ್ದರು ಅಪ್ಪು.

ಮೈಸೂರಿನ ಈ ಶಕ್ತಿಧಾಮ ಇದುವರೆಗೂ ಸಾವಿರಾರು ಮಕ್ಕಳ ಆಶ್ರಯ ತಾಣವಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅಗಲಿದ ನಂತರ ಈ ಶಕ್ತಿಧಾಮದ ಜವಾಬ್ದಾರಿಯನ್ನು ದೊಡ್ಮನೆ ಕುಟುಂಬ ನೋಡಿಕೊಳ್ಳುತ್ತಿತ್ತು. ಅಪ್ಪು ಅವರು ಶಕ್ತಿಧಾಮದ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.ಇದೀಗ ಅಪ್ಪು ಇಲ್ಲದೆ ಶಕ್ತಿಧಾಮ ಅನಾಥವಾಗಿದೆ. ಆದರೆ ಅಪ್ಪು ಇಲ್ಲವಾದ ಬಳಿಕ ಶಕ್ತಿ ಧಾಮದ ಜವಾಬ್ದಾರಿಯೂ ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಹೆಗಲ ಮೇಲ್ಇದೆ.

ಆದರೆ ಇದೀಗ ಅಪ್ಪುವಿನ ಶಕ್ತಿಧಾಮದಲ್ಲಿರುವ ಇಪ್ಪತೈದಕ್ಕೂ ಹೆಚ್ಚು ಮಕ್ಕಳನ್ನು ಅಪ್ಪು ಅಭಿಮಾನಿಯೊಬ್ಬರು ದತ್ತು ಪಡೆದುಕೊಂಡಿದ್ದಾರೆ. ಹೌದು ದೊಣ್ಣೆ ಬಿರಿಯಾನಿ ಹೋಟೆಲಿನ ಮಾಲೀಕರಾದ ಸಚಿನ್ ವಿಜಯ್ ಗೌಡ ಅವರು ಈ ಕೆಲಸಕ್ಕೆ ಕೈ ಹಾಕಿದ್ದಾರೆ ಸಚಿನ್ ವಿಜಯ್ ಗೌಡರ ಈ ಕೆಲಸಕ್ಕೆ ಶಿವಣ್ಣ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *