ಅಪ್ಪು ಆಸೆಯನ್ನು ನೆರವೇರಿಸಲು ಡ್ಯಾನ್ಸಿಂಗ್ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಗೆ! ಸ್ಪೆಷಲ್ ಗೆಸ್ಟ್ ಆಗಿ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಲಿದ್ದಾರೆ

ಸುದ್ದಿ

ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಿರುತೆರೆಯ ರಿಯಾಲಿಟಿ ಶೋ ಈಗಾಗಲೇ ಕೋಟ್ಯಂತರ ಜನರನ್ನು ಸೆಳೆದು no1 ಸ್ಥಾನದಲ್ಲಿ ಮಿಂಚುತ್ತಿದೆ. ಈ ಡ್ಯಾನ್ಸಿಂಗ್ ರಿಯಾಲಿಟಿ ಶೋ ಯುವಕರು ಹಾಗೂ ಯುವತಿಯರನ್ನು ಸೆಳೆದಿದೆ. ಇದರಲ್ಲಿ ಭಾಗವಹಿಸುವ ಸ್ಪರ್ಧೆಗಳು ಸಾಕಷ್ಟು ಉತ್ತಮವಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮೊನ್ನೆಡೆಸಿಕೊಂಡು ಬಂದಿದ್ದಾರೆ.
ಈ ಡ್ಯಾನ್ಸಿಂಗ್ ಚಾಂಪಿಯನ್ ಶೋನ ಪ್ರತಿಯೊಂದು ಎಪ್ಪಿಸೋಡ್ ಕೂಡ ಫೈನಲ್ ತರ ನಡೆಸಿಕೊಟ್ಟಿದ್ದಾರೆ ಸ್ಪರ್ದಿಗಳು. ಪ್ರತಿಯೊಂದು ಎಪ್ಪಿಸೋಡ್ ಕೂಡ ವೀಕ್ಷಕರು ಎಂಜಾಯ್ ಮಾಡಿದ್ದಾರೆ. ಇದೀಗ ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಿರುವ ಈ ಶೋಗೆ ಸ್ಪೆಷಲ್ ಗೆಸ್ಟ್ ಆಗಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಶೋಗೆ ಆಗಮಿಸಲಿದ್ದಾರೆ. ಇದರ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯವರು ಈಗಾಗಲೇ ಆದರ ಪ್ರೊಮೊ ಕೂಡ ಬಿಟ್ಟಿದ್ದಾರೆ. ಇದನ್ನು ನೋಡಿ ಅಪ್ಪು ಅಭಿಮಾನಿಗಳು ಹಾಗೂ ಧ್ರುವ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದರೆ.

ಮೊಟ್ಟ ಮೊದಲು ಬಾರಿಗೆ ರಿಯಾಲಿಟಿ ಶೋಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸುತ್ತಿದ್ದಾರೆ. ಅಪ್ಪು ಅಗಲಿಕೆಯ ನಂತರ ಮೊದಲ ಬಾರಿಗೆ ಕಿರುತೆರೆಯ ವಾಹಿನಿಯ ಶೋನಲ್ಲಿ ಅಶ್ವಿನಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಮನಸ್ಸಿನಲ್ಲಿ ನೋವಿದ್ದರೂ ಅಭಿಮಾನಿಗಳ ಆಸೆ ಹಾಗೂ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಭಾಗವಹಿಸುವ ಸ್ಪರ್ದಿಗಳ ಅಭಿನಂದಿಸಲು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸುತ್ತಿದ್ದಾರೆ.

14 ಸೆಲೆಬ್ರೇಟಿಗಳು ವೃತ್ತಿಪರ ಡ್ಯಾನ್ಸರ್ ಜೊತೆಯಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸೀರಿಯಲ್ ನಲ್ಲಿ ನಟಿಸುವ ನಟ ಹಾಗೂ ನಟಿಯರು ಈ ಶೋನಲ್ಲಿ ಸೆಲೆಬ್ರಿಟಿ ಡ್ಯಾನ್ಸರ್ ಗಳಾಗಿ ಭಾಗವಹಿಸಿದ್ದಾರೆ. ಈ ಶೋ ಈಗ ಕರ್ನಾಟಕ ದಲ್ಲಿ ಸಾಕಷ್ಟು ಸದ್ದು ಮಾಡಿದ್ದು ಇದೀಗ ಫೈನಲ್ ಹಂತಕ್ಕೆ ತಲುಪಿದೆ ಈ ಫೈನಲ್ ಗೆ ಐದು ಜೋಡಿಗಳು ಆಯ್ಕೆಯಾಗಿದೆ.

ಡ್ಯಾನ್ಸಿಂಗ್ ಚಾಂಪಿಯನ್ ವೇದಿಕೆಗೆ ಆರಂಭದಿಂದಲೂ ಪ್ರತಿವಾರ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮಕ್ಕೆ ಬಂದು ಬಂದು ಮೇರುಗನ್ನು ನೀಡುತ್ತಿದ್ದರು. ಅದೇ ರೀತಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಕೂಡ ಕಾರ್ಯಕ್ರಮಕ್ಕೆ ಭಾಗವಹಿಸಿ ನಾಲ್ಕು ದಿನದ ಪುಟ್ಟ ಮಗುವಿಗೆ ನಾಮಕರಣ ಮಾಡಿದ್ದಾರೆ.
ಗ್ರಾಂಡ್ ಫಿನಾಲೆಯ ವಿಶೇಷ ಏನೆಂದರೆ ನಟ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಿ ಕಾರ್ಯಕ್ರಮ ನಡೆಸುತ್ತಿರುವುದು ಫೈನಲ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೇರುಗನ್ನು ನೀಡುತ್ತದೆ ಎನ್ನುದರಲ್ಲಿ ಸಂಶಯವಿಲ್ಲ. ಅಪ್ಪು ಅವರಿಗೆ ಡ್ಯಾನ್ಸ್ ಅಂದರೆ ಸಿಕ್ಕಾಪಟ್ಟೆ ಇಷ್ಟ ಹಾಗಾಗಿ ಅವರಿಗಾಗಿ ಈ ತಯಾರಿ ಎನ್ನುತ್ತಾರೆ. ಕರುನಾಡ ಯುವರತ್ನ ಪುನೀತ್ ರಾಜಕುಮಾರ್ ಅಗಲಿಕೆಯ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಪತಿಯ ಹೆಸರು ಶಾಶ್ವತವಾಗಿ ಉಳಿಸುವುದಕ್ಕಾಗಿ ಕಿರುತೆರೆಯ ರಿಯಾಲಿಟಿ ಶೋಗಳಿಗೆ ಸಾರ್ವಜನಿಕವಾಗಿ ಭಾಗವಹಿಸುತ್ತಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇದೆ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡ್ಯಾನ್ಸಿಂಗ್ ವೇದಿಕೆಯಲ್ಲಿ ಅಶ್ವಿನಿ ಅವರು ಭಾಗವಹಿಸಿದ ಎಲ್ಲರಿಗೂ ಒಳ್ಳೆದಾಗಲಿ ಎಂದು ಹೇಳಿರುವುದು ಪ್ರೊಮೊ ದಲ್ಲಿ ಕಾಣಿಸುತ್ತದೆ. ಇನ್ನು ಕನ್ನಡ ಚಿತ್ರರಂಗದ ಸೂಪರ್ ಹೀರೋ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡ್ಯಾನ್ಸಿಂಗ್ ವೇದಿಕೆಗೆ ಗ್ರಾಂಡ್ ಎಂಟ್ರಿ ಕೊಟ್ಟು ಅವರ ಅಭಿನಯದ ಪೊಗರು ಸಿನಿಮಾದ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ.

ಈ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ 5 ಜೋಡಿಗಳು ವಿಭಿನ್ನ ರೀತಿಯ ತಮ್ಮದೇ ಶೈಲಿಯಲ್ಲಿ ಡಾನ್ಸ್ ಮಾಡಿ ಕರ್ನಾಟಕದ ಮನೆಮಾತಾಗಿದ್ದಾರೆ 5 ಜೋಡಿಗಳ ಹೆಸರು ಹೀಗಿದೆ ಆರಾಧ್ಯ ಹಾಗೂ ನಿವೇದಿತಾ, ಚಂದನಾ ಮತ್ತು ಅಕ್ಷತಾ, ಅರ್ಜುನ ಮತ್ತು ರಾಣಿ, ಅಂನ್ಮೋಲ್ ಮತ್ತು ಆದಿತ್ಯ, ಆರತಿ ಮತ್ತು ಸಾಗರ್, ಈ ಜೋಡಿಗಳು ಅವರ ಡಾನ್ಸ್ ಮುಕಾಂತರ ಕರ್ನಾಟಕದ ಜನರ ಮನಸ್ಸನ್ನು ಗೆದ್ದಿದ್ದಾರೆ.
ಇವರು ಡಾನ್ಸ್ ಸ್ಟೆಪ್ ಗಳು ಯಾವ ಬಾಲಿವುಡ್ ಡಾನ್ಸರ್ ಗಳಿಗೂ ಕಮ್ಮಿ ಇಲ್ಲ ಅನ್ನೋ ರೇಂಜಿಗೆ ಮಾಡುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳು ಡ್ಯಾನ್ಸಿಂಗ್ ಚಾಂಪಿಯನ್ ನ ಅಂತಿಮ ಟ್ರೋಫಿಯನ್ನು ಗೆಲ್ಲಲು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ನಟಿ ಮೇಘನಾ ರಾಜ್, ವಿಜಯ್ ರಘುವೇಂದ್ರ ಹಾಗೂ ನಾಟ್ಯ ಮಯೂರಿ ಜಡ್ಜ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ ಈಗಾಗಲೇ ಅಭಿಮಾನಿಗಳು ಗ್ರಾಂಡ್ ಫಿನಾಲೆಗೆ ಇಡೀ ಕರ್ನಾಟಕದ ವೀಕ್ಷಕರು ಕಾಯುತ್ತಿದ್ದಾರೆ.


Leave a Reply

Your email address will not be published. Required fields are marked *