ಅಪ್ಪು ಇಲ್ಲದ ಅರಮನೆ ತೊರೆದ ಪವರ್ ಸ್ಟಾರ್ ಸೈನಿಕ ಚಲಪತಿ, ಇನ್ಯಾವುದೇ ಸಿನಿಮಾ ಹೀರೋ ಜೊತೆ ಕೆಲಸ ಮಾಡಲ್ವಂತೆ! ಈಗ ಏನು ಮಾಡುತ್ತಿದ್ದಾರೆ?

ಸುದ್ದಿ

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಲ್ಲಿಗೆ ಹೋದರೂ ಅಲ್ಲಿ ಅವರ ಗನ್ ಮ್ಯಾನ್ ಚಾಲಪತಿ ಇದ್ದೇ ಇರುತ್ತಾರೆ. ಕನ್ನಡ ಚಿತ್ರರಂಗಕ್ಕೆ ಅಪ್ಪು ಅಭಿಮಾನಿಗಳಿಗೆ ಚಾಲಪತಿ ಹೆಸರು ಹೊಸದೇನು ಅಲ್ಲ. ಸದಾ ಅಪ್ಪು ಹಿಂದೆ ನಿಂತ್ತಿರುತ್ತಿದ್ದ ಅಜಾನುಬಾಹು ವ್ಯಕ್ತಿ. ಅಪ್ಪು ಅವರಂತೆ ಗನ್ ಮ್ಯಾನ್ ಚಾಲಪಾತಿ ಕೂಡ ಒಳ್ಳೆಯದು ವ್ಯಕ್ತಿತ್ವವನ್ನು ಹೊಂದಿದ್ದರು.

ಇನ್ನು ಅಪ್ಪು ಅಭಿಮಾನಿಗಳು ಎಷ್ಟು ಅಪ್ಪು ಅವರನ್ನು ಇಷ್ಟ ಪಡುತ್ತಿದ್ದೋರೋ ಅಷ್ಟೇ ಅವರ ಅಂಗಾರಕ್ಷಾಕ ಕೂಡ ಅಪ್ಪು ಅವರನ್ನು ಇಷ್ಟ ಪಡುತ್ತಿದ್ದರು. ಇನ್ನು ಚಾಲಪತಿ ಅವರು ಅಪ್ಪು ಅವರನ್ನು ಬಾಸ್ ಎಂದು ಕರೆಯುತ್ತಿದ್ದರು. ತನ್ನ ಬಾಸ್ ಅವರ ಅಗಲಿಕೆಯನ್ನು ಚಾಲಪತಿ ಕೂಡ ನೋವಿನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇನ್ನು ತನ್ನ ಬಾಸ್ ಅಪ್ಪು ಅವರ ನೆನಪನ್ನು ಇಟ್ಟುಕೊಂಡು ತನ್ನ ಜೀವನ ನಡೆಸುತ್ತಿದ್ದಾರೆ.

ಈ ಮದ್ಯೆ ಅಭಿಮಾನಿಗಳಿಗೆ ಬೇಸರದ ಸಂಗತಿ ಕೂಡ ಆಗಿದೆ. ಅಪ್ಪು ಆದೇನೆಂದರೆ ಅಪ್ಪು ಅವರ ಅಂಗಾರಕ್ಷಾಕ ಚಾಲಪತಿ ಡಿಧಿರನೇ ಅಪ್ಪು ಅವರ ಮನೆಯನ್ನು ತೊರೆದಿದ್ದಾರೆ. ಕೆಲಸ ಬಿಟ್ಟು ತಮ್ಮ ಊರನ್ನು ಸೇರಿದ್ದಾರೆ. ಪುನೀತ್ ರಾಜ್ ಕುಮಾರ್ ಗೆ ಹಲವು ವರ್ಷಗಳಿಂದ ಚಾಲಪತಿ ಗನ್ ಮ್ಯಾನ್ ಆಗಿದ್ದರು. ಅಪ್ಪು ಎಲ್ಲಿಗೆ ಹೋದರೂ, ಅವರಿಗೆ ಬೆಂಬಲಿಗನಾಗಿ ಚಾಲಪತಿ ಇರುತ್ತಿದ್ದರು. ತನ್ನ ಪಕ್ಕ ಚಾಲಪತಿ ಇದ್ದಾರೆ ಅಪ್ಪು ಕೂಡ ಯಾವುದೇ ಟೆನ್ಶನ್ ಇಲ್ಲದೆ ಯಾವುದೇ ಕಾರ್ಯಕ್ರಮಗಳಲ್ಲಿ ಹಾಗೂ ಸಿನೆಮಾಗಳ ಶೋಟಿಂಗ್ ನಲ್ಲಿ ಆರಾಮಾಗಿ ಪಾಲ್ಗೊಳ್ಳುತ್ತಿದ್ದರು.

ದೇವರ ಗುಡಿಯಲ್ಲಿ ದೇವರೇ ಇಲ್ಲದ ಮೇಲೆ ಅಲ್ಲಿ ನಾನಿದ್ದು ಏನು ಪ್ರಯೋಜನ ಎಂದು ಚಾಲಪತಿ ನೋವಿನಿಂದಲೇ ಅನ್ನ ಕೊಟ್ಟ ಗುಡಿಯನ್ನು ತೊರೆದಿದ್ದಾರೆ. ಇನ್ನು ಅಪ್ಪು ತಮ್ಮ ಮನೆಯಲ್ಲಿ ಕೆಲಸ ಮಾಡುವವರನ್ನು ಎಂದು ಕೆಲಸಗರಂತೆ ನೋಡಿದ್ದಿಲ್ಲ. ತಮ್ಮ ಸ್ವಂತ ಮನೆಯವರಂತೆ ನೋಡಿಕೊಳ್ಳುತ್ತಿದ್ದರು.

ಈಗ ಆ ಅರಮನೆಯಲ್ಲಿ ರಾಜಕುಮಾರನೇ ಇಲ್ಲ. ಹೀಗಿರುವಾಗ, ಕಳೆದ 7 ತಿಂಗಳಿನಿಂದ ತನ್ನ ಒಡೆಯ ಇಲ್ಲ ಎನ್ನುವ ನೋವಿನಿಂದಲೆ ಕೆಲಸ ಮಾಡುತ್ತಿದ್ದರು. ಆದರೆ ಚಾಲಪತಿ ಈಗ ಅಪ್ಪು ಅವರ ಮನೆಯನ್ನು ಬಿಟ್ಟು ಹೋಗಿದ್ದು. ಇನ್ನು ಮುಂದೆ ಯಾವುದೇ ಹೀರೋ ಜೊತೆ ಕೆಲಸ ಮಾಡುವುದಿಲ್ಲ ಎಂದು ಚಾಲಪತಿ ಹೇಳಿದ್ದಾರೆ.

ಇನ್ನು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಸುಮಾರು 7 ತಿಂಗಳು ಕಳೆದಿದೆ. ಅಪ್ಪು ಅವರ ಅಗಲಿಕೆಯ ನಂತರ ಅಪ್ಪು ಅವರ ಧರ್ಮ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ರಕ್ಷಣೆಗಾಗಿ ಚಾಲಪತಿ ಕೆಲಸ ಮಾಡುತ್ತಿದ್ದರು. ಆದರೆ ಚಾಲಪತಿ ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಒಲ್ಲದ ಮನಸ್ಸಿನದಲೇ ತಮ್ಮ ಊರನ್ನು ಸೇರಿದ್ದಾರೆ. ಅನ್ನ ಹಾಗೂ ಜೀವನ ಕೊಟ್ಟ ಒಡೆಯನ ನೆನಪಿನಲ್ಲೇ ಚಾಲಪತಿ ಹೊರಟಿದ್ದಾರೆ.

ಇನ್ನು ಇಷ್ಟು ವರ್ಷಗಳ ಕಾಲ ಅಪ್ಪು ಅವರ ಅಂಗಾರಕ್ಷಕರಗಿ ಕೆಲಸ ಮಾಡುತ್ತಿದ ಚಾಲಪತಿ ಇದ್ದಕಿದ್ದಹಂತೆ ಅಪ್ಪು ಅವರ ಮನೆಯನ್ನು ಬಿಟ್ಟು ಹೋಗಿದ್ದೆಕೆ ಎಂಬ ಪ್ರೆಶ್ನೆ ಹಲವರಿಗೆ ಕಾಡಿದೆ. ಅದಕ್ಕೆ ಚಾಲಪತಿ ಮೀಡಿಯಾದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಇನ್ನು ನನ್ನ ಬಾಸ್ ಅಗಲಿಕೆಯ ಬಳಿಕ ನನಗೆ ಅಲ್ಲಿ ಕೆಲಸ ಇರಲಿಲ್ಲ. ಪ್ರತಿದಿನ ಸುಮ್ಮನೆ ಕೂತು ಬರಬೇಕಿತ್ತು. ಆ ಕಾರಣಕಕ್ಕೆ ನಾನು ಕೆಲಸ ಬಿಟ್ಟೆ. ಆದರೆ, ಇನ್ನು ಮುಂದೆ ಯಾವುದೇ ಹೀರೋ ಜೊತೆಗೆ ಕೆಲಸ ಮಾಡುವುದಿಲ್ಲ. ನನ್ನ ದೇವರು ಅಪ್ಪು ಸರ್ ನೆನಪು ನನ್ನಲ್ಲಿ ಜೀವಂತವಾಗಿ ಉಳಿಯಬೇಕು” ಎಂದು ಚಾಲಪತಿ ಪ್ರತಿಕ್ರಿಯೆ ನೀಡಿದರು.
ಇನ್ನು ಅಪ್ಪು ಅವರ ಅಂಗಾರಕ್ಷಕ ಚಾಲಪತಿ ಕಳೆದ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು, ತಮ್ಮ ಊರದ ಕೋಲಾರ ಸೇರಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *