ಅಪ್ಪು ಬಿಟ್ರೆ ಇವರೇ ನನ್ನ ತಮ್ಮ ಎಂದು ಶಿವಣ್ಣ ಹೇಳಿದ್ದು ಯಾವ ಖ್ಯಾತ ನಟನಿಗೆ ಗೊತ್ತಾ..!?

Entertainment News

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ್ಲಾ ಅಗಲಿ ಹಲವಾರು ತಿಂಗಳುಗಳೇ ಕಳೆದುಹೋಗಿವೆ. ಕನ್ನಡ ಚಿತ್ರರಂಗದ ಅನರ್ಘ್ಯರತ್ನ ನಂತೆ ಇದ್ದಂತಹ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಚಿತ್ರರಂಗ ಬರಿದಾಗಿದೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ಎನ್ನುವುದು ದೇವರು ಮಾಡಿರುವಂತಹ ಅನ್ಯಾಯ ಎಂದು ಪ್ರತಿಯೊಂದು ದಿನ ಕೂಡ ಕನ್ನಡಿಗರು ದೇವರನ್ನು ಹಳಿಯುತ್ತಿದ್ದಾರೆ. ಇದ್ದಷ್ಟು ದಿನ ತಮ್ಮ ಸುತ್ತಮುತ್ತಲ ಇದ್ದವರನ್ನು ಭೇದಭಾವವಿಲ್ಲದೆ ಪ್ರೀತಿಯಿಂದ ನೋಡಿಕೊಂಡವರು ನಮ್ಮೆಲ್ಲರ ನೆಚ್ಚಿನ ಅಪ್ಪು.
ಕನ್ನಡ ಚಿತ್ರರಂಗದಲ್ಲಿ ನಟನೆ ಗಾಯನ ನಿರ್ಮಾಣ ಸಾಹಸ ದೃಶ್ಯಗಳಲ್ಲಿ ನಿಜವಾದ ಪ್ರಯತ್ನ ಹೀಗೆ ಯಾವುದೇ ವಿಚಾರಗಳನ್ನು ತೆಗೆದುಕೊಂಡರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲನೇ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಡಾನ್ಸ್ ಹಾಗೂ ಸಾಹಸ ದೃಶ್ಯಗಳನ್ನು ಇಂದಿಗೂ ಕೂಡ ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟರು ಮೆಚ್ಚುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಪುನೀತ್ ರಾಜಕುಮಾರ್ ಅವರು ಮಾಡಿರುವಂತಹ ಸಾಮಾಜಿಕ ಕಾರ್ಯಗಳ ಕುರಿತಂತೆ ಕೂಡ ಜನರಿಗೆ ತಿಳಿದುಬಂದಿದೆ.
ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರ ಇದೇ ಮಾರ್ಚ್ 17ರಂದು ಅವರ ಜನುಮದಿನದ ವಿಶೇಷವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಗೂ 17ಕ್ಕೂ ಅಧಿಕ ದೇಶಗಳಲ್ಲಿ ಬಿಡುಗಡೆಯಾಗುವ ಯೋಜನೆಯನ್ನು ಚಿತ್ರತಂಡ ಮಾಡಿಕೊಂಡಿದೆ ಎಂಬುದಾಗಿ ಕೇಳಿ ಬರುತ್ತಿದೆ. ಈಗಾಗಲೇ ಚಿತ್ರ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂಬುದಾಗಿ ಸಿನಿಮಾ ಪಂಡಿತರ ಲೆಕ್ಕಾಚಾರ ಹಾಕಿದ್ದಾರೆ.
ಇತ್ತೀಚಿಗಷ್ಟೇ ಜೇಮ್ಸ್ ಚಿತ್ರತಂಡ ನಡೆಸಿರುವಂತಹ ಕಾರ್ಯಕ್ರಮದಲ್ಲಿ ಶಿವಣ್ಣನವರು ಕೂಡ ಭಾಗಿಯಾಗಿದ್ದರು. ಕರುನಾಡ ಚಕ್ರವರ್ತಿ ಶಿವಣ್ಣನವರು ದ್ವಿತೀಯಾರ್ಧದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಾತ್ರಕ್ಕೆ ದನಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣನವರು ಸಾಕಷ್ಟು ಭಾವುಕರಾಗಿದ್ದರು. ಅಭಿಮಾನಿಗಳ ಆದಂತಹ ನಮಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವುದು ಇಷ್ಟರಮಟ್ಟಿಗೆ ದುಃಖವನ್ನು ನೀಡುತ್ತಿದೆ ಎಂದರೆ ಇನ್ನು ಒಡಹುಟ್ಟಿದ ಸಹೋದರರಾದ ಶಿವಣ್ಣನವರಿಗೆ ಯಾವ ಮಟ್ಟಿಗೆ ದುಃಖವಾಗಿ ಇರಬೇಡ ನೀವೇ ಅಂದಾಜು ಮಾಡಿ
ಇದೇ ಸಂದರ್ಭದಲ್ಲಿ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೆನೆದುಕೊಂಡು ಶಿವಣ್ಣ ಕಣ್ಣೀರು ಕೂಡ ಹಾಕಿದ್ದಾರೆ. ಇಷ್ಟು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಖ್ಯಾತ ನಟನನ್ನು ಪುನೀತ್ ರಾಜಕುಮಾರನಂತೆ ಆತನು ಕೂಡ ನನ್ನ ತಮ್ಮ ಎಂಬುದಾಗಿ ಹೇಳಿದ್ದಾರೆ. ಹೌದು ಅವರು ಹೇಳಿದ್ದು ಇನ್ಯಾರಿಗೂ ಅಲ್ಲ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟನಾಗಿರುವ ಚಿಕ್ಕಣ್ಣನವರಿಗೆ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ರಾಜಕುಮಾರ ಚಿತ್ರದಲ್ಲಿ ಕೂಡ ಅಪ್ಪು ಚಿಕ್ಕಣ್ಣ ಕಾಂಬಿನೇಷನ್ ಸಾಕಷ್ಟು ಸೂಪರಾಗಿ ಮೂಡಿಬಂದಿತ್ತು. ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಏನು ಸಹಾಯ ಬೇಕಾದರೂ ಕೂಡ ನನ್ನನ್ನು ಸಂಪರ್ಕಿಸಿ ಎನ್ನುವುದಾಗಿ ಚಿತ್ರರಂಗದವರಿಗೆ ಮುಕ್ತವಾಗಿ ಆಹ್ವಾನ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಧ್ವನಿ ನೀಡಿದ್ದಕ್ಕಾಗಿ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಚಿತ್ರದಿಂದ ಶಿವಣ್ಣ ಪಡೆದುಕೊಂಡಿಲ್ಲ. ಈಗ ಎಲ್ಲರ ಚಿತ್ತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರದ ಮೇಲಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ ಹಾಗೂ ಚಿತ್ರದ ಕುರಿತಂತೆ ನಿಮಗಿರುವ ನಿರೀಕ್ಷೆಯನ್ನು ಕೂಡ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.
ನಮ್ಮ ಕರ್ನಾಟಕ ಚಿತ್ರರಂಗದ ಹಾಸ್ಯ ನಟರಾದ ಚಿಕ್ಕಣ್ಣ ಅವರ ಬಗ್ಗೆ ಹೇಳೋದಾದರೆ ಕನ್ನಡ ಚಿತ್ರರಂಗಕ್ಕೆ ಒಂದು ಅದ್ಭುತ ಕೊಡುಗೆ ಅಂತ ಹೇಳಿದರು ತಪ್ಪಾಗಲ್ಲ ಯಾಕೆಂದರೆ ಅವರು ಜೀವನದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಅಂದು ಚಿತ್ರರಂಗಕ್ಕೆ ಬರುವ ಮೊದಲು ಗಾರೆ ಕೆಲಸದಲ್ಲಿ ತೊಡಗಿಕೊಂಡಿದ್ದರು ಒಂದು ದಿನ ಸಂಬಳಕ್ಕಾಗಿ ಊರಲ್ಲೆಲ್ಲ ಅಲೆದಾಡುತ್ತಿದ್ದರು ಹೌದು ಚಿಕ್ಕಣ್ಣನವರು ಒಂದು ಮೀಡಲೆ ಕ್ಲಾಸ್ ಫ್ಯಾಮಿಲಿ ಇಂದ ಬಂದವರು ಅವರಿಗೆ ವಿದ್ಯಾಭ್ಯಾಸ ಅಷ್ಟು ಇಲ್ಲದಿದ್ದರೂ ಅವರ ತಿಳುವಳಿಕೆ ಹಾಗೂ ಅವರ ಚುರುಕುತನ ಇಡೀ ಚಿತ್ರರಂಗಕ್ಕೆ ಗೊತ್ತು. ಅಂದು ಚಿಕ್ಕಣ್ಣವರ ಒಂದು ದಿನ ಸಂಬಳ ನೂರು ರೂಪಾಯಿ ಇಂದು ಕನ್ನಡ ಚಿತ್ರರಂಗದ ಬಹು ಬಹುಬೇಡಿಕೆ ನಟರಾಗಿ ಹೊರಹೊಮ್ಮಿದ್ದಾರೆ ತನ್ನದೇ ಆದ ಹಾಸ್ಯ ನಟನೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಹೇಗೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಚಿತ್ರಗಳನ್ನು ಮಾಡಿ ನಿಮ್ಮ ಅಭಿಮಾನಿ ಬಳಗವನ್ನು ರಂಜಿಸಿ ನಿಮಗೆ ಸಾಕಷ್ಟು ಚಿತ್ರಗಳನ್ನು ಮಾಡುವುದಕ್ಕೆ ಆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲೆಂದು ಕೇಳಿಕೊಳ್ಳುತ್ತೇವೆ


Leave a Reply

Your email address will not be published. Required fields are marked *