ಅಪ್ಪು ಮಗಳು ಧೃತಿ ಸ್ನೇಹಿತರ ಜೊತೆ ವಿದೇಶದಲ್ಲಿ ಹೇಗೆಲ್ಲ ಜಾಲಿ ಮಾಡ್ತಿದ್ದಾರೆ ನೋಡಿ! ಮನಸ್ಸಿನ ನೋವನ್ನು ಕಳೆಯಲು ಜಾಲಿ ಟ್ರೀಪ್

ಸುದ್ದಿ

ನಮಸ್ಕಾರ ಪ್ರೀತಿಯ ವೀಕ್ಷಕರೆ ಕರ್ನಾಟಕ ಜನರ ಯುವರತ್ನ ಅಭಿಮಾನಿಗಳ ಆರಾಧ್ಯದೈವ ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಇಡೀ ದೇಶವೇ ದೇವರೆಂದು ಪೂಜಿಸುತ್ತಿದ್ದಾರೆ. ದೊಡ್ಮನೆ ಕುಟುಂಬದ ದೀಪ ಆರಿ ಹೋಗಿ 7 ತಿಂಗಳೇ ಕಳೆದಿದೆ. ಪುನೀತ್ ರಾಜ್ ಕುಮಾರ್ ತನ್ನ ಕುಟುಂಬವನ್ನು ಎಷ್ಟು ಇಷ್ಟ ಪಡುತ್ತಿದ್ದರು ಎಂಬುದನ್ನು ಎಲ್ಲರಿಗೂ ಗೊತ್ತು. ಅಷ್ಟೇ ಅಭಿಮಾನಿಗಳನ್ನು ಕೂಡ ಪ್ರೀತಿಸುತ್ತಿದ್ದರು. ಅಲ್ಲದೆ ಪ್ರತಿಯೊಬ್ಬ ಅಭಿಮಾನಿಗಳನ್ನು ಕೂಡ ಸಾಮನ್ಯರಂತೆ ಸರಳವಾಗಿ ಇರುತ್ತಿದ್ದರು. ಇನ್ನು ಅಪ್ಪು ಸಿನೆಮಾದ ಚಿತ್ರಿಕಾರಣದಲ್ಲಿ ಎಷ್ಟೇ ಬ್ಯುಸಿ ಇದ್ದರು ತನ್ನ ಫ್ಯಾಮಿಲಿಗಾಗಿ ಸಮಯ ಕೊಡುವುದನ್ನು ಕಡಿಮೆ ಮಾಡುತ್ತಿರಲಿಲ್ಲ.

ಅಪ್ಪು ಎಲ್ಲರಿಗೂ ಹೇಳುತ್ತಿರುವುದು ಒಂದೇ ಮತ್ತು ಮೊದಲು ನೀವು ನಿಮ್ಮ ಫ್ಯಾಮಿಲಿಯನ್ನು ಪ್ರೀತಿಸಿ ನಂತರ ನನ್ನನ್ನ ಪ್ರೀತಿಸಿ ಅಂತ ಅಪ್ಪು ಅಭಿಮಾನಿಗಳಿಗೆ ಹೇಳುತ್ತಿದ್ದರು. ಇನ್ನು ಅಪ್ಪು ಹಾಗೂ ಅಶ್ವಿನಿ ಅವರು ಪ್ರೀತಿಸಿ ಮದುವೆಯಾದವರು. ಇವರದ್ದು ಲವ್ ಕಮ್ ಆರೇಂಜ್ ಮ್ಯಾರೇಜ್ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಎನ್ನುವ ವಿಚಾರ ನಿಮಗೆ ಗೊತ್ತಿದೆ.

ಅಪ್ಪು ಅವರ ಕಿರಿಯ ಮಗಳು ವಂದಿತಾ ಬೆಂಗಳೂರಿನಲ್ಲಿ ಓದುತ್ತಿದ್ದು. ಈ ವರ್ಷದ SSLC ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. ಇನ್ನು ಹಿರಿಯ ಮಗಳು ದೃತಿ ವಿದೇಶದಲ್ಲಿ ಓದುತ್ತಿದ್ದಾರೆ. ತನ್ನ ಅಪ್ಪನ ಆಸೆಯಂತೆ ಇಬ್ಬರು ಕೂಡ ತುಂಬಾನೇ ಚನ್ನಾಗಿ ಓದುತ್ತಿದ್ದಾರೆ ಹಾಗೂ ದೃತಿ ಕೂಡ ಅಶ್ವಿನಿ ಅವರಿಗೆ ಧೈರ್ಯ ಹೇಳಿದ್ದಾರೆ ಇದೆಲ್ಲಾ ನೋವುಗಳಿಂದ ಹೊರಬರಬೇಕು ಅಪ್ಪನ ಕನಸನ್ನು ನನಸು ಮಾಡಬೇಕು ಎಂದು ಮಗಳು ದೃತಿ ತನ್ನ ಪ್ರೀತಿ ತಾಯಿಗೆ ಹೇಳಿದ್ದಾಳೆ.
ಇನ್ನು ದೃತಿ ಅಮೇರಿಕಾದ ತಮ್ಮ ಸ್ನೇಹಿತರಜೊತೆ ಖುಷಿಯಿಂದ ಕಾಲಕಳೆಯುತ್ತಿದ್ದಾರೆ. ಮಗಳು ಓದುದರಲ್ಲಿ ಮಾತ್ರಅಲ್ಲ, ಸ್ಪೋರ್ಟ್ಸ್ ನಲ್ಲೂ ದೃತಿ ಮುಂದೆ ಇದ್ದಾರೆ. ಇನ್ನು ಪರಿಸರ ಪ್ರೇಮಿ ಆಗಿರುವ ದೃತಿ ಗಿಡಮರಗಳನ್ನು ಬೆಳೆಸುತ್ತಾರೆ ಅಷ್ಟೇ ಅಲ್ಲದೆ ಸ್ನೇಹಿತರ ಜೊತೆ ಫಾರೆಸ್ಟ್, ಟ್ರಕ್ಕಿಂಗ್, ಪಾರ್ಕ್, ಮಾಲ್, ಸಿನೆಮಾ ಅಂತ ಸಖತ್ ಎಂಜಾಯ್ ಮಾಡುತ್ತಾ ಇದ್ದರೆ ತನ್ನ ಮನಸ್ಸಿನಲ್ಲಿ ನೋವುವನ್ನು ದೂರ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ದೃತಿ ಅವರ ಸ್ನೇಹಿತರ ಜೊತೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಅಗಿದ್ದು ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಕೂಡ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *