ಅಪ್ಪು ಮಡದಿ ಅಶ್ವಿನಿ ಅವರು ಸಿನಿರಸಿಕರಿಗೆ ಸಿಹಿಸುದ್ಧಿ ಕೊಟ್ಟು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.! ಏನದು ಒಮ್ಮೆ ನೋಡ

ಸುದ್ದಿ

ಪ್ರೀತಿಯ ವೀಕ್ಷಕರೇ ಒಬ್ಬರ ಮನಸ್ಸಲ್ಲಿ ಶಾಶ್ವತವಾಗಿ ಉಳಿಯಬೇಕೆಂದರೆ ಅದು ಸುಲಭದ ಮಾತಾಲ್ಲ ಅಂಥವರ ಸಾಲಲ್ಲಿ ಇನ್ನೂ ಅಭಿಮಾನಿಗಳ ಮನೆ ಹಾಗೂ ಮನದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ಹೌದು ಅಪ್ಪು ಅವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆ ಅನಿಸುತ್ತದೆ. ಅಣ್ಣಾವ್ರು ಮನೆಯ ಕುಟುಂಬದ ಕುಡಿಯಾಗಿ, ಅದೆಷ್ಟೋ ಬಡವರ ಪಾಲಿನ ಮನೆಯ ಬೆಳಕಾಗಿ ಸಾಕಷ್ಟು ಚಿತ್ರಗಳ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ ನಮ್ಮ ಅಪ್ಪು.

ಇವರ ಸಿನೆಮಾ ಬದುಕಿನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಅಂದಹಾಗೆ ಸಿನೆಮಾರಂಗದಲ್ಲಿ ಸಾಕಷ್ಟು ಸಾಧನೆ ಮಾಡಬೇಕು ಅಂದುಕೊಂಡಿದ್ದ ನಟ ಪುನೀತ್ ರಾಜ್ ಕುಮಾರ್ ಅವರು, ಇದೀಗ ಕರ್ನಾಟಕದ ಅಭಿಮಾನಿಗಳಿಗೆ ಬರೇ ನೆನಪು ಮಾತ್ರ. ಅಪ್ಪು ಅವರು ಕನಸಿನ ಸಂಸ್ಥೆಯಾದ ಪಿ.ಆರ್.ಕೆ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿ, ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಹಾಗೂ ಸಿನೆಮಾರಂಗಕ್ಕೆ ಪ್ರವೇಶ ಮಾಡುವ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಅಪ್ಪು ಕನಸನ್ನು ಕಂಡಿದ್ದರು. ಇನ್ನು ಪುನೀತ್ ರಾಜ್ ಕುಮಾರ್ ಅವರ ಎಲ್ಲಾ ಕನಸನ್ನು ಪತ್ನಿ ಅಶ್ವಿನಿಯವರು ನನಸು ಮಾಡುತ್ತಿದ್ದಾರೆ.

ಇನ್ನೂ ದೊಡ್ಮನೆ ಕುಟುಂಬದ ಕಿರಿಯ ಸೊಸೆಯಾಗಿ, ಅಪ್ಪು ಅವರು ಪ್ರೀತಿಯ ಹೆಂಡತಿಯಾಗಿ ಎಲ್ಲಾ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅಪ್ಪುವಿನ ಎಲ್ಲಾ ಕಾರ್ಯಕ್ರಮದಲ್ಲಿಯೂ ಅಶ್ವಿನಿ ಅವರು ಯಾರ ಮನಸ್ಸಿಗೂ ನೋವಾಗಬಾರದು ಎಂದು ತನ್ನ ಮನಸ್ಸಿನಲ್ಲಿ ನೋವನ್ನು ಇಟ್ಟುಕೊಂಡೆ ಭಾಗಿಯಾಗುತ್ತಾರೆ.

ಇತ್ತೀಚಿಗೆ ಡ್ಯಾನ್ಸಿಂಗ್ ಚಾಂಪಿಯನ್ ಗ್ರ್ಯಾಂಡ್ ಫಿನಾಲೆಗೆ ಅಶ್ವಿನಿ ಅವರನ್ನು ಕರೆಸಲಾಗಿತ್ತು. ಆ ವೇದೇಕೆಯ ಮೇಲು ಕೂಡ ನಗುತ್ತಾಲೇ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಜೇತರಿಗೆ ಪುನೀತ್ ರಾಜಕುಮಾರ್ ಅವರಂತೆ ಕಾಣಿಸುವ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗಿತ್ತು. ಇದಕ್ಕಾಗಿಯೇ ಅಶ್ವಿನಿ ಅವರು ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ ಎನ್ನಲಾಗಿದೆ.

ಆದರೆ ಅಶ್ವಿನಿ ಅವರು ಹೊಸದಾದ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇನು ಎಂಬ ಕುತೂಹಲ ನಿಮಗೆ ಇದ್ದಾರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಪುನೀತ್ ಅವರ ಪ್ರೀತಿಯ ಪತ್ನಿ ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರ ಅಗಲುವಿಕೆಯ ನಂತರ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಪ್ಪು ಮಡದಿ ಅಶ್ವಿನಿ ಅವರು ಅಪ್ಪು ಬದುಕಿದ್ದಾಗಲೇ ಪಿ.ಆರ್. ಕೆ ಪ್ರೊಡಕ್ಷನ್ ಹೌಸ್ ಮತ್ತು ಆಡಿಯೋ ಕಂಪನಿಗಳ ಎಲ್ಲಾ ವ್ಯವಹಾರವನ್ನು ಅಶ್ವಿನಿ ಅವರೇ ನೋಡಿಕೊಳ್ಳುತ್ತಿದ್ದರು.

ಇನ್ನು ಅಪ್ಪು ಅವರಿಗೆ ಅವರ ಸಂಸ್ಥೆಯಲ್ಲಿ ಒಳ್ಳೆ ಒಳ್ಳೆಯ ಸಿನೆಮಾಗಳನ್ನು ಮಾಡಬೇಕು ಎಂಬ ದೊಡ್ಡ ಕನಸನ್ನು ಕಂಡಿದ್ದರು. ಆದರೆ ಇದೀಗ ಅಪ್ಪು ಅವರ ಕನಸುಗಳನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ದಿನವೂ ಹೊಸ ಹೊಸ ನಿರ್ದೇಶಕರನ್ನು ಭೇಟಿ ಮಾಡುತ್ತಲೇ ಇದ್ದಾರೆ ಅಶ್ವಿನಿ ಅವರು. ಇನ್ನು ಸಿನೆಮಾ ಸಂಬಂಧ ಪಟ್ಟ ವಿಚಾರವಾಗಿ ಬೆಂಗಳೂರಿನ ಗಾಂಧಿನಗರದಲ್ಲಿರುವ ತಮ್ಮ ಆಫೀಸ್ ಗೆ ಪ್ರತಿ ನಿತ್ಯವೂ ಭೇಟಿ ಕೊಡುತ್ತಿದ್ದಾರೆ.

ತಮ್ಮ ಆಫೀಸ್ ನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಅಣ್ಣಾವ್ರು ಅಭಿಮಾನಿಗಳು ‘ಸೊಸೆ ಒಫ್ ಪಾರ್ವತಮ್ಮ’ ಎಂಬ ಟ್ಯಾಗ್ ಲೈನ್ ನಲ್ಲಿ ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಕಾಣುತ್ತಿದ್ದಾರೆ. ವೈರಲ್ ಆಗಿರುವ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ಅಂದು ಪಾರ್ವತಮ್ಮ ಅವರು ಪತಿಯ ಬೆನ್ನೆಲುಬಾಗಿ ನಿಂತುಕೊಂಡು ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅದೇ ರೀತಿ ಇದೀಗ ಅಶ್ವಿನಿ ಅವರು ಪತಿಯ ಕನಸನ್ನು ನನಸು ಮಾಡುವ ಸಲುವಾಗಿ ಪಿ.ಆರ್. ಕೆ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಕೊಂಡು, ಹೊಸ ಪ್ರತಿಭೆಗಳನ್ನು ಸಿನೆಮಾರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ.


Leave a Reply

Your email address will not be published. Required fields are marked *