ಅಪ್ಪು ಮುನ್ನಡೆಸುತ್ತಿದ್ದ ಡಾ.ರಾಜ್ ಕುಮಾರ್ ಅಕಾಡೆಮಿಯ ಯುಪಿಎಸ್ಸಿ ರಿಸಲ್ಟ್ ಔಟ್, ಪಾಸಾದವರು ಎಷ್ಟು ಜನ ಗೊತ್ತಾ.? ನೋಡಿ

ಸುದ್ದಿ

ಹೆಮ್ಮೆಯ ಸಂಗತಿ ನಮ್ಮ ಪುನೀತ್ ರಾಜ್ ಕುಮಾರ್ ಅವರು ಯಾವುದೇ ಹೆಜ್ಜೆಗೆ ಕಾಲಿಟ್ಟರು ಅದು ಯಶಸ್ವಿ ಆಗುವುದು ಖಂಡಿತ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ತಿಳಿಯುತ್ತೆ.
ಯುಪಿಎಸ್ ನಮ್ಮ ದೇಶದ ಅತ್ಯುನ್ನತ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಯಾಗಿದೆ. ಹೆಸರೇ ಹೇಳುವಂತೆ ಇದು ಐಎಎಸ್, ಐಪಿಎಸ್ ಮತ್ತು ಐಆರ್ಎಸ್ ಹಾಗೂ ಐಎಫ್ಎಸ್ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆ ಆದ್ದರಿಂದ ಅಷ್ಟೇ ಮಟ್ಟದ ಸ್ಪರ್ಧೆ ಈ ಪರೀಕ್ಷೆಗೆ ಇರುತ್ತದೆ. ಪದವಿ ಪಡೆದ ಪ್ರತಿಯೊಬ್ಬರೂ ಈ ಪರೀಕ್ಷೆ ಬರೆಯಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಉತ್ತೀರ್ಣ ಹೊಂದಬೇಕು ಎಂದರೆ ಅಷ್ಟೇ ಮಟ್ಟದ ಶ್ರದ್ಧೆ ಹಾಗೂ ಸಮರ್ಪಣಾ ಭಾವದಿಂದ ಓದಿರಬೇಕು.

ಇದಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದು ಕೋಚಿಂಗ್ ಕ್ಲಾಸ್ ಗಳನ್ನು ಸೇರಿಕೊಂಡು, ತಮ್ಮದೇ ಆದ ಸಮಾನ ಮನಸ್ಕ ಗುಂಪಿನಲ್ಲಿ ಸೇರಿಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಹಗಲು-ರಾತ್ರಿಯೆನ್ನದೆ ಶ್ರಮವಹಿಸಿ ಅಭ್ಯಾಸ ಮಾಡುತ್ತಾರೆ. ಆದರೂ ಸಹ ಮೊದಲ ಬಾರಿಗೆ ಇದರಲ್ಲಿ ಯಶಸ್ಸು ದೊರೆಯುತ್ತದೆ ಎಂದು ಊಹಿಸುವುದು ಬಹಳ ಕಷ್ಟ.

ಈ ಪರೀಕ್ಷೆಯಲ್ಲಿ ಪಾಸ್ ಮಾಡುವ ವರ್ಷಗಳು ಹೆಚ್ಚಾದಂತೆ ಅತ್ತ ಓದಲು ಬಂದ ವಿದ್ಯಾರ್ಥಿಗಳ ಕುಟುಂಬದ ಭಾರವೂ ಹೆಚ್ಚಾಗಿ, ಇತ್ತಾ ತಾವು ಕಲಿಯುವ ಕೋಚಿಂಗ್ ಕ್ಲಾಸ್ ಗಳಿಗೆ ದುಡ್ಡು ಕಟ್ಟಲು ಆಗದೆ ಅವರು ಕಷ್ಟ ಪಡುವ ಪರಿಸ್ಥಿತಿಯನ್ನು ಎದುರಿಸುವ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ತುಂಬಾ ಸಂಖ್ಯೆಯಲ್ಲಿ ಇದ್ದಾರೆ. ಇಂತಹ ಓದುವ ಮಕ್ಕಳಿಗೆ ಹಲವಾರು ಸಂಸ್ಥೆಗಳ ವತಿಯಿಂದ ಉಚಿತವಾಗಿ ಅವರಿಗೆ ಕೋಚಿಂಗ್ ಕೊಡುವ ಒಳ್ಳೆಯ ವ್ಯವಸ್ಥೆ ನಮ್ಮ ದೇಶದಲ್ಲಿ ಇದೆ.

ಹಾಗೆ ನಮ್ಮ ಕರ್ನಾಟಕದಲ್ಲಿ ಸಹ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಗಳು ಹಲವಾರು ಇದೆ ಹಾಗೂ ಈ ಕೋಚಿಂಗ್ ಕ್ಲಾಸ್ ನಲ್ಲಿ ಬಡ ಮಕ್ಕಳು ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಕೋಚಿಂಗ್ ನೀಡುವ ಹಲವಾರು ಅಕಾಡೆಮಿಗಳು ಇದೆ. ಅವುಗಳಲ್ಲಿ ಒಂದು ಡಾ. ರಾಜ್ ಕುಮಾರ್ ಅಕಾಡೆಮಿ. ಬೆಂಗಳೂರಿನಲ್ಲಿ ಇರುವ ಈ ಅಕಾಡೆಮಿ ಕರ್ನಾಟಕದ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಕೆಪಿಎಸ್ಸಿ ಮತ್ತು ಇನ್ನು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ.
ಈ ಅಕಾಡೆಮಿಯಲ್ಲಿ ಪ್ರತಿ ವರ್ಷವೂ ಸಹ ಸಾಕಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿ ಕರ್ನಾಟಕ ಮತ್ತು ಭಾರತದ ಮೂಲೆ ಮೂಲೆಯಲ್ಲೂ ಅನೇಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ 2021 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಗಳ ಫಲಿತಾಂಶ ನಿನ್ನೆಅಷ್ಟೇ ಹೊರಬಿದ್ದಿದೆ. ಅದರಲ್ಲಿ ಭಾರತದ 749 ಹುದ್ದೆಗಳಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ 685 ಮಂದಿ ತೇರ್ಗಡೆ ಆಗಿದ್ದಾರೆ ಎಂದು ಪ್ರಾಥಮಿಕ ಪಟ್ಟಿಯಲ್ಲಿ ಬಿಡುಗಡೆಯಾಗಿದೆ.

ಐಎಎಸ್ ಕೇಡರ್ ಗೆ 180 ಹುದ್ದೆ, ಐಎಫ್ಎಸ್ ಕೇಡರ್ ಗೆ 37 ಹುದ್ದೆ, ಮತ್ತು ಐಪಿಎಸ್ ಕೇಡರ್ ಗೆ 200 ಹುದ್ದೆ, ಇದರ ಜೊತೆ ಸೆಂಟ್ರಲ್ ಸರ್ವಿಸ್ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಕೇಡರ್ ಗೆ 242 ಮಂದಿಯನ್ನು ಆಯ್ಕೆ ಮಾಡುವುದಾಗಿ ಈ ಪಟ್ಟಿಯಲ್ಲಿ ತಿಳಿಸಿದೆ. ಇದು ಪ್ರಾಥಮಿಕ ಪಟ್ಟ ಯಾಗಿದ್ದು. ಇನ್ನು ಪಾಸ್ ಆದವರು ಪಟ್ಟಿ ಇನ್ನು ಅಪ್ಡೇಟ್ ಆಗಬೇಕಾಗಿದೆ. ಇಷ್ಟು ಹುದ್ದೆಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪಾಲಿಗೆ 27 ಹುದ್ದೆಗಳು ದೊರೆತಿದ್ದು. ಅದರಲ್ಲೂ ಒಂದೇ ಅಕಾಡೆಮಿಯ ಎಂಟು ಮಂದಿಯ ಹೆಸರು ಈ ಲಿಸ್ಟ್ ನಲ್ಲಿದೆ.

ಇದು ಡಾ. ರಾಜ್ ಕುಮಾರ್ ಅವರ ಅಕಾಡಮಿಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಯಾಗಿದೆ. ಅಕಾಡೆಮಿಯಲ್ಲಿ ಕೋಚಿಂಗ್ ಪಡೆಯುತ್ತಿದ್ದ ಬೆನಕ ಪ್ರಸಾದ್ (92ನೇ ರಾಂಕ್ ) ಮೇಘನಾ ಕೆ ಟಿ (425 ನೇ ರಾಂಕ್) ರಾಜೇಶ್ ಪೊನ್ನಪ್ಪ (222ನೇ ರಾಂಕ್) ಪ್ರೀತಿ ಪಾಂಚಾಲ್ (449 ನೇ ರಾಂಕ್) ಪ್ರಶಾಂತ್ ಕುಮಾರ್ (641 ನೇ ರಾಂಕ್ ) ರವಿನಂದನ್ ಬಿ ಎಂ (455ನೇ ರಾಂಕ್ ) ನಿಖಿಲ್ ಬಿ ಪಾಟೀಲ್ (139 ನೇ ರಾಂಕ್ ) ದೀಪಕ್ ಆರ್ ಸೆಟ್ (311ನೇ ರಾಂಕ್ ) ಪಡೆದುಕೊಂಡು ಅಕಾಡೆಮಿ ಗೆ ಹೆಮ್ಮೆ ತಂದಿದ್ದಾರೆ. ನೀವು ಕೂಡ ಈ ವಿದ್ಯಾರ್ಥಿಗಳಿಗೆ ಶುಭಾಶಯಗಳು ತಿಳಿಸಿ


Leave a Reply

Your email address will not be published. Required fields are marked *