ಅಪ್ಪು ರವರಿಗೆ ಸಿದ್ಧವಾದ ಹಾಡಿನಲ್ಲಿ ಹಾಡಿದ ಈ ಮಹಾನ್ ನಾಲ್ಕು ಗಾಯಕರು ಪಡೆದ ಸಂಭಾವನೆ ಎಷ್ಟು ಗೊತ್ತಾ..!?

Entertainment

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಈಗಾಗಲೇ ಹಲವಾರು ತಿಂಗಳುಗಳೇ ಕಳೆದರೂ ಕೂಡ ಅವರು ಮಾಡಿರುವ ಒಳ್ಳೆಯ ಕೆಲಸಗಳು ಹಾಗೂ ಅವರ ನಗು ವ್ಯಕ್ತಿತ್ವದಿಂದಾಗಿ ಇಂದಿಗೂ ಕೂಡ ಕನ್ನಡಿಗರು ಹಾಗೂ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ.ಇಂತಹ ವ್ಯಕ್ತಿತ್ವ ಮತ್ತೊಮ್ಮೆ ಕರ್ನಾಟಕದಲ್ಲಿ ಹುಟ್ಟಿ ಬರುತ್ತದೆ ಎಂಬುದು ಖಂಡಿತವಾಗಿ ಕನಸಿನ ಮಾತಾಗಿದೆ. ಯಾರೇ ಕಷ್ಟದಲ್ಲಿದ್ದರೂ ಕೂಡ ಅವರ ಕಷ್ಟಗಳಿಗೆ ಸ್ಪಂದಿಸುವ ಉತ್ತಮ ಹೃದಯವಂತಿಕೆ ಉಳ್ಳವರಾಗಿದ್ದರು ನಮ್ಮ ನೆಚ್ಚಿನ ಅಪ್ಪು. ಅವರನ್ನು ಕಳೆದುಕೊಂಡು ಸ್ಯಾಂಡಲ್ವುಡ್ ಬರಿದಾಗಿದೆ ಎಂದರೆ ತಪ್ಪಾಗಲಾರದು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರ ಕೊನೆಯ ಸಿನಿಮಾ ಆಗಿರುವ ಜೇಮ್ಸ್ ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಬೆಳಗಿನ ಜಾವದಿಂದಲೇ ಜೇಮ್ಸ್ ಚಿತ್ರ ಪ್ರತಿಯೊಂದು ಸಿನಿಮಾ ಥಿಯೇಟರ್ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಅಭಿಮಾನಿಗಳಿಂದ ಸಂಭ್ರಮಿಸಲ್ಪಟ್ಟಿತ್ತು. ನಿಜಕ್ಕೂ ಕೂಡ ಅವರಿಲ್ಲದೆ ಮೊದಲ ಬಾರಿಗೆ ಒಂದು ಸಿನಿಮಾ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಒಂದು ಕಡೆ ಬೇಸರವಾಗುತ್ತಿದೆ. ಇನ್ನೊಂದು ಕಡೆ ಕೊನೆ ಬಾರಿಗೆ ಕೊನೆಪಕ್ಷ ಅವರ ಮುಖವನ್ನು ದೊಡ್ಡ ಪರದೆಯ ಮೇಲೆ ನೋಡಬಹುದಲ್ಲ ಎನ್ನುವ ನಿಟ್ಟಿಸಿರು ಕೂಡ ಬಿಡುತ್ತಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಮಹಾನುಭಾವ ಎನ್ನುವ ಹಾಡೊಂದನ್ನು ಅವರಿಗಾಗಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತವನ್ನು ನೀಡಿದ್ದಾರೆ ನಿರ್ದೇಶಕ ಕಾಂತ ರವರು ಸಾಹಿತ್ಯವನ್ನು ಬರೆದಿದ್ದಾರೆ. ಈ ತಂಡದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಜನ್ಮದಿನದ ಸಂಗೀತ ನಮನ ಸಲ್ಲಿಸಲು ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಈ ತಂಡದಿಂದ ಬಿಡುಗಡೆ ಆಗಿರುವಂತಹ ಮಹಾನುಭಾವ ಹಾಡಿಗೆ ಭಾರತೀಯ ಚಿತ್ರರಂಗದ ನಾಲ್ಕು ಹೆಸರಾಂತ ಗಾಯಕರು ಧ್ವನಿಯನ್ನು ನೀಡಿದ್ದಾರೆ. ಹೌದು ಅವರೆಂದರೆ ಸೋನುನಿಗಮ್ ವಿಜಯಪ್ರಕಾಶ್ ಶಂಕರ್ ಮಹದೇವನ್ ಹಾಗೂ ಕೈಲಾಶ್ ಖೇರ್. ಹಾಡು ಮನೋಜ್ಞವಾಗಿ ಮೂಡಿಬಂದಿದ್ದು ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ನಾಲ್ಕು ಗಾಯಕರು ಕೂಡ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಶಾಮೀಲಾಗಿದ್ದಾರೆ. ಇನ್ನು ಈ ಮಹಾನುಭಾವ ಹಾಡಿಗಾಗಿ ಅವರು ನಾಲ್ಕು ಜನ ಪಡೆದಿರುವ ಸಂಭಾವನೆ ಕೇಳಿದರೆ ನೀವು ಕೂಡ ಆಶ್ಚರ್ಯಪಡ್ತಿರಾ.

ಹೌದು ಗೆಳೆಯರೇ ಈ ನಾಲ್ಕು ಜನ ಮಹಾನ್ ಗಾಯಕರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಅವರಿಗೆ ಅರ್ಪಣೆ ಮಾಡಲು ಹಾಡಿರುವ ಮಹಾನುಭಾವ ಹಾಡಿನಲ್ಲಿ ಚೆನ್ನಾಗಿ ಹಾಡಿದ್ದಾರೆ. ಆದರೆ ಒಂದೇ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಂಡಿಲ್ಲ ಎಂಬುದಾಗಿ ತಿಳಿದುಬಂದಿದೆ. ನಿಜಕ್ಕೂ ಕೂಡ ಇಂತಹ ಮಾನವೀಯ ಗುಣಗಳನ್ನು ಕೂಡ ನಮ್ಮ ಸಮಾಜದಲ್ಲಿ ನೆಲೆಸಿವೆ ಎಂದರೆ ನಿಜಕ್ಕೂ ಹೆಮ್ಮೆ ಪಡಲೇಬೇಕು. ಮಹಾನುಭಾವ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಅಪ್ಪು ಅಭಿಮಾನಿಗಳಿಗೆ ಅಪ್ಪು ಅವರ ನೆನಪನ್ನು ಚಿರಸ್ಥಾಯಿಯಾಗಲು ಸಹಾಯಕಾರಿಯಾಗಿದೆ. ಈ ಹಾಡನ್ನು ನೀವು ತಪ್ಪದೆ ಕೇಳಿ ಹಾಗು ತಪ್ಪದೆ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಅಪ್ಪು ರವರನ್ನು ಕೊನೆಯಬಾರಿ ಅರ್ಥಪೂರ್ಣವಾಗಿ ಬೀಳ್ಕೊಡಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿಂದಿ ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಅವರ ಆದರ್ಶಗಳನ್ನು ಹಾಗೂ ಅವರ ಜೀವನದ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಕೈಲಾದಷ್ಟು ಶ್ರಮಿಸೋಣ. ಇದೇ ನಾವು ಅವರಿಗೆ ನೀಡುವಂತಹ ನಿಜವಾದ ಕೊಡುಗೆ ಎಂದರೆ ತಪ್ಪಾಗಲಾರದು.

ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸ ಒಂದ ಎರಡ ಅದಕ್ಕೆ ಸ್ನೇಹಿತರೆ ಅವರನ್ನು ಕಂಡರೆ ಇಡೀ ಕರುನಾಡೇ ಇಷ್ಟ ಪಡುತ್ತಾರೆ ಅಪ್ಪು ಎಂದರೆ ಅಷ್ಟು ಪ್ರೀತಿ ಅಭಿಮಾನಿಗಳಿಗೆ ಅವರು ಮಾಡಿರುವ ದಾನ ಧರ್ಮ ಅಭಿಮಾನಿಗಳ ಮೇಲೆ ಇಟ್ಟಿರುವ ಪ್ರೀತಿ ನಿಜಕ್ಕೂ ಶಾಶ್ವತ ಅವರು ಮಾಡಿರುವ ಪ್ರತಿಯೊಂದು ಚಿತ್ರದಲ್ಲೂ ಜನರಿಗೆ ಒಳ್ಳೇ ಸಂದೇಶ ರವಾನಿಸಿದೆ ಹಾಗಾಗಿ ಅಪ್ಪು ಅವರನ್ನು ಬಂಗಾರದ ಮನುಷ್ಯ ಅಣ್ಣಾವ್ರಿಗೆ ಸಮ ಅಂತ ಕರಿಯೋದು ಅಪ್ಪುವಿನ ಮೊಗದಲ್ಲಿ ನೊಗು ನೋಡಿದ್ರೆ ಸಾಕು ಯಂಥ ನೋವು ಇದ್ರೂ ದೂರ ಆಗುತ್ತೆ ಅವರ ನಗು ಕರುನಾಡಲ್ಲಿ ಶಾಶ್ವತವಾಗಿ ಇರಲಿ ಅಭಿಮಾನಿಗಳೇ ದೇವ್ರು ಅನ್ನೋ ಅಣ್ಣಾವ್ರ ಕುಟುಂಬದಲ್ಲಿ ಮತ್ತೆ ಅಪ್ಪು ಹುಟ್ಟಿ ಬರಲಿ ಅಪ್ಪು ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆಯಾಗಿ ಯಲ್ಲ ಕಡೆ ಯಶಸ್ವಿ ಪ್ರದರ್ಶನಕಾಣುತ್ತಿದೆ


Leave a Reply

Your email address will not be published. Required fields are marked *