ನಮಸ್ತೆ ಪ್ರೀತಿಯ ಓದುಗರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ಅಣ್ಣಾವ್ರು ಮಗನಾದರೂ ಕಿಂಚಿತ್ತೂ ನಾನು ಅನ್ನೋ ಅಹಂ ಇಲ್ಲದೆ ಬದುಕಿದವರು. ತಮ್ಮ ಸರಳತೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಈ ಗುಣದಿಂದಲೇ ಅಪ್ಪು ಅವರು ಎಲ್ಲರ ಮೆಚ್ಚುಗೆ ಪತ್ರರಾಗಿದ್ದು.
ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರ ಅಚ್ಚುಮೆಚ್ಚಿನ ನಟ ಆಗಿದ್ದರು ಅಪ್ಪು. ಅಪ್ಪು ಅವರನ್ನು ಕರ್ನಾಟಕದ ಮನೆ ಮಗ ಎಂದೇ ಕರೆಯುತ್ತಿದ್ದರು. ಇದಕ್ಕೆಲ್ಲ ಸಾಕ್ಷಿ ಅಪ್ಪು ಇಲ್ಲದಿದ್ದಾಗ ಬಂದ ಲಕ್ಷಾಂತರ ಅಭಿಮಾನಿಗಳೇ ಸಾಕ್ಷಿ. ಇಂದು ಅಪ್ಪು ನಮ್ಮ ಜೊತೆ ಇಲ್ಲದಿದ್ದರೂ ಕರ್ನಾಟಕದ ಜನರು ಹಾಗೂ ಅವರ ಅಭಿಮಾನಿಗಳು ಅವರನ್ನು ಇಂದಿಗೂ ಮರೆತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಅವರ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಶೇರ್ ಮಾಡುತ್ತಾ ಪ್ರೀತಿಯ ನಟನನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.
ಇನ್ನು ಚಂದನವನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಅನೇಕ ಒಳ್ಳೆ ಒಳ್ಳೆಯ ಕೆಲಸಗಳನ್ನು ಮಾಡಿದ್ದು, ಚಿತರಂಗದ ಪ್ರೀತಿಯೊಬ್ಬರು ಕೂಡ ಅಪ್ಪು ಅವರರನ್ನು ನೆನೆಯದ ಯಾವುದೇ ಕಾರ್ಯಕ್ರಮ ನಡೆದಿದ್ದಿಲ್ಲ. ಕನ್ನಡ ಚಿತ್ರರಂಗದ ಪ್ರತಿಯೊಂದು ಹೊಸಚಿತ್ರ ಸುರುವಿನಲ್ಲಿ ಅಪ್ಪು ಅವರಿಗೆ ಅರ್ಪಣೆ ಮಾಡಿದ ಬಳಿಕವೇ ಸಿನೆಮಾ ಶುರುವಾಗುತ್ತದೆ. ಅಪ್ಪು ಎಂದರೆ ಅಷ್ಟರ ಮಟ್ಟಿಗೆ ಪ್ರೀತಿ ಗೌರವ.
ಮೊನ್ನೆ ಅಷ್ಟೇ ಪುನೀತ್ ನಮ್ಮನ್ನು ಅಗಲಿ 7 ತಿಂಗಳು ಕಳೆದಿದೆ ಹಾಗಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಕ್ಕಳು ವಂದನಾ ಹಾಗೂ ದೃತಿ ಇವರಿಬ್ಬರು ಅಪ್ಪನ ಪುಣ್ಯ ಭೂಮಿ ಸಮಾಧಿಗೆ ಬಂದು ಪೂಜೆ ಮಾಡಿದ್ದಾರೆ. ಅಣ್ಣಂದಿರಾದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಹಾಗೂ ಇಡೀ ಕುಟುಂಬ ಸೇರಿದಂತೆ ಎಲ್ಲಾ ದೊಡ್ಮನೆ ಕುಟುಂಬ ಅಪ್ಪು ಸ್ಮಾರಕ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ಪ್ರೀತಿಯ ರಾಜಕುಮಾರ ನನ್ನು ನೋಡಲು ಅಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ಇನ್ನು ಪುನೀತ್ ಅವರ ಸ್ಮಾರಕಕ್ಕೆ ಕುಟುಂಬ ಪೂಜೆ ಸಲ್ಲಿಸಿದ ಬಳಿಕ ಇಡೀ ಕುಟುಂಬ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಸ್ಮಾರಕ ge ಪೂಜೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಅಪರೂಪದ ಘಟನೆಯೊಂದು ನಡೆದಿತ್ತು ರಾಘಣ್ಣ ನ ಜೊತೆ ಪುನೀತ್ ರಾಜ್ ಕುಮಾರ್ ಸಾಕಿದ್ದ ಪ್ರೀತಿಯ ನಾಯಿ ಕೂಡ ಅಪ್ಪು ಸಮಾಧಿ ಬಳಿ ಬಂದಿದೆ.
ಇತ್ತ ಅಪ್ಪು ಸಮಾಧಿಗೆ ರಾಘಣ್ಣ ಹೂಗುಚ್ಛ ಹುಮಾಲೆಯನ್ನು ಹಾಕಿ ಪೂಜೆ ಮಾಡುತ್ತಿದ್ದ ವೇಳೆ ಅಪ್ಪು ಅವರ ಪ್ರೀತಿಯ ನಾಯಿ ತನ್ನ ಯಜಮಾನನ ಸಮಾಧಿಗೆ 3 ಸುತ್ತು ಪ್ರದಕ್ಷಿಣೆ ಹಾಕಿ ಅಪ್ಪು ಫೋಟೋ ಮುಂದೆ ಕುಳಿತು ಕಣ್ಣೀರು ಹಾಕಿದೆ. ಸಾಧ್ಯ ಈ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಪ್ರತಿಯೊಬ್ಬ ಅಭಿಮಾನಿಯು ಕೂಡ ಕಣ್ಣೀರು ಹಾಕಿದ್ದಾರೆ. ನೀವು ನೋಡಿ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ