ಅಪ್ಪು ಹಾಗೂ ಅಶ್ವಿನಿ ಅವರ ಲವ್ ಮಾಡಿರುವ ವಿಷಯ ಗೊತ್ತಾದಾಗ ಶಿವಣ್ಣ, ಪಾರ್ವತಮ್ಮ ಮಾಡಿದ್ದೆ ಬೇರೆ… ಅಷ್ಟಕ್ಕೂ ನಡೆದಿದ್ದು ಏನು ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಸುಮಾರು ಹತ್ತು ತಿಂಗಳು ಕಳೆದಿದೆ. ಅವರ ಅಗಲಿದ ಬಳಿಕ ಸಾಕಷ್ಟು ಒಳ್ಳೆಯ ವಿಚಾರಗಳು ಒಂದೊಂದಾಗಿ ಹೊರ ಬರುತ್ತಿದೆ. ಇನ್ನು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ದೊರೆ ಭಗವಾನ್ ಅವರು ಅಣ್ಣಾವ್ರ ಕುಟುಂಬಕ್ಕೆ ತುಂಬಾ ಹತ್ತಿರದವರು ಹೌದು ಅಪ್ಪು ಅವರು ಹುಟ್ಟಿದಾಗ ಪಾರ್ವತಮ್ಮ ನವರ ಜೊತೆ ಆಸ್ಪತ್ರೆಯಲ್ಲಿ ಇದ್ದವರು ಕೂಡ ಅವರೆ ಮೊದಲು ಅಪ್ಪು ಅವರನ್ನು ಎತ್ತಿಕೊಂಡಿದ್ದು ಕೂಡ ದೊರೆ ಭಗವಾನ್ ಅವರೆ.

ಸದ್ಯ ಇದೀಗ ಅವರು ನೀಡಿರುವ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ಲವ್ ಸ್ಟೋರಿ ಇದೆಲ್ಲದರ ಬಗ್ಗೆ ಕೂಡ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಪ್ಪು ಅವರಿಗೆ ಚಿಕ್ಕ ವಯಸ್ಸಿನಿಂದಲೂ ಹಾಡಿನಲ್ಲಿ ಡಾನ್ಸ್ ನಲ್ಲಿ ಅಥವಾ ಆಕ್ಷನ್ ನಲ್ಲೆ ಅಗಲಿ ಯಾವುದರ ಬಗ್ಗೆಯೂ ಯಾರು ಕೂಡ ಸಲಹೆ ಕೊಟ್ಟಿರಲಿಲ್ಲ. ಕಾಣದಂತೆ ಮಾಯಾವಾದನು ಹಾಡನ್ನು ತುಂಬಾ ಅದ್ಭುತವಾಗಿ ಆ ಚಿಕ್ಕ ವಯಸ್ಸಲ್ಲೇ ಹಾಡಿದ್ದರು ಅಪ್ಪು ಆದರೆ ಈ ರೀತಿಯೇ ಹಾಡಬೇಕು ಎಂದು ಯಾರು ಕೂಡ ಹೇಳಿ ಕೊಟ್ಟಿರಲಿಲ್ಲ.

ಇನ್ನು ಯಾರಿವನು ಚಿತ್ರದಲ್ಲಿ ಅಪ್ಪು ಮತ್ತು ಅಣ್ಣಾವ್ರು ಇಬ್ಬರು ಜೊತೆಯಾಗಿ ನಟಿಸಿದ್ದು ಆ ಸಿನೆಮಾದಲ್ಲಿ ಸಾಹಸ ದೃಶ್ಯಗಳು ಸಹ ಇದ್ದವು. ಹೌದು ಸಾಹಸ ದೃಶ್ಯಗಳು ಹಾಹೂ ಹಾಡಿನಲ್ಲಿ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಕೂಡ ಒಂದು ಸಾರಿ ತೋರಿಸಿದರೆ ಅದೇ ರೀತಿ ಮಾಡುತ್ತಿದ್ದರು ಅಪ್ಪು. ರಾಜ್ ಕುಮಾರ್ ಅವರು ಕೂಡ ಎರಡು ಮೂರು ಬಾರಿ ಸ್ಸ್ಟೆಪ್ ಗಳನ್ನು ನೋಡಿಕೊಂಡು ಕಲಿಯುತ್ತಿದ್ದಾರಂತೆ ಒಂದೇ ಟೇಕ್ ನಲ್ಲಿ ಓಕೆ ಆಗಬೇಕು ಎಂದು ಎರಡು ಮೂರು ಸಾರಿ ಪ್ರಾಕ್ಟೀಸ್ ಮಾಡಿಕೊಳ್ಳುತ್ತಿದ್ದರಂತೆ ಅಣ್ಣಾವ್ರು ಆದರೆ ಅಪ್ಪು ಅವರು ಆಗಲು ಸಹ ಒಂದೇ ಸಾರಿ ನೋಡಿಕೊಂಡು ರೆಡಿ ಮಾಸ್ಟರ್ ಎನ್ನುತ್ತಿದ್ದರಂತೆ.

ಇನ್ನು ಅಪ್ಪು ಅವರಲ್ಲಿ ಬಹಳಷ್ಟು ಟ್ಯಾಲೆಂಟ್ ಇತ್ತು ಎಂದು ಹೇಳುವ ದೊರೆ ಭಗವಾನ್ ಆದರೆ ಅದನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಕನ್ನಡ ಚಿತ್ರರಂಗಕ್ಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಮಗ ಅಷ್ಟು ಸುಲಭವಾಗಿ ವೇಗವಾಗಿ ಕಲಿಯುತ್ತಾ ಇದ್ದದ್ದನ್ನು ನೋಡಿ ಅಣ್ಣಾವ್ರು ಭಗವಾನ್ ಅವರ ಜೊತೆ ಏನ್ರಿ ಭಗವಾನ್ ಇವನು ನನ್ನನೇ ಮೀರಿಸುತ್ತಾನೆ ಎಂದು ಹಾಳುತ್ತಿದ್ದರಂತೆ. ಅಷ್ಟರ ಮಟ್ಟಿಗೆ ತಂದೆಗೆ ತಕ್ಕ ಮಗನಾಗಿದ್ದರು ಪುನೀತ್.

ಇನ್ನು ಅಪ್ಪು ಅವರಿಗೆ ಇಂಗ್ಲಿಷ್ ಕಲಿಸಲು ಒಬ್ಬರು ಶಿಕ್ಷಕಿ ಇದ್ದು 18 ವರ್ಷದವರಿದ್ದಾಗಲೇ ಅಪ್ಪು ಅವರಿಗೆ ಯಾವುದೇ ಎಂಜಿನಿಯರ್ ಗಿಂತ ಹೆಚ್ಚಾಗಿ ಕಂಪ್ಯೂಟರ್ ಮೇಲೆ ಜ್ಞಾನ ಬಂದಿತ್ತು. ಅಷ್ಟು ಚನ್ನಾಗಿ ಕಂಪ್ಯೂಟರ್ ಹ್ಯಾಂಡಲ್ ಮಾಡುತ್ತಿದ್ದರು. ಇನ್ನು ಇದೆಲ್ಲರದ ಜೊತೆಗೆ ಮದುವೆ ವಿಚಾರಕ್ಕೆ ಬರುವುದಾದರೆ ಪಾರ್ವತಮ್ಮ ರಾಜ್ ಕುಮಾರ್ ಅವರು ಸ್ಥಾಪಿಸಿದ್ದ ವಜ್ರಶ್ವರಿ ಪ್ರೊಡಕ್ಷನ್ ಸಂಸ್ಥೆಯಲ್ಲಿ ಅಪ್ಪು ಕೆಲಸ ಮಾಡುತ್ತಿದ್ದರು.

ಹೌದು ವ್ಯಾಪಾರ ವಹಿವಾಟು ಇವುಗಳನ್ನು ಕೂಡ ಅವರೇ ನೋಡಿಕೊಳ್ಳುತ್ತಿದ್ದರಂತೆ. ಪ್ರತಿದಿನ ಮದ್ಯಾಹ್ನ ಆಫೀಸ್ ಗೆ ಹೋಗಿ ಅವರು ಆಫೀಸ್ ನಲ್ಲಿ ಕುಳಿತು ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಿ ಸಂಜೆ 5.30ಗೆ ಕಾರ್ ತೆಗೆದುಕೊಂಡು ಅಶ್ವಿನಿ ಅವರನ್ನು ನೋಡಲು ಪ್ರತಿದಿನ ಹೋಗುತ್ತಿದ್ದರಂತೆ ಒಂದು ವೇಳೆ ಕೆಲಸ ಹೆಚ್ಚಾಗಿ 5.30 ಆದಮೇಲೆ ಅಪ್ಪು ಹೋಗಲು ಆಗದೆ ಇದ್ದಾರೆ ಖುದ್ದಾಗಿ ಅಶ್ವಿನಿ ಅವರೇ ಕಾರ್ ತೆಗೆದುಕೊಂಡು ಅಶ್ವಿನಿ ಅವರೇ ಪಿಕ್ ಮಾಡುತ್ತಿದ್ದಾರಂತೆ.

ಈ ಕುರಿತು ಮಾತನಾಡಿರುವ ಭಗವಾನ್ ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಪ್ರೀತಿ ಇತ್ತು ಎನ್ನುತ್ತಾರೆ. ಇನ್ನು ಅಪ್ಪು ಮತ್ತು ಅಶ್ವಿನಿ ಇಬ್ಬರು ಮತ್ತು ಅಶ್ವಿನಿ ಇಬ್ಬರು ಜೊತೆಯಾಗಿ ಕಾರ್ ನಲ್ಲಿ ಹೋಗೋದನ್ನ ನೋಡೋದೇ ಆನಂದ ಎಂದು ಭಗವಾನ್ ಅವರು ಹೇಳುತ್ತಿದ್ದು ಆ ಸಮಯಕ್ಕೆ ಇನ್ನು ನಿಶ್ಚಿತಾರ್ಥ ಆಗಿರಲಿಲ್ಲ ಆದರೆ ಮದುವೆ ಮಾತುಕತೆ ನಡೆದಿತ್ತು ಹಾಗಾಗಿ ಅಮ್ಮ ಅವರಿಬ್ಬರು ಓಡಾಡುದಕ್ಕೆ ಯಾವುದೇ ನಿರ್ಬಂಧ ಹಾಕಿರಲಿಲ್ಲ ಎಂದಿದ್ದಾರೆ. ಇನ್ನು ಅಶ್ವಿನಿ ಅವರನ್ನು ನೋಡಿ, ನನ್ನ ಭಾವಿ ಸೊಸೆ ಎಷ್ಟು ಚೆನ್ನಾಗಿದ್ದಾಳೆ ಎಂದು ಹೇಳುತ್ತಿದ್ದರಂತೆ ಪಾರ್ವತಮ್ಮ.

ಇನ್ನು ಇವರಿಬ್ಬರೂ ಮದುವೆಯಾದ ಮೇಲೆ ಇಬ್ಬರು ಮೇಡ್ ಫಾರ್ ಈಚ್ ಅದರ್ ಅನ್ನುವ ಹಾಗೆಯೇ ಇದ್ದು ಅಪ್ಪು ಅವರಿಗೆ ಹೆಂಡತಿ ಅಂದರೆ ಪ್ರಾಣ. ಇಬ್ಬರು ಜೊತೆಯಾಗಿ ಬಹಳ ಸಂತೋಷವಾಗಿ ಇರುತ್ತಿದ್ದರು. ವಿವಾಹದ ಕುರಿತು ಎಲ್ಲಾ ನಡೆದ ನಂತರ ಸಿನೆಮಾ ಬಗ್ಗೆ ಮಾತುಕತೆ ಪ್ರಾರಂಭವಾಗಿ ಅಪ್ಪು ಎಂದೇ ಹೆಸರು ಇಡೋಣ ಎಂದು ಚಿ. ಉದಯ್ ಶಂಕರ್ ಅವರು ಸಲಹೆ ನೀಡಿದರಂತೆ. ಅಪ್ಪು ಸಿನೆಮಾ ಸೇಟ್ಟೆರಿ ಬಿಡುಗಡೆಯಾಗಿ ಮೊದಲ ಸಿನೆಮಾದಲ್ಲೇ ಅಪ್ಪು ನಟನೆ ಹೇಗಿತ್ತು ಅನ್ನೋದನ್ನ ಈಗಲೂ ಮರೆಯಲು ಸಾಧ್ಯವಿಲ್ಲ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *