ಸ್ಯಾಂಡಲ್ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಹೌದು, ಯಾವುದೇ ಸ್ಟಾರ್ ನಟರೇ ಇರಲಿ, ಅವರಿಗೆ ಸ್ಯಾಂಡಲ್ವುಡ್ ನಲ್ಲಿ ನೇಮ್ ಫೇಮ್ ಅಷ್ಟು ಸುಲಭವಾಗಿ ಬರೋದಿಲ್ಲ. ಡಿ ಬಾಸ್ ಎಂದು ಕರೆಸಿಕೊಳ್ಳುವ ನಟ ದರ್ಶನ್ ಅವರು ಕೂಡ ಅಷ್ಟೇ ಕಷ್ಟವನ್ನು ಪಟ್ಟಿದ್ದಾರೆ. ಡಿ ಬಾಸ್ ಕೂಡ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಅವರು ಪಟ್ಟ ಶ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರ ಬದುಕಿನ ಹಾದಿ ಎಲ್ಲರಿಗೂ ಮಾದರಿಯಾಗಿದ್ದು ಎಂದರೆ ತಪ್ಪಾಗಲಾರದು.
ಹೌದು, ಈಗಾಗಲೇ ಸಾಕಷ್ಟು ಸಿನೆಮಾಗಳನ್ನು ನೀಡಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿರುವ ದರ್ಶನ್ ಅವರು ಅವರ ಸಹಾಯ ಗುಣದಿಂದಲೇ ಎಲ್ಲರಿಗೂ ಸಾಕಷ್ಟು ಪರಿಚಯ. ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಕರೆಸಿಕೊಲ್ಲವ ದರ್ಶನ್ ಕನ್ನಡ ಸಿನೆಮಾರಂಗದ ಹೆಸರಾಂತ ನಟ. ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟ ದರ್ಶನ್ ಅವರು, ಕ್ರಾಂತಿ ಸಿನೆಮಾದ ಶೋಟಿಂಗ್ ಮುಗಿಸಿ, ಇದೀಗ ಡಿ 56 ಸಿನೆಮಾಕ್ಕೆ ಕೈ ಹಾಕಿದ್ದಾರೆ. ಅವರ ಈ ಚಿತ್ರಕ್ಕೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾಲಾಶ್ರೀ ಅವರ ಮಗಳು ರಾಧನಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷಎನ್ನಬಹುದು.
ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಪುನೀತ್ ರಾಜ್ ಕುಮಾರ್ ಬಗ್ಗೆ ಹೇಳಿರುವ ಮಾತಿನಿಂದ ಏನೆಲ್ಲಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಗೊತ್ತಾ.? ದರ್ಶನ್ ‘ಕ್ರಾಂತಿ’ ಪ್ಯಾನ್ ಇಂಡಿಯಾ ಸಿನೆಮಾವಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣುತ್ತಿದೆ. ಪ್ಯಾನ್ ಇಂಡಿಯಾ ಸಿನೆಮಾವಾಗಿರುವ ಕಾರಣ ಡಿಬಾಸ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹೌದು, ಈ ಸಿನೆಮಾವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ದರ್ಶನ್ ಅವರು ಬರೋಬ್ಬರಿ 12 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ದರ್ಶನ್ ಅಭಿನಯದ ಕ್ರಾಂತಿ ಸಿನೆಮಾ ಇನ್ನೇನು ತೆರೆಗೆ ಬರಲು ಸಜ್ಜಗಿದೆ, ಈ ಚಿತ್ರಕ್ಕೆ ಹರಿಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದೂ ಈಗಾಗಲೇ ಬಹುನಿರೀಕ್ಷೆಯನ್ನು ಹುಟ್ಟು ಹಾಕಿವೆ. ಕ್ರಾಂತಿ ಸಿನೆಮಾದ ಟ್ರೈಲರ್ ನೋಡಿ ದರ್ಶನ್ ಅವರ ಗೆಟಪ್ ಗೆ ಫುಲ್ ಫಿದಾ ಆಗಿದ್ದಾರೆ. ಇತ್ತೀಚಿಗೆ ನಟ ದರ್ಶನ್ ಅವರು ಯು ಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಡಿ ಬಾಸ್ ಅವರು ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಹೀಗೆ ಮಾತನಾಡುತ್ತಾ, ಪುನೀತ್ ಅವರ ಹೆಸರನ್ನು ತೆಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಹೆಸರು ಪ್ರಸ್ತಾಪ ಮಾಡಿರುವುದು ಅಪ್ಪು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಹೌದು ಸಂದರ್ಶನದಲ್ಲಿ ದರ್ಶನ್ ಅವರು ಸಹಜವಾಗಿ ನಾವು ಅಗಲಿದ ಮೇಲೆ ಫ್ಯಾನ್ಸ್ ಗಳು ಅಂದರೆ ಹೇಗೆ ಎಂದು. ಪುನೀತ್ ರಾಜ್ ಕುಮಾರ್ ಅವರು ಒಬ್ಬರೇ ಸಾಕು. ಆದರೆ ನಾನು ಬದುಕಿದ್ದಾಗಲೇ ಫ್ಯಾನ್ಸ್ ಗಳು ಪ್ರೀತಿ ಎಷ್ಟಿದೆ ಎಂದು ತೋರಿಸಿ ಬಿಟ್ರಲ್ಲಾ ನನಗೆ ಅಷ್ಟೇ ಸಾಕು ಎಂದಿದ್ದಾರೆ. ಆದರೆ ಇತ್ತ ದರ್ಶನ್ ಅವರ ಫ್ಯಾನ್ಸ್ ಗಳು ದರ್ಶನ್ ಅವರ ಹೇಳಿಕೆಯನ್ನು ತಿರುಚಲಾಗುತ್ತಿದೆ. ಇದಕ್ಕೆ ಅಪ್ಪು ಫ್ಯಾನ್ಸ್ ಸೊಪ್ಪು ಹಾಕಬೇಡಿ. ದರ್ಶನ್ ಮಾತನಾಡಿದ್ದು, ಪುನೀತ್ ಅವರ ಫ್ಯಾನ್ಸ್ ಶಕ್ತಿ ಬಗ್ಗೆ ಎಂದಿದ್ದಾರೆ.
ಹೌದು ದೊಡ್ಮನೆ ಎಂದರೆ ಎಂದರೆ ಅಪ್ಪು ಬೇರೆಯಲ್ಲ, ಶಿವಣ್ಣ ಬೇರೆಯಲ್ಲ. ಅಭಿಮಾನಿಗಳ ದೇವರೆಂದು ಕರೆಯುವ ಶಿವಣ್ಣನವರು ತಮ್ಮ ಅಭಿಮಾನಿಗಳ ಮಾತನ್ನು ತಮ್ಮ ಮಾತು ಎಂದಿದ್ದಾರೆ. ಇದೀಗ ಶಿವಣ್ಣನವರ ಅಭಿಮಾನಿಗಳು ಕೂಡ ಅಪ್ಪು ಅಭಿಮಾನಿಗಳ ಜೊತೆಗೆ ಕೈ ಜೋಡಿಸಿದ್ದಾರೆ. ದರ್ಶನ್ ಅವರು ಇಂತಹ ವ್ಯಕ್ತಿಯೆಂದು ಗೊತ್ತಿರಲಿಲ್ಲ. ಅವರು ತಮ್ಮ ಕ್ರಾಂತಿ ಸಿನೆಮಾದ ಪ್ರಚಾರಕ್ಕಾಗಿ ಅಪ್ಪು ಹೆಸರನ್ನು ಬಳಸಿಕೊಳ್ಳಬಾರದಿತ್ತು.
ದರ್ಶನ್ ಅವರು ಕ್ಷಮೆ ಕೋರಬೇಕು ಎನ್ನುತ್ತಿದ್ದಾರೆ ದೊಡ್ಮನೆ ಕುಟುಂಬದ ಫ್ಯಾನ್ಸ್ ಗಳು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅಪ್ಪು ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ಚಿಕ್ಕ ವಾದ ನಡೆದಿದ್ದು ಅದು ದೊಡ್ಡದಾಗುವಷ್ಟರಲ್ಲೇ ತಣ್ಣಗಾಗಿ ಅಭಿಮಾನಿಗಳು ಒಂದಾಗಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ