ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ದೇಶದಾದ್ಯಂತ್ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಚಿತ್ರದಿಂದ ಕನ್ನಡ ಚಿತ್ರರಂಗವನ್ನು ಆಕಾಶದೇತ್ತರಕ್ಕೆ ತೆಗೆದುಕೊಂಡು ಹೋಗಿದೆ. ಇದರಿಂದ ಕನ್ನಡ ಚಿಗ್ರರಂಗದ ಬೇಡಿಕೆಯು ಹೆಚ್ಚಿದೆ. ನಿಜ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರಿಗೂ ದೊಡ್ಡ ಮಟ್ಟಿಗೆ ನೇಮ್ ಹಾಗೂ ಫೇಮ್ ತಂದುಕೊಟ್ಟಿದೆ.
ಅಂದಹಾಗೆ, ಬಾಕ್ಸ್ ಆಫೀಸ್ ನಲ್ಲಿ 1250 ಕೋಟಿ ಕಲೆಕ್ಷನ್ ಮಾಡಿದೆ ಇದು ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಚಿತ್ರವಾಗಿ ಉಳಿದಿದೆ. ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ಮತ್ತು ರವೀನಾ ತಂಡನ್, ಪ್ರಕಾಶ್ ರಾಜ್, ಮಾಳವಿಕ ಅವಿನಾಶ್, ಅರ್ಚನಾ ಜೋಯಿಸ್ ಸೇರಿದಂತೆ ಅನೇಕರು ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.
ಈಗಾಗಲೇ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಮಾತ್ರವಾಲ್ಲದೆ ಅನೇಕ ನಟ ನಟಿಯರ ಬೇಡಿಕೆ ಹೆಚ್ಚಾಗಿದೆ. ಕೆಜಿಎಫ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಶ್ರೀನಿಧಿ ಶೆಟ್ಟಿ ಹಾಗೂ ರಾಕಿ ಭಾಯ್ ತಾಯಿಯ ಪಾತ್ರ ಮಾಡಿರುವ ಅರ್ಚನಾ ಜೋಯಿಸ್ ಅವರ ಮುಂದುನ ಸಿನಿ ಬದುಕಿಗೆ ಅತೀ ದೊಡ್ಡ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗಲ್ಲ.
ನಿಮಗೆ ಗೊತ್ತಿರುವ ಹಾಗೇ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರ ಗೆಲ್ಲಲು ಅರ್ಚನ ಜೋಯಿಸ್ ಅವರ ತಾಯಿಯ ಪಾತ್ರ ಬಹು ಮುಖ್ಯ ಎನ್ನಬಹುದು. ಕೆಜಿಎಫ್ 2 ಸಿನಿಮಾಕ್ಕಾಗಿ ನಟಿ ಅರ್ಚನಾ ಜೋಯಿಸ್ ಅವರು ಬರೋಬ್ಬರಿ ಐವತ್ತು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರೆ. ಚಿತ್ರರಂಗದಲ್ಲಿ ಪೋಷಕ ನಟನೆಗೆ ಅತೀ ಹೆಚ್ಚು ಸಂಭಾವನೆ ಪಡೆದ ನಟಿಯಾಗಿ ಹೊರಹೋಮ್ಮಿದ್ದಾರೆ.
ಅರ್ಚನಾ ಜೋಯಿಸ್ ಅವರ ಆಕ್ಟಿಂಗ್ ಕುರಿತಾಗಿ ಹೇಳುವುದಾದರೆ ಕಿರುತೆರೆಲೋಕದಲ್ಲಿ ಜನಪ್ರಿಯತೆ ಗಳಸಿಕೊಂಡವರಲ್ಲಿ ಅರ್ಚನಾ ಜೋಯಿಸ್ ಕೂಡ ಒಬ್ಬರು. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಅರ್ಚನಾ ಜೋಯಿಸ್ ಅವರು ಸಾಕಷ್ಟು ಫೇಮಸ್ ಆಗಿದ್ದಾರೆ ನೀವು ನೋಡಿರಬಹುದು.
ಜೀ ಕನ್ನಡದ “ಮಹಾದೇವಿ” ಧಾರಾವಾಹಿಯಲ್ಲಿ ಅರ್ಚನಾ ಜೋಯಿಸ್ ಅವರು ತ್ರಿಪುರಸುಂದರಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಸಾಕಷ್ಟು ಅವಕಾಶಗಳು ಬಂದವು ಹೀಗೆ ಹಲವು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಇನ್ನು ಕೆಜಿಎಫ್ 1 ಹಾಗೂ ಕೆಜಿಎಫ್ 2 ನಲ್ಲಿ ತುಂಬಾ ಅದ್ಭುತವಾಗಿ ನಟಿಸಿ ದೊಡ್ಡ ಅಭಿಮಾನ ಬಳಗವನ್ನೇ ಹೊಂದಿದ್ದಾರೆ. ನಟಿ ಅರ್ಚನಾ ಜೋಯಿಸ್ ಅವರಿಗೆ ಕೆಜಿಎಫ್ ದೊಡ್ಡ ಪ್ಲಸ್ ಪಾಯಿಂಟ್ ಎನ್ನುತ್ತಾರೆ ಅವರು.
ಅವರು ತಮ್ಮ ಹನ್ನೊಂದನೇ ವರ್ಷಕ್ಕೆ ಅವರಿಗೆ ಆಸಕ್ತಿಇತ್ತು ಹೀಗಾಗಿ ಮಾಯಾರವ್ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ ಯಿಂದ ಡಾನ್ಸ್ನಲ್ಲಿ ಪದವಿ ಪಡೆದುಕೊಂಡರು. ಹೀಗೆ ನೃತ್ಯಗುರು ಅನುರಾಧ ವಿಕ್ರಂತ್, ಕಥಕ್ ಮಾತ್ರವಾಲ್ಲದೆ ಭಾರತನಾಟ್ಯ, ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಇಂಡಿಯನ್ ಕಂಟೆಪರಾರಿಯನ್ನು ಕಲಿತರು. ಅರ್ಚನಾ ದೃಷ್ಟಿ ಸೆಂಟರ್ ಮತ್ತು ನಾಟ್ಯ ಗ್ರೂಪ್ ನ ಮೂಲಕ ಭಾರತ ಸೇರಿದಂತೆ ವಿದೇಶದಲ್ಲೂ ಇನ್ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿ ನೃತ್ಯದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಅವರ ತಂದೆ ಮತ್ತು ಪತಿಯ ಬೆಂಬಲದಿಂದ ಯೋಗ ಮತ್ತು ಜಿಮ್ಮಸ್ಟಿಕ್ ನಲ್ಲು ತೊಡಗಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ನಟನೆಗಾಗಿ ಸೈಮಾ ಅತ್ತ್ಯುತ್ತಮ ಪೋಷಕ ಪ್ರಶಸ್ತಿ ಕೂಡ ಪಡೆದಿದ್ದರೆ. ಇಡೀ ಸಿನಿಮಾ ಪ್ರೇಕ್ಷಕರಿಗೆ ಗೊತ್ತಿರುವ ಹಾಗೇ ಕೆಜಿಎಫ್ 2 ಚಿತ್ರದ ಗೆಲುವಿಗೆ ಅರ್ಚನಾ ಅವರದ್ದು ಬಹು ದೊಡ್ಡ ಕೊಡುಗೆ ಇದೆ. ಅರ್ಚನಾ ಜೋಯಿಸ್ ಅವರು ಸೋಷಿಯಲ್ ಮೀಡಿಯದಲ್ಲಿ ಸಾಕಷ್ಟು ಆಕ್ಟಿವ್ ಇರುತ್ತಾರೆ.
ನಟಿ ಅರ್ಚನಾ ಅವರಿಗೆ ಈಗಾಗಲೇ ಮದುವೆಗೆ ಆಗಿ ಪತಿಯ ಜೊತೆಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಇತ್ತೀಚಿಗೆ ನಟಿ ಅರ್ಚನಾ ಜೋಯಿಸ್ ಅವರು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ ಆ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ಫೋಟೋಗಳು ನೋಡಿಲ್ಲ ಅಂದ್ರೆ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು