ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಮೇಘನಾರಾಜ್; ಎಲ್ಲರೂ ಇಷ್ಟೊಂದು ಖುಷಿಯಾಗ್ತಿರೋದು ಯಾಕೆ ಗೊತ್ತಾ..!?

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಮೇಘನಾ ರಾಜ್ ರವರು ಮೊದಲಿನಿಂದಲೂ ಕೂಡ ಚಿತ್ರರಂಗವನ್ನು ಚೆನ್ನಾಗಿ ಬಲ್ಲವರು. ಯಾಕೆಂದರೆ ಅವರ ತಂದೆ ಹಾಗುತ್ತಾ ಆಗಿರುವ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ಇಬ್ಬರು ಕೂಡ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟರಾಗಿ ನಟಿಸಿಕೊಂಡು ಬಂದವರು. ಹೀಗಾಗಿ ಚಿಕ್ಕವಯಸ್ಸಿನಿಂದಲೇ ಕನ್ನಡ ಚಿತ್ರರಂಗದ ಕುರಿತಂತೆ ಮೇಘನಾರಾಜ್ ಚೆನ್ನಾಗಿ ಬಲ್ಲವರು. ಆದರೆ ಅವರು ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಮಾತ್ರ ಮಲಯಾಳಂ ಚಿತ್ರರಂಗದ ಮೂಲಕ.

ಮಲಯಾಳಂ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿದ ನಟಿ ಮೇಘನಾ ರಾಜ್ ರವರು ಹಲವಾರು ಸ್ಟಾರ್ ನಟರ ಜೊತೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡು ಯಶಸ್ವಿ ನಟಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಘನಾರಾಜ್ ರವರು ತಮ್ಮ ಮಾತೃಭಾಷೆಯಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿ ಪಡೆದು ಸ್ಟಾರ್ ನಟಿಯಾಗಿ ಪ್ರೇಕ್ಷಕರಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ನಂತರ ಹಲವಾರು ವರ್ಷಗಳ ಕಾಲ ಪ್ರೀತಿಸಿ ಚಿರುಸರ್ಜ ರವರನ್ನು ಹಿಂದೂ ಹಾಗೂ ಕ್ರಿಶ್ಚಿಯನ್ ಎರಡು ಧರ್ಮಗಳ ಪ್ರಕಾರ ಮದುವೆಯಾಗುತ್ತಾರೆ. ಪ್ರೀತಿಸಿ ಮದುವೆಯಾಗಿದ್ದ ಗಂಡನೊಂದಿಗೆ ಜೀವನಪೂರ್ತಿ ಬಾಳುವಂತಹ ಕನಸನ್ನು ಕಂಡಿದ್ದ ಅವರಿಗೆ ಭಗವಂತ ಬೇರೆಯದೇ ಹಣೆಬರಹವನ್ನು ಬರೆದಿದ್ದ ಎಂದು ಕಾಣಿಸುತ್ತದೆ. ಹೌದು ಚಿರು ಸರ್ಜಾ ರವರನ್ನು ನಾವು ಅಕಾಲಿಕವಾಗಿ ಕಳೆದುಕೊಳ್ಳುತ್ತೇವೆ. ಚಿರು ಸರ್ಜಾ ರವರನ್ನು ಕಳೆದುಕೊಂಡ ನಂತರ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದ ಮೇಘನರಾಜ್ ರವರ ಬಾಳಿಗೆ ಬೆಳಕಾಗಿ ಬಂದಿದ್ದು ಜೂನಿಯರ್ ಚಿರು ಸರ್ಜಾ.

ಜೂನಿಯರ್ ಚಿರು ಸರ್ಜಾ ಜೀವನದಲ್ಲಿ ಬಂದ ನಂತರ ಮತ್ತೊಮ್ಮೆ ಅವನಿಗಾಗಿ ಮೇಘನಾರಾಜ್ ರವರು ಜೀವನದಲ್ಲಿ ಮತ್ತೆ ಪುಟಿದೇಳುತ್ತಾರೆ. ಹಲವಾರು ಸಿನಿಮಾಗಳಿಗೆ ಕೂಡ ಸಹಿ ಹಾಕುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಈಗ ಮೇಘನಾ ರಾಜ್ ರವರು ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಆ ಸಂತೋಷದ ಸುದ್ದಿ ಏನೆಂಬುದು ತಿಳಿದುಕೊಳ್ಳೋಣ ಬನ್ನಿ.

ಹೌದು ಈ ಹಿಂದೆ ಮೇಘನಾ ರಾಜ್ ರವರು ನಟಿಸಿದ್ದ ಇರುವುದೆಲ್ಲವ ಬಿಟ್ಟು ಚಿತ್ರತಂಡದೊಂದಿಗೆ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಕುರಿತಂತೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹೌದು ತಮ್ಮ ಮುಂದಿನ ಸಿನಿಮಾ ಶಬ್ದ ಚಿತ್ರದಲ್ಲಿ ನಟಿಸುವುದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮೇಘನರಾಜ್ ರವರು ಖಚಿತಪಡಿಸಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ನಟನೆಯ ಕುರಿತಂತೆ ಮೇಘನಾರಾಜ್ ರವರು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತರುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *