ಇತ್ತೀಚಿಗೆ ಯುವ ಪೀಳಿಗೆಯಲ್ಲಿ ಕನ್ನಡ ಚಿತ್ರರಂಗದ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರು ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಅವರು ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ಮಾಡಿಕೊಂಡು, ಕೋಟ್ಯಾಂತರ ಅಭಿಮಾನಿಗಳ ಬಳಗ, ಯಶಸ್ಸು, ಕೀರ್ತಿ ಎಲ್ಲವನ್ನು ಸಂಪಾದಿಸಿದ್ದಾರೆ. ಡಿಬಾಸ್ ಮತ್ತು ಕಿಚ್ಚ ಸುದೀಪ್. ಕರ್ನಾಟಕದ ಜನರಿಗೆಲ್ಲ ತಿಳಿದಿರುವ ಹಾಗೇ ಈ ಇಬ್ಬರು ನಟರು ಒಂದು ಕಾಲದಲ್ಲಿ ಬಹಳ ಆತ್ಮೀಯ ಗೆಳೆಯರಾಗಿದ್ದರು. ಇವರಿಬ್ಬರನ್ನು ಅಭಿಮಾನಿಗಳು ಕುಚಿಕುಗಳು ಎಂದು ಕರೆಯಲಾಗಿತ್ತು.
ಕಿಚ್ಚ ಸುದೀಪ್ ಮತ್ತು ಡಿಬಾಸ್ ಅವರ ಅಭಿಮಾನಿಗಳ ಇವರಿಬ್ಬರನ್ನು ಕನ್ನಡದ ಶ್ರೇಷ್ಠ ನಟರಾದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ನೇಹಕ್ಕೆ ಹೋಲಿಕೆ ಮಾಡುತ್ತಿದ್ದರು. ಇವರಿಬ್ಬರ ಇವರಿಬ್ಬರ ಪತ್ನಿಯರು ಕೂಡ ಒಳ್ಳೆಯ ಸ್ನೇಹಿತರಾಗಿದ್ದು ಹಲವಾರು ಸಭೆ-ಸಮಾರಂಭಗಳಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರು, ಈ ಇಬ್ಬರು ನಟರನ್ನು ಜೊತೆಯಾಗಿ ನೋಡುವುದೇ ಅಭಿಮಾನಿಗಳಿಗೊಂದು ದ್ವಿತೀಯ ಹಬ್ಬದಂತೆ ಕಾಣುತ್ತಿತ್ತು.
ಆದರೆ ಈ ಸ್ನೇಹದ ಮೇಲೆ ಯಾರ ಕೆಟ್ಟ ವಕ್ರದೃಷ್ಟಿ ದೃಷ್ಟಿ ಬಿತ್ತೋ ಏನು, ಇವರಿಬ್ಬರ ನಡುವೆ ಮನಸ್ತಾಪಗಳು ಮೂಡಿ ಬಂದು, ದರ್ಶನ್ ಮತ್ತು ಸುದೀಪ್ ಸ್ನೇಹ ಮು’ರಿದುಬಿ’ತ್ತು. ಇನ್ನು ಮುಂದೆ ಇವರಿಬ್ಬರೂ ಮೊದಲ ಹಾಗೆ ಆಗುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಸೂಚನೆ ಅಥವಾ ನಂಬಿಕೆ ಇಲ್ಲ. ಆದರೆ ಇವರ ಅಭಿಮಾನಿಗಳು ಮಾತ್ರ ಇವರನ್ನು ಇಂದಲ್ಲ ನಾಳೆ, ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದಾಗುತ್ತಾರೆ ಎಂಬ ನಂಬಿಕೆಯಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
ಇದೀಗ ಒಬ್ಬ ಕಲಾವಿದನ ಕೈಚಳಕದಿಂದ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ದಚ್ಚು ಮತ್ತೆ ಕಿಚ್ಚ ಒಂದಾಗಿದ್ದಾರೆ.ಆ ಕಲಾವಿದ ಮಾಡಿರುವ ವಿಶೇಷವಾದ ಪೇಂಟಿಂಗ್ ಫೋಟೋ ಈಗ ಸೋಶಿಯಲ್ಮೀ ಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗುತ್ತಿದೆ.
ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಅವರು ಇಬ್ಬರೂ ಜೊತೆಯಾಗಿ ನಿಂತಿದ್ದು, ಅವರ ನಡುವೆ ಅಭಿಮಾನಿಯೊಬ್ಬರು ನಿಂತಿರುವ ಹಾಗೆ ಪೇಂಟಿಂಗ್ ಮಾಡಲಾಗಿದೆ. ಇದನ್ನು ನೋಡಿ ಎಲ್ಲ ಅಭಿಮಾನಿಗಳು ಇಬ್ಬರು ಸ್ನೇಹಿತರು ಮತ್ತೆ ಒಂದಾಗಲಿ ಎಂದು ಸಂತೋಷಪಟ್ಟಿದ್ದರೆ.
ಈ ಇಬ್ಬರು ಕಲಾವಿದರು ಮತ್ತೊಮ್ಮೆ ಒಂದಾದರೆ ಎಷ್ಟು ಸುಂದರವಾಗಿರುತ್ತದೆ ಎಂದು ಯೋಚನೆ ಮಾಡಲು ಶುರು ಮಾಡಿದ್ದಾರೆ. ಈ ಫೋಟೋ ಎಲ್ಲೆಡೆ ವೈ’ರಲ್ ಆಗುತ್ತಿದೆ. ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ಆಸೆ, ಇವರಿಬ್ಬರೂ ಮತ್ತೆ ಹೀಗೆ ಒಂದಾಗಬೇಕು ಚಿತ್ರರಂಗದಲ್ಲಿ ಒಟ್ಟಿಗೆ ಕೆಲಸ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ, ಈ ಹಿಂದೆ ಕರಣ್ ಆಚಾರ್ಯ ಅವರು ಸಹ ಅಭಿಮಾನಿಗಳ ಕೋರಿಕೆಯ ಮೇರೆಗೆ, ದರ್ಶನ್ ಮತ್ತು ಸುದೀಪ್ ಅವರ ಫೋಟೋವನ್ನು, ಪುರಾಣದ ಪಾತ್ರಗಳ ರೀತಿಯಲ್ಲಿ ತೋರಿಸಿದ್ದರು,
ಆ ಫೋಟೋ ಸಹ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈ’ರಲ್ ಆಗಿತ್ತು. ಇದೀಗ ಅವರ ಹೊಸ ಪೇಂಟಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈ’ರಲ್ ಆಗುತ್ತಿದೆ. ಅಭಿಮಾನಿಗಳ ಆಸೆಯಂತೆ, ಮುಂದಿನ ದಿನಗಲ್ಲಾದರೂ ಈ ಇಬ್ಬರು ನಟರು ಮತ್ತೆ ಒಂದಾಗುತ್ತಾರಾ. ಎಂದು ಕರ್ನಾಟಕದ ಅಭಿಮಾನಿಗಳು ಕಾದು ನೋಡಬೇಕಾಗಿದೆ. ಕಲಾವಿದ ಹಂಚಿಕೊಂಡಿರುವ ದಚ್ಚು ಹಾಗೂ ಕಿಚ್ಚ ಒಂದಾಗಿರುವ ಸುಂದರ ಫೋಟೋವನ್ನು ಇಲ್ಲಿ ನೋಡಬಹುದು
ನೀವು ಡಿಬಾಸ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿದ್ದಾರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ