ಅಭಿಮಾನಿಗಳು ನಿಮ್ಮ ಮಗನನ್ನು ಯಾವಾಗ ಚಿತ್ರರಂಗಕ್ಕೆ ಪರಿಚಯ ಮಾಡುತ್ತೀರಾ ಎಂಬ ಪ್ರಶ್ನೆಗೆ ಖಡಕ್ ಕ್ಕಾಗಿ ಉತ್ತರ ನೀಡಿದ ಡಿಬಾಸ್ ಹೇಳಿದ್ದೇನು ಗೊತ್ತೇ??

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಸಮುದ್ರದಷ್ಟು ಅಭಿಮಾನಿಗಳನ್ನು ಹೊಂದಿರುವ ನಟನೆಂದರೆ ಅದು ನಮ್ಮ ಡಿಬಾಸ್ ಮಾತ್ರ. ಇವರು ಕನ್ನಡ ಚಿತ್ರರಂಗದ ಮೇರು ನಟರಾದ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ನಟನಗಬೇಕು ಎಂದು ನಿರ್ಧರಿಸಿದಾಗ, ಇವರ ಹಾದಿ ಅಷ್ಟು ಸುಲಭವಾಗಿಇರಲಿಲ್ಲ. ಬರೀ ಕಷ್ಟ ಅವಮಾನಗಳನ್ನು ಅನುಭವಿಸಿ ಇದೀಗ ಸ್ಯಾಂಡಲ್ವುಡ್ ನಲ್ಲಿ ಅಗ್ರ ಸ್ಥಾನದಲ್ಲಿ ಇದ್ದಾರೆ. ಇವರನ್ನು ಇಷ್ಟ ಪಡಲು ಕೇವಲ ನಟನಾಗಿ ಮಾತ್ರ ಅಲ್ಲಾ. ದರ್ಶನ್ ಮಾಡುವ ಕೆಲಸಗಳನ್ನು ನೋಡಿದರೆ ಇವರನ್ನು ಇಷ್ಟ ಪಡದೆ ಇರಲು ಸಾಧ್ಯವೇ ಇಲ್ಲಾ.

ಕನ್ನಡದ ಚಿತ್ರರಂಗದಲ್ಲಿ ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡರೆ ನಮ್ಮ ದರ್ಶನ್ ಹುಟ್ಟು ಹಬ್ಬವನ್ನು ಅನಾಥಾಶ್ರಮ, ವೃದ್ಧಶ್ರಮ ಇತರರಿಗೆ ಸಹಾಯ ಮಾಡುವ ಮೂಲಕ ಆಚರಿಸಿಕೊಳ್ಳುತ್ತಾರೆ. ಇನ್ನು ಇವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹಾದಿಯನ್ನೇ ಪಾಲಿಸುತ್ತಾರೆ. ದರ್ಶನ್ ಅವರ ಹುಟ್ಟುಹಬ್ಬ ಬಂದರೆ ಅದೆಷ್ಟೋ ಜನರಿಗೆ ನೇರವಾಗುತ್ತಾರೆ. ಕೊರೋನ ಸಂದರ್ಭದಲ್ಲಿ ಕೂಡ ಸಾಕಷ್ಟು ಕಲಾವಿದರಿಗೆ ನೆರವಿಗೆ ನಿಂತವರು ನಮ್ಮ ದರ್ಶನ್.

ಇದೀಗ ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ದಿನಗಳಿಂದ ಕೇಳುತ್ತಿದ್ದ ಪ್ರೆಶ್ನೆಗೆ ಡಿಬಾಸ್ ಅವರು ಉತ್ತರ ನೀಡಿದ್ದಾರೆ. ಹಾಗಿದ್ದರೆ ಅವರ ಅಭಿಮಾನಿಗಳು ಕೇಳುತ್ತಿರುವ ಪ್ರೆಶ್ನೆ ಏನು? ಎಂದು ನಿಮ್ಮಲ್ಲಿ ಪ್ರೆಶ್ನೆಗಳು ಮೂಡುವುದು ಸಹಜ, ಆ ಗೊಂದಲಕ್ಕೆ ಉತ್ತರ ಪಡೆಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ಯಾಂಡಲ್ವುಡ್ ನಲ್ಲಿ ಹಲವಾರು ವರ್ಷಗಳಿಂದ ದರ್ಶನ್ ಅವರ ಸುಪುತ್ರ ವಿನೀಶ್ ತೂಗುದೀಪ ಅವರನ್ನು ಯಾವಾಗ ನಾವು ಬೆಳ್ಳಿ ಪರದೆಯ ಮೇಲೆ ನೋಡಲು ಅವಕಾಶ ಕಲ್ಪಿಸುತ್ತೀರಾ ಎಂದು ಅಭಿಮಾನಿಗಳು ಕೇಳುತ್ತಾಳೆ ಇದ್ದರು.ಈ ಪ್ರೆಶ್ನೆಗೆ ಒಂದು ಖಾಸಗಿ ವಾಹಿನಿಯಲ್ಲಿ ಸಂದರ್ಶನ ಕೊಡುವ ವೇಳೆಯಲ್ಲಿ ಕೇಳಿದ ನಿರೂಪಕರಿಗೆ ಮತ್ತು ಅದೆಷ್ಟೋ ದಿನಗಳಿಂದ ತಮ್ಮ ಅಭಿಮಾನಿಗಳ ಪ್ರೆಶ್ನೆಗಳಿಗೆ ಉತ್ತರ ನೀಡಿದ್ದಾರೆ.

ನಾವು ಯಾವತ್ತೂ ನಡೆದು ಬಂದ ಹಾದಿಯನ್ನು ಮರೆಯಬಾರದು. ಹಾಗೆಯೇ, ಯಾವತ್ತಿಗೂ ಕಷ್ಟದಿಂದ ಸುಖದ ಜೀವನಕ್ಕೆ ಬಂದಾಗ ಮಾತ್ರ ಆ ಜೀವನದ ಅರ್ಥ ತಿಳಿಯುವುದು. ನಾವು ಕಷ್ಟಪಟ್ಟಿದ್ದೇವೆ ನಮ್ಮ ಮಕ್ಕಳಿಗೆ ಕಷ್ಟ ಬೇಡ ಎಂದೆಲ್ಲಾ ಯೋಚಿಸಿ ಅವರ ಹಾದಿಯನ್ನು ಸುಗಮ ಮಾಡಿಕೊಟ್ಟರೆ, ಅವರಿಗೆ ಮನುಷ್ಯರ ಮತ್ತು ಹಣದ ಬೆಲೆ ಗೊತ್ತಿರುವುದಿಲ್ಲ ಹಾಗಾಗಿ ಅವರು ನಾಯಕನಾಗಬೇಕೆಂದರೆ, ಮೊದಲು ಕಸ ಗುಡಿಸಿ ನಂತರ ಮುಂದಿನ ಮುಂದಿನ ಹೆಜ್ಜೆಗೆ ತಲುಪಲಿ ಎಂದು ದರ್ಶನ್ ಹೇಳಿದ್ದಾರೆ.

ಇದಲ್ಲವೇ ನಿಜವಾದ ಒಬ್ಬ ನಾಯಕನ ಮಾತು, ಇದಕ್ಕೆ ಡಿಬಾಸ್ ಅವರಿಗೆ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋದು ಅಭಿಮಾನಿಗಳನ್ನು ಯಾವಾಗಲು ವಿ ಐ ಪಿ ಎಂದು ಕರೆಯುವ ಏಕೈಕ ನಟ ನಮ್ಮ ದರ್ಶನ್. ದರ್ಶನ್ ಅವರು ತಮ್ಮ ಮಗನ ಬಗ್ಗೆ ಕೊಟ್ಟ ಉತ್ತರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *