ಅಭಿಮಾನಿಗಳ ಒತ್ತಾಯಕ್ಕೆ ಡ್ಯಾನ್ಸಿಂಗ್ ವೇದಿಕೆ ಮೇಲೆ ಅಪ್ಪು ಡೈಲಾಗ್ ಹೊಡೆದ ಅಶ್ವಿನಿ ಪುನೀತ್ ರಾಜಕುಮಾರ್.. ಕಣ್ಣೀರಾದ ಮೇಘನಾ ರಾಜ್ ನೋಡಿ

ಸುದ್ದಿ

ಇತ್ತೀಚಿಗೆ ಪ್ರಸಾರವಾಗುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ಯಿಂಗ್ ಚಾಂಪಿಯನ್ ರಿಯಾಲಿಟಿ ಶೋ ಈಗ ಫಿಲನೆ ಹಂತ ತಲುಪಿದೆ. ಗ್ರಾಂಡ್ ಫಿನಾಲೆಗೆ ಈಗಾಗಲೇ ಕ್ಷಣ ಗಣನೆ ಶುರುವಾಗಿದೆ. ಇಂದು ನಡೆಯುವ ಫಿನಾಲೆ ಗೆ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸಿದ್ದಾರೆ.
ಈ ಕಾರ್ಯಕ್ರಮದ ಮೆರುಗು ಇಷ್ಟಷ್ಟು ಹೆಚ್ಚಿದೆ. ಹಾಗೂ ನಮ್ಮ ಹೀರೊ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಭಾಗಿಯಾಗಿದ್ದಾರೆ. ಕಿರುತೆರೆ ವಾಹಿನಿಯವರು ಈಗಾಗಲೇ ಕಾರ್ಯಕ್ರಮದ ಪ್ರೊಮೊ ಬಿಡುಗಡೆ ಮಾಡಿ ಸಾಕಷ್ಟು ಮೆಚ್ಚುಗೆ ಕಳಿಸಿದೆ ಜೊತೆಗೆ ಇಂದು ನಡೆಯುವ ಈ ಫೈನಲ್ ಎಪ್ಪಿಸೋಡ್ ಗೆ ಕಾಯುತ್ತಿದ್ದಾರೆ ಅಭಿಮಾನಿಗಳು.

ಈ ಗ್ರಾಂಡ್ ಫಿನಾಲೆ ಡ್ಯಾನ್ಸ್ಯಿಂಗ್ ಚಾಂಪಿಯನ್ ನಲ್ಲಿ 5 ಜೋಡಿಗಳಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಕುತೂಹಲ ವೀಕ್ಷಕರಿಗೆ. ಇನ್ನು ಇಂದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅಶ್ವಿನಿ ಅವರ ನೋಡೋದಕ್ಕೆ ಹಾಗೂ ಅವರ ಮಾತಿಗಾಗಿ ವೀಕ್ಷಕರು ಇಂದಿನ ಫೈನಲ್ ಗಾಗಿ ಕಾಯುತುದ್ದಾರೆ.
ಇಷ್ಟು ವರ್ಷದ ಸಿನಿ ಜರ್ನಿಯಲ್ಲಿ ಕೂಡ ಅಪ್ಪು ಅವರ ಜೊತೆಯಾಗಲಿ ಅಥವಾ ಒಬ್ಬರೇ ಆಗಲಿ ಎಲ್ಲ ಅಶ್ವಿನಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದೆ ಕಡಿಮೆ. ಅಪ್ಪು ಅವರ ಹೆಸರು ಮತ್ತು ಅವರು ಗಳಿಸಿದ್ದ ಕೀರ್ತಿ ಉಳಿಸಲು ಈ ಕಾರ್ಯಕ್ರಮದಲ್ಲಿ ಏನೆಂದರು ಗೊತ್ತೇ ? ಅಲ್ಲದೇ ಇವರ ಮಾತುಗಳನ್ನು ಕೇಳಿ ನಟಿ ಮೇಘನಾ ರಾಜ್ ಅವರು ವೇದಿಕೆಯಲೇ ಕಣ್ಣೀರಿಟ್ಟದ್ದು ಯಾಕೆ ಗೊತ್ತೇ? ತಿಳಿಯಲು ಸಂಪೂರ್ಣವಾಗಿ ಓದಿ.

ನಟ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ನಟ ಧ್ರುವ ಸರ್ಜಾ ಅವರು ಡ್ಯಾನ್ಸ್ಯಿಂಗ್ ಚಾಂಪಿಯನ್ ಗ್ರಾಂಡ್ ಫೈನಲ್ ನಲ್ಲಿ ಭಾಗಿಯಾಗಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಿ ಫಿನಾಲೆಯನ್ನು ಮತ್ತಷ್ಟು ಮೇರುಗನ್ನು ಹೆಚ್ಚಿಸಿದ್ದಾರೆ. ನಿಮಗೆ ತಿಳಿದಿರುವ ಹಾಗೇ ಡ್ಯಾನ್ಸ್ ಎಂದರೆ ಅಪ್ಪು ಅವರಿಗೆ ಪಂಚ ಪ್ರಾಣ. ಡ್ಯಾನ್ಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತಿದ್ದರು ಅವರು ಇಲ್ಲದಿರುವ ಕಾರಣ ಅಪ್ಪು ಅವರ ಸ್ಥಾನವನ್ನು ಈಗ ಅಶ್ವಿನಿ ಅವರು ತುಂಬಿದ್ದು ಪುನೀತ್ ರಾಜಕುಮಾರ್ ಪ್ರತಿ ನಿಧಿಯಾಗಿ ಕಾರ್ಯಕ್ರಮದ ಕರೆಯೋಲೆಯ ಗೌರವಕ್ಕೆ ಅಪ್ಪು ಆಸೆ ಈಡೇರಿಸಲು ಅಶ್ವಿನಿ ಅವರು ಹೋಗಿದ್ದಾರೆ.

ಗ್ರಾಂಡ್ ಫಿನಾಲೆ ಗೆ ಆಗಮಿಸಿದ ನಟ ಧ್ರುವ ಸರ್ಜಾ ಅವರು ಅಭಿನಯದ ಪೊಗರು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದು ಅಶ್ವಿನಿ ಅವರು ಆಗಮಿಸಿ ಫೈನಲ್ ಪ್ರವೇಶಿಸಿದ ಜೋಡಿಗಳಿಗೆ ಶುಭ ಹಾರೈಸಿದರು. ಇನ್ನು ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಗಳಿದ್ದು ಡ್ಯಾನ್ಸ್ಯಿಂಗ್ ಗ್ರಾಂಡ್ ಫಿನಾಲೆ ಇಂದು (ಮೇ 29) ಸಂಜೆ 6ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಡ್ಯಾನ್ಸ್ಯಿಂಗ್ ಸಂಭ್ರಮದ ಕಾರ್ಯಕ್ರಮವನ್ನು ನಾವು ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ ಅವರಿಗೆ ಸಮರ್ಪಣೆ ಮಾಡ್ತಾ ಇದ್ದೀವಿ ಅದರ ಭಗವಾಗಿ ನೀವು ಬಂದಿದ್ದೀರಾ.

ನೀವು ಬಂದಿರುವುದಕ್ಕೆ ನಾವು ತುಂಬಾ ಕೃತಜ್ಞರಾಗಿದ್ದಿವಿ ಎಂದು ನಟ ವಿಜಯ್ ರಘುವೇಂದ್ರ ವೇದಿಕೆಯ ಮೇಲೆ ಹೇಳಿದ್ದು ಇಡೀ ಕರ್ನಾಟಕದ ಜನರು ಮಗು ತರ ಎತ್ತಿ ಬೆಳೆಸಿ ಹಾರೈಸಿರುವಂತ ನಮ್ಮ ಅಪ್ಪು ಅವರನ್ನು ಡ್ಯಾನ್ಸ್ಯಿಂಗ್ ರೂಪದಲ್ಲಿ ಈ ಶೋ ನ ವಿನ್ನರ್ ಅವರ ಮನೆಗೆ ಹಿಗುತ್ತಿದ್ದಾರೆ. ಎಂದು ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಹೇಳಿದ್ದಾರೆ. ಈ ಡ್ಯಾನ್ಸ್ಯಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಡ್ಯಾನ್ಸರ್ ಗಳಿಗೂ ತುಂಬು ಹೃದಯದ ದನ್ಯವಾದಗಳು. ಹಾಗೂ ಫೈನಲ್ ಗೇ ಬಂದ ಎಲ್ಲರಿಗೆ ಆಲ್ ದಿ ಬೆಸ್ಟ್ ಎಂದು ಅಶ್ವಿನಿ ಅವರು ವೇದಿಕೆಯ ಮೇಲೆ ವಿಶ್ ಮಾಡಿದ್ದಾರೆ. ಅಲ್ಲದೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಡೈಲಾಗ್ ಹೊಡೆದಿದ್ದು ಇದನ್ನು ಕೇಳಿದ ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ.
ಈ ವೇದಿಕೆಯ ಮೇಲೆ ಅಶ್ವಿನಿ ಅವರು ಅಪ್ಪು ಅವರ ಯಾವ ಡೈಲಾಗ್ ಹೇಳಿದ್ದಾರೆ ಎಂಬುದು ತಿಳಿಯಬೇಕಾದರೆ ನೀವು ಇಂದಿನ ಫಿನಾಲೆ ಸಂಚಿಕೆ ನೋಡಲೇ ಬೇಕು.


Leave a Reply

Your email address will not be published. Required fields are marked *