ಅಯೋಧ್ಯೆ ನದಿಯಲ್ಲಿ ಸ್ನಾನದ ವೇಳೆ ಪತ್ನಿಗೆ ಚುಂಬಿಸಿದ ವ್ಯಕ್ತಿಗೆ ಜನರ ಗುಂಪಿನಿಂದ ಹಿಗ್ಗಾಮುಗ್ಗಾ ಥಳಿತ, ನೆಟ್ಟಿಗರಿಂದ ಆಕ್ರೋಶ..! ವಿಡಿಯೋ ವೈರಲ್

ಸುದ್ದಿ

ನಮಸ್ಕಾರ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಲಕ್ನೋ ಅಯೋಧ್ಯಯಲ್ಲಿ ಸರಯೂ ನದಿಯ ದಂಡೆಯಲ್ಲಿರುವ ಘಾಟ್ ಗಳ ಸರಣಿ ರಾಮ್ ಕಿ ಪೈಡಿಯಲ್ಲಿ ಸ್ನಾನ ಮಾಡುವಾಗ ಸಾರ್ವಜನಿಕರು ಇರುವ ಜಗದಲ್ಲಿ ಪತ್ನಿಗೆ ಮುತ್ತಿಟ್ಟ ವ್ಯಕ್ತಿಗೆ ಅಲ್ಲಿ ನೆರೆದಿದ್ದ ಜನರು ಗುಂಪು ಅವನಿಗೆ ಥಳಿಸಿದ್ದು, ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. ಪತ್ನಿಯನ್ನು ಸಾರ್ವಜನಿಕವಾಗಿ ಚುಂಬಿಸುವುದು ತಪ್ಪು ಅದು ಪವಿತ್ರ ನದಿಯಲ್ಲಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು ಲಕ್ಷಾಂತರ ಮಂದಿ ವೀಕ್ಷಣೆಮಾಡಿದ್ದಾರೆ.

ಅಲ್ಲಿ ನಡೆದ ಘಟನೆಯ ವಿಡಿಯೋವನ್ನು ಅಶೋಕ್ ಸ್ಟೈನ್ ಎಂಬುವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ವ್ಯಕ್ತಿ ತನ್ನ ಪತ್ನಿಗೆ ಮುತ್ತು ನೀಡಿ ತಪ್ಪು ಮಾಡಿಬಿಟ್ಟ. ಕೋಟ್ಯಂತರ ಭಕ್ತರ ಪುಣ್ಯ ಭೂಮಿ ಅಯೋಧ್ಯ ಅಂತಹ ಪವಿತ್ರ ಸ್ಥಳದಲ್ಲಿ ರೋಮ್ಯಾನ್ಸ್ ಮಾಡುವುದು ಮಹಾ ತಪ್ಪು ಅದು ಭಾರತೀಯ ಸಂಸ್ಕೃತಿಯಲ್ಲಿ, ಆದರೆ ಅವರು ಗುಂಪು ನಡೆಸಿದ ಯುವಕರ ನಡೆಯನ್ನು ಟೀಕಿಸಿದ್ದಾರೆ.

ಘಾಟ್ ನಲ್ಲಿ ದಂಪತಿಗಳು ಸ್ನಾನ ಮಾಡುತ್ತಿದ್ದ ದಂಪತಿಗಳು ಪರಸ್ಪರ ಒಬ್ಬರನೊಬ್ಬರು ಚುಂಬಿಸುವುದನ್ನು ನೋಡಿದ ವ್ಯಕ್ತಿಯೊಬ್ಬ ಆ ಮಹಿಳೆಯ ಗಂಡನನ್ನು ಎಳೆದುಕೊಂಡು ಅವನಿಗೆ ಹೊಡೆಯಲು ಪ್ರಾರಂಭಿಸುತ್ತಾನೆ. ಆ ವೇಳೆ ಅಲ್ಲಿದ್ದ ಜನರೆಲ್ಲ ಸೇರಿ ಆತನ ಮೇಲೆ ಹಲ್ಲೆ ಮಾಡುವಾಗ ತನ್ನ ಪತಿಯ ಮೇಲೆ ಹಲ್ಲೆ ಮಾಡದಂತೆ ಪತ್ನಿ ತಡೆಯಲು ಯತ್ನಿಸುತ್ತಳೆ. ಇಬ್ಬರನ್ನು ನೀರಿನಿಂದ ಹೊರಗೆಳೆದು ಆ ಮಹಿಳೆಯ ಗಂಡನನ್ನು ಸುತ್ತುವರಿದು ಹಲ್ಲೆ ಮಾಡುತ್ತಾರೆ. ಆ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು ಸಾಕಷ್ಟು 1 ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಗೊಂಡಿದೆ. ಈ ವಿಡಿಯೋ ಗೆ ಪರ ವಿರೋಧಿಗಳ ಅಭಿಪ್ರಾಯ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಮಾತನಾಡಿದ ಹಿರಿಯ ಪೊ-ಲೀಸ್ ಅಧಿಕಾರಿ ಶೈಲೇಶ್ ಪಂಡೆ, ಅಲ್ಲಿ ನಡೆದ ವಿಡಿಯೋ ಬಗ್ಗೆ ನನಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಅಲ್ಲಿಯ ಪೊ-ಲೀಸ್ ರು ಈಗ ದಂಪತಿಗಳ ಎಲ್ಲಿ ವಾಸಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕ್ರಮ ತೆಗೆದುಕೊಳ್ಳಲು ಬಯಸಿದರೆ ಅವರು ದೂರು ದಾಖಲಿಸಬಹುದು ಎಂದಿದ್ದಾರೆ.

ಇಂತಹ ಪವಿತ್ರ ಸ್ಥಳದಲ್ಲಿ ಪ್ರತಿ ದಿನ ಲಕ್ಷಾಂತರ ಭಕ್ತದಿಗಳು ಬಂದು ಹೋಗುತ್ತಾರೆ. ಅಂಥಹ ಜಾಗವನ್ನು ನಾವು ಅಪವಿತ್ರ ಮಾಡೋದು ಎಷ್ಟು ಸರಿ ಇದರಿಂದ ಸಾರ್ವಜನಿಕ ಭಕ್ತದಿಗಳು ಪವಿತ್ರ ನದಿಯಲ್ಲಿ ಸ್ನಾನ ಮಾಡೋದು ಬಿಟ್ಟು ಅಲ್ಲ ಸಲ್ಲದು ಮಾಡಿದರೆ ಹೀಗೆ ಆಗೋದು. ಅಲ್ಲಿಯ ಜನರು ಸರಿಯಾಗಿಯೇ ಮಾಡಿದ್ದಾರೆ. ಅವರ ತೀಟೆ ತೀರಿಸಿಕೊಳ್ಳೊಕ್ಕೆ ಬೇರೇನೇ ಜಾಗ ಇರುತ್ತದೆ, ಅದು ಬಿಟ್ಟು ಇಂತಹ ಪವಿತ್ರ ಸ್ಥಳದಲ್ಲಿ ಮಾಡಿರೋದು ಮಹಾ ಅಪರಾಧ ಅನ್ನೋದು ಅಲ್ಲಿ ಸೇರಿದ್ದ ಜನರ ಅಭಿಪ್ರಾಯ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *