ಕರ್ನಾಟಕರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಸುಮಾರು ಎಂಟು ತಿಂಗಳೇ ಕಳೆದಿದೆ. ಪುನೀತ್ ಅಭಿಮಾನಿಗಳು ಪ್ರತಿ ಕ್ಷಣವನ್ನು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಪುನೀತ್ ಅವರನ್ನು ಯಾರೊಂದಿಗೂ ಕೂಡ ಹೋಲಿಕೆ ಮಾಡಲು ಸದ್ಯವಿಲ್ಲ. ಹೌದು ಅಪ್ಪು ಅವರನ್ನು ದೇವರೆಂದು ಪೂಜೆ ಮಾಡುವ ಅಭಿಮಾನಿಗಳು ಪ್ರತಿ ದಿನ ಅಪ್ಪು ವಿನ ಸಮಾಧಿ ಬಳಿ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಲೆ ಇದೆ.
ಇನ್ನು ಅಪ್ಪುವಿನ ಆದರ್ಶಯುತ ಬದುಕನ್ನು ಅಭಿಮಾನಿಗಳು ತಮ್ಮ ಬದುಕಿನಲ್ಲಿ ಅಳವಡಿಕೊಳ್ಳುತ್ತಿದ್ದಾರೆ. ಮಗುವಿನ ಮನಸುಳ್ಳ ಅಪ್ಪುವನ್ನು ನೆನಪಿಸಿಕೊಳ್ಳದೆ ಇರುವವರು ಯಾರು ಇಲ್ಲ. ನಡೆ ನುಡಿ ಮಾತಿನಲ್ಲಿ ವಿನಾಯವಂತಿಕೆ, ಜೊತೆಗೆ ಹೃದಯದ ವಂತಿಕೆ, ಮುಗ್ದತೆ ತಾನು ದೊಡ್ಡ ಸ್ಟಾರ್ ಅನ್ನುವ ಕಿಂಚ್ಚಿತ್ತು ಅಹಂ ಇಲ್ಲದೆ ಇರುವ ಏಕೈಕ ನಟ ಎಂದರೆ ನಮ್ಮ ಅಪ್ಪು, ಅದೆಷ್ಟೋ ಬಡ ಕುಟುಂಬಗಳಿಗೆ ಆಸರೆ ಆಗಿರುವ ಅಪ್ಪು ಅವರು ಬಗ್ಗೆ ಹೇಳೋಕೆ ದಿನ ಪೂರ್ತಿ ಸಾಲದು.
ಅಪ್ಪು ಅಭಿಮಾನಿಗಳು ಅಪ್ಪು ಅವರನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಪ್ರತಿ ದಿನ ಅಪ್ಪುವಿನ ಸಮಾಧಿ ಬಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಆದರೆ, ಅಪ್ಪುಗಾಗಿ ಹೊಸಪೇಟೆಯ ಅಭಿಮಾನಿಗಳು ಮಾಡಿದ ಕೆಲಸದ ಬಗ್ಗೆ ಕೇಳಿದರೆ ನಿಜಕ್ಕೂ ನೀವು ಅಚ್ಚರಿಪಡ್ತಿರಾ.
ಹೊಸಪೇಯ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿ, ಅದರಲ್ಲೂ ಬರೋಬ್ಬರಿ ಅಪ್ಪು ಅವರ 7.4 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ ಅದರೆ ಇದೀಗ ರಾಜ್ಯದಲ್ಲಿ ಅಭಿಮಾನಿಗಳು ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ವಿಜಯ ನಾಗರದ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಅನಾವರಣವಾಗಿದ್ದು, ತಮ್ಮ ನೆಚ್ಚಿನ ದೇವರ ಪ್ರತಿಮೆ ನೋಡಿ ಫುಲ್ ಖುಷ್ ಆಗಿದ್ದಾರೆ.
ಅಪ್ಪು ಪ್ರತಿಮೆ ಅನಾವರಣಕ್ಕೆ ಅಣ್ಣ ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಪತ್ನಿ ಸೇರಿದಂತೆ ನಟ ಅಜಯ್ ರಾವ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಭಾಗಿಯಾಗಿದ್ದರು. ಆದರೆ ಇದೀಗ ಸಚಿವರೊಬ್ಬರ ಕಚೇರಿಯಲ್ಲಿ ಅಪ್ಪು ಅವರ ಜಾಕೆಟ್ ಫೋಟೋವನ್ನು ಏನು ಮಾಡಿದ್ದಾರೆ ನೋಡಿ.
ಪುನೀತ್ ರಾಜ್ ಕುಮಾರ್ ಅವರು ಅಭಿಯಿಸುತ್ತಿರುವ ಸಿನೆಮಾ ಹಾಗೂ ಅವರು ಬದುಕಿದ್ದ ದಾರಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಪ್ಪು ಅವರು 2002 ರಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಸಿನೆಮಾದಲ್ಲಿ ಕಾಣಿಸಿಕೊಂಡರು. ನಂತರ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಪರಮಾತ್ಮ, ಜಾಕಿ ರಣವಿಕ್ರಮ, ದೊಡ್ಮನೆ ಹುಡ್ಗ, ರಾಜಕುಮಾರ, ನಟಸಾರ್ವಭೌಮ, ಯುವರತ್ನ, ಜೇಮ್ಸ್, ಹೀಗೆ ಸಾಕಷ್ಟು ಸಿನೆಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಬರೇ ನಟನೆ ಅಲ್ಲದೇ ಗಾಯಕರಾಗಿ, ಹಾಗೂ ನಿರ್ಮಾಪಕರಾಗಿ, ನಿರೂಪಕರಾಗಿಯೂ ಕೂಡ ಸಕ್ರಿಯರಾಗಿದ್ದರು. ಇದೇ ಕಾರಣಕ್ಕೆ ಅಪ್ಪು ಅವರನ್ನು ಅಷ್ಟು ಬೇಗ ಮರೆತುಬಿಲು ಸಾಧ್ಯವಿಲ್ಲ, ಆದರೆ ಇದೀಗ ಸಚಿವರೊಬ್ಬರು ತಮ್ಮ ಕಚೇರಿಯಲ್ಲಿ ಪುನೀತ್ ರಾಜಕುಮಾರ್ ಫೋಟೋವನ್ನು ಫ್ರೆಮ್ ಹಾಕಿಸಿ ಇಟ್ಟುಕೊಂಡಿದ್ದಾರೆ. ಅವರ ಜಾಕೆಟ್ ಗೆ ಫ್ರೆಮ್ ಹಾಕಿಸಿ ಇಡಲಾಗಿದೆ. ಅರಸು ಚಿತ್ರದಲ್ಲಿ ಪುನೀತ್ ಅವರು ಧರಿಸಿದ್ದ ಜಾಕೆಟ್ ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ್ ಸಿಂಗ್ ಫೋಟೋ ಫ್ರೆಮ್ ಹಾಕಿಸಿ ಅಪ್ಪನ ಕಚೇರಿಯಲ್ಲಿ ಇಟ್ಟಿದಾರೆ.
ಅರಸು ಚಿತ್ರದಲ್ಲಿ ಅಪ್ಪು ಅವರು ಧರಿಸಿದ್ದ ಜಾಕೆಟ್ ಅನ್ನು ಪುನೀತ್ ಅವರು ಅಂದು ತನ್ನ ಅಭಿಮಾನಿ ಹೊಸಪೇಟಿಯ ಕಿಚಡಿ ವಿಶ್ವಗೆ ಕೊಟ್ಟಿದ್ದರು. ಅಣ್ಣಾವ್ರು ಮಗ ಅಪ್ಪು ಕೊಟ್ಟಿದ್ದ ಉಡುಗೊರೆಯಾದ ಜಾಕೆಟ್ ಅನ್ನು ಜೋಪಾನವಾಗಿ ತಮ್ಮ ಬಳಿಯೇ ಇಟ್ಟುಕೊಂಡಿದ್ದು. ಪುನೀತ್ ಕೊಟ್ಟಿದ್ದ ಜಾಕೆಟ್ ಅನ್ನು ಸಚಿವರ ಪುತ್ರ ಸಿದ್ದಾರ್ಥ್ ಸಿಂಗ್ ಅವರಿಗೆ ಕಿಚಡಿ ವಿಶ್ವ ನೀಡಿದ್ದು, ಆ ಜಾಕೆಟ್ ಗೆ ಫ್ರೆಮ್ ಹಾಕಿಸಿ ಅಪ್ಪನ ಆಫೀಸ್ ನಲ್ಲಿ ಮಗ ಇಟ್ಟಿದ್ದಾರೆ. ಇದು ನಿಜವಾದ ಅಭಿಮಾನ ಅಂದರೆ. ಇದು ದೊಡ್ಮನೆ ರಾಜಕುಮಾರನಿಗೆ ಇರುವ ಅಭಿಮಾನಿಗಳ ಸಂಪತ್ತು ಇನ್ನು ಎಷ್ಟೇ ವರ್ಷ ಹೋದರು ಕಾಗೋಕ್ಕೆ ಸಾಧ್ಯನೇ ಇಲ್ಲ ಬಿಡಿ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.