ಅಶ್ವಿನಿ ಅವರಿಗೆ ಅಪ್ಪು ಉಡುಗೊರೆಯಾಗಿ ಕೊಡಿಸಿದ್ದ ಲ್ಯಾಂಬೋರ್ಗಿನಿ ಕಾರ್ ಈಗ ಯಾರ ಬಳಿ ಇದೆ ಗೊತ್ತಾ?

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಿಮಗೆ ಗೊತ್ತಿರುವ ಹಾಗೆ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಸುಮಾರು 8 ತಿಂಗಳು ಕಳೆದಿದೆ. ಪುನೀತ್ ಅವರ ಹೆಸರನ್ನು ಒಬ್ಬ ನಟನಾಗಿ ಇಷ್ಟ ಪಡುವುದಕ್ಕಿಂತ ಹೆಚ್ಚಾಗಿ ಒಬ್ಬ ದೇವರೆಂದು ಇಷ್ಟ ಪಡಲು ಆರಂಭಿಸಿದ್ದಾರೆ. ಕರ್ನಾಟಕದ ಜನರ ಪಾಲಿಗೆ ನಟನಾಗಿ ಉಳಿದಿಲ್ಲ ಅದರ ಬದಲಾಗಿ ದೇವಮಾನವಾನಾಗಿ ಬಿಟ್ಟಿದ್ದಾರೆ.

ದೇವರ ಹೆಸರಲ್ಲಿ ಮಾಡುವ ಕೆಲಸಗಳನ್ನು ಈಗ ಅಪ್ಪುವಿನ ಹೆಸರಿನಲ್ಲಿ ಸಹ ಕೇಳಿ ಬರುತ್ತಿದೆ. ನೀವು ನೋಡಿರಬಹುದು ಇತ್ತೀಚಿಗೆ ಯಾವ ಸಿನೆಮಾ, ಮದುವೆ, ಸಮಾರಂಭದಲ್ಲಿ ಅಪ್ಪು ಅವರನ್ನು ನೆನೆಯದೆ ಯಾವ ಕಾರ್ಯಕ್ರ ಶುರುವಾಗುವುದಿಲ್ಲ. ಆದರೆ ಅಪ್ಪು ನಮ್ಮ ಜೊತೆಗೆ ಇಲ್ಲ ಅನ್ನೋ ಸತ್ಯವನ್ನು ನಾವು ಒಪ್ಪುವುದೇ ಇಲ್ಲ. ಪುನೀತ್ ನಮ್ಮ ಜೊತೆಯಲ್ಲೇ ಇದ್ದಾರೆ ಎಂಬ ಭಾವನೆ ಎಲ್ಲರದ್ದಾಗಿದೆ.

ಇನ್ನೂ ಪುನೀತ್ ರಾಜ್ ಕುಮಾರ್ ಒಬ್ಬ ಮಹಾನ್ ನಟನಾಗಿದ್ದರು ತಮಗಾಗಿ ಎನ್ನುವುದಕ್ಕಿಂತ ಪರರಿಗಾಗಿ ಎಂದು ಮಾಡಿರುವ ಕೆಲಸಗಳೆ ಹೆಚ್ಚು. ಇದೀಗ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ಬಳಿಕ ಅವರ ಹಾದಿಯಲ್ಲೇ ಅವರ ಅಭಿಮಾನಿಗಳು ನಡೆಯುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಮೆಚ್ಚುಗೆಯ ಕೆಲಸಗಲೆಲ್ಲ ಇದೀಗ ಅವರ ಅಭಿಮಾನಿಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರು ಇಷ್ಟ ಪಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಮಾಡಿ ಪುನೀತ್ ರಾಜ್ ಕುಮಾರ್ ಅವರ ಆತ್ಮಕ್ಕೆ ಖುಷಿ ಕೊಡುತ್ತಿದ್ದಾರೆ. ಎಂದರು ತಪ್ಪಾಗಲ್ಲ.

ಪುನೀತ್ ರಾಜ್ ಕುಮಾರ್ ಅವರಿಗೆ ಸಿನೆಮಾ ಜಗತ್ತು ಹಾಗೂ ಕುಟುಂಬ ಜಗತ್ತು ಎರಡು ಒಂದೇ ಸಿನಿಮಾಗಾಗಿ ಕೊಡುವಷ್ಟೇ ಸಮಯವನ್ನು ತಮ್ಮ ಕುಟುಂಬಕ್ಕೆ ಕೊಡುತ್ತಿದ್ದರು.ಸಿನೆಮಾ ಜೀವನಕ್ಕೂ ಹಾಗೂ ಅವರ ವೈಯಕ್ತಿಕ ಜೀವನಕ್ಕೂ ಸಮತೋಲನದಲ್ಲಿ ನಡೆಸಿಕೊಂಡು ಹೋಗುತ್ತಿದ್ದ ಅಪ್ಪು ಅವರು ಇರುವಾಗ ಅವರ ಕನಸಿನ ಸಂಸ್ಥೆಯಾದ ಪಿ.ಆರ್.ಕೆ ಪ್ರೊಡಕ್ಷನ್ ಜವಾಬ್ದಾರಿಯನ್ನು ಅವರ ಹೆಂಡತಿ ಅಶ್ವಿನಿ ಅವರಿಗೆ ವಹಿಸಿಕೊಟ್ಟಿದ್ದರು.

ಪಿ.ಆರ್.ಕೆ ಸಂಸ್ಥೆ ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಂಸ್ಥೆ ಆ ಸಂಸ್ಥೆಯಲ್ಲಿ ಹೊಸ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದರು. ಹೊಸಬರಿಗೆ ಅವಕಾಶ ಕೊಡುವ ಸಲುವಾಗಿ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಇದರಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡುವ ದೊಡ್ಡ ಕನಸನ್ನು ಇಟ್ಟುಕೊಂಡಿದ್ದರು. ಈಗ ಅಪ್ಪು ಅವರ ಕನಸನ್ನು ನನಸು ಮಾಡಲು ಅವರ ಪತ್ನಿ ಅಶ್ವಿನಿ ಅವರು ಮುಂದಾಗಿದ್ದಾರೆ.

ಇನ್ನೂ ಪುನೀತ್ ರಾಜ್ ಕುಮಾರ್ ಅವರಿಗೆ ಹೊಸ ಜಾಗ ಅನ್ವೇಷಣೆ ಮಾಡುವುದು ಕಾರ್ ಹಾಗೂ ಬೈಕ್ ಕ್ರೀಜ್ ಹೆಚ್ಚಾಗಿದ್ದು. ಕಳೆದ ವರ್ಷ ಮಹಿಳಾ ದಿನಾಚರಣೆಯ ದಿನ ಅವರ ಪ್ರೀತಿಯ ಹೆಂಡತಿ ಅಶ್ವಿನಿ ಅವರಿಗೆ ನೀಲಿ ಬಣ್ಣದ ಲ್ಯಾಂಬರ್ಗಿನಿ ಕಾರನ್ನು ಉಡುಗೊರೆಯಾಗಿ ಅಪ್ಪು ನೀಡಿದ್ದರು.

ಈ ದುಭಾರಿ ಕಾರ್ ನ ಬೆಲೆ ಬರೋಬ್ಬರಿ ‘4 ಕೋಟಿ’ ಈ ಕಾರನ್ನು ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹೊರಗಡೆ ಓಡಾಡುವಾಗ ಬಳಸುತ್ತಿದ್ದರು. ಇನ್ನೂ ಹೆಚ್ಚಾಗಿ ಪುನೀತ್ ಅವರೇ ಈ ಕಾರನ್ನು ಬಳಸುತ್ತಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಅಗಲಿಕೆಯ ನಂತರ ಈ ದುಬಾರಿ ಕಾರನ್ನು ಯಾರು ಬಳಸುತ್ತಿರಲಿಲ್ಲ. ದೊಡ್ಡ್ಮನೆಯ ಕುಟುಂಬದವರು ಯಾರು ಈ ಕಾರನ್ನು ಬಳಸುವ ಮನಸ್ಸು ಮಾಡುತ್ತಿರಲಿಲ್ಲ. ಹಾಗಾಗಿ ಈ ಕಾರನ್ನು ಈಗ ದುಬೈನಲ್ಲಿ ನೆಲೆಸಿರುವ ಅಶ್ವಿನಿ ಅವರ ತಮ್ಮನ ಬಿಳಿ ಈ ಕಾರು ಇದೆ ಎಂದು ಮೂಲಗಳು ತಿಳಿಸಿವೆ. ಅಪ್ಪು ಅವರನ್ನು ನೀವೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *