ಕನ್ನಡ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ ಸಾಕಷ್ಟು ಖ್ಯಾತಿ ಪಡೆದ ಕನ್ನಡಿಗರ ನೆಚ್ಚಿನ ನಟಿ ಮಯೂರಿ ಅವರು ಇತ್ತೀಚಿಗೆ ಸಿನೆಮಾ ಮತ್ತು ಧಾರಾವಾಹಿಗಳಿಂದ ದೂರ ಉಳಿದಿದ್ದರು. ನಟಿ ಮಯೂರಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ತಮ್ಮ ಮುದ್ದು ಮಗನ ಲಾಲನೆ ಹಾಗೂ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರು ನಟಿ ಮಯೂರು ಅವರು ತಮ್ಮ ಅಭಿಮಾನಿಗಳಿಗೋಸ್ಕರ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲು ಆಕ್ಟಿವ್ ಆಗಿರುತ್ತಾರೆ.
ಮಯೂರಿ ಅವರು ತಮ್ಮ ಮುದ್ದು ಮಗನ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮಯೂರಿ ಅವರು ಕಳೆದ ವರ್ಷ ಜೂನ್ 12 ರಂದು ತಮ್ಮ ಸುಮಾರು ವರ್ಷದಿಂದ ಪ್ರೀತಿಸುತ್ತಿದ್ದ ಗೆಳೆಯ ಅರುಣ್ ಜೊತೆ ಗುರು ಹಿರಿಯರ ಆಶೀರ್ವಾದದಿಂದ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ನಂತರ ತಾಯಿ ಆಗುತ್ತಿರುವ ವಿಚಾರ ಸೀಮಂತದ ಫೋಟೋಗಳು ಮತ್ತು ಬೇಬಿ ಬಂಪ್ ಫೋಟೋಗಳನ್ನು ನಟಿ ಮಯೂರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಯೂರಿ ಅವರ ಮುದ್ದು ಮಗನ ಹೆಸರು ಆರವ್ ಮಗ ತುಂಬಾ ಮುದ್ದಾಗಿ ಬೆಳೆದಿದ್ದಾನೆ. ಮಗನ ಅಪರೂಪದ ವಿಡಿಯೋಗಳನ್ನು ನಟಿ ಮಯೂರಿ ಆಗಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ನಟಿ ಮಯೂರಿ ಅವರು ತಮ್ಮ ಮುದ್ದು ಮಗನಿಗೆ ಮುಡಿ ಕೊಟ್ಟಿದ್ದಾರೆ. ಚಿಕ್ಕ ತಿರುಪತಿ ಎಂದೇ ಖ್ಯಾತಿಯಾಗಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಮಯೂರಿ ಮತ್ತು ಪತಿ ಅರುಣ್ ಅವರು ಜೊತೆಗೆ ಹೋಗಿ ಮಗನ ಮುಡಿ ಸೇವೆ ಕೊಟ್ಟಿದ್ದಾರೆ. ಮುಡಿ ಕೊಟ್ಟ ನಂತರ ಮಗನ ಬೊಡಿ ತಲೆಯ ಫೋಟೋ ಶೇರ್ ಮಾಡಿ, ಗೋವಿಂದ ಗೋವಿಂದ, ಎಂದು ಕ್ಯಾಂಪ್ಷನ್ ಹಾಕಿದ್ದಾರೆ. ಮಯೂರಿ ಅವರ ಮುದು ಮಗ ಆರವ್ ನ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಸಕ್ಕತ್ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಮಯೂರಿ ಅವರು ತಮ್ಮ ಮಗನ ಲಾಲಾನೇ ಪಾಲನೆಯಲ್ಲಿ ಬ್ಯುಸಿ ಆಗಿರೋದ್ರಿಂದ, ಸಿನೆಮಾ ಕ್ಷೇತ್ರದಿಂದ ದೂರ ಉಳಿದಿದ್ದರೆ. ಸದ್ಯಕ್ಕೆ ಯಾವುದೇ ಸಿನೆಮಾದಲ್ಲಿ ನಟಿಸುತ್ತಿಲ್ಲ. ಮಗ ದೊಡ್ಡವನಾದ ಮೇಲೆ ಮತ್ತೆ ಸಿನೆಮಾರಂಗಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವ ಮಾಹಿತಿ ದೊರಕಿದೆ. ನಟಿ ಮಯೂರಿ ಅವರ ಮಗ ಆರವ್ ಗು ಕೂಡ ಸಾಕಷ್ಟು ಅಭಿಮಾನಿಗಳು ಇದ್ದಾರೆ.
ಅವನದೇ ಆದ ಸೋಷಿಯಲ್ ಮೀಡಿಯಾದಲ್ಲಿ ಅಕೌಂಟ್ ಕೂಡ ಇದೆ. ಈಗಾಗಲೇ ಸಾಕಷ್ಟು ಅಭಿಮಾನಿಗಳು ಅವನನ್ನು ಹಿಂಬಾಲಿಸುತ್ತಿದ್ದಾರೆ. ಮುದ್ದು ಮಗನ ತುಂಟಾಟ ಜೊತೆ ನಟಿ ಮಯೂರಿ ಸಂತೋಷದ ಸಮಯವನ್ನು ಕಳೆಯುತ್ತಿದ್ದಾರೆ. ಇವರ ಸಾಂಸಾರಿಕ ಜೀವನ ಇನ್ನಷ್ಟು ಸುಖಮಯವಾಗಿರಲಿ ಎಂದು ಕೇಳಿಕೊಳ್ಳುವ. ನಟಿ ಮಯೂರಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ