ಆಂಧ್ರದಲ್ಲಿ ಅಪ್ಪುಗೆ ಅವಮಾನ, ಪುನೀತ್ ಫೋಟೋ ಕಿತ್ತೆಸೆದಕ್ಕೆ.! ಶಿವಣ್ಣ ಬೇಸರ. ಶಾಕಿಂಗ್ ನ್ಯೂಸ್

ಸುದ್ದಿ

ಕರ್ನಾಟಕದ ಮೆಚ್ಚಿನ ಮಗನಾದ ಪುನೀತ್ ರಾಜಕುಮಾರ್ ಅಗಲಿಕೆಯನ್ನು ಇಡೀ ದೇಶವೇ ಮೌನವಾಗಿತ್ತು. ಅಂತ ಪುಣ್ಯಾತ್ಮ ನಮ್ಮನ್ನು ಬಿಟ್ಟು ಹೋಗಿರುವುದು ಎಲ್ಲರಿಗೂ ತುಂಬಲಾರದ ನಷ್ಟ ಅಂತದ್ರಲ್ಲಿ, ನಾಚಿಕೆಯಗುವತಹ ಕೆಲಸಒಂದು ದುಷ್ಕರಮಿಗಳು ಮಾಡಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೂಗುವಾಗ ಕಾರಿನ ಮೇಲಿದ್ದ ಅಪ್ಪು ಫೋಟೋ ಮತ್ತು ನಾಡಿನ ಧ್ವಜವನ್ನು ತೆರವು ಮಾಡಿದ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರೋ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಿರುಪತಿಯಲ್ಲಿ ಅಪ್ಪು ಪೋಸ್ಟರ್ ತೆರುವು ಮಾಡಿದ ಘಟನೆಯಾ ಬಗ್ಗೆ ಮಾತನಾಡಿದ ಶಿವಣ್ಣ, ಅಪ್ಪು ಭಾವಚಿತ್ರ ತೆಗೆಸಿರುವ ವಿಚಾರ ನನಗೆ ತಡವಾಗಿ ಗೊತ್ತಾಗಿದೆ. ಆದರೆ ಯಾರದ್ದೇ ಆಗಲಿ ಈ ರೀತಿ ಅವರು ಮಾಡಬಾರದು. ನನ್ನ ತಮ್ಮ ಅಂತ ನಾನು ಹೇಳುತ್ತಿಲ್ಲ. ಅಭಿಮಾನಿಗಳು ಅಭಿಮಾನದಿಂದ ಫೋಟೋ ವನ್ನು ಅವರ ಗಡಿಗಳ ಮೇಲೆ ಹಾಕಿರುತ್ತಾರೆ.

ಅವರ ಭಾವನೆಗೆ ದಕ್ಕೆ ತರಬಾರದು. ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮನುಷ್ಯ ನೋವು ಕೊಡಬಾರದು. ಎಲ್ಲರಲ್ಲೂ ಒಂದೇ ನಿಜವಾದ ಫೀಲಿಂಗ್ ಇರುತ್ತೆ ಅದಕ್ಕೆ ಮಸಿ ಬಳಿಯಬಾರದು. ನಮಗೆ ಇಷ್ಟ ಇರುತ್ತೋ ಇಲ್ವೋ ಗೊತ್ತಿಲ್ಲ ಯಾರೇ ಆಗ್ಲಿ ಈ ರೀತಿ ಮಾಡಬಾರದು. ಅವರು ದೊಡ್ಡ ಸ್ಟಾರ್ ಆಗಿರಲಿ ಅಥವಾ ಒಬ್ಬ ಸಾಮಾನ್ಯ ಮನುಷ್ಯನಗಿರಲಿ ಎಲ್ಲರಿಗೂ ನೋವಾಗುವಂತೆ ತಪ್ಪಾಗಿ ನಡೆದುಕೊಳ್ಳಬಾರದು ಅವರಲ್ಲಿ ಒಂದು ಭಾವನೆ ಇರುತ್ತೆ. ಅದರಲ್ಲೂ ಅವರ ಅಭಿಮಾನಿಗಳಿಗೆ ಅವಮಾನ ಮಾಡಬಾರದು ಎಂದರು ಶಿವಣ್ಣ.
ಮೊನ್ನೆಯಿಂದ ಸಂಚಲನ ಮೂಡಿಸುತ್ತಿರುವ ರಾಷ್ಟ್ರ ಭಾಷೆ ಕುರಿತಂತೆ ಮಾತನಾಡಿದ ಶಿವರಾಜ್ ಕುಮಾರ್ ಎಲ್ಲಾ ಭಾಷೆಗಳು ಒಂದೇ ಅಂತ ನಮ್ಮ ರಾಷ್ಟ್ರ ಗೀತೆಯಲ್ಲಿದೆ. ನಾವೆಲ್ಲರೂ ಒಂದೇ ಆದರೆ ನಮ್ಮ ಕನ್ನಡ ವಿಚಾರಕ್ಕೆ ಬಂದರೆ ಕನ್ನಡವೇ ಮುಖ್ಯ ಅಂದರು ಶಿವಣ್ಣ.

ಪುನೀತ್ ರಾಜಕುಮಾರ್ ಅವರನ್ನು ಅವರ ಅಭಿಮಾನಿಗಳು ದೇವರ ರೀತಿಯಲ್ಲಿ ಆರಾಧಿಸುತ್ತಾರೆ. ಅವರು ಮಾಡಿದ ಪುಣ್ಯದ ಕೆಲಸಗಳು ದೇವರಿಗೆ ಮಾಡಿದ ಸೇವೆಯಷ್ಟೇ ಪವಿತ್ರವಾಗಿದೆ. ಹೀಗಿದ್ದಾಗ ಅವರ ಫೋಟೋವನ್ನು ತೆಗೆದರೆ ಮಾತ್ರ ದೇವಸ್ಥಾನಕ್ಕೆ ಹೋಗಬಹುದು ಎನ್ನುವ ನಡೆ ಸರಿಯಲ್ಲ ನಿಮ್ಮದು. ಇದನ್ನು ಪ್ರಶ್ನೆಸಿ, ಸ್ಪಷ್ಟನೆಗಾಗಿ ಮದ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಅಪ್ಪು ಫ್ಯಾನ್ಸ್ ಗಳು ಮುತ್ತಿಗೆ ಹಾಕಿದ್ದಾರೆ.
ಅವರು ಮಾಡಿರುವ ತಪ್ಪಿಗೆ ಕ್ಷಮೆ ಕೇಳಲೇಬೇಕು ಇಲ್ಲ ಅಂದರೆ ಅಭಿಮಾನಿಗಳು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಒಬ್ಬ ಮೇರು ನಟ ಅವರು ಹೋದಾಗ ಇಡೀ ದೇಶವೇ ಅವರು ಮಾಡಿರುವ ಕೆಲಸದ ಬಗ್ಗೆ ಮೆಚ್ಚಿ ಕೊಂಡದಿದ್ದರೆ ಇನ್ನು ಎಷ್ಟೇ ವರ್ಷಗಳು ಕಳೆದರು ಅಪ್ಪು ಮಾಡಿರುವ ಕೆಲಸ ಅಜರಾಮರ ಅವರನ್ನು ಯಾರು ಮರೆಯಲು ಸಾಧ್ಯವಿಲ್ಲ ಅಂಥದ್ರಲ್ಲಿ ಅವರು ಇಂತಹ ಕೆಲಸ ಮಾಡಿರುವುದು ಅಭಿಮಾನಿಗಳಲ್ಲಿ ಬೇಸರ ವ್ಯಕ್ತವಾಗಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *