ಆ ಸಿನಿಮಾಗೋಸ್ಕರ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆಯಲು ಒತ್ತಡ ಹೇರುತ್ತಿದ್ದಾರೆ ಅನಾಮಿಕ ವ್ಯಕ್ತಿಗಳು’ ಅಯ್ಯೋ ಜೇಮ್ಸ್ ಚಿತ್ರಕ್ಕೆ ಈಗ ಏನಾಗಿದೆ ನೋಡಿ!!

Cinema

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಪ್ರಿಯಾ ಆನಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹದ್ದೂರ್ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಕಿಶೋರ್ ಪತ್ತಿಕೊಂಡ ನಿರ್ಮಾಣದಲ್ಲಿ ತಯಾರಾಗಿರುವ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಕೂಡ ನಮಗೆಲ್ಲರಿಗೂ ಗೊತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ಎನ್ನುವ ಕಾರಣಕ್ಕಾಗಿ ಇದನ್ನು ಕೇವಲ ಸಿನಿಮಾ ಮಾತ್ರವಲ್ಲದೆ ಹಬ್ಬದಂತೆ ಆಚರಿಸಿದ್ದಾರೆ ನಮ್ಮೆಲ್ಲ ನೆಚ್ಚಿನ ಕನ್ನಡಿಗರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಕನ್ನಡಿಗರಿಗೆ ಹೇಳಿಕೊಟ್ಟು ಹೋಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರ ಜೇಮ್ಸ್ ಈಗಾಗಲೇ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ನಿರ್ಣಾಮ ಮಾಡಿದೆ. ಆದರೆ ಇದರ ನಡುವಲ್ಲೇ ಇನ್ನೊಂದು ಶಾ’ಕಿಂಗ್ ವಿಚಾರ ಈಗ ಕೇಳಿ ಬರುತ್ತಿದೆ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಕೆಲವು ಅನಾಮಿಕ ವ್ಯಕ್ತಿಗಳು ಹಿಂದಿ ಸಿನಿಮಾ ವಾಗಿರುವ ದ ಕಾಶ್ಮೀರ ಪೈಲ್ಸ್ ಸಿನಿಮಾಗೋಸ್ಕರ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೀರಿ ಎಂಬುದಾಗಿ ಸಿನಿಮಾ ಥಿಯೇಟರ್ ಮಾಲೀಕರಿಗೆ ಒತ್ತಡ ಹೇರುತ್ತಿದ್ದಾರೆ. ಈ ಕುರಿತಂತೆ ಜೇಮ್ಸ್ ಚಿತ್ರದ ನಿರ್ಮಾಪಕರಿಗೆ ತಿಳಿದುಬಂದಿದ್ದು ಈ ಕುರಿತಂತೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಈ ವಿಚಾರವನ್ನು ತಿಳಿದಿರುವ ಕನ್ನಡ ಸಂಘ ಸಂಸ್ಥೆಗಳು ಹಾಗೂ ಅಪ್ಪು ಅಭಿಮಾನಿಗಳು ಈ ಕುರಿತಂತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರಾಗಿರುವ ಕಿಶೋರ್ ಪತ್ತಿಕೊಂಡ ರವರು ವಿರೋಧಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರ ಬಳಿ ಈ ಕುರಿತಂತೆ ಚರ್ಚಿಸಿದ್ದಾರೆ. ಸಿದ್ದರಾಮಯ್ಯನವರು ಕೂಡ ಈ ಕುರಿತಂತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಚಿತ್ರವನ್ನು ಎತ್ತಂಗಡಿ ಮಾಡುತ್ತಿರುವುದರ ಕುರಿತಂತೆ ಗುಡುಗಿದ್ದಾರೆ.

ಒಂದು ಹಿಂದಿ ಸಿನಿಮಾ ಗೋಸ್ಕರ ನಮ್ಮ ಕನ್ನಡ ಚಿತ್ರರಂಗದ ಎಂದು ಮರೆಯಲಾಗದ ಮಾಣಿಕ್ಯ ನಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾವನ್ನು ಚಿತ್ರಮಂದಿರಗಳಿಂದ ಹೊರದಬ್ಬುತ್ತಿರುವುದು ಎಷ್ಟರಮಟ್ಟಿಗೆ ನ್ಯಾಯ. ಕನ್ನಡಿಗರಾದ ನಾವು ಇದರ ಕುರಿತಂತೆ ಧ್ವನಿ ಎತ್ತಬೇಕಾಗಿದೆ. ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ನಮ್ಮ ಹತ್ತಿರ ಚಿತ್ರಮಂದಿರಗಳಿಂದ ತೆಗೆಯದಂತೆ ಹೋರಾಡಬೇಕಾಗಿದೆ.

ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಇಷ್ಟು ಮಾತ್ರವಲ್ಲದೆ ಅಪ್ಪು ಅವರ ಈ ಸಿನಿಮಾವನ್ನು 100 ದಿನಪೂರ್ತಿ ಆಗುವವರೆಗೂ ಕೂಡ ಯಾವ ಸಿನಿಮಾ ಥಿಯೇಟರ್ ಗಳಿಂದಲೂ ಕೂಡ ತೆಗೆಯಬಾರದು ಎನ್ನುವುದಾಗಿ ಥಿಯೇಟರ್ ಮಾಲೀಕರಲ್ಲಿ ಮನವಿಯನ್ನು ಮಾಡೋಣ.


Leave a Reply

Your email address will not be published. Required fields are marked *