ಇಡೀ ರಾಜ್ಯವೇ ಖುಷಿಪಡುವ ಸುದ್ದಿ!: ಚಂದನ್ ಶೆಟ್ಟಿಗೆ ಹೆಣ್ಣು ಮಗುವೇ ಬೇಕಂತೆ; ಪತ್ನಿ ಬಗ್ಗೆ ಹೇಳಿದ್ದೇನು ಗೊತ್ತಾ..!?

ಸುದ್ದಿ

ಬಿಗ್ ಬಾಸ್ ಎನ್ನುವುದು ಹಲವಾರು ವಿಚಾರಗಳಿಗಾಗಿ ಸುದ್ದಿಯಾಗಿದೆ. ಬಿಗ್ ಬಾಸ್ ಮನೆಗೆ ಹೋಗಿಬಂದರೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಕೂಡ ಜನಪ್ರಿಯತೆ ಹಾಗೂ ಹಲವಾರು ಅವಕಾಶಗಳು ಹುಡುಕಿಕೊಂಡು ಬರಲಿವೆ ಎಂಬ ಮಾತುಗಳು ಕೂಡ ಇದೆ. ಇನ್ನು ಇದೇ ಬಿಗ್ ಬಾಸ್ ಮನೆಗೆ ಹೋಗಿ ಬಂದಂತಹ ಇಬ್ಬರು ಜೋಡಿಗಳ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರುವುದು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ಸೋಶಿಯಲ್ ಮೀಡಿಯಾ ಸೆನ್ಸೇಷನಲ್ ಆಗಿರುವ ನಿವೇದಿತ ಗೌಡರವರ ಕುರಿತಂತೆ.

ಬಿಗ್ ಬಾಸ್ ಮನೆಯಲ್ಲಿ ಇವರು ಯಾವ ರೀತಿಯಲ್ಲಿ ಇದ್ದರು ಎನ್ನುವುದು ನಮಗೆಲ್ಲ ತಿಳಿದಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರವರು ಪ್ರೀತಿಯಲ್ಲಿ ಇದ್ದಾರೆ ಎನ್ನುವುದನ್ನು ಯಾರು ಕೂಡ ಊಹಿಸಿರಲು ಕೂಡ ಸಾಧ್ಯವಿಲ್ಲ. ಇವರಿಬ್ಬರ ಪ್ರೀತಿಯ ಕುರಿತಂತೆ ಖುಲಾಸೆ ಆಗಿದ್ದು ಮೈಸೂರಿನ ದಸರಾ ಸಂಭ್ರಮದಲ್ಲಿ ಎನ್ನುವುದು ನಿಮಗೆಲ್ಲಾ ಗೊತ್ತಿದೆ. ಈ ಕುರಿತಂತೆ ಇವರಿಬ್ಬರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ನಂತರ ಇಬ್ಬರು 2020 ರಲ್ಲಿ ಕುಟುಂಬದ ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಈ ಮದುವೆಗೆ ಸೆಲೆಬ್ರಿಟಿಗಳ ಹಿಂಡೇ ಬಂದಿತ್ತು. ಈಗ ಇವರಿಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಾಗಿದ್ದರೂ ಕೂಡ ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇವರಿಬ್ಬರ ವಿಚಾರದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಇಬ್ಬರಿಗೂ ಕೂಡ ಯಾವುದೇ ಸ್ಟಾರ್ ನಟ ಹಾಗೂ ನಟಿಯರಿಗೆ ಕಡಿಮೆಯಿಲ್ಲದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ಗಳು ಇದ್ದಾರೆ. ತಮ್ಮ ಜೀವನದ ಏನೇ ವಿಚಾರಗಳಿದ್ದರೂ ಕೂಡ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಇವರುಗಳು ಪೋಸ್ಟ್ ಮಾಡುವಂತಹ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರ’ಲ್ ಆಗುತ್ತದೆ. ಈಗ ಇವರಿಬ್ಬರ ಕುರಿತಂತೆ ಒಂದು ವಿಚಾರ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಹೌದು ಅದೇನೆಂದರೆ ಎರಡು ವರ್ಷಗಳ ದಾಂಪತ್ಯ ಜೀವನದ ನಂತರ ಈಗ ನಿವೇದಿತಾ ಗೌಡ ರವರು ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರ ತಿಳಿದು ಬರುತ್ತದೆ. ಅಭಿಮಾನಿಗಳಿಗೂ ಕೂಡ ಇದೆ ಸಂತೋಷವನ್ನು ನೀಡಿದೆ. ಚಂದನ್ ಶೆಟ್ಟಿ ಅವರು ನನಗೆ ಹೆಣ್ಣುಮಕ್ಕಳು ಎಂದರೆ ಇಷ್ಟ ನನಗೆ ಹೆಣ್ಣು ಮಗುವೇ ಬೇಕು ಎಂಬುದಾಗಿ ಹೇಳಿದ್ದಾರಂತೆ. ಅಂತೂ ಇಂತೂ ಪೋಷಕರಾಗುತ್ತಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರವರಿಗೆ ನಮ್ಮ ಶುಭಹಾರೈಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸುವ ಬನ್ನಿ.


Leave a Reply

Your email address will not be published. Required fields are marked *