ಈ ಕನ್ನಡ ಕಾಲ್ ರೆಕಾರ್ಡಿಂಗ್ ಕೇಳಿದರೆ ನೀವು ನಗದೇ ಇರಲು ಸಾಧ್ಯನೇ ಇಲ್ಲ! ವಿಡಿಯೋ ನೋಡಿ ನಕ್ಕು ನಕ್ಕು ನಿಮ್ಮ ಹೊಟ್ಟೆ ಹುಣ್ಣಾಗೋದು ಪಕ್ಕ

ಸುದ್ದಿ

ಕಾಮಿಡಿ ಎನ್ನುವುದು ಎಲ್ಲ ಮನುಷ್ಯನ ಜೀವನದ ಅತೀ ಮುಖ್ಯ ಭಾಗ, ಪ್ರಸಿದ್ಧ ಗಾದೆ ಮಾತೊಂದು ಇರುವಂತೆ ಯಾವ ದಿನವನ್ನು ನಾವು ನಗದೇ ಕಳೆಯುತ್ತೇವೋ ಆ ದಿನಪೂರ್ತಿ ವ್ಯರ್ಥವಾದಂತೆ. ಎಲ್ಲಾ ಭಾವನೆಗಳಿಗಿಂತಲೂ ಹಾಸ್ಯ ಎನ್ನುವುದು ಮನುಷ್ಯನ ಆರೋಗ್ಯವನ್ನು ಮತ್ತಷ್ಟು ವೃದ್ಧಿಮಾಡುತ್ತದೆ, ದೈಹಿಕ ಆರೋಗ್ಯ ಮತ್ತು ಆರಾಮದ ಜೊತೆ ಮಾನಸಿಕ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ನಗು ನಗುತ ಇದ್ದರೆ ಆಯಸ್ಸು ಹೆಚ್ಚು ಎನ್ನುವುದನ್ನು ನಮ್ಮ ಹಿರಿಯರು ಕೂಡ ಹೇಳಿದ್ದಾರೆ.

ನಗು ಎನ್ನುವುದು ಜೀವನದ ಅಮೂಲ್ಯ ವಸ್ತು. ಒಂದರ್ಥದಲ್ಲಿ ಜೀವನ ಸಾರ್ಥಕ ಆಗುವುದೇ ನಾವು ನಗುನಗುತ ಕಾಲ ಕಳೆಯುವುದರಿಂದ ಎಂದು ಹೇಳಬಹುದು. ಜೀವನದಲ್ಲಿ ನಾನಾ ರೀತಿಯ ಗೊಂದಲ ಸಮಸ್ಯೆ ಕಷ್ಟ ಸಂಕಟಗಳು ಬರಬಹುದು ಆದರೆ ಇವನ್ನೆಲ್ಲವನ್ನು ಧೈರ್ಯವಾಗಿ ಎದುರಿಸಿ ನಮ್ಮ ಸಮಾಧಾನ ಹಾಗೂ ನಗುವನ್ನು ನಾವು ಕಾಯ್ದುಕೊಳ್ಳಬೇಕು ನಮ್ಮ ಮನಸ್ಸಿನ ಸಂತೋಷವನ್ನು ಯಾರು ಕಿತ್ತುಕೊಳ್ಳುವ ಅವಕಾಶ ಕೊಡಬಾರದು.

ಹಾಗಾಗಿ ಹಾಸ್ಯ ಎನ್ನುವುದಕ್ಕೆ ಅನಾದಿ ಕಾಲದಿಂದಲೂ ಮಹತ್ವ ಹೆಚ್ಚು. ಅಂದಿನ ರಾಜಮಹಾರಾಜರುಗಳು ಕೂಡ ಆಸ್ಥಾನದಲ್ಲಿ ವಿದೂಷಕರನ್ನು ಇರಿಸಿಕೊಂಡು ಅವರಿಂದ ಹಾಸ್ಯವನ್ನು ಕೇಳಿ ಸಂತೋಷಪಡುತ್ತಿದ್ದರು. ಹಾಸ್ಯಕ್ಕಾಗಿಯೇ ಹಲವಾರು ಮನೋರಂಜನ ಕಾರ್ಯಕ್ರಮಗಳು ಏರ್ಪಡಿಸುತ್ತಾರೆ. ನಾಟಕ ಮಾಡುವುದು ಜೋಕ್ಸ್ ಹೇಳುವುದು ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿಗಳು ಮಾಡುವುದು ಈ ರೀತಿ ಜನರ ಮುಖದಲ್ಲಿ ನಗುವನ್ನು ತರಲು ಹಲವಾರು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.

ಹಾಸ್ಯ ಎನ್ನುವ ವಿಷಯವನ್ನು ಇಟ್ಟುಕೊಂಡು ನೂರಾರು ಜನ ಇದರಿಂದ ಬ್ಯುಸಿನೆಸ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಗುವನ್ನು ತರಿಸುವುದು ಅಷ್ಟೊಂದು ಕೃತಕವಾಗಿರಬಾರದು, ಸಹಜವಾಗಿ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನೇ ನಾವು ಮನ ತುಂಬಿಕೊಂಡು ಮನಸ್ಪೂರ್ತಿಯಾಗಿ ಒಳಗಿನಿಂದ ನಗುವಂತಿರಬೇಕು, ಆಗ ಮಾತ್ರ ಅದಕ್ಕೂ ಒಂದು ಬೆಲೆಯೆನ್ನಬಹುದು. ಈ ತರಹದ ಘಟನೆಗಳು ಜೀವನದಲ್ಲಿ ಹಲವಾರು ನಡೆಯುತ್ತಿರುತ್ತವೆ.

ಇವುಗಳು ಸ್ವತಃ ನಾವು ನಗುವಂತೆ ಮಾಡುವುದರ ಜೊತೆಗೆ ಎದುರಿಗಿದ್ದವರು ಹಾಗೂ ಇದನ್ನು ನೋಡಿದವರು ಕೂಡ ಬಿದ್ದು ಬಿದ್ದು ನಗುವಂತೆ ಆಗುತ್ತದೆ. ಅದರಲ್ಲೂ ಮೊಬೈಲ್ ಫೋನ್ ಬಳಕೆ ಹೆಚ್ಚಾದ ಮೇಲಂತೂ ಈ ರೀತಿಯ ಹಾಸ್ಯ ನಡೆಯುವುದು ಹಾಗೂ ಅವುಗಳನ್ನು ರೆಕಾರ್ಡ್ ಮಾಡಿ ಇನ್ನಿತರಿಗೆ ಹಂಚಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈಗ ನಾವು ಸೋಶಿಯಲ್ ಮೀಡಿಯವನ್ನು ತೆರೆದಾಗ ಇಂತಹ ನಿಜ ಘಟನೆ ಆಧಾರಿತ ಹಾಸ್ಯಗಳು ಸಾವಿರಾರು ರೆಕಾರ್ಡ್ ಆಗಿ ಆ ವಿಡಿಯೋಗಳು ವೈ@ರಲ್ ಆಗಿರುವುದು ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತವೆ.

ಅದರಲ್ಲಿ ಕಾಲ್ ರೆಕಾರ್ಡಿಂಗ್ ಗಳ ವಿಷಯದಲ್ಲಿ ಬರುವುದಾದರೆ ಮೊಬೈಲ್ ಫೋನ್ ಬಂದಮೇಲೆ ಹಲವು ರೀತಿಯ ನೆಟ್ವರ್ಕ್ ಕಂಪನಿಯವರು, ಖಾಸಗಿ ಬ್ಯಾಂಕ್ ಹೆಸರು ಹೇಳಿಕೊಂಡು ಲೋನ್ ಕೊಡುತ್ತೇವೆ ಎಂದು ಕಾಲ್ ಮಾಡುವವರು ಇಂಥವರ ಸಂಖ್ಯೆ ಹೆಚ್ಚಾಗಿದೆ. ದಿನವಿಡೀ ಇಂಥವರ ಕಾಟ ಇದ್ದೇ ಇರುತ್ತದೆ. ಇವರಿಗೆ ಅದ್ಯಾರು ನಂಬರ್ ಕೊಡುತ್ತಾರೋ ಗೊತ್ತಿಲ್ಲ, ನಿರಂತರ ಕಾಲ್ ಗಳಂತೂ ಬರುತ್ತಲೇ ಇರುತ್ತವೆ.

ಇವರ ಕಾಲ್ ಗಳನ್ನು ಸ್ವೀಕರಿಸಿ ಬೇಸತ್ತು ಹೋಗಿರುವ ಜನ ಇವರು ಕಾಲ್ ಮಾಡಿದಾಗ ಅವರ ಕಾಲೇಳೆದು ತಮಾಷೆ ಮಾಡುತ್ತಾರೆ. ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕಾಲ್ ‍ಳು ರೆಕಾರ್ಡ್ ಆಗುತ್ತವೆ ಎಂದು ಅವರೇ ಸೂಚನೆ ಕೊಟ್ಟಿದ್ದರು ಕೂಡ ನಮ್ಮ ಜನರು ಅದಕ್ಕೆ ಕೇರ್ ಮಾಡುವುದೇ ಇಲ್ಲ, ಅವರು ಕೊಡುವ ಪ್ರಶ್ನೆಗಳಿಗೆ ಎದ್ವಾ ತದ್ವ ಅವರಿಗೆ ಉತ್ತರ ಕೊಟ್ಟು ಕನ್ಫ್ಯೂಸ್ ಮಾಡಿ ಮತ್ತೆ ಇವರಿಗೆ ಕರೆ ಮಾಡಲೇಬಾರದು ಎನಿಸುವಂತೆ ಮಾಡಿಬಿಡುತ್ತಾರೆ.


Leave a Reply

Your email address will not be published. Required fields are marked *