ಈ ಚುಮು ಚುಮು ಚಳಿಯಲ್ಲಿ ಪಡ್ಡೆ ಹುಡುಗರ ಮೈ ಬಿಸಿಯಾಗುವಂತೆ ಮಸ್ತ್ ಸ್ಟೆಪ್ ಹಾಕಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ! ಮಸ್ತ್ ಡಾನ್ಸ್ ಇಲ್ಲಿದೆ ನೋಡಿ!!

ಸುದ್ದಿ

ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ಎಂದೇ ಖ್ಯಾತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ. ಅದರಂತೆ ಅವರು ಮೊನ್ನೆ ತಾನೇ ಸುಂದರ ಹಾಟ್ ವಿಡಿಯೋ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ತುಂಬಾ ಸಮಯದ ನಂತರ ರಾಗಿಣಿ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗಿದ್ದಾರೆ. ಈ ಹಿಂದೆ ಪ್ರಶಾಂತ್ ರಾಜ್ ಮತ್ತು ಸತನಮ್ ಜುಗಲ್ಬಂಡಿ ಯಲ್ಲಿ ರಾಗಿಣಿ ಕುಣಿದಿದ್ದರೆ. ಅಷ್ಟೇ ಅಲ್ಲದೇ ಸಿನಿಮಾದ ಚಿತ್ರೀಕರಣದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಚೆಂದನವನದ ತುಪ್ಪದ ಬೆಡಗಿ,ಕೆಂಪೆಗೌಡ ಚಿತ್ರದ ಬೆಡಗಿ ರಾಗಿಣಿ ದ್ವಿವೇದಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಚುಪ್ ಚುಪ್ ಎನ್ನುತ್ತಲೇ ಪಡ್ಡೆ ಹೈದರ ನಿದ್ದೆ ಕದ್ದ ಈ ಸುಂದರ ಬೆಡಗಿ ತನ್ನ ಬಳಕು ಮೈಮಾಟದಿಂದಲೇ ಯುವಜನರ ಮನ ಹೊಕ್ಕಿದ ನಟಿ ಎನ್ನಬಹುದು. ಜುಮ್ ಜುಮ್ ಮಾಯ ಎನ್ನುತ್ತಲೆ ಪ್ರಾಯದ ಹುಡುಗರ ಮನಸ್ಸಿಗೆ ಸಿನಿ ರಸಿಕತನವನ್ನು ಬಿತ್ತಿದ್ದಾರೆ ರಾಗಿಣಿ. ಮದಕರಿ ನಾಯಕ ಸಿನೆಮಾ ಮೂಲಕ ಎಂಟ್ರಿಕೊಟ್ಟು ಜಿಂತ್ತಾತ್ತ ಹಾಡಿದ್ದರು.

ಬಳಿಕ ವಿಜಯ ರಾಘವೇಂದ್ರ, ರವಿಚಂದ್ರನ್, ರಮೇಶ್, ದಿಗಂತ್, ದುನಿಯಾ ವಿಜಯ್ ಇನ್ನು ಅನೇಕ ಹಿರಿಯ ನಾಯಕರ ಜೊತೆ ನಟನೆ ಮಾಡಿ ಸೈ ಎನಿಸಿದ್ದಾರೆ. ಸದ್ಯ ಈ ಹಾಟ್ ಬೆಡಗಿ ಎಲ್ಲಿದ್ದಾರೆ ಹೇಗಿದ್ದಾರೆ ಎಂಬ ಕುರಿತು ಇಲ್ಲಿದೆ ಮಾಹಿತಿ. ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಪ್ರಸ್ತುತ ಸ್ಯಾಂಡಲ್​ವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಸಕ್ರಿಯರಾಗಿದ್ದಾರೆ. ‘ತುಪ್ಪದ ಬೆಡಗಿ’ ಎಂದೇ ಕರೆಸಿಕೊಳ್ಳುವ ಈ ನಟಿ ‘ಕೆಂಪೇಗೌಡ’ ‘ವೀರಮದಕರಿ’ ಮೊದಲಾದ ಚಿತ್ರಗಳಿಂದ ಸ್ಟಾರ್ ಪಟ್ಟಕ್ಕೇರಿದ್ದರು. ರಾಗಿಣಿ ಸಿನಿಮಾಗಳಲ್ಲಿ ಟ್ರೆಡಿಷನಲ್​ ಲುಕ್​ಗಳಿಗಿಂತ ಗ್ಲಾಮರಸ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ನಂತರದಲ್ಲಿ ಮಹಿಳಾ ಪ್ರಧಾನ ಆಕ್ಷನ್ ಚಿತ್ರಗಳಲ್ಲೂ ರಾಗಿಣಿ ಬಣ್ಣಹಚ್ಚಿದ್ದರು.

ಇದೀಗ ಮತ್ತೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ನಟಿ. ಚಿತ್ರಗಳ ವಿಷಯಕ್ಕೆ ಬಂದರೆ ನಟಿ, ‘ಗಾಂಧಿಗಿರಿ’ ‘ಒನ್​ ಟು ಒನ್’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಒನ್​ ಟು ಒನ್’ ತಮಿಳು ಚಿತ್ರವಾಗಿದೆ. ಇವುಗಳಲ್ಲದೇ ‘ಕರ್ವ 3’ ‘ಜಾನಿವಾಕರ್’ ಚಿತ್ರಗಳಲ್ಲೂ ನಟಿ ಬಣ್ಣ ಹಚ್ಚುತ್ತಿದ್ದಾರೆ. ಹಿಂದಿ, ಕನ್ನಡ, ಮಲಯಾಳಂನಲ್ಲಿ ತಯಾರಾಗುತ್ತಿರುವ ‘ಸಾರಿ ಕರ್ಮ ರಿಟರ್ನ್ಸ್​’​ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ರಾಗಿಣಿ. ಹೀಗೆ ರಾಗಿಣಿ ಸಿನಿ ಪಯಣ ಮುಂದುವರಿಯುವುದರ ಜೊತೆ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯ ರಾಗಿದ್ದಾರೆ.
ತುಪ್ಪದ ಬೆಡಗಿಗೆ ಕಂಟಕ ಕೂಡ ಬಂದುಇದೀಗ ಮರೆಯಾಗಿದೆ. ಡ್ರಗ್ ಪೆಡ್ಲರ್ ದಂದೆಯಲ್ಲಿ ಈ ನಟಿ ಹಲವು ತಿಂಗಳುಗಳ ಕಾಲ ಜೈಲುವಾಸದಲ್ಲಿದ್ದು ಕೊನೆಗೂ ಸೆರೆಮನೆಯಿಂದ ವಿಮುಕ್ತಿ ಪಡೆದರು. ಬಳಿಕ ದೇಗುಲಕ್ಕೆಲ್ಲ ತೆರಳಿ ಹರಕೆ ಸಂದಾಯ ಮಾಡಿದ್ದಾರೆ. ಬಳಿಕ ಇದೀಗ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹಾಗೂ ರಿಯಾಲಿಟಿ ಶೋ , ಟಿವಿ ಶೊ ನಲ್ಲಿ ಕಾಣಿಸಿಕೊಳ್ಳುತ್ತ ಮತ್ತೆ ಸಿನಿ ಪಯಣ ಮುಂದುವರಿಸಿದ್ದಾರೆ. ವೀರ ಮದಕರಿ,ಬ್ಲ್ಯಾಕ್ ಕೊಬ್ರಾ ಚಿತ್ರದ ನಾಯಕಿ ರಾಗಿಣಿ ಸಿಕ್ಕಾಪಟ್ಟೆ ಹಾಟ್ ಮತ್ತು ಸ್ಪೈಸಿ ಹುಡುಗಿ. ಲುಕ್ ನಲ್ಲೆ ಕಿಕ್ ಕೊಡುವ ಇಕೆಯ ಬಳುಕು ಮೈ ಯಾರಿಗಾದರೂ ತಲೆಕೆಡಿಸಿಕೊಳ್ಳದೆ ಇರಲು ಸಾಧ್ಯವೆ ಇಲ್ಲ.

ಅದರಂತೆ ಐ ಟಂ ಸಾಂಗ್ ನಲ್ಲಿ ನೃತ್ಯ ಮಾಡಿದ ಬಳಿಕ ಇದೀಗ ಇನ್ಟ್ರಾ ಗ್ರಾಂ ರೀಲ್ಸ್ನಲ್ಲಿ ಸಹ ಮಿಂಚುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ ಇಂಗ್ಲಿಷ್ ನಲ್ಲಿ ಬಂದ ರೀಲ್ಸ್ ಹಾಡು ಹೆಲೊ ಹೆಲೋ ಹಾಡಿಗೆ ನೃತ್ಯಮಾಡಿದ್ದಾರೆ. ಬಳುಕು ಮೈಯಲ್ಲಿ ಹೆಲೋ ಹೆಲೋ ಎನ್ನುತ್ತಾ ಭಾವನಾತ್ಮಕವಾಗಿ ಲಿಪ್ ಸಿಂಕ್ ಮಾಡಿ ಅಭಿನಯದ ನೃತ್ಯ ಮಾಡಿದ್ದಾರೆ. ಇತ್ತೀಚೆಗೆ ಇದೇ ಹಾಡಿಗೆ ನಿವೇದಿತಾ, ವೈಷ್ಣವಿ ಗೌಡ ನೃತ್ಯ ಮಾಡಿ ಫೇಮಸ್ ಆಗಿದ್ದು ಈಗ ಆ ಪಟ್ಟಿಯಲ್ಕಿ ರಾಗಿಣಿ ಕೂಡ ಸೇರಿದ್ದಾರೆ.

ಈ ನೃತ್ಯ ಫಾಸ್ಟ್ ಮೋಷನ್ ರೀತಿಯಲ್ಲಿದೆ‌.‌ ರೀಲ್ಸ್ ನಲ್ಲಿ ರಾಗಿಣಿ ಜಿನ್ಸ್ ಮಾದರಿಯ ಹೊಸ ಮಿನಿ ಶಾರ್ಟ್ಸ್ ಬಟ್ಟೆ ಧರಿಸಿದ್ದಾರೆ. ಜೊತೆಗೆ ಇವರ ಕಪ್ಪು ಕ್ರಾಪ್ ಟೀ ಶರ್ಟ್ಸ್ ಮೇಲೆ ಸೂಪರ್ ಡೇ ಎಂದು ಬರೆದುಕೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ‌. ಅದು ಕ್ರಾಪ್ ಟಾಪ್ ಮಾದರಿಯಾಗಿದ್ದು ಶಾರ್ಟ್ ನ ಲೇಸ್ ಅನ್ನು ಕೆಳಗೆ ಪ್ರಿಲ್ ಮಾಡಿದ್ದನ್ನು ಕಾಣಬಹುದು. ಲೈಟ್ ಮೇಕಪ್ ಮಾಡಿರುವ ಇವರು ಕೂದಲನ್ನು ಚಾಕೊಲೇಟ್ ಕಲರ್ ಮಾಡಿಸಿದ್ದು ಈ ನೃತ್ಯದಲ್ಲಿ ಹೈಲೈಟ್ ಆಗಿದೆ.

 

View this post on Instagram

 

A post shared by Ragini dwivedi (@rraginidwivedi)

ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಹೆಲೊ ಎಂದ ತುಪ್ಪದ ಬೆಡಗಿ ಈ ಮೂಲಕ ಹೈಲೈಟ್ ಆಗಿದ್ದಾರೆ. ಪಟಪಟ ಹೆಜ್ಜೆಇಟ್ಟು ನೋಡುಗರನ್ನು ಟೆಂಪ್ಟ್ ಮಾಡಿದ್ದಾರೆ. ಆಕೆಯ ಬಟ್ಟೆ ಹಸಿ ಬಿಸಿ ಯಾಗಿದ್ದು ಅಭಿಮಾನಿಗಳು ಈ ಕುರಿತು ಕಮೆಂಟ್ ಕೂಡಾ ಮಾಡಿದ್ದಾರೆ. ಈ ಮೂಲಕ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ಸ್ ಬಂದಿದ್ದು ರಾಗಿಣಿ ಫುಲ್ ಖುಷ್ ಆಗಿದ್ದಾರೆ. ನಟಿ ರಾಗಿಣಿಯವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *