ನಮಸ್ತೆ ಪ್ರೀತಿಯ ಓದುಗರೇ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ವೈರಲ್ ಆಗಿರುವ ಒಂದು ಫೋಟೋದಲ್ಲಿ ಅಡಗಿರುವ ಗೂಬೆಯನ್ನು ಕಂಡುಹಿಡಿಯಲು ನೆಟ್ಟಿಗರ ಬಹಳಷ್ಟು ಪ್ರಯತ್ನವನ್ನು ಪಟ್ಟಿ ವಿಫಲರಾಗಿದ್ದಾರೆ. ಈ ಫೋಟೋದಲ್ಲಿ ಗೂಬೆ ಎಲ್ಲಿದೆ ಎನ್ನುವುದನ್ನು ಹುಡುಕಲು ಪ್ರಯತ್ನದಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟ್ಟರ್ ನಲ್ಲಿ ವನ್ಯಜೀವಿಗಳಿಗೆ ಸಂಬಂಧಪಟ್ಟಂತಹ ವಿಶೇಷ ಫೋಟೋಗಳು ಮತ್ತು ವಿಡಿಯೋಗಳು ಆಗಾಗ ಶೇರ್ ಮಾಡಿಕೊಳ್ಳುವ ಐ ಎಫ್ ಎಸ್ ಅಧಿಕಾರಿ ಶುಶಾಂತ್ ನಂದಾ ಅವರು ವಿಶೇಷವಾದ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಸುಶಾಂತ್ ನಂದಾ ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಧ್ಯಾನದಲ್ಲಿ ಕುಳಿತಿರುವಂತೆ ಗೂಬೆಯೊಂದು ಕಣ್ಣನ್ನು ಮುಚ್ಚಿ ಕುಳಿತುಕೊಂಡಿದೆ. ಆದರೆ ಗೂಬೆಯ ಬಣ್ಣ ಮರದ ಬಣ್ಣದೊಂದಿದೆ ಸಂಪೂರ್ಣವಾಗಿ ಬೆರೆತು ಹೋಗಿರುವುದರಿಂದ ಗೂಬೆಯು ಅಷ್ಟೊಂದು ಸುಲಭವಾಗಿ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ.
ಈ ಫೋಟೋವನ್ನು ಮೊದಲು ಟ್ವಿಟ್ಟರ್ ಬಳಕೆದಾರರಾದ ಮಸ್ಸಿಮೋ ಅವರು ಶೇರ್ ಮಾಡಿಕೊಂಡಿದ್ದು, ನಂತರ ಅದನ್ನು ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ. ಅದಕ್ಕೆ ಅವರು ಫೋಟೋಕ್ಕೆ ಕ್ರೆಡಿಟ್ ಕೂಡ ನೀಡಿದ್ದಾರೆ.
ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಗೂಬೆ ಎಲ್ಲಿದೆ ಎಂದು ಕಂಡು ಹಿಡಿಯುವ ಪ್ರಯತ್ನ ಕ್ಕೆ ಕೈ ಹಕಿದ್ದಾರೆ. ಒಂದಿಷ್ಟು ಜನ ಹುಡುಕಲು ವಿಫಲರಾಗಿದ್ದಾರೆ. ಇನ್ನು ಕೆಲವರು ಗೂಬೆ ಎಲ್ಲಿದೆ ಎಂದು ಕಂಡುಹಿಡಿದಿದ್ದರೆ. ಅನೇಕರು ಕಾಮೆಂಟ್ ಗಳನ್ನು ಮಾಡಿ ಗೂಬೆ ಎಲ್ಲಿದೆ ಎನ್ನುವ ವಿಚಾರವನ್ನು ನಮ್ಮ ಜೊತೆ ತಿಳಿಸಿದ್ದಾರೆ.
ನೀವು ಅಲ್ಲಿ ಅಡಗಿರುವ ಪ್ರಾಣಿ ಯಾವುದು ಎಂದು ಕಾಮೆಂಟ್ ಮೂಲಕ ತಿಳಿಸಿ.