ಉಪೇಂದ್ರ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಎಷ್ಟು ಕಲಾವಿದರು ಇರಲಿದ್ದಾರೆ ಗೊತ್ತಾ: ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ..!?

Entertainment

ಉಪೇಂದ್ರ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಎಷ್ಟು ಕಲಾವಿದರು ಇರಲಿದ್ದಾರೆ ಗೊತ್ತಾ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಕನಸನ್ನು ಹೊತ್ತುಕೊಂಡು ಪ್ರತಿವರ್ಷ ಹಲವಾರು ಪ್ರತಿಭೆಗಳು ಬರುತ್ತವೆ. ಆದರೆ ಅವರಲ್ಲಿ ಯಶಸ್ವಿಯಾಗುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂಥವರಲ್ಲಿ ಅದೇ ರೀತಿಯ ಕನಸನ್ನು ಹೊತ್ತು ಕೊಂಡು ಬಂದು ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಹೆಸರನ್ನು ಮಾಡಿದವರೆಂದರೆ ರಿಯಲ್ ಸ್ಟಾರ್ ಉಪೇಂದ್ರ.

ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕನಟನಾಗಿ ನಟಿಸಿದ ಸಿನಿಮಾಗಳು ಸೋತಿರಬಹುದು ಆದರೆ ನಿರ್ದೇಶನಕನಾಗಿ ನಿರ್ದೇಶಿಸಿರುವ ಸಿನಿಮಾಗಳು ಇದುವರೆಗೂ ಕೂಡ ಸೋತಿಲ್ಲ. ಎಷ್ಟೇ ವರ್ಷಗಳು ಕಳೆಯಲಿ ರಿಯಲ್ ಸ್ಟಾರ್ ಉಪೇಂದ್ರ ರವರ ನಿರ್ದೇಶನಕ್ಕೆ ಇರುವಂತಹ ಕ್ರೇಜ್ ಕಡಿಮೆಯಾಗುವುದಕ್ಕೆ ಚಾನ್ಸೇ ಇಲ್ಲ. ಹಲವಾರು ವರ್ಷಗಳ ನಂತರ ಸೂಪರ್ ಎನ್ನುವ ಚಿತ್ರದ ನಿರ್ದೇಶಕರಾಗಿ ಮತ್ತು ವಾಪಸಾಗುತ್ತಾರೆ. ಆಗಲೂ ಕೂಡ ಎಲ್ಲರೂ ಆಶ್ಚರ್ಯಪಡುವಂತೆ ಬ್ಲಾಕ್ಬಸ್ಟರ್ ಸಿನಿಮಾವನ್ನು ನೀಡುತ್ತಾರೆ.

ಇದಾದ ನಂತರ ಸದ್ಯಕ್ಕೆ ಪ್ರಜಾಕೀಯ ದಲ್ಲಿ ನಿರತರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ರವರು ಆಗೊಮ್ಮೆ-ಈಗೊಮ್ಮೆ ಸಿನಿಮಾಗಳಲ್ಲಿ ನಾಯಕನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಅವರ ಪಂಚಭಾಷಾ ಚಿತ್ರವಾಗಿರುವ ಕಬ್ಜ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಆದರೆ ಎಲ್ಲರೂ ಕಾಯುತ್ತಿರುವುದು ರಿಯಲ್ ಸ್ಟಾರ್ ಉಪೇಂದ್ರ ರವರ ನಿರ್ದೇಶನ ಸಿನಿಮಾಗಾಗಿ. ಹೌದು ನಿರ್ದೇಶಕನ ಕ್ಯಾಪ್ ಕೊಟ್ಟರೆ ರಿಯಲ್ ಸ್ಟಾರ್ ಉಪೇಂದ್ರ ರವರು ಸ್ಪೆಷಲ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಕೂಡ ಇಡೀ ಕನ್ನಡ ಸಿನಿಮಾ ರಸಿಕರ ನಂಬಿಕೆಯಾಗಿದೆ.

ಕೊನೆಗೂ ಕೂಡ ಅವರ ಅಭಿಮಾನಿಗಳ ಬಯಕೆಗೆ ಒತ್ತುಕೊಟ್ಟು ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ಕೊಡಲು ರಿಯಲ್ ಸ್ಟಾರ್ ಉಪೇಂದ್ರ ರವರು ಸಿದ್ದರಾಗಿದ್ದಾರೆ. ಹೌದು ಇತ್ತೀಚೆಗಷ್ಟೇ ತಮ್ಮ ನಿರ್ದೇಶನ ಹಾಗೂ ನಾಯಕನಟನಾಗಿ ನಟಿಸುತ್ತಿರುವ ಸಿನಿಮಾದ ಘೋಷಣೆಯನ್ನು ಮಾಡಿದ್ದಾರೆ. ಸಿನಿಮಾದ ಹೆಸರು ಇಂಗ್ಲೀಷ್ ಅಕ್ಷರ ವಾಗಿರುವ ಯು ಐ ಎಂಬುದಾಗಿದೆ ಅಂದರೆ ನೀನು ನಾನು ಎನ್ನುವ ಒಳಾರ್ಥವನ್ನು ನೀಡುವಂತಿದೆ. ಉಪೇಂದ್ರರವರ ನಿರ್ದೇಶನದ ಸಿನಿಮಾ ಎಲ್ಲರೂ ಇಷ್ಟಪಡುವುದು ಯಾಕೆಂದರೆ ಅದರಲ್ಲಿ ಅವರು ನೀಡುವಂತಹ ಟರ್ನ್ ಹಾಗೂ ಟ್ವಿಸ್ಟ್ ಗಳನ್ನು ನಿಜಕ್ಕೂ ಕೂಡ ಯಾರಿಂದಲೂ ನೀಡಲು ಸಾಧ್ಯವಿಲ್ಲ.

ಇನ್ನು 14 ರಿಂದ 40 ವರ್ಷ ವಯಸ್ಸಿನ ಒಳಗಡೆ ಇರುವಂತಹ ವ್ಯಕ್ತಿಗಳು ಎರಡು ನಿಮಿಷದ ವಿಡಿಯೋವನ್ನು ನಮ್ಮ ಮುಂದಿನ ನಿರ್ದೇಶನದ ಚಿತ್ರಕ್ಕಾಗಿ ಕಳಿಸಿ ಎಂಬುದಾಗಿ ಆಡಿಶನ್ ಏರ್ಪಡಿಸಿದ್ದರು. ಈಗಾಗಲೇ ಬರೋಬ್ಬರಿ ಎರಡು ಸಾವಿರಕ್ಕೂ ಅಧಿಕ ವಿಡಿಯೋಗಳು ಬಂದಿದೆ. ಇದರಿಂದಲೇ ತಿಳಿಯುತ್ತದೆ ಉಪೇಂದ್ರರವರ ನಿರ್ದೇಶನದ ಸಿನಿಮಾಗೆ ಪ್ರೇಕ್ಷಕರಲ್ಲಿ ಯಾವ ಮಟ್ಟಕ್ಕೆ ಬೇಡಿಕೆ ಇದೆ ಎನ್ನುವುದಾಗಿ. ರಿಯಲ್ ಸ್ಟಾರ್ ಉಪೇಂದ್ರ ರವರು ಹೇಳುವಂತೆ ಅವರ ಮುಂದಿನ ನಿರ್ದೇಶನದ ಚಿತ್ರಕ್ಕೆ ಬರೋಬ್ಬರಿ ಎರಡು ಸಾವಿರ ಕಲಾವಿದರ ಅವಶ್ಯಕತೆ ಇದೆ.
ಹೀಗಾಗಿ ಇದು ದೊಡ್ಡ ಬಜೆಟ್ ನಲ್ಲಿ ಮೂಡಿ ಬರುವುದಂತೂ ಗ್ಯಾರಂಟಿ. ಇನ್ನು ಉಪೇಂದ್ರರವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಜಿ ಮನೋಹರ್ ಹಾಗೂ ಟಗರು ಹಾಗೂ ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್ ರವರು. ಫಸ್ಟ್ ಲುಕ್ ನಿಂದ ಈಗಾಗಲೇ ಎಲ್ಲರನ್ನೂ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗಿರುವ ಈ ಚಿತ್ರ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಸದ್ದು ಮಾಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಈ ಚಿತ್ರದ ಕುರಿತಂತೆ ಇರುವಂತಹ ನಿಮ್ಮ ನಿರೀಕ್ಷೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರಿಬೇಡಿ.


Leave a Reply

Your email address will not be published. Required fields are marked *