ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ದಂಪತಿಗಳ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ; ಯಪ್ಪಾ ಇಷ್ಟೊಂದಾ..!?

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಕಲಾವಿದರನ್ನು ಮದುವೆಯಾಗಿರುವ ಅಂತಹ ಹಲವಾರು ನಟ ನಟಿಯರು ಇದ್ದಾರೆ. ಅವರಲ್ಲಿ ಪ್ರಮುಖವಾಗಿ ಎಲ್ಲರೂ ಮೆಚ್ಚುವಂತಹ ಜೋಡಿ ಎಂದರೆ ಅದು ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಎಂದರೆ ಖಂಡಿತವಾಗಿ ತಪ್ಪಾಗಲಾರದು. ರಿಯಲ್ ಸ್ಟಾರ್ ಉಪೇಂದ್ರ ರವರ ಬಗ್ಗೆ ಮಾತನಾಡುವುದಾದರೆ ಇಡೀ ಭಾರತ ಚಿತ್ರರಂಗ ಕಂಡಂತಹ ಅತ್ಯಂತ ಉತ್ಕೃಷ್ಟ ನಿರ್ದೇಶಕರಲ್ಲಿ ಒಬ್ಬರಾದ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಆರಂಭದಲ್ಲಿ ಅವರ ಸಂಬಂಧಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಆಗಿರುವ ಕಾಶಿನಾಥ್ ರವರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ನಂತರ ತಾವೇ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಕಾಲಿಡುತ್ತಾರೆ. ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಓಂ ಚಿತ್ರ ಯಾವ ಮಟ್ಟಿಗೆ ಹವಾ ಕ್ರಿಯೆಟ್ ಮಾಡಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಕನ್ನಡದಲ್ಲಿ ದಾಖಲೆಯ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ್ದು ಮಾತ್ರವಲ್ಲದೆ ಹಲವಾರು ಭಾಷೆಗಳಿಗೆ ಕೂಡ ರೀಮೇಕ್ ಆಗಿದೆ. ಈ ಚಿತ್ರದ ಮೂಲಕ ನಾಯಕನಾಗಿ ಕೂಡ ಹಾಗೂ ನಿರ್ದೇಶಕನಾಗಿ ಕೂಡ ಕನ್ನಡ ಚಿತ್ರರಂಗಕ್ಕೆ ತಮ್ಮ ನಿಜವಾದ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಾರೆ. ಇದಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ರವರು ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಉಪೇಂದ್ರರವರು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಎಂದರೆ ಅದರಲ್ಲಿ ಖಂಡಿತವಾಗಿ ಏನಾದರೂ ಒಂದು ಅಂಶ ಇದ್ದೇ ಇರುತ್ತದೆ ಎಂಬುದಾಗಿ ಪ್ರೇಕ್ಷಕರು ನಂಬಿಕೆ.

ಉಪೇಂದ್ರರವರ ಸಿನಿಮಾ ದಷ್ಟು ವಿಶೇಷತೆ ಯಾವ ಚಿತ್ರಗಳಲ್ಲೂ ಕೂಡ ಇರುವುದಿಲ್ಲ ಎನ್ನುವುದಾಗಿ ಅವರ ಭಾವನೆಯಾಗಿದೆ. ಇನ್ನು ಕೇವಲ ಕನ್ನಡದಲ್ಲಿ ಮಾತ್ರವಲ್ಲ ರಿಯಲ್ ಸ್ಟಾರ್ ಉಪೇಂದ್ರ ಅವರ ಜನಪ್ರಿಯತೆಯನ್ನು ವುದು ತೆಲುಗು ಚಿತ್ರರಂಗದಲ್ಲಿ ಕೂಡ ಹೆಚ್ಚಾಗಿದೆ. ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡ ನಟ ಯಾರು ಎಂದು ಕೇಳಿದರೆ ಅದಕ್ಕೆ ಮೊದಲನೇದಾಗಿ ಕೇಳಿ ಬರುವ ಹೆಸರು ಎಂದರೇ ಅದು ಖಂಡಿತವಾಗಿ ರಿಯಲ್ ಸ್ಟಾರ್ ಉಪೇಂದ್ರ. ಈಗಾಗಲೇ ಹಲವಾರು ಸಿನಿಮಾಗಳಿಂದ ಇಡೀ ಭಾರತೀಯ ಚಿತ್ರರಂಗದ ಹಲವಾರು ಖ್ಯಾತನಾಮ ನಿರ್ದೇಶಕರಿಗೂ ಕೂಡ ಸ್ಪೂರ್ತಿಯಾಗಿದ್ದಾರೆ ನಮ್ಮ ನೆಚ್ಚಿನ ಹೆಮ್ಮೆಯ ಕನ್ನಡಿಗ ರಿಯಲ್ ಸ್ಟಾರ್ ಉಪೇಂದ್ರ ರವರು.

ಈಗ ನಾವು ಮಾತನಾಡಲು ಹೋಗುತ್ತಿರುವುದು ರಿಯಲ್ ಸ್ಟಾರ್ ಉಪೇಂದ್ರ ರವರ ವೈವಾಹಿಕ ಜೀವನದ ಕುರಿತಂತೆ. ಬಂಗಾಳಿ ಮೂಲದ ಪ್ರಿಯಾಂಕಾ ಉಪೇಂದ್ರ ರವರನ್ನು ರಿಯಲ್ ಸ್ಟಾರ್ ಉಪೇಂದ್ರ ರವರು 2003 ರಲ್ಲಿ ಮದುವೆಯಾಗುತ್ತಾರೆ. ಇನ್ನು ಇವರಿಬ್ಬರು ಒಟ್ಟಾಗಿ ನಟಿಸಿರುವ ಹೆಚ್ 2 0 ಚಿತ್ರದ ಕುರಿತಂತೆ ನಿಮಗೆಲ್ಲರಿಗೂ ಗೊತ್ತೇ ಇದೆ. ಇನ್ನು ಇವರಿಬ್ಬರು ವಯಸ್ಸಿನ ಅಂತರದ ಕುರಿತಂತೆ ನಿಮಗೆ ಹಲವಾರು ಗೊಂದಲಗಳಿರಬಹುದು ಅದನ್ನು ನಾವು ನಿಮಗೆ ಪರಿಹರಿಸಲು ಹೊರಟಿದ್ದೇವೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಒಂದು ಹೆಣ್ಣು ಹಾಗೂ ಒಂದು ಗಂಡು. ಉಪೇಂದ್ರರವರು ವಯಸ್ಸು52 ಆದರೆ ಪ್ರಿಯಾಂಕ ಉಪೇಂದ್ರ ಅವರ ವಯಸ್ಸು 43. ಅಂದರೆ ಇವರಿಬ್ಬರು ವಯಸ್ಸಿನ ನಡುವೆ 9 ವರ್ಷಗಳ ಅಂತರವಿದೆ. ಹೇಗಿದ್ದರೂ ಕೂಡ ಅನ್ಯೋನ್ಯವಾಗಿ ಎಲ್ಲರೂ ಮೆಚ್ಚುವಂತ ಸಂಸಾರ ನಡೆಸುತ್ತಿದ್ದಾರೆ. ಇವರಿಬ್ಬರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *